ವಿಕಿಪೀಡಿಯ:ಚಿತ್ರಗಳ ಬಳಕೆಯ ಕಾರ್ಯನೀತಿ

ವಿಕಿಪೀಡಿಯ ಇಂದ
Jump to navigation Jump to search

ಈ ಲೇಖನ ಚಿತ್ರಗಳ ಬಳಕೆಯ ಬಗೆಗಿನ ಕಾರ್ಯನೀತಿಗಳನ್ನು ತಿಳಿಸುತ್ತದೆ. ಕನ್ನಡ ವಿಕಿಪೀಡಿಯದಲ್ಲಿ ಬಳಸಲಾಗುವ ಚಿತ್ರಗಳ ಫಾರ್ಮಾಟ್, ವಿಷಯ, ಕಾಪಿರೈಟ್ ಸಂಬಂಧಿತ ವಿಚಾರಗಳನ್ನು ಈ ಕಾರ್ಯನೀತಿ ತಿಳಿಸುತ್ತದೆ ಮೀಡಿಯಗಳ ಬಗೆಗಿನ ಸಾಮಾನ್ಯ ಮಾಹಿತಿಗಾಗಿ(ಚಿತ್ರಗಳು, ಫೈಲ್, ಧ್ವನಿ ಇತ್ಯಾದಿ) ಈ ಕೊಂಡಿಯನ್ನು ನೋಡಿ Wikipedia:Creation and usage of media files ಚಿತ್ರಗಳನ್ನು ಅಪ್ಲೋಡ್ ಮಾಡುವುದು ಹೇಗೆ ಎಂಬ ಮಾಹಿತಿಗೆ Wikipedia:Uploading images ನೋಡಿ. ಅಥವಾ Special:Upload ನೋಡಿ. ಇತರೆ ಕಾನೂನು ಮತ್ತು ಕಾಪಿರೈಟ್ ವಿಷಯಗಳಿಗಾಗಿ Wikipedia:List of policies#Legal ನೋಡಿ

ಅಪ್ಲೋಡ್ ಮಾಡಲು ಚಿತ್ರಗಳ ಆಯ್ಕೆ[ಬದಲಾಯಿಸಿ]

ಕಾಪಿರೈಟ್ ಮತ್ತು ಲೈಸನ್ಸ್[ಬದಲಾಯಿಸಿ]

ಚಿತ್ರವನ್ನು ಅಪ್ಲೋಡ್ ಮಾಡುವುದಕ್ಕೆ ಮುಂಚೆ ಅದು ಈ ಕೆಳಗಿನ ವರ್ಗಗಳಿಗೆ ಒಳಪಡುತ್ತದೆಯೆ ಎಂದು ಪರೀಕ್ಷಿಸಿ:

 • ಸ್ವಂತ ಕೃತಿ (Own work) ಚಿತ್ರದ ಸಂಪೂರ್ಣ ಹಕ್ಕುಗಳು ನಿಮ್ಮದೇ ಆಗಿರಬೇಕು. ನಿಮ್ಮ ಕ್ಯಾಮರಾದಿಂದ ನೀವೇ ತೆಗೆದ ಚಿತ್ರಗಳನ್ನು ಅಪ್ಲೋಡ್ ಮಾಡಬಹುದು
 • ಉಚಿತ ಲೈಸನ್ಸ್(Freely licensed): ಚಿತ್ರದ ಕಾಪಿರೈಟ್ ಹೊಂದಿರುವ ವ್ಯಕ್ತಿ ಅದನ್ನು ಬಿಟ್ಟುಕೊಟ್ಟಿದ್ದರೆ ಆ ಚಿತ್ರಗಳನ್ನು ಅಪ್ಲೋಡ್ ಮಾಡಬಹುದು. ವಿಕಿಪೀಡಿಯದಲ್ಲಿ ಮಾತ್ರ ಬಳಸಲು, ಹಣಕಾಸೇತರ ಬಳಕೆಗೆ ಅಥವಾ ಶೈಕ್ಷಣಿಕ ಬಳಕೆಗಾಗಿ ಅಥವಾ ಚಿತ್ರದ ಮಾರ್ಪಾಡು ಮಾಡಿದ ಬಳಕೆಯನ್ನು ನಿರ್ಬಂಧಿಸುವ ಲೈಸನ್ಸಿಗೆ ಒಳಪಟ್ಟಿದ್ದರೆ ಅದನ್ನು ಬಳಸುವಂತಿಲ್ಲ. ಚಿತ್ರದ ಬಳಕೆಯ ಬಗ್ಗೆ ಸಂದೇಹಗಳಿದ್ದರೆ ಆ ಚಿತ್ರಗಳನ್ನು ಬಳಸಬೇಡಿ
 • ಮುಕ್ತ ಡೊಮೈನ್ (Public domain): ಮುಕ್ತಡೊಮೈನಿನಲ್ಲಿರುವ ಅಂದರೆ ಕಾಪಿರೈಟ್ಗಳಿಲ್ಲದ ಚಿತ್ರಗಳನ್ನು ಅಪ್ಲೋಡ್ ಮಾಡಬಹುದು
 • ಉತ್ತಮ ಕಾರ್ಯಕ್ಕಾಗಿ ಬಳಕೆ (Fair use): ಲೈಸನ್ಸ್ ಇಲ್ಲದ ಚಿತ್ರವನ್ನು ಯಾವುದಾದರೂ ವಿಶೇಷ ಕೆಲಸಕ್ಕಾಗಿ ಬಳಸಬೇಕೆಂದು ಅನಿಸಿದರೆ ಚಿತ್ರವನ್ನು ಯಾವ ಕೆಲಸಕ್ಕಾಗಿ ಬಳಸುತ್ತೇವೆಂಬ ಮಾಹಿತಿ ನೀಡಿ ಅದನ್ನು ಬಳಸಬಹುದು.

