ವಿನಿಫ಼್ರೆಡ್ ಮೇಯರ್ ಆಶ್ಬಿ

ವಿಕಿಪೀಡಿಯ ಇಂದ
Jump to navigation Jump to search

ವಿನಿಫ಼್ರೆಡ್ ಮೇಯರ್ ಆಶ್ಬಿ(ಅಕ್ಟೋಬರ್ ೧೩, ೧೮೭೯- ಜುಲೈ ೧೯,೧೯೭೫)ಕೆಂಪು ರಕ್ತ ಜೀವಕೋಶದ ಬದುಕುಳಿಯುವಿಕೆಯ ನಿರ್ಣಯಕ್ಕಾಗಿ ಆಶ್ಬಿ ತಂತ್ರವನ್ನು ಅಭಿವೃದ್ದಿಪಡಿಸುವುದಕ್ಕೆ ಹೆಸರುವಾಸಿಯಾದ ಬ್ರಿಟಿಷ್ ಮೂಲದ ಅಮೆರಿಕನ್ ರೋಗಶಾಸ್ತ್ರಜ್ಞ. ವಿನಿಫ಼್ರೆಡ್ ಇವಳ ಜನನ ಅಕ್ಟೋಬರ್ ೧೩,೧೮೭೯ ಲಂಡನ್ ಅಲ್ಲಿ ಜನಿಸಿದಳು.ಇವಳು ಜುಲೈ ೧೯,೧೯೭೫ ವರ್ಜೀನಿಯಾದಲ್ಲಿ ಮರಣವಾದಳು.

ಜೀವನ ಚರಿತ್ರೆ[ಬದಲಾಯಿಸಿ]

ಆಸ್ಬಿ ಇವಳು ಜಾರ್ಜ್ ಮೇಯರ್ ಆಶ್ಬಿ ಮತ್ತು ಮೇರಿ ಆನ್ ಬ್ರಾಕ್ ಅವರಿಗೆ ಲಂಡನ್,ಯುಕೆ ೧೮೭೯ನಲ್ಲಿ ಹುಟ್ಟಿದಳು. ಇವಳು ೧೪ನೇ ವಯಸಿನಲ್ಲಿ ತನ್ನ ಕುಟುಂಬದೊಂದಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋದಳು. ಅವಳು ಅನೇಕ ವಿಶ್ವವಿದ್ಯಾಲಯಗಳಿಗೆ ಹಾಜರಿಸಿದಳು,ಅದರಲ್ಲಿ ವಾಯುವ್ಯ ವಿಶ್ವವಿದ್ಯಾಲಯ ಹಾಗೂ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪಡೆದ ಬಿ.ಎಸ್ ನಂತರದಲ್ಲಿ ೧೯೦೩ ರಲ್ಲಿ ಪದವಿಯನ್ನು ಪಡೆದಳು ಮತ್ತು ಅವಳು ಎಮ್.ಎಸ್ ಪದವಿ ವಾಷಿಂಗ್ಟನ್ ವಿಶ್ವವಿದ್ಯಾಲಯ ಸೆಂಟ್.ಲೂಯಿಸ್ ೧೯೦೫ರಲ್ಲಿ ಪಡೆದಳು. ಇವಳು ಅಪೌಷ್ಟಿಕತೆ ಅಧ್ಯಯನ ಮಕ್ಕಳ ನಡುವೆ ಫ಼ಿಲಿಪೈನ್ಸ್ ಅಲ್ಲಿ ಮಾಡಿದಳು. ಅಲ್ಲಿಂದ ಹಿಂದಿರುಗಿ ಯುನೈಟೆಡ್ ರಾಜ್ಯದಲ್ಲಿ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪ್ರೌಢಶಾಲೆ ಬರ್ವಿನ್ನ III ಮತ್ತು ಮೇರಿವಿಲ್ಲೆ,ಮೊ. ೧೯೧೪ ರಿಂದ ೧೯೧೬ರವರಗೆ ಅಲ್ಲಿ ಕಳಿಸಿದಳು. ಅವಳು ವಿಪರಿತ ವೈದ್ಯಕಿಯ ಕಾಲೇಜಿನ ಹಾಗೂ ಕೇಂದ್ರ ಆಸ್ಪತ್ರೆಯ ಚಿಕಾಗೊನಲ್ಲಿ ಪ್ರಯೋಗಾಲಯದಲ್ಲಿ ಕೆಲಸಮಾಡಿದಳು. ೧೯೧೭ರ ಫ಼ೆಬ್ರವರಿಯಲ್ಲಿ ಇಮೋನಾಲಜಿ ಮತ್ತು ರೋಗಶಾಸ್ತ್ರದಲ್ಲಿ ಮಾಯೋ ಕ್ಲಿನಿಕ್ನಲ್ಲಿ ಫ಼ೆಲೋಷಿಪ್ ಅನ್ನು ಪಡೆದಳು, ಅಲ್ಲಿ ಅವಳು ೧೯೨೪ರವರೆಗೆ ಸಿಬ್ಬಂದಿ ಸದಸ್ಯರಾಗಿ ಉಳಿದಳು.ಮಾಯೋ ಕ್ಲಿನಿಕ್ನಲ್ಲಿ, ಆರೋಗ್ಯವಂತ ವ್ಯಕ್ತಿಗಳಲ್ಲಿ ಮತ್ತು ರೋಗಗಳ ವಿವಿಧ ರೋಗಿಗಳಲ್ಲಿ ಕೆಂಪು ರಕ್ತದ ಕಾರ್ಪಸ್ಕಲ್ಸ್ ಬದುಕುಳಿಯುವ ಮಾಪನಗಳ ಮೇಲೆ ಅವಳು ತನ್ನ ಮೂಲಭೂತ ಕೆಲಸವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಅವಳು ಹೊಂದಾಣಿಕೆಯ ಮೌಲ್ಯಮಾಪನ ಮತ್ತು ವರ್ಗಾವಣಿಯ ಅಧ್ಯಯನಗಳನ್ನು ನಡೆಸಿದಳು. ರಕ್ತ ಗುಂಪುಗಳು ಇತ್ತೀಚಿಗೆ ಸ್ಪಷ್ಟಪಡಿಸಲ್ಪಟ್ಟಿವೆ ಹಾಗೂ ಮೊದಲಿಗೆ ರೋಮನ್ ಅಂಕಿಗಳನ್ನು ಬಳಸಿ: I(A), II(B), III(AB), ಮತ್ತು IV(O). ಈ ಪ್ರತಿಜನಕ ವ್ಯತ್ಯಾಸಗಳ ಕಾರಣದಿಂದಾಗಿ, ಅವಳು ಇತರ ರೀತಿಯ ರೋಗಿಗಳಿಗೆ ಹೊಂದಾಣಿಕೆಯ -ಒ(O) ರಕ್ತ ಗುಂಪನ್ನು ವರ್ಗವಾಣೆ ಮಾಡಲು ಸಾಧ್ಯವಾಯಿತ್ತು ಮತ್ತು ನಂತರದಲ್ಲಿ ವಿಟ್ರೊ ತಂತ್ರಗಳಿಂದ ಆನುವಂಶಿಕ ರಕ್ತದ ರೀತಿಯನ್ನು ಒಟ್ಟುಗೂಡಿಸಲು ಸಾಧ್ಯವಾಯಿತ್ತು. ಅವಳು ನಂತರ ನೋವಿನಿಂದಾಗಿ ದುರ್ಬಲಗೊಳಿಸಿದಳು ಮತ್ತು ದಿನಗಳ ಅವಧಿಯಲ್ಲಿ ಒಂದು ಸೂಕ್ಷ್ಮದರ್ಶಕವನ್ನು ಬಲಸಿಕೊಂಡು ಹೆಮಾಸಾಟೊಮೀಟರ್ನಲ್ಲಿ ಉಳಿದ ಜೀವಕೋಶಗಳನ್ನು ಎಣಿಕೆ ಮಾಡಿದಳು. ಅವಳು ನಂತರದ ಸಮಯದಲ್ಲಿ, ಈ ತಂತ್ರವನ್ನು ಇತರ ಸಂಶೋಧಕರು ಪರಿಷ್ಕರಿಸಿದರು ಮತ್ತು ಸಾಮಾನ್ಯವಾಗಿ ವಿಭಿನ್ನ ಸಮಗ್ರತೆ ಅಥವಾ ಆಶ್ಬಿ ತಂತ್ರ ಎಂದು ಕರೆಯಲ್ಪಟ್ಟರು. ಅವಳ ಫ಼ೆಲೋಷಿಪ್ ಏಳು ವರ್ಷಗಳು ಮುಂದುವರೆಯುವ ಸಮಯದಲ್ಲಿ ಐತಿಹಾಸಿಕ ರಕ್ತವಿಜ್ಞಾನಕ್ಕೆ ತನ್ನ ಕೊಡುಗೆಯನ್ನು ನೀಡಿದಳು.೧೯೨೧ರಲ್ಲಿ, ಆಶ್ಬಿಗೆ ಪಿಎಚ್ಡಿ ವಿಶ್ವವಿದ್ಯಾಲಯ ಮಿನ್ನೆಸೊಟದಿಂದ ಸ್ವೀಕರಿಸಲಾಗಿತ್ತು, ಮತ್ತು ಮೇಯೊ ಕ್ಲಿನಿಕ್ನ ಅಂಗಸಂಸ್ಧೆ ಹಾಗೂ ಪಿಎಚ್ಡಿ ಡಿಪ್ಲೊಮಾವನ್ನು ಸ್ವೀಕರಿಸಿದ ಮೊದಲನೆ ಮಹಿಳೆ.ಆಕೆ ನಂತರ ಸೇಂಟ್.ಎಲಿಜಬೆತ್ ಆಸ್ಪತ್ರೆ ವಾಷಿಂಗ್ಟನ್ ಡಿಸಿಯಲ್ಲಿ ಸಿಬ್ಬಂದಿ ಸದಸ್ಯರಾಗಿದಳು ಹಾಗೂ ಬ್ಯಾಕ್ಟೀರಿಯಶಾಸ್ತ್ರದಲ್ಲಿ ಕೆಲಸಮಾಡಿದಳು. ಅವಳ ಕೊನೆಯ ಅಧ್ಯಯನ ಒಂದು ಕಲ್ಪನೆಯ ಹಠಾತ್ ಶಿಶು ಸಾವಿನ ಸಿಂಡ್ರೋಮ್ ೧೯೭೫ನಲ್ಲಿ ಆಗಿತ್ತು. ಆಶ್ಬಿಯ ಶಿಕ್ಷಣ, ವೈಜ್ಞಾನಿಕ ತರಬೇತಿ ಮತ್ತು ಕ್ಲಿನಿಕಲ್ ಅನುಭವದ ಸೇಂಟ್.ಎಲಿಜಬೆತ್ ಆಸ್ಪತ್ರೆಯಲ್ಲಿ ಅವಳು ಪ್ರಯೋಗಾಲಯದ ಕೆಲಸಗಾರರನ್ನು ಹಾಗೂ ಹೆಚ್ಚಿನ ವೈದ್ಯರನ್ನು ಸುಲಭವಾಗಿ ಮೀರಿಸುತ್ತಿದ್ದಾರೆ ಎಂದು ಒಪ್ಪಿಕೊಂಡರು. ಆಶ್ಬಿಯ ಜೀವನ ಅವಧಿಯಲ್ಲಿ, ಯುನೈಟೆಡ್ ಸ್ಟೇಟ್ಸ್ ಅಲ್ಲಿ ಹೆಚ್ಚಿನ ವೈದ್ಯರು ಕೆಲವು ಮೂಲಭೂತ ಕಾಲೇಜು ಶಿಕ್ಷಣಕ್ಕೆ ಒಳಪಟ್ಟಿದ್ದಾರೆ. ಮತ್ತು ಪ್ರಾಯೋಗಿಕವಾಗಿ ಪ್ರವೇಶಿಸುವುದಕ್ಕೆ ಮುಂಚಿತವಾಗಿ ಹಲವಾರು ಅವಧಿಗಳ ಕಾಲ ವೈದ್ಯಕೀಯ ಶಿಷ್ಯವೃತಿ ಸೇವೆಯನ್ನು ನೀಡಬಹುದು.ಫ಼್ಲೆಕ್ಸ್ನರ್ ರಿಪೋರ್ಟ್ ಪ್ರಕಟವಾದ ನಂತರ, ಯುನೈಟೆಡ್ ಸ್ಟೇಟ್ಸ್ನಲ್ಲಿ ಹೆಚ್ಚಿನ ವೈದ್ಯರು ಹೆಚ್ಚು ಔಪಚಾರಿಕ ಮೂಲಭೂತ ಶಿಕ್ಷಣಕ್ಕೆ ಒಳಗಾಗಬೇಕಾಯಿತ್ತು ಮತ್ತು ನಂತರ ವೈದ್ಯಕೀಯ-ಶಾಲಾ ಕಾರ್ಯಪ್ರಮವನ್ನು ಹೆಚ್ಚು ರಚನಾತ್ಮಕ ಪಠ್ಯಕ್ರಮದೊಂದಿಗೆ ಪೂರ್ಣಗೂಳಿಸಬೇಕಾಯಿತ್ತು. [೧]

ಅವಳ ಜೀವನದಲ್ಲಿ, ಎರಿಥ್ರೋಸೈಟ್ ಜೀವನ ಸ್ಪ್ಯಾನ್ ಎರಡು ಮೂರು ವಾರಗಳಿಗಿಂತ ಹೆಚ್ಚಿನದಾಗಿರಲ್ಲಿಲ್ಲ ಎಂದು ವ್ಯಾಪಕವಾಗಿ ನಂಬಲಾಗಿತ್ತು. ಅವಳು ಒಂದು ಎರಿಥ್ರೋಸೈಟ್ ಬದುಕುಳಿಯುವ ಬಗೆ ಅಧ್ಯಯನ ವಹಿಸಿ ಹಾಗೂ ಅದರ ಅಳತೆಯ ಬಗೆ ತೆಗೆದುಕೊಂಡಳು. ಅವಳು ಮುಂದೆ ಮನುಷ್ಯನ ಕೆಂಪು ಜೀವಕೋಶಗಳು ಪ್ರಸರಣನ ೧೧೦ದಿನಕ್ಕೆ ಉಳಿಯುತ್ತದೆ ಎಂದು ತೀರ್ಮಾನಿಸಿದಳು. ಫ಼ಲಿತಂಶಗಳು ಎರಿಥ್ರೋಸೈಟ್ ಬದುಕುಳಿಯುವ ಅಧ್ಯಯನ ವಹಿಸಿ, ಆಶ್ಬಿ ವಿಧಾನ ಅದು ಮೈಲಿಗಳ ಜೊತೆ ಒಂದು ಎರಿಥ್ರೋಸೈಟ್ ಶರೀರವಿಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಆಶ್ಬಿಯ ಕೆಂಪು ಜೀವಕೋಶಗಳ ಬದುಕುಳಿಯುವ ಪ್ರಮಾಣದಲ್ಲಿ ಅವಳ ಕೆಲಸವು ಮೊದಲನೆಯಾಗಿ ೧೯೧೯ರಲ್ಲಿ ಪ್ರಕಟಿಸಿತ್ತು, ಇದರಲ್ಲಿ ಆಶ್ಬಿ ಟೆಕ್ನಿಕ್ ಸಿದ್ಧಾಂತಗಳು ಒಳಗೊಂಡಿತ್ತು. ಆಶ್ಬಿ ಮತ್ತೆ ರೋಜೆಸ್ಟರ್ಗೆ ಹಿಂದಿರುಗಳಿಲ್ಲ ಹಾಗೂ ೪೭ ವರ್ಷಗಳ ಕಾಲ ಬೇರೆಯಾವುದು ಸಂವಹನ ಇರಲಿಲ್ಲ. ಸೇಂಟ್.ಎಲಿಜಬೆತ್ ಆಸ್ಪತ್ರೆಯಲ್ಲಿ, ಆಶ್ಬಿ ೧೯೪೯ ರಲ್ಲಿ ನಿವೃತರಾಗುವವರೆಗೂ ಸೇರೋಲಜಿ ಹಾಗೂ ಬ್ಯಾಕ್ಟೀರಿಯೊಲಾಜಿ ಬಗೆ ಮೇಲ್ವಿಚಾರಣೆ ಮಾಡಿದಳು. ಅವಳು ೨೮ ವರ್ಷ್ಗಳಲ್ಲಿ ಅನೇಕ ಅದ್ಯಯನಗಳು ಸಂಬಂಧಿಸಿದ ಗುಣಮಟ್ಟಕ್ಕ ಹಾಗೂ ಸಂವೇದನೆ ಸಂಬಂಧಿತ ಸೇರೋಲಜಿ ಪರೀಕ್ಷೆಗಳು ಪ್ರಕಟಿಸಿದಳು. ಹಾಗೆಯೇ ಕಾರ್ಬೊನಿಕ್ ಅನ್ಹೈಡ್ರೇಸ್ ಚಟುವಟಿಕೆಯ ಕೇಂದ್ರ ನರ ವ್ಯವಸ್ಥೆಯ ಬಗೆ ಅಧ್ಯಯನ ಕೊಡುಗೆಯನ್ನು ನೀಡಿದಳು.

ಅವಳಿಗೆ ೯೩ ವರ್ಷ ವಯಸಾಗಿತ್ತು, ಅವಳು ಒಂದು ನಿಪುಣ ಪಿಯಾನೋ ವಾದಕಳಾಗಿದ್ದಳು, ಮತ್ತು ನಂತರದ ದಿನಗಳಲ್ಲಿ ಅವಳು ಅನೇಕ ಸಂಯೋಜನೆಗಳ ರೆಕಾರ್ಡಿಂಗಳನ್ನು ಕೇಳುವುದರಲ್ಲಿ ಜೀವನವು ಬಹಳ ಸಂತೋಷವನ್ನು ತಂದುಕೊಟ್ಟಿತ್ತು. ೧೯೭೫ ರಲ್ಲಿ ೯೫ ವರ್ಷ ವಯಸ್ಸಿನಲ್ಲಿ, ಆಶ್ಬಿಯವರು ಮೆದಳಿನ ನಾಳೀಯ ಅಪಘಾತದ ನಂತರ ನಿಧನವಾದಳು. ಆಶ್ಬಿ ಒಂದು ಅಸಾಮಾನ್ಯ ಕ್ಲಿನಿಕ್ಲ್ ಲ್ಯಾಬೊರೇಟರಿ ವಿಜ್ಞಾನಿಯಾಗಿದ್ದು, ಅವಳು ರೋಗಿಯ ಕೇಂದ್ರಿತ ಸಂಶೋಧನೆಗಳನ್ನು ದೃಢವಾಗಿ ನಡೆಸಿದಳು, ಹಾಗೂ ಅನೇಕ ಸಂಶೋಧಕರಿಗೆ ತರಬೇತಿ ನೀಡಿದಳು ಮತ್ತು ಹಲವಾರು ವೈಜ್ಞಾನಿಕ ಹಸ್ತಪ್ರತಿಗಳನ್ನು ಪ್ರಕಟಿಸಿದಳು. ಬಹುಶಃ ಒಂದು ವಿವಿಧ ಯುಗದಲ್ಲಿ ಅವಳು ಒಂದು ವಿಸ್ತರವಾದ ಅವಧಿಯಲ್ಲಿ ತನ್ನ ಸಾಧನೆಗಳನ್ನು ಮತ್ತು ವೈಜ್ಞಾನಿಕ ಕೊಡುಗೆಗಳನ್ನು ನೀಡಿದಳು. ಆಶ್ಬಿಯನ್ನು ನೋಬೆಲ್ ಬಹುಮಾನಕ್ಕಾಗಿ ನಾಮಕರಣ ಮಾಡಲಾಗುತ್ತಿತ್ತು. [೨]

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/Winifred_Ashby
  2. http://www.bloodjournal.org/content/46/6/977?sso-checked=true