ವಿಷಯಕ್ಕೆ ಹೋಗು

ವಿಕಿಪೀಡಿಯ:ಯಾವುದೇ ಕಾನೂನು ಬೆದರಿಕೆಗಳಿಗೆ ಅವಕಾಶವಿಲ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  ವಿಕಿಪೀಡಿಯಾದಲ್ಲಿ ಕಾನೂನು ಬೆದರಿಕೆಗಳನ್ನು ಪೋಸ್ಟ್ ಮಾಡಬೇಡಿ. ಕಾನೂನು ಬೆದರಿಕೆ ಎಂದರೆ ಇತರ ಸಂಪಾದಕರು ಅಥವಾ ವಿಕಿಪೀಡಿಯಾವನ್ನು ಗುರಿಯಾಗಿಸಿಕೊಂಡು ಆಫ್-ವಿಕಿ ("ನೈಜ ಜೀವನ")ಯಲ್ಲಿ ಕಾನೂನು ಅಥವಾ ಇತರ ಸರ್ಕಾರಿ ಪ್ರಕ್ರಿಯೆಯ ಮೂಲಕ ಮಾಡುವ ಬೆದರಿಕೆ. ಕಾನೂನು ಬೆದರಿಕೆಗಳನ್ನು ವಿಕಿಪೀಡಿಯಾದ ಅರಳಿ ಕಟ್ಟೆಯಲ್ಲಿ ಅಥವಾ ಬೇರೆಡೆ ನಿರ್ವಾಹಕರಿಗೆ ವರದಿ ಮಾಡಬೇಕು . ಬೆದರಿಕೆಗಳನ್ನು ಪೋಸ್ಟ್ ಮಾಡುವ ಬಳಕೆದಾರರನ್ನು, ಆ ವ್ಯಾಜ್ಯ ಪರಿಹರಿಯುವವರೆಗೂ ನಿರ್ಬಂಧಿಸಲಾಗುತ್ತದೆ .

ಬೆದರಿಕೆಗಳ ಬದಲಿಗೆ, ವಿವಾದ ಪರಿಹಾರ ಕಾರ್ಯವಿಧಾನಗಳಲ್ಲಿ ಒಂದನ್ನು ಬಳಸಲು ಪ್ರಯತ್ನಿಸಿ . ನಿಮ್ಮ ಸಮಸ್ಯೆಯು ವಿಕಿಪೀಡಿಯಾವನ್ನು ಒಳಗೊಂಡಿದ್ದರೆ, ವಿಕಿಮೀಡಿಯಾ ಫೌಂಡೇಶನ್ ಅನ್ನು ಸಂಪರ್ಕಿಸಿ .

ವಿಕಿಪೀಡಿಯಾದಲ್ಲಿ ಅಥವಾ ಬೇರೆಡೆಯ ಘಟನೆಗಳ ಪರಿಣಾಮವಾಗಿ ಬಳಕೆದಾರರ ನಡುವೆ ಕಾನೂನು ವಿವಾದವಾಗುತ್ತಿದ್ದರೆ ಅದು ಅವರನ್ನು ನಿರ್ಬಂಧಿಸಲು ಮಾನ್ಯವಾದ ಕಾರಣವಾಗಿರುವುದಿಲ್ಲ. ವಿಕಿಪೀಡಿಯಾದಲ್ಲಿ ಯಾವುದೇ ಕಾನೂನು ಬೆದರಿಕೆಗಳನ್ನು ಪೋಸ್ಟ್ ಮಾಡುವವರೆಗೆ ಅವರನ್ನು ವಿಕಿಪೀಡಿಯದಿಂದ ನಿರ್ಬಂಧಿಸುವಂತಿಲ್ಲ .

ಯಾವುದು ಕಾನೂನು ಬೆದರಿಕೆ ಅಲ್ಲ

[ಬದಲಾಯಿಸಿ]

ಕೃತಿಸ್ವಾಮ್ಯ

[ಬದಲಾಯಿಸಿ]

ಹಕ್ಕುಸ್ವಾಮ್ಯ ಉಲ್ಲಂಘನೆಯ ದೂರುಗಳು ಕಾನೂನು ಬೆದರಿಕೆಯಲ್ಲ. ನೀವು ವಿಕಿಪೀಡಿಯಾಕ್ಕೆ ಸೇರಿಸಲಾದ ಹಕ್ಕುಸ್ವಾಮ್ಯದ ವಸ್ತುಗಳ ಮಾಲೀಕರಾಗಿದ್ದರೆ, ಅಂತಹ ಬಳಕೆಗೆ ಪರವಾನಗಿ ಇದೆಯೇ ಎಂಬ ಬಗ್ಗೆ ಹೇಳಿಕೆ ಸ್ವಾಗತಾರ್ಹ. ನೀವು ಮಾಹಿತಿ ತಂಡವನ್ನು ಅಥವಾ ವಿಕಿಮೀಡಿಯಾ ಫೌಂಡೇಶನ್‌ನ ಗೊತ್ತುಪಡಿಸಿದ ಏಜೆಂಟ್ ಅನ್ನು ಸಂಪರ್ಕಿಸಬಹುದು ಅಥವಾ ವಿಕಿಪೀಡಿಯ:ಹಕ್ಕುಸ್ವಾಮ್ಯ ಸಮಸ್ಯೆಗಳಲ್ಲಿ ಕಾರ್ಯವಿಧಾನಗಳನ್ನು ಬಳಸಬಹುದು.

ಮಾನಹಾನಿ

[ಬದಲಾಯಿಸಿ]

ವಸ್ತು ಮಾನಹಾನಿಕರವೇ ಎಂಬ ಚರ್ಚೆಯು ಕಾನೂನು ಬೆದರಿಕೆಯಲ್ಲ. ಮಾನನಷ್ಟ ನೀತಿಯು ಮಾನಹಾನಿಯನ್ನು ಗುರುತಿಸಿದ ತಕ್ಷಣ ಅದನ್ನು ಅಳಿಸುವುದು. ನೀವು ಮಾನಹಾನಿಕರ ಹೇಳಿಕೆಗೆ ಒಳಗಾಗಿರುವಿರಿ ಎಂದು ನೀವು ಭಾವಿಸಿದರೆ, emergency@wikimedia.org ಗೆ ಇಮೇಲ್ ಮಾಡಿ.

ಹಿತಾಸಕ್ತಿ ಸಂಘರ್ಷ

[ಬದಲಾಯಿಸಿ]

ವೇತನ ಪಡೆಯುವ ಸಂಪಾದಕರಿಗೆ ವಿಕಿಮೀಡಿಯಾ ಫೌಂಡೇಶನ್‌ನ ಬಳಕೆಯ ನಿಯಮಗಳು ಅಥವಾ ಬಹಿರಂಗಪಡಿಸದ ವಸ್ತುಗಳ ಕುರಿತು ಜಾಹೀರಾತು ನೀಡುವ ವಿರುದ್ಧದ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಕಾನೂನು ಬೆದರಿಕೆಯಲ್ಲ.

ಗ್ರಹಿಸಲಾದ ಕಾನೂನು ಬೆದರಿಕೆಗಳು

[ಬದಲಾಯಿಸಿ]

ಬೆದರಿಕೆ ಎಂದು ಇತರರು ಅರ್ಥಮಾಡಿಕೊಳ್ಳುವಂತೆ ಕಾಮೆಂಟ್‌ಗಳನ್ನು ಮಾಡಬೇಡಿ. ಉದಾಹರಣೆಗೆ, ಒಬ್ಬ ಸಂಪಾದಕ ಮಾಡಿದ ಕಾಮೆಂಟ್ ಅನ್ನು "ಮಾನಹಾನಿಕರ" ಎಂದು ನೀವು ಪದೇ ಪದೇ ಪ್ರತಿಪಾದಿಸಿದರೆ, ಆ ಸಂಪಾದಕರು ಅದನ್ನು ಬೆದರಿಕೆ ಎಂದು ಅರ್ಥೈಸಿಕೊಳ್ಳಬಹುದು. ಅದರ ಬದಲು "ನನ್ನ ಕುರಿತಾದ ಹೇಳಿಕೆಯು ಸುಳ್ಳು ಮತ್ತು ಅದನ್ನು ಸರಿಪಡಿಸುವಂತೆ ನಾನು ವಿನಂತಿಸಿಕೊಳ್ಳುತ್ತೇನೆ" ಎಂಬಂತಹ ಪದಗಳನ್ನು ಬಳಸಿ.

ತರ್ಕಬದ್ಧತೆ

[ಬದಲಾಯಿಸಿ]

ಕಾನೂನು ಬೆದರಿಕೆಗಳನ್ನು ಪೋಸ್ಟ್ ಮಾಡುವುದು ಅನಾಗರಿಕತೆಯನ್ನು ಬಿಂಬಿಸುತ್ತದೆ ಮತ್ತು ಇದರಿಂದ ಈ ಕೆಳಗಿನ ಸಮಸ್ಯೆಗಳಾಗಬಹುದು:

  • ಇದು ಸಂಪಾದಕರು ನಿಶ್ಚಿಂತೆಯಿಂದ ಸಂಪಾದನೆ ಮಾಡುವುದನ್ನು ತಡೆತಯುತ್ತದೆ.
  • ಇದು ಕೆಟ್ಟ ಭಾವನೆಗಳನ್ನು ಮತ್ತು ಅಪನಂಬಿಕೆಗಳನ್ನು ಸೃಷ್ಟಿಸುತ್ತದೆ, .

ಕಾನೂನು ಬೆದರಿಕೆಯ ತೀರ್ಮಾನ

[ಬದಲಾಯಿಸಿ]

ಒಬ್ಬ ವ್ಯಕ್ತಿ ಕೋಪದಲ್ಲಿ ಅಥವಾ ತಪ್ಪು ನಿರ್ಣಯದಿಂದ ಮಾಡಿದ ಹೇಳಿಕೆಗಳನ್ನು ಹಿಂತೆಗೆದುಕೊಂಡರೆ ಅದನ್ನು ವಿರೋಧಿಸಬಾರದು.

ಕಾನೂನು ಬೆದರಿಕೆಗಳನ್ನು ತಡೆಯುವುದು ಇಲ್ಲಿನ ಮುಖ್ಯ ಗುರಿಯಾಗಿದೆ.