ವಿದುಷಿ. ಸುನಂದಾ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:BS.Sunanda.jpg
'ವಿದುಷಿ. ಸುನಂದಾ ದೇವಿ'

'ಭರತ ನಾಟ್ಯ' ವನ್ನು ಶಾಸ್ತ್ರೀಯವಾಗಿ ಅಭ್ಯಾಸಮಾಡಿ, ಅದರ ವಿವಿಧ ಪ್ರಕಾರಗಳಲ್ಲಿ ಸಿದ್ಧಹಸ್ತರೆಂದು ಹೆಸರಾಗಿರುವ ನೃತ್ಯಾಂಗನೆ, 'ಶ್ರೀಮತಿ ಸುನಂದಾ ದೇವಿ', ಸುಸಂಸ್ಕೃತ ಮನೆತನದಿಂದ ಬಂದವರು. ಇನ್ನೂ ಬಾಲಕಿಯಾಗಿದ್ದಾಗಲೇ 'ಕುಚಿಪುಡಿ ನಾಟ್ಯ ಶೈಲಿ'ಯನ್ನು ನೋಡಿ ಮನಸೋತಿದ್ದರು. ಮದರಾಸಿನ ರಾಮನ್, ಹಾಗೂ ನಾರಾಯಣ ಪಿಳ್ಳೈಯವರ ಬಳಿ, ಶಾಸ್ತ್ರೀಯ ನೃತ್ಯ ಕಲಿತು, ಭಾರತನಾಟ್ಯದಲ್ಲಿ ಪಾಂಡಿತ್ಯ ಗಳಿಸಿದರು. ಮುಂದೆ, ಹೈದರಾಬಾದಿನ 'ಭಾರತ ಕಲಾ ಪ್ರಪೂರ್ಣ', ಪದ್ಮಶ್ರೀ. ನಟರಾಜ ರಾಮಕೃಷ್ಣ ರ ಬಳಿ, ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಕೂಚುಪುಡಿ, ಆಲಯ ನೃತ್ಯಮುಲು, ಆಂಧ್ರ ನಾಟ್ಯಮು, ಮೊದಲಾದವುಗಳಲ್ಲಿ ಸತತವಾಗಿ ೮ ವರ್ಷಗಳ ಕಾಲ ಅಭ್ಯಾಸಮಾಡಿದರು. ಅಂದ್ರ ಪ್ರದೇಶವನ್ನೆಲ್ಲಾ ಸುತ್ತಿ, 'ಶ್ರೀ ವೆಂಕಟೇಶ್ವರ ಕಲ್ಯಾಣ' ಎಂಬ ನೃತ್ಯ ರೂಪಕವನ್ನು ಪ್ರದರ್ಶಿಸಿ, ಅಪಾರ ಕೀರ್ತಿಗಳಿಸಿದರು. ಮುಂದೆ ಬೆಂಗಳೂರಿಗೆ ಬಂದು ನೆಲೆಸಿದರು.

ಸದಾ ಕಲಿಯಲು ಆಸಕ್ತರು[ಬದಲಾಯಿಸಿ]

ವೀಣೆಯನ್ನು ನುಡಿಸಲು ಕಲಿತರು. ಬೊಬ್ಬಿಲಿಯ ಆಸ್ಥಾನ ನರ್ತಕಿ, ಜೀವರತ್ನಮ್ಮನಿಂದ ಅಭಿನಯದ ಮಹತ್ವಗಳನ್ನು ಅಭ್ಯಾಸಮಾಡಿದರು. ವೇದಾಂತಂ ಪ್ರಹ್ಲಾದ ಶರ್ಮ, ಮತ್ತೊಬ್ಬ ಗುರು. ಇದಲ್ಲದೆ, ಕಲ್ಪಮ್-ಕುಚಿಪುಡಿಯ ಅತ್ಯುತ್ತಮ, ಹಾಗೂ ಅತಿ ಕ್ಲಿಷ್ಟಕರ ಮುದ್ರೆಗಳ ಒಂದು ಭಾಗ. ಇದನ್ನು ಸತ್ಯಭಾಮಾ ಪಾತ್ರಕ್ಕೆ ಹೆಸರಾದ 'ಶ್ರೀ. ಸತ್ಯನಾರಾಯಣ ಶರ್ಮ'ರಿಂದ ಕಂಡುಕೊಂಡರು. ಶತಮಾನಗಳಿಂದ ಕುಚಿಪುಡಿ ನೃತ್ಯ, ಪುರುಷ ಪ್ರಧಾನವೆಂದು ಹೆಸರಾಗಿತ್ತು. ಆದರೆ ಸ್ತ್ರೀಯರನ್ನೂ ಒಳಗೊಂಡಿದ್ದು ಬಹಳ ಸಮಯದಮೇಲೆ. ಹೀಗೆ ಸಂಪೂರ್ಣ ತರಪೇತಿಗಳಿಸಿ, ೧೯೬೪ ರಲ್ಲಿ ಬೆಂಗಳೂರಿಗೆ ವಾಪಸ್ಸಾದರು.