ಸದಸ್ಯರ ಚಿತ್ರಗಳು[ಬದಲಾಯಿಸಿ]

ವಿಕಿಪೀಡಿಯದ ಬಳಕೆದಾರರು ತಾವೇ ತೆಗೆದ ಚಿತ್ರಗಳನ್ನು ವಿಕಿಪೀಡಿಯಕ್ಕೆ ಅಪ್ಲೋಡ್ ಮಾಡುವ ಮೊದಲು ಅದು ಈ ಕೆಳಗಿನ ನಿಯಮಗಳನ್ನು ಪಾಲಿಸುವಂತಿರುಬೇಕು

 • ಚಿತ್ರ ಉಚಿತ ಲೈಸನ್ಸಿನಡಿ ಎಲ್ಲರ ಬಳಕೆಗೆ ಮುಕ್ತವಾಗಿರಬೇಕು, ಅಥವಾ
 • GNU Free Documentation License|GFDL ಅಥವಾ ಕ್ರಿಯೇಟಿವ್ ಕಾಮನ್ನ್ ಲೈಸನ್ನನ್ನು ಹೊಂದಿರಬೇಕು ಅಥವಾ
 • ವಿಕಿಪೀಡಿಯ ಪಬ್ಲಿಕ್ ಡೊಮೈನಿನಲ್ಲಿ ಎಲ್ಲರ ಬಳಕೆಗೆ ಮುಕ್ತ ಎಂದು ಘೋಷಿಸಲ್ಪಟ್ಟಿರಬೇಕು.

ಚಿತ್ರವೊಂದರ ಲೈಸನ್ಸ್ ಪಡೆಯುವಾಗ ಅದಕ್ಕೆ GFDL ಮತ್ತು ಕ್ರಿಯೇಟಿವ್ ಕಾಮನ್ಸ್.. ಹೀಗೆ ಹಲವು ವಿಭಾಗಗಳಲ್ಲಿ ಲೈಸನ್ಸ್ ಪಡೆಯಬಹುದು.

ಚಿತ್ರದ ಹಕ್ಕು ಆ ಚಿತ್ರವನ್ನು ತೆಗೆದ ವ್ಯಕ್ತಿಗೆ ಇರುತ್ತದೆಯೇ ಹೊರತು ವಸ್ತುವಿಗಲ್ಲ. ಒಬ್ಬ ತೆಗೆದ ಚಿತ್ರವನ್ನು ಮತ್ತೆ ಬಿಡಿಸಿದರೆ ಅದಕ್ಕೆ ಮೂಲ ಚಿತ್ರದ ಕಾಪಿರೈಟ್ ಬರುವುದಿಲ್ಲ. ಅಥವಾ ಹೊಸ ಕಾಪಿರೈಟ್ ಸೃಷ್ಠಿಯಾಗುವುದಿಲ್ಲ. ಚಿತ್ರವೊಂದರ ಸೃಷ್ಠಿಯ ಹಿಂದಿರುವ ಕೌಶಲ್ಯಕ್ಕೆ ಕಾಪಿರೈಟೇ ಹೊರತು ಅದನ್ನು ಸೃಷ್ಠಿಸಲು ಎಷ್ಟು ಸಮಯ ಹಿಡಿಯಿತು ಎಂಬುದಕ್ಕಲ್ಲ. ಮೂರು ಆಯಾಮದ ಚಿತ್ರವೊಂದರ ಸೃಷ್ಠಿಯಲ್ಲಿ ಬಳಕೆಯಾದ ಎರಡು ಆಯಾಮದ ಚಿತ್ರಗಳಿಗೆ ಈಗಾಗಲೇ ಕಾಪಿರೈಟ್ ಇದ್ದರೂ ಸೃಷ್ಠಿಯಾದ ಮೂರು ಆಯಾಮದ ಚಿತ್ರಕ್ಕೆ ಹೊಸ ಕಾಪಿರೈಟ್ ಸಿಗುತ್ತದೆ. ಅದೇ ಮ್ಯೂಸಿಯಮ್ಮಲ್ಲಿರುವ ಎರಡು ಆಯಾಮದ ಚಿತ್ರವನ್ನು ನೋಡಿ ಅದರಂತಹ ಮತ್ತೊಂದು ಎರಡು ಆಯಾಮದ ಚಿತ್ರ ಸೃಷ್ಹಿಸಿದರೆ ಆ ಹೊಸ ಚಿತ್ರಕ್ಕೆ ಕಾಪಿರೈಟ್ ಪ್ರಾಪ್ತವಾಗುವುದಿಲ್ಲ.

