ವಿಜಯಲಕ್ಷ್ಮಿ ಸಿಂಗ್
| ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ವಿಜಯಲಕ್ಷ್ಮಿ ಸಿಂಗ್ | |
|---|---|
| ಜನನ | |
| ವೃತ್ತಿ | ನಟಿ, ನಿರ್ದೇಶಕಿ, ನಿರ್ಮಾಪಕಿ |
ವಿಜಯಲಕ್ಷ್ಮಿ ಸಿಂಗ್ ೮೦ರ ಕನ್ನಡ ಚಲನಚಿತ್ರ ನಟಿ, ನಿರ್ಮಾಪಕಿ, ಸಿರ್ದೇಶಕಿ. ಕನ್ನಡ ಚಿತ್ರರಂಗದ ಹೆಸರಾಂತ ನಟಿ ಪ್ರತಿಮಾ ದೇವಿ ಮತ್ತು ನಿರ್ಮಾಪಕ ಶಂಕರ್ ಸಿಂಗ್ ಅವರ ಪುತ್ರಿ.
ಆರಂಭಿಕ ಜೀವನ
[ಬದಲಾಯಿಸಿ]ವಿಜಯಲಕ್ಷ್ಮಿ ಸಿಂಗ್ ಅವರು ಚಲನಚಿತ್ರರಂಗದ ಹೆಸರಾಂತ ವ್ಯಕ್ತಿಗಳಾದ ನಿರ್ಮಾಪಕ ಡಿ. ಶಂಕರ್ ಸಿಂಗ್ ಮತ್ತು ಹಿರಿಯ ನಟಿ ಪ್ರತಿಮಾ ದೇವಿ ಅವರ ಪುತ್ರಿ. ಅವರು ಚಿತ್ರರಂಗದ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದರು. ಅವರ ಸಹೋದರ ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದಾರೆ. ವಿದ್ಯಾಭ್ಯಾಸವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದ ವಿಜಯಲಕ್ಷ್ಮಿ ಸಿಂಗ್ ಅವರು ಕಲೆ ಮತ್ತು ನಟನೆಗೆ ಬಾಲ್ಯದಲ್ಲೇ ಆಸಕ್ತಿ ತೋರಿದ್ದು, ನಂತರ ಈ ಕ್ಷೇತ್ರದಲ್ಲೇ ತನ್ನ ಭವಿಷ್ಯ ನಿರ್ಮಿಸಿಕೊಂಡರು.
ವೃತ್ತಿಜೀವನ
[ಬದಲಾಯಿಸಿ]ವಿಜಯಲಕ್ಷ್ಮಿ ಅವರು ನಟನೆಯ ಮೂಲಕ ಚಿತ್ರರಂಗ ಪ್ರವೇಶಿಸಿದರು. 1981ರ ‘ಶ್ರೀಮಾನ್’ ಚಿತ್ರದಿಂದ ಅವರು ತಮ್ಮ ನಟನೆಯ ಪಯಣ ಆರಂಭಿಸಿದರು. ನಂತರ 'ಧರಣಿ ಮಂಡಲ ಮಧ್ಯದೊಳಗೆ' (1983), 'ಮಸಣದ ಹೂವು' (1985), 'ನನ್ನ ಪ್ರೀತಿಯ ಹುಡುಗಿ' (2001), 'ವೀರ ಪರಂಪರೆ' (2010), 'ರಾಜಕುಮಾರ' (2017), 'ಪೆಟ್ರೋಮ್ಯಾಕ್ಸ್' (2022), 'ಘೋಸ್ಟ್' (2023) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು.
ಅಭಿನಯದ ಜೊತೆಗೆ ಅವರು ನಿರ್ದೇಶನ ಮತ್ತು ನಿರ್ಮಾಣದತ್ತ ಗಮನಹರಿಸಿದರು. 'ಈ ಬಂಧನ' (2007), 'ಮಳೆ ಬರಲಿ ಮಂಜು ಇರಲಿ' (2009), 'ವಾರೆ ವಾ' (2010), 'ಸ್ವೀಟಿ ನನ್ನ ಜೋಡಿ' (2013) ಮತ್ತು 'ಯಾನ' (2019) ಚಿತ್ರಗಳನ್ನು ನಿರ್ದೇಶಿಸಿದರು.
ವೈಯಕ್ತಿಕ ಜೀವನ
[ಬದಲಾಯಿಸಿ]ವಿಜಯಲಕ್ಷ್ಮಿ ಸಿಂಗ್ ಅವರು ಖ್ಯಾತ ನಟ ಜಯ ಜಗದೀಶ್ ಅವರನ್ನು ವಿವಾಹವಾಗಿದ್ದು, ಅವರಿಗೆ ಮೂವರು ಪುತ್ರಿಯರು. ಅವರು ಚಿತ್ರರಂಗದ ಜೊತೆಗೆ ಧಾರಾವಾಹಿಗಳಲ್ಲಿ ಸಹ ತನ್ನ ಛಾಪು ಮೂಡಿಸಿದ್ದಾರೆ. 'ಜೋತೆ ಜೋತೆಯಲಿ' (2020) ಧಾರಾವಾಹಿಯಲ್ಲಿ ಅವರ ನಟನೆಯು ಟಿವಿ ಪ್ರೇಕ್ಷಕರ ಗಮನ ಸೆಳೆಯಿತು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]