ವಿಷಯಕ್ಕೆ ಹೋಗು

ಮಾನನಷ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನನಷ್ಟಮಿಥ್ಯಾಪವಾದ, ನಿಂದೆ, ಮತ್ತು ದೋಷಾರೋಪಣೆ ಕೂಡ—ಒಬ್ಬ ವ್ಯಕ್ತಿ, ವ್ಯಾಪಾರ, ಉತ್ಪನ್ನ, ಗುಂಪು, ಸರ್ಕಾರ, ಧರ್ಮ, ಅಥವಾ ರಾಷ್ಟ್ರದ ಪ್ರಸಿದ್ಧಿಯನ್ನು ಘಾಸಿಗೊಳಿಸುವ ಸುಳ್ಳು ಹೇಳಿಕೆಯ ಸಂವಹನ.[]

ಸಾಮಾನ್ಯ ಕಾನೂನಿನ ಅಡಿಯಲ್ಲಿ, ಮಾನನಷ್ಟವೆನಿಸಲು, ಒಂದು ಹಕ್ಕುಸಾಧನೆ ಸಾಮಾನ್ಯವಾಗಿ ಸುಳ್ಳಾಗಿರಬೇಕು ಮತ್ತು ಅವಮಾನಿಸಿದ ವ್ಯಕ್ತಿಯಲ್ಲದೆ ಯಾರಿಗಾದರೂ ಬೇರೆಯವರಿಗೆ ಮಾಡಿರಬೇಕು. ಕೆಲವು ಸಾಮಾನ್ಯ ಕಾನೂನು ವ್ಯಾಪ್ತಿಗಳು ನಿಂದಕ ಮಾತು ಎಂದು ಕರೆಯಲಾದ ಮಾತಿನ ಮಾನನಷ್ಟ, ಮತ್ತು ಮಾನಹಾನಿ ಬರಹ ಎಂದು ಕರೆಯಲಾದ ಮುದ್ರಿತ ಶಬ್ದಗಳು ಅಥವಾ ಚಿತ್ರಗಳಂತಹ ಇತರ ಮಾಧ್ಯಮಗಳಲ್ಲಿನ ಮಾನನಷ್ಟದ ನಡುವೆ ವ್ಯತ್ಯಾಸ ಮಾಡುತ್ತವೆ.

ಸುಳ್ಳು ದೃಷ್ಟಿಕೋನ ಕಾನೂನುಗಳು ತಾಂತ್ರಿಕವಾಗಿ ಸುಳ್ಳಿರದ, ಆದರೆ ದಾರಿತಪ್ಪಿಸುವ ಹೇಳಿಕೆಗಳಿಂದ ರಕ್ಷಿಸುತ್ತವೆ.

ಕೆಲವು ನಾಗರಿಕ ಕಾನೂನು ವ್ಯಾಪ್ತಿಗಳಲ್ಲಿ, ಮಾನನಷ್ಟವನ್ನು ನಾಗರಿಕ ತಪ್ಪಿನ ಬದಲಾಗಿ ಅಪರಾಧವೆಂದು ಕಾಣಲಾಗುತ್ತದೆ. ಫ಼ಿಲಿಪೀನ್ಸ್ ದೇಶದ ಮಾನನಷ್ಟ ಕಾನೂನು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ಅಂತರರಾಷ್ಟ್ರೀಯ ಒಡಂಬಡಿಕೆಯ ಅನುಚ್ಛೇದ ೧೯ ಕ್ಕೆ ಅಸಮಂಜಸವಾಗಿತ್ತು ಎಂದು, ಜೊತೆಗೆ ಸದಸ್ಯ ದೇಶಗಳು ಮಾನನಷ್ಟದ ನಿರಪರಾಧೀಕರಣವನ್ನು ಪರಿಗಣಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯು ೨೦೧೨ರಲ್ಲಿ ತೀರ್ಪು ಕೊಟ್ಟಿತು. ಸೌದಿ ಅರೇಬಿಯಾದಲ್ಲಿ, ದೇಶದ ಅಥವಾ ಹಿಂದಿನ ಅಥವಾ ಪ್ರಸಕ್ತ ಆಡಳಿತಗಾರನ ಮಾನಹಾನಿಯು ಭಯೋತ್ಪಾದನಾ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹವಾಗಿದೆ.

ಅನೇಕ ರಾಷ್ಟ್ರಗಳು ಕೆಲವು ಪರಿಸ್ಥಿತಿಗಳಲ್ಲಿನ ಮಾನನಷ್ಟಕ್ಕೆ ಆಪರಾಧಿಕ ದಂಡಗಳನ್ನು ಹೊಂದಿವೆ, ಮತ್ತು ಅಪರಾಧವಾಗಿದೆಯೆಂದು ನಿರ್ಧರಿಸಲು ಭಿನ್ನ ಷರತ್ತುಗಳನ್ನು ಹೊಂದಿವೆ. ಒಂದು ಮುಕ್ತ ಅಭಿವ್ಯಕ್ತಿ ವಕಾಲತ್ತು ಗುಂಪಾದ ಆರ್ಟಿಕಲ್ ೧೯, ವಿಶ್ವದಾದ್ಯಂತ ಆಪರಾಧಿಕ ಮಾನನಷ್ಟ ಕಾನೂನಿನ ಅಸ್ತಿತ್ವವನ್ನು ತೋರಿಸುವ, ಜೊತೆಗೆ ರಾಜಕೀಯ ನಾಯಕರು ಅಥವಾ ದೇಶದ ಪದಾಧಿಕಾರಿಗಳಿಗೆ ವಿಶೇಷ ರಕ್ಷಣೆಗಳನ್ನು ಹೊಂದಿರುವ ದೇಶಗಳನ್ನು ತೋರಿಸುವ ಜಾಗತಿಕ ನಕ್ಷೆಗಳನ್ನು ಪ್ರಕಟಿಸಿದೆ.

ಭಾರತದ ಸಂವಿಧಾನದ ಪ್ರಕಾರ, ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿದೆ. ತದನುಸಾರ, ಆಪರಾಧಿಕ ಮಾನನಷ್ಟದ ಉದ್ದೇಶಕ್ಕಾಗಿ, ಸಮಂಜಸವಾದ ನಿರ್ಬಂಧಗಳನ್ನು ಭಾರತೀಯ ದಂಡ ಸಂಹಿತೆ ಕಲಮು ೪೯೯ರಲ್ಲಿ ವ್ಯಾಖ್ಯಾನಿಸಲಾಗಿದೆ. ಈ ಕಲಮು ಮಾನನಷ್ಟವನ್ನು ವ್ಯಾಖ್ಯಾನಿಸುತ್ತದೆ ಮತ್ತು ಹೇಳಿಕೆಯನ್ನು ಮಾನನಷ್ಟವೆಂದು ಪರಿಗಣಿಸಲಾಗದ ಮಾನ್ಯವಾದ ವಿನಾಯಿತಿಗಳನ್ನು ಒದಗಿಸುತ್ತದೆ. ಭಾರತದಲ್ಲಿ, ಮಾನನಷ್ಟ ಮೊಕದ್ದಮೆಯನ್ನು ಕ್ರಿಮಿನಲ್ ಕಾನೂನು ಅಥವಾ ನಾಗರಿಕ ಕಾನೂನಿನಡಿಯಲ್ಲಿ ದಾಖಲಿಸಬಹುದು. ಮಾನನಷ್ಟಕ್ಕೆ ಶಿಕ್ಷೆಯು ಎರಡು ವರ್ಷಗಳವರೆಗಿನ ಸರಳ ಸೆರೆವಾಸ ಅಥವಾ ದಂಡ ಅಥವಾ ಎರಡೂ ಆಗಿರಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. LeRoy Miller, Roger (2011). Business Law Today: The Essentials. United States: South-Western Cengage Learning. p. 127. ISBN 1-133-19135-5.
"https://kn.wikipedia.org/w/index.php?title=ಮಾನನಷ್ಟ&oldid=1011896" ಇಂದ ಪಡೆಯಲ್ಪಟ್ಟಿದೆ