ರಂಗ ಪ್ರವೇಶ[ಬದಲಾಯಿಸಿ]

೧೯೬೪ ರ ಸೆಪ್ಟೆಂಬರ್ ೨೪ ರಂದು, ಬೆಂಗಳೂರಿನ 'ಸರ್ ಪುಟ್ಟಣ್ಣ ಚೆಟ್ಟಿ ಪುರಭವನ'ದಲ್ಲಿ 'ಕೂಚುಪುಡಿ ರಂಗ ಪ್ರವೇಶ' ಮಾಡಿ ಪ್ರೇಕ್ಷಕರಿಂದ ಮೆಚ್ಚುಗೆಗಳಿಸಿದರು. ಆಗಿನ ರಾಷ್ಟ್ರಪತಿ, ಡಾ. ಎಸ್. ರಾಧಾಕೃಷ್ಣನ್, ಪ್ರಧಾನಿ ಪಂಡಿತ್, ಜವಹರಲಾಲ್ ನೆಹರು, ಈಕೆಯ ನೃತ್ಯವನ್ನು ವೀಕ್ಷಿಸಿ, 'ರಜತ ಪದಕನ್ನಿತ್ತು ಗೌರವಿಸಿದ್ದಾರೆ. ಉಜ್ಜಯನಿ ನಗರದಲ್ಲಿ ಜರುಗಿದ 'ಕಾಳಿದಾಸ ನೃತ್ಯೋತ್ಸವ ಸ್ಪರ್ಧೆ'ಯಲ್ಲಿ 'ಕುಮಾರ ಸಂಭವ ರೂಪಕ'ಕ್ಕೆ ಪ್ರಥಮ ಬಹುಮಾನವಲ್ಲದೆ, 'ಬಂಗಾರದ ಕಲಶ'ವನ್ನು ಪಡೆದ ಕೀರ್ತಿ ತಂಡಕ್ಕೆ ಲಭಿಸಿತು. ಹಲವು ಬಗೆಯ ನೃತ್ಯ ಪ್ರಾಕಾರಗಳನ್ನು ಕಲಿತು, ಅದರಲ್ಲಿ ಸಿದ್ಧಿಗಳಿಸಿ ನಾಟ್ಯ ರಂಗವನ್ನೇ ತಮ್ಮ ವೃತ್ತಿಜೀವನವನ್ನಾಗಿ ಸ್ವೀಕರಿಸಿ, ಕಲಾಪೇಕ್ಷಿಗಳಿಗೆ ತಮ್ಮ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ. ಭರತನಾಟ್ಯಂ, ಕುಚಿಪುಡಿ, ಮತ್ತು ಲೋಕನಾಟ್ಯ ವಿದ್ಯೆಗಳಲ್ಲಿ ವಿದ್ಯಾರ್ಥಿಗಳನ್ನು ತರಪೇತು ಮಾಡಲು, ಒಂದು ಗುರುಕುಲವನ್ನು ಪ್ರತಿಷ್ಠಾಪಿಸುವ ಮನಸ್ಸನ್ನು ಹೊಂದಿದ್ದಾರೆ.

ಛಾಯಾ ನೃತ್ಯ ನಿಕೇತನ[ಬದಲಾಯಿಸಿ]

ನೃತ್ಯವೇ ತಮ್ಮ ಜೀವನದ ಅತಿಮುಖ್ಯ ಧ್ಯೇಯವೆಂದು ನಂಬಿದ್ದ, ಸುನಂದಾ ದೇವಿಯವರು, ಛಾಯಾ ನೃತ್ಯ ನಿಕೇತನವನ್ನು ಸ್ಥಾಪಿಸಿದರು. ವಿಶ್ವದಾದ್ಯಂತ ತಮ್ಮ ಕಲೆಯನ್ನು ಪರಿಚಯಿಸುವ ಕಾರ್ಯವನ್ನು ಎಡೆಬಿಡದೆ ನಡೆಸಿದರು. ಅಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಕುಚಿಪುಡಿ, ಹಾಗು ಭರತನಾಟ್ಯ ಸಂಪ್ರದಾಯದಲ್ಲಿ ತರಪೇತಿನೀಡಿದರು. ಆ ಶಿಷ್ಯರಲ್ಲಿ ಅನೇಕರು ಇಂದು ರಾಜ್ಯ ,ಹಾಗೂ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದಾರೆ. ಅಮೆರಿಕ, ಬ್ರಿಟನ್, ಕೊಲ್ಲಿ ರಾಜ್ಯಗಳು, ಮೊದಲಾದ ಹೊರದೇಶಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಟಿವಿಯಲ್ಲಿ ಅನೇಕ ಕಾರ್ಯಕ್ರಮಗಳು ಕ್ರಮವಾಗಿ ಬಿತ್ತರಗೊಳ್ಳುತ್ತಿವೆ. ಅವರು, ಭಾರತದಲ್ಲಿ ಇಂದಿರ ಗಾಂಧಿ, ಚೈನಾದಲ್ಲಿ ದಲೈ ಲಾಮರವರ ಸಮ್ಮುಖದಲ್ಲಿ ಕಿಸಾಗೌತಮಿ ನೃತ್ಯ ರೂಪಕವನ್ನು ರಚಿಸಿ, ಅಭಿನಯಿಸಿದರು. ಪ್ರಮುಖ ಪ್ರದರ್ಶನಗಳು :

  • ಮೋಹಿನಿ ಭಸ್ಮಾಸುರ,
  • ರತಿಮನ್ಮಥ,
  • ಶಿವರಂಜನಿ,
  • ಸುಭದ್ರಾ ಪರಿಣಯಂ,
  • ವೆಂಕಟೇಶ್ವರ ಕಲ್ಯಾಣಂ

'ಶಿವಲೀಲ ಕನ್ನಡ ಚಿತ್ರ'ಕ್ಕೆ. ನೃತ್ಯ ಸಂಯೋಜನೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ನಟ್ಟುವಾಂಗಂ, ಶಾಸ್ತ್ರೀಯ ಸಂಗೀತಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಪರಿಣತರು. ' ಕುಚಿಪ್ಪುಡಿ ನೃತ್ಯದ ಬಗ್ಗೆ ಪರಿಚಯಿಸುವ ಪುಸ್ತಕ ರಚನೆ'ಯ ಕರ್ನಾಟಕ ಸರಕಾರ ಆಯೋಜಿಸಿದ ಕಮಿಟಿಯಲ್ಲಿ ಅವರು ಒಬ್ಬ ಸದಸ್ಯೆಯಾಗಿದ್ದರು. ಈ ಪುಸ್ತಕ, ಜೂನಿಯರ್, ಸೀನಿಯರ್, ವಿದ್ವತ್ ವರೆಗೆ ಕಲಿಯುವ ವಿದ್ಯಾರ್ಥಿಗಳಿಗೆ ಬಹಳ ಉಪಯೋಗಕಾರಿಯಾಗಿದೆ.

ಗೌರವ, ಪ್ರಶಸ್ತಿಗಳು[ಬದಲಾಯಿಸಿ]

  • ಕರ್ನಾಟಕ, ಕಲಾಶ್ರೀ
  • ಆರ್ಯಭಟ್ಟ ಪ್ರಶಸ್ತಿ,
  • ನಾಟ್ಯ ಶಾಂತಲ ಬಹುಮಾನ,
  • ರಾಜ್ಯೊತ್ಸವ ಪ್ರಶಸ್ತಿ,

- ಚಿತ್ರ : ಹಿಂದೂ ದಿನ ಪತ್ರಿಕೆ.