ವಿಷಯಕ್ಕೆ ಹೋಗು

ವಿದೇಶಾಂಗ ಸಚಿವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದೇಶಾಂಗ ಸಚಿವ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವನು ಸಾಮಾನ್ಯವಾಗಿ ಒಂದು ದೇಶದ ವಿದೇಶಾಂಗ ನೀತಿ ಹಾಗೂ ಸಂಬಂಧಗಳ ಉಸ್ತುವಾರಿ ಹೊಂದಿರುವ ಸಂಪುಟ ಸಚಿವನಾಗಿರುತ್ತಾನೆ.[೧]

ಹುದ್ದೆಯ ಅಧಿಕಾರಗಳು

[ಬದಲಾಯಿಸಿ]

ವಿದೇಶ ಸಚಿವನ ಅಧಿಕಾರಗಳು ಸರ್ಕಾರದಿಂದ ಸರ್ಕಾರಕ್ಕೆ ಬದಲಾಗಬಹುದು. ಸಾಮಾನ್ಯ ಸಂಸದೀಯ ವ್ಯವಸ್ಥೆಯಲ್ಲಿ, ವಿದೇಶ ಸಚಿವನು ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಸಂಭಾವ್ಯವಾಗಿ ಗಣನೀಯ ಪ್ರಭಾವವನ್ನು ಬೀರಬಹುದು. ಆದರೆ ಸರ್ಕಾರದಲ್ಲಿ ಪ್ರಬಲ ಪ್ರಧಾನ ಮಂತ್ರಿಯ ಪ್ರಾಬಲ್ಯ ಇರುವಾಗ, ನೀತಿಯನ್ನು ನಿರ್ಧರಿಸುವಲ್ಲಿ ವಿದೇಶ ಸಚಿವನು ಹೆಚ್ಚು ಮಹತ್ವದಲ್ಲದ ಅಥವಾ ಸಹಾಯಕ ಪಾತ್ರ ವಹಿಸುವುದಕ್ಕೆ ಸೀಮಿತವಾಗಿರಬಹುದು.

ಜವಾಬ್ದಾರಿಗಳು

[ಬದಲಾಯಿಸಿ]

ತಮ್ಮ ರಾಜಕೀಯ ಪಾತ್ರಗಳ ಜೊತೆಗೆ, ವಿದೇಶ ಸಚಿವರುಗಳು ಸಾಂಪ್ರದಾಯಿಕವಾಗಿ ವಿದೇಶಿ ವಿಶ್ವ ನಾಯಕರ ಆತಿಥ್ಯ ವಹಿಸುವುದು ಮತ್ತು ಇತರ ದೇಶಗಳಿಗೆ ರಾಜ್ಯ ಪರ್ಯಟನೆಗೆ ಹೋಗುವಂತಹ ಅನೇಕ ರಾಜತಾಂತ್ರಿಕ ಕರ್ತವ್ಯಗಳಿಗೆ ಕೂಡ ಜವಾಬ್ದಾರರಾಗಿರುತ್ತಾರೆ. ವಿದೇಶಾಂಗ ಸಚಿವನು ಸಾಮಾನ್ಯವಾಗಿ ಯಾವುದೇ ಸಂಪುಟದ ಅತ್ಯಂತ ಹೆಚ್ಚು ಪ್ರವಾಸ ಮಾಡುವ ಸದಸ್ಯನಾಗಿರುತ್ತಾನೆ.

ಉಲ್ಲೇಖಗಳು

[ಬದಲಾಯಿಸಿ]
  1. "Minister of Foreign Affairs".

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]