ವಿದ್ಯುದ್ದೀಪ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದ್ಯುದ್ದೀಪ್ತಿ ಎಂದರೆ ಬೆಳಕಾಗಿ ವಿದ್ಯುಚ್ಛಕ್ತಿಯ ಅನುಷ್ಣೀಯ (ನಾನ್‌ಥರ್ಮಲ್) ಪರಿವರ್ತನೆ (ಎಲೆಕ್ಟ್ರೊಲ್ಯುಮಿನಿಸೆನ್ಸ್). ವಿದ್ಯುತ್ ಕ್ಷೇತ್ರವನ್ನು ಕೆಲವು ವಸ್ತುಗಳ ಮೇಲೆ ಪ್ರಯೋಗಿಸಿದಾಗ ಅದರ ವಹನ ಎಲೆಕ್ಟ್ರಾನುಗಳು ಸಾಕಷ್ಟು ಶಕ್ತಿ ಗಳಿಸಿ ಚಲಿಸುತ್ತ ಇತರ ಪರಮಾಣುಗಳಿಗೆ ಡಿಕ್ಕಿ ಹೊಡೆಯಬಹುದು. ಇದರಿಂದ ಉದ್ರೇಕಗೊಂಡ ಪರಮಾಣುಗಳು ತಮ್ಮ ಸಾಮಾನ್ಯ ಸ್ಥಿತಿಗೆ ಮರಳುವಾಗ ಫೋಟಾನುಗಳನ್ನು ಸೂಸುತ್ತವೆ. ಇದು ವಿದ್ಯುದ್ದೀಪ್ತಿ. ಎಲ್‌ಇಡಿ (ಲೈಟ್ ಎಮಿಟಿಂಗ್ ಡಯೋಡ್, ದ್ಯುತಿ ಉತ್ಸರ್ಜಕ ಡಯೋಡ್) ಎಂಬ ರೂಢನಾಮವುಳ್ಳ ಡಯೋಡುಗಳು ಸೂಸುವ ಬೆಳಕು ಇಂಥದ್ದು. ಇದರ ‘ಪಿಎನ್’ ಸಂಧಿಯಲ್ಲಿ ಎಲೆಕ್ಟ್ರಾನ್-ರಂಧ್ರ ಪುನಸ್ಸಂಯೋಗದಿಂದ ಫೋಟಾನ್ ಉತ್ಸರ್ಜನೆಯಾಗುತ್ತದೆ. ವಿದ್ಯುದ್ದೀಪ್ತಿ ಸಾಮಾನ್ಯವಾಗಿ ಅರೆವಾಹಕದಲ್ಲಿ ಸಂಭವಿಸುತ್ತದೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: