ವಿಷಯಕ್ಕೆ ಹೋಗು

ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ (ಜುಲೈ ೧೯೩೫ - ೧೫ ಜನವರಿ ೨೦೦೨) ಒಬ್ಬ ಭಾರತೀಯ ನೃತ್ಯಗಾರ್ತಿ, ಗಾಯಕಿ ಮತ್ತು ತಮಾಶಾ ಕಲಾವಿದೆ.

ಆರಂಭಿಕ ಜೀವನ ಮತ್ತು ವೃತ್ತಿಜೀವನ

[ಬದಲಾಯಿಸಿ]

ವಿಠಾಬಾಯಿ ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಅವರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಢರಪುರ ನಗರದಲ್ಲಿ ಜನಿಸಿದರು. ಭಾವು-ಬಾಪು ಮಾಂಗ್ ನಾರಾಯಣಗಾಂವ್ಕರ್ ಅವರ ತಂದೆ ಮತ್ತು ಚಿಕ್ಕಪ್ಪ ಅವರು ಕುಟುಂಬವನ್ನು ನಡೆಸುತ್ತಿದ್ದರು . ಆಕೆಯ ಅಜ್ಜ ನಾರಾಯಣ ಖುಡೆ ತಂಡವನ್ನು ಸ್ಥಾಪಿಸಿದರು. ಅವರು ಪುಣೆ ಜಿಲ್ಲೆಯ ಶಿರೂರು ತಾಲೂಕಿನ ಕವತೆ ಯಮಾಯಿಯವರು.[] ಬಾಲ್ಯದಿಂದಲೂ, ಅವರು ಲಾವಣಿ, ಗವ್ಲಾನ್, ಭೇದಿಕ್, ಮುಂತಾದ ಹಾಡುಗಳ ವಿವಿಧ ರೂಪಗಳಿಂದ ಬೆಳೆದು ಬಂದವರು. ವಿದ್ಯಾರ್ಥಿಯಾಗಿ ಅವಳು ಶಾಲೆಯಲ್ಲಿ ಉತ್ತಮ ಸಾಧನೆ ಮಾಡಲಿಲ್ಲ, ಆದರೂ ಅವಳು ಯಾವುದೇ ಔಪಚಾರಿಕ ತರಬೇತಿಯಿಲ್ಲದೆಯೇ ಚಿಕ್ಕ ವಯಸ್ಸಿನಿಂದಲೂ ವೇದಿಕೆಯ ಮೇಲೆ ಅನಾಯಾಸ ಸೌಂದರ್ಯದಿಂದ ಪ್ರದರ್ಶನ ನೀಡಿದರು. []

ವಿಠಾಬಾಯಿಯ ಜೀವನದ ಒಂದು ಗಮನಾರ್ಹ ಘಟನೆಯೆಂದರೆ ಅವರ ಮಗು ಜನಿಸಿದ ಅವಧಿ. ಅವರು ೯ ತಿಂಗಳ ಗರ್ಭಿಣಿಯಾಗಿದ್ದು, ಅವರು ತಮ್ಮ ಪ್ರೇಕ್ಷಕರಿಗಾಗಿ ಪ್ರದರ್ಶನ ನೀಡುತ್ತಿದ್ದರು. ಪ್ರದರ್ಶನದ ಸಮಯದಲ್ಲಿ ಅವರಿಗೆ ಹೆರಿಗೆ ಆಗಬಹುದು ಎಂದು ಅರಿತು, ಅವರು ತೆರೆಮರೆಯಲ್ಲಿ ಹೋಗಿ ಮಗುವನ್ನು ಹೆತ್ತು, ಹೊಕ್ಕುಳಬಳ್ಳಿಯನ್ನು ಕಲ್ಲಿನಿಂದ ಕತ್ತರಿಸಿ ಪ್ರದರ್ಶನಕ್ಕೆ ಸೇರಲು ಸಿದ್ಧರಾದರು. ಗರ್ಭವಿಲ್ಲದಿದ್ದ ಆಕೆಯನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಚಕಿತರಾದರು. ಆಕೆಯ ಧೈರ್ಯದ ಕಾರ್ಯ ಮತ್ತು ಸಮರ್ಪಣೆಯ ಬಗ್ಗೆ ವಿಚಾರಿಸಿ ಮತ್ತು ತಿಳಿದುಕೊಂಡ ನಂತರ ಪ್ರದರ್ಶನವನ್ನು ನಿಲ್ಲಿಸಲಾಯಿತು. ಪ್ರದರ್ಶನವನ್ನು ಪೂರ್ಣಗೊಳಿಸಲು ಆಕೆಯ ದೃಢಸಂಕಲ್ಪಕ್ಕಾಗಿ ಪ್ರೇಕ್ಷಕರು ಅವರನ್ನು ಹೊಗಳಿದರು ಮತ್ತು ಆದರೆ ಗೌರವಯುತವಾಗಿ ವಿಶ್ರಾಂತಿ ಪಡೆಯುವಂತೆ ಕೇಳಿಕೊಂಡರು. ಮಹಾರಾಷ್ಟ್ರದ ನಾರಾಯಣಗಾಂವ್ ಹಳ್ಳಿಯಿಂದ ಬಂದ ಮಹಾನ್ ಖ್ಯಾತಿಯ ದಂಥ ತಮಾಶಾ ಕಲಾವಿದೆ ಎಂದು ಅವರು ಯಾವಾಗಲೂ ಗುರುತಿಸಲ್ಪಡುತ್ತಾರೆ.

ಅವರು ತಮ್ಮ ಕಲೆಗಾಗಿ ೧೯೫೭ ಮತ್ತು ೧೯೯೦ರಲ್ಲಿ ಭಾರತದ ರಾಷ್ಟ್ರಪತಿಯವರಿಂದ ಪದಕಗಳನ್ನು ಪಡೆದರು. [] ಆಕೆ ಖ್ಯಾತಿ ಮತ್ತು ಗೌರವಗಳನ್ನು ಗಳಿಸಿದರೂ ಕೂಡಾ ಆರ್ಥಿಕ ಸಂಕಷ್ಟವನ್ನು ಅನುಭವಿಸಿದರು.[] ಆಕೆಯ ಮರಣದ ನಂತರ ಆಕೆಯ ಆಸ್ಪತ್ರೆಯ ಖರ್ಚನ್ನು ದಾನಿಗಳ ಕೊಡುಗೆಯಿಂದ ಪೂರೈಸಲಾಯಿತು.[]

ಪ್ರಶಸ್ತಿಗಳು ಮತ್ತು ಮನ್ನಣೆ

[ಬದಲಾಯಿಸಿ]

ಅವರು ಜನರ ಮೆಚ್ಚುಗೆಯನ್ನು ಗಳಿಸಿದ್ದರಿಂದಾಗಿ ಅವರ ತಂಡವು ತಮಾಶಾ ಪ್ರಕಾರದ ಕಲೆಯಲ್ಲಿ ಅತ್ಯಂತ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆಯಿತು. ಆಕೆಯ ಅಭಿಮಾನಿಗಳು ಅವರನ್ನು "ತಮಾಶಾ ಸಮ್ರಾದಿನಿ" (ತಮಾಶಾ ಸಾಮ್ರಾಜ್ಞಿ) ಎಂದು ಕರೆಯುತ್ತಾರೆ.[] [] ಮಹಾರಾಷ್ಟ್ರ ಸರ್ಕಾರವು ೨೦೦೬ ರಲ್ಲಿ ಅವರ ಸ್ಮರಣಾರ್ಥ ವಾರ್ಷಿಕ ವಿಠಾಬಾಯಿ ನಾರಾಯಣ ಗಾಂವ್ಕರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ಥಾಪಿಸಿದೆ. ತಮಾಶಾ ಕಲೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ವ್ಯಾಪಕ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೨೦೦೬ರಿಂದ ನೀಡಲಾಗುತ್ತಿದೆ. ಈ ಪ್ರಶಸ್ತಿಗಳಿಗೆ ಭಾಜನರಾದವರೆಂದರೆ ಶ್ರೀಮತಿ ಕಾಂತಬಾಯಿ ಸತಾರಕರ್, ವಸಂತ ಅವಸಾರಿಕರ್, ಶ್ರೀಮತಿ ಸುಲೋಚನಾ ನಲವಾಡೆ, ಹರಿಭಾವು ಬಾಧೆ, ಶ್ರೀಮತಿ ಮಂಗಳಾ ಬನ್ಸೋಡೆ (ವಿಠಾಬಾಯಿಯವರ ಪುತ್ರಿ), ಸಾಧು ಪತ್ಸುತೆ, ಅಂಕುಶ ಖಾಡೆ, ಪ್ರಭಾ ಶಿವನೇಕರ್, ಭೀಮಾ ಸಂಗವಿಕರ್, ಗಂಗಾರಾಮ್ ಕವಠೇಕರ್, ಶ್ರೀಮತಿ ರಾಧಾಬಾಯಿ ಖೊಡೆ ನಶಿಕ್ಕರ್, ಮತ್ತು ಮಧುಕರ್ ನೆರಾಲೆ. ಲೋಕಶಾಹಿರ್ ಬಶೀರ್ ಮೋಮಿನ್ ಕವಾಟೇಕರ್ [] ಅವರು ಜಾನಪದ ಕಲೆಯಾದ ಲಾವಣಿ ಮತ್ತು ತಮಾಶಾ ಕ್ಷೇತ್ರಕ್ಕೆ ಅವರ ಜೀವಮಾನದ ಕೊಡುಗೆಗಾಗಿ ೨೦೧೮ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. [] ಶ್ರೀಮತಿ ಗುಲಾಬ್ ಸಂಗಮನೇರ್ಕರ್ ಅವರು ಲಾವಣಿ ಮತ್ತು ತಮಾಶಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ೨೦೧೯ರ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. []

ಉಲ್ಲೇಖಗಳು

[ಬದಲಾಯಿಸಿ]
  1. Abp Majha (2016-09-08), माझा कट्टा: लावणी सम्राज्ञी मंगला बनसोडे, retrieved 2016-12-18
  2. Lakshmi, C.S. (3 February 2002). "Life and times of a kalakaar". The Hindu. Archived from the original on 25 January 2013. Retrieved 23 August 2012.
  3. "Bowing out - Indian Express". archive.indianexpress.com. Retrieved 2016-12-18.
  4. Bendix, Regina F.; Hasan-Rokem, Galit (2012-03-12). A Companion to Folklore (in ಇಂಗ್ಲಿಷ್). John Wiley & Sons. ISBN 9781444354386.
  5. ೫.೦ ೫.೧ "Lavani Legend Vithabai is no more". The Times of India. Pune, India. Times News Network. 17 July 2002. Retrieved 23 August 2012.
  6. "लाज धरा पाव्हणं..." marathibhaskar. 2012-03-03. Retrieved 2016-12-18.
  7. बी. के. मोमीन कवठेकर यांना विठाबाई नारायणगावकर पुरस्कार जाहीर “Sakal, a leading Marathi Daily”, 2-Jan-2019
  8. तमाशासम्रादणी विठाबाई नारायणगावकर जीवनगौरव पुरस्कार बशीर कमरूद्दीन मोमीन यांना घोषित "लोकमत, a leading Marathi language Daily", 2-Jan-2019
  9. ज्येष्ठ लोककलावंत गुलाबबाई संगमनेरकर यांना विठाबाई नारायणगावकर जीवनगौरव पुरस्कार जाहीर Archived 2020-11-19 ವೇಬ್ಯಾಕ್ ಮೆಷಿನ್ ನಲ್ಲಿ. “Sakal, a leading Marathi Daily”, 24-Jun-2020