ಮುಖ್ಯಪುಟ ಅಥವಾ ಲೇಖನದಲ್ಲಿ ನಿಮ್ಮ, ನಿಮ್ಮ ಗೆಳೆಯರ ಅಥವಾ ನಿಮ್ಮ ಕುಟುಂಬದ ಸದಸ್ಯರಿರುವ ಚಿತ್ರವಿದ್ದು ಅದು ಲೇಖನದ ವಿಷಯಕ್ಕೆ ಸಂಬಂಧಪಡದಿದ್ದರೆ ಅಂತಹ ಚಿತ್ರಗಳನ್ನು ಬಳಸುವಂತಿಲ್ಲ. ಈ ವೈಯುಕ್ತಿಕ ಚಿತ್ರಗಳನ್ನು ವ್ಯಕ್ತಿಯ ಸದಸ್ಯಪುಟದಲ್ಲಿ ಬಳಸಬಹುದು. ಮುಖ್ಯಪುಟದಲ್ಲಿ ಈ ತರದ ಚಿತ್ರಗಳ ಬಳಕೆ ಸ್ವಯಂಹೊಗಳಿಕೆಯನ್ನು ಬಿಂಬಿಸುವಂತಿದ್ದು ವಿಕಿಪೀಡಿಯದ ತತ್ವಗಳಿಗೆ ವಿರುದ್ದವಾಗಿದೆ. ಇಂತಹ ಚಿತ್ರಗಳನ್ನು ಹಾಕಿದರೆ ಅವುಗಳನ್ನು ಸಮುದಾಯದಲ್ಲಿನ ಚರ್ಚೆಯ ಮೂಲಕ ಅಳಿಸಬಹುದು.

ಕೆಲವೊಂದು ಚಿತ್ರಗಳಿಗೆ ಉಚಿತ ಲೈಸನ್ಸು, ಕಾಪಿರೈಟು ಅಥವಾ ಇನ್ಯಾವುದೇ ಟ್ರೇಡ್ ಮಾರ್ಕುಗಳಿರಬಹುದು. ಅಂತಹವುಗಳನ್ನು {{trademark}}ಟ್ಯಾಗ್ ನಿಂದ ಗುರುತಿಸಿ. ಅದು ಸರಿಯಾಗಿ ಕಾಣದಿದ್ದರೆ Try not to use color alone ಟ್ಯಾಗ್ ಬಳಸಿ

ಉಚಿತ ಲೈಸನ್ಸ್[ಬದಲಾಯಿಸಿ]

ಶೈಕ್ಷಣಿಕ ಅಥವಾ ಹಣಕಾಸೇತರ ಬಳಕೆಗಳನ್ನು ಮಾತ್ರ ಸಮ್ಮತಿಸೋ ಅಥವಾ ವಿಕಿಪೀಡಿಯದಲ್ಲಿ ಮಾತ್ರ ಬಳಸಲು ಸಮ್ಮತಿಸೋ ಲೈಸನ್ಸ್ ಹೊಂದಿದ ಚಿತ್ರಗಳು ವಿಕಿಯಲ್ಲಿ ಬಳಕೆಗೆ ಸೂಕ್ತವಲ್ಲ. ಅಂತಹವುಗಳನ್ನು ವಿಕಿಪೀಡಿಯದಿಂದ ಅಳಿಸಲಾಗುವುದು. ಉಚಿತ ಚಿತ್ರಗಳನ್ನು ನೀಡುವ ಕೆಲವು ಜಾಲತಾಣಗಳನ್ನು ಇಲ್ಲಿ Wikipedia:Free image resources ನೋಡಬಹುದು. ವಿಕಿಪೀಡಿಯದಲ್ಲಿರುವ ಮೀಡಿಯಗಳು(ಚಿತ್ರ,ವಿಡಿಯೋ, ಆಡಿಯೋಗಳು) ಕೂಡ ವಿಕಿಪೀಡಿಯದಲ್ಲಿನ ಮಾಹಿತಿಯಂತೆ ಎಷ್ಟು ಸಾಧ್ಯವೂ ಅಷ್ಟು ಹೆಚ್ಚು ಬಳಕೆಗೆ ಸಿಗಬಹುದೆಂಬುದೇ ಇದರ ಉದ್ದೇಶ.

ನೀವು ಅಪ್ಲೋಡ್ ಮಾಡಬಯಸುವ ಚಿತ್ರಕ್ಕೆ ಈಗಾಗಲೇ ಇರುವ ಲೈಸನ್ಸಿನ ಬಗೆಗಿನ ಮಾಹಿತಿಯಿರದಿದ್ದರೆ, ಆ ಚಿತ್ರವನ್ನು ವಾಣಿಜ್ಯಿಕ ಉದ್ದೇಶಗಳಿಗೆ ಬಳಸಬಹುದೆಂಬ ಘೋಷಣೆ ಆ ಚಿತ್ರವನ್ನು ಪಡೆಯುವ ತಾಣದಿಂದ ಸಿಗಬೇಕು. ಈ ತರದ ಮಾಹಿತಿ,ಘೋಷಣೆಯಿರದ ಚಿತ್ರಗಳನ್ನು ಆ ಚಿತ್ರವನ್ನು ತೆಗೆದಾತನಿಂದ ಪಡೆಯುವವರೆಗೂ ವಿಕಿಯಲ್ಲಿ ಬಳಸುವಂತಿಲ್ಲ.

ಸಾರ್ವಜನಿಕ ಡೊಮೈನ್ Public domain[ಬದಲಾಯಿಸಿ]

ಸಾರ್ವಜನಿಕ ಡೊಮೈನಿನಲ್ಲಿರುವ ಚಿತ್ರಗಳಿಗೆ ಕಾಪಿರೈಟ್ ಇರುವುದಿಲ್ಲ ಅಥವಾ ಕಾಪಿರೈಟಿನ ನಿಯಮಗಳು ಅನ್ವಯವಾಗುವುದಿಲ್ಲ. ಇಂಗ್ಲೀಷ್ ಮತ್ತು ಇಂಗ್ಲೀಷೇತರ ಭಾಷೆಗಳ ವಿಕಿಪುಟಗಳು ಅಮೇರಿಕಾದಲ್ಲಿನ ಸರ್ವರಿನಲ್ಲಿರುವುದರಿಂದ ಅಮೇರಿಕಾದ ಶಾಸನಗಳು ಚಿತ್ರವೊಂದು ಸಾರ್ವಜನಿಕೆ ಡೊಮೈನಿನಲ್ಲಿ ಇದೆಯೇ ಇಲ್ಲವೇ ಎಂದು ನಿರ್ಧರಿಸುತ್ತವೆ.

ಚಿತ್ರವನ್ನು ತೆಗೆದವರು/ಸೃಷ್ಠಿಸಿದವರು ಅದು ಸಾರ್ವಜನಿಕ ಡೊಮೈನಿನಲ್ಲಿದೆಯೇ ಎಂದು ನಿರ್ಧರಿಸಬಹುದು. ಕಾಪಿರೈಟ್ ಅವಧಿ ಮುಗಿದಂತಹ ಅಥವಾ ಕಾಪಿರೈಟಿಗೆ ಯೋಗ್ಯವಲ್ಲದ ಚಿತ್ರಗಳು ಸಾರ್ವಜನಿಕ ಡೊಮೈನಿನಲ್ಲಿರುತ್ತದೆ. ಜನವರಿ ೧,೧೯೨೩ ರ ಮುಂಚೆ ಪ್ರಕಟವಾದ ಕೃತಿಗಳಿಗೆ ಅಮೇರಿಕಾದಲ್ಲಿನ ಕಾಪಿರೈಟ್ ಮುಕ್ತಾಯವಾಗಿರುತ್ತದೆ.

ಅಮೇರಿಕಾದಲ್ಲಿ ಎರಡು ಆಯಾಮದ ಚಿತ್ರಗಳ ಪುನರ್ ಸೃಷ್ಠಿಗೆ ಅಥವಾ ಚಿತ್ರಗಳ ಸ್ಕಾನ್ ಮಾಡಿರುವುದಕೆ ಹೊಸ ಕಾಪಿರೈಟ್ ಸಿಗುವುದಿಲ್ಲ. ಅವಕ್ಕೆ ಹಿಂದಿನ ಕೃತಿಯ ಕಾಪಿರೈಟುಗಳೇ ಅನ್ವಯವಾಗುತ್ತದೆ.

ಯಾವುದಾದರೂ ಚಿತ್ರದಲ್ಲಿ ಕಾಪಿರೈಟಿನ ಉಲ್ಲಂಘನೆಯಾಗುತ್ತಿರುವುದು ನಿಮಗೆ ಕಂಡುