ವಿದುಷಿ. ಮೀನಾಕ್ಷಿ ರಾಜು ಶ್ರೀಯಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Meenakshi Shriyan NEWS (1).jpg
'ಮುಂಬಯಿನ ಭರತ ನಾಟ್ಯ ನೃತ್ಯ ಗುರು, ಮೀನಾಕ್ಷಿ ರಾಜು ಶ್ರೀಯಾನ್'

'ಮೀನಾಕ್ಷಿ ರಾಜು ಶ್ರೀಯಾನ್, ಮುಂಬಯಿನಗರದ ಮುಂಬಯಿ ತುಳು-ಕನ್ನಡಿಗರ ಸುಪ್ರಸಿದ್ಧ ನೃತ್ಯ ವಿದ್ಯಾಸಂಸ್ಥೆ. ’ಅರುಣೋದಯ ಕಲಾನಿಕೇತನ’[೧] ದ ಸ್ಥಾಪಕರು. ಈ ನೃತ್ಯಶಿಕ್ಷಣ ಸಂಸ್ಥೆಯ ಗುರು, ಮೀನಾಕ್ಷಿಯವರು,[೨] 'ಭರತನಾಟ್ಯ ವಿಶಾರದೆ,' ನಾಟ್ಯ ಮಯೂರಿ, ಮುಂತಾದ ಬಿರುದುಗಳನ್ನು ಗಳಿಸಿ ಸುಪ್ರಸಿದ್ದರಾಗಿದ್ದಾರೆ. ಈಕೆಗೆ ಪ್ರತಿಷ್ಠಿತ 'ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ' ಸನ್ ೨೦೧೨ ರ ಮಾರ್ಚ್, ೨೭ ರಂದು ಮಧ್ಯಾನ್ಹ ನವದೆಹಲಿಯ,'ಲೋಧಿ ರೋಡ್' ನಲ್ಲಿರುವ 'ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್' ನಲ್ಲಿ ದೊರೆಯಲಿದೆ. ಆರ್ಥಿಕ ಪ್ರಗತಿ ಮತ್ತು ರಾಷ್ಟ್ರೀಯ ಸಮಗ್ರತೆ ಕುರಿತು ಸಮ್ಮೇಳನ ಸಮಾರಂಭದಲ್ಲಿ 'ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪ್ರದಾನ ಸಮಾರಂಭ'ವನ್ನು ಹಮ್ಮಿಕೊಳ್ಳಲಾಗಿದೆ.[೩] ದಿವಂಗತ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ'ಯವರ ಸವಿ ನೆನಪಿನಲ್ಲಿ 'ರಾಷ್ಟ್ರಪತಿ, ಶ್ರೀಮತಿ ಪ್ರತಿಭಾಪಾಟೀಲ್' ರವರ ದಿವ್ಯ ಹಸ್ತದಿಂದ ಪ್ರಶಸ್ತಿ ಪ್ರದಾನವಾಗುವುದು. ನವದೆಹಲಿಯ 'ಐ.ಐ.ಎಫ್.ಎಸ್'(ಇಂಡಿಯಾ ಇಂಟರ್ ನ್ಯಾಷನಲ್ ಎಫ್ ಸೊಸೈಟಿಯ) 'ಮೀನಾಕ್ಷಿ ರಾಜು'ರವರು,'ಭರತ ನಾಟ್ಯಂ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ', ಮಾಡಿದ ಸಾಧನೆಗಳನ್ನು ಗುರುತಿಸಿ (ಇಂಡಿಯನ್ ಕ್ಲಾಸಿಕಲ್ ಡಾನ್ಸ್) 'ಇಂದಿರಾ ಪ್ರಿಯದರ್ಶಿನಿ ಪ್ರತಿಷ್ಠಿತ ಪ್ರಶಸ್ತಿ'ಯನ್ನು ಪ್ರಕಟಿಸಿದೆ. ಹಲವಾರು ಪ್ರಶಸ್ತಿ ಪುರಸ್ಕಾರಗಳು ಈಗಾಗಲೇ ಮೀನಾಕ್ಷಿಯವರಿಗೆ ಸಂದಿವೆ.[೪]

ದೊರೆತ ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಚಿತ್ರ:Mrs.jpg
'ವಿದುಷಿ. ಮೀನಾಕ್ಷಿ ರಾಜು'
  • 'ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಎಸ್.ಎಂ.ಕೃಷ್ಣರವರಿಂದ ದೊರೆತ ಸನ್ಮಾನ'
  • 'ಉಡುಪಿ ಶ್ರೀ.ವಿಶ್ವೇಶ್ವರ ತೀರ್ಥರವರಿಂದ ದೊರೆತ ಆಶೀರ್ವಾದ ಭರಿತ ಸತ್ಕಾರ'
  • 'ಜರ್ಮನಿಯಲ್ಲಿ ಪ್ರಭುದಾ ಬ್ಯಾನರ್ಜಿಯವರಿಂದ ಸನ್ಮಾನ'[೫]
  • '೨೦೦೫ ಸಿಂಗಪುರ್ ನಲ್ಲಿ ದೊರೆತ ಕಲಾಪ್ರಶಸ್ತಿ'
  • 'ಬೆಂಗಳೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ'
  • 'ಆಂಧ್ರ ಪ್ರದೇಶದ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ'
  • 'ನಾಚೂ ಮಯೂರಿ'
  • 'ಮಿನುಗು ತಾರೆ'
  • 'ನಾಟ್ಯ ತಾರೆ',[೬]
  • 'ನೃತ್ಯ ವಿಶಾರದೆ'
  • 'ಸಮಾಜರತ್ನ'
  • 'ಹೃದಯವಂತ ಪ್ರಶಸ್ತಿ'
  • 'ನಾಟ್ಯ ಸರಸ್ವತಿ'
  • 'ನೃತ್ಯ ಶಾರದೆ'
  • 'ಕರ್ನಾಟಕ ಸುವರ್ಣರತ್ನ ಪ್ರಶಸ್ತಿ'

'ಇಂದಿರ ಪ್ರಿಯದರ್ಶಿನಿ ಪ್ರಶಸ್ತಿವಿಜೇತರು'[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Indian Art & Artists, MEENAKSHI SHRIYAN & GURU M.N.SUVARNA[ಶಾಶ್ವತವಾಗಿ ಮಡಿದ ಕೊಂಡಿ]
  2. http://www.indianmirror.com/dance/bharatanatyam.html
  3. http://www.kemmannu.com/index.php?action=highlights&type=1215
  4. "ಆರ್ಕೈವ್ ನಕಲು". Archived from the original on 2014-08-20. Retrieved 2014-03-18.
  5. http://www.narthaki.com/bhnatyam/bh1gi.htm
  6. Celebrating Kannada culture, 'Afternoon Despatch & Courier' Tuesday, October 23, 2012, By Vijay Shanker[ಶಾಶ್ವತವಾಗಿ ಮಡಿದ ಕೊಂಡಿ]