ವಿಷಯಕ್ಕೆ ಹೋಗು

ವಿಕಿಪೀಡಿಯ:ನಿಷೇಧ ನೀತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಷೇಧವು ಕನ್ನಡ ವಿಕಿಪೀಡಿಯಾದಲ್ಲಿ ಕೆಲವು ಅಥವಾ ಎಲ್ಲಾ ಪುಟಗಳನ್ನು ಸಂಪಾದಿಸುವುದರಿಂದ ಔಪಚಾರಿಕ ನಿಷೇಧವಾಗಿದೆ ಅಥವಾ ವಿಕಿಪೀಡಿಯ ಪುಟಗಳಲ್ಲಿ ಕೆಲವು ರೀತಿಯ ಸಂಪಾದನೆಗಳನ್ನು ಮಾಡಲು ಔಪಚಾರಿಕ ನಿಷೇಧವಾಗಿದೆ. ನಿಷೇಧವನ್ನು ನಿರ್ದಿಷ್ಟ ಅಥವಾ ಅನಿರ್ದಿಷ್ಟ ಅವಧಿಯವರೆಗೆ ವಿಧಿಸಬಹುದು.

ನಿಷೇಧಗಳು ವಿವಾದ ಪರಿಹಾರ ಪ್ರಕ್ರಿಯೆಯ ಸಂಭವನೀಯ ಪರಿಣಾಮವಾಗಿರುವವು. ನೀಷೇಧಗಳನ್ನು ಸಮುದಾಯದ ಒಮ್ಮತದಿಂದ, ಮಧ್ಯಸ್ಥಿಕೆ ಸಮಿತಿ, ವಿಕಿಮೀಡಿಯಾ ಫೌಂಡೇಶನ್ ಅಥವಾ ನಿರ್ವಾಹಕರು (ಕೆಲವು ನಿರ್ಧಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ) ವಿಧಿಸಬಹುದು. ನಿಷೇಧವು ಸಾಮಾನ್ಯವಾಗಿ ಸೈಟ್ ನಿಷೇಧವಾಗಿದೆ (ಎಲ್ಲಾ ಸಂಪಾದನೆಯನ್ನು ನಿಷೇಧಿಸುತ್ತದೆ), ಆದರೆ ಇದು ಪುಟ ನಿಷೇಧ, ವಿಷಯ ನಿಷೇಧ (ಕೆಲವು ವಿಷಯಗಳಿಗೆ ಸಂಬಂಧಿಸಿದ ಪುಟಗಳಲ್ಲಿನ ಸಂಪಾದನೆಗಳನ್ನು ನಿಷೇಧಿಸುವುದು) ಅಥವಾ ಸಂವಾದ ನಿಷೇಧ (ಕೆಲವು ಇತರ ಸಂಪಾದಕರೊಂದಿಗೆ ಸಂವಹನ ನಡೆಸುವ ಸಂಪಾದನೆಗಳನ್ನು ನಿಷೇಧಿಸುವುದು) ಸೀಮಿತವಾಗಿರಬಹುದು. ಕೆಲವು ಸಂದರ್ಭಗಳಲ್ಲಿ, ಯಾವುದೇ ವಿಕಿಮೀಡಿಯಾ ಫೌಂಡೇಶನ್ ವಿಕಿಯ ಸಂಪಾದನೆಯನ್ನು ನಿಷೇಧಿಸುವ ಜಾಗತಿಕ ನಿಷೇಧಗಳನ್ನು ಹೇರಬಹುದು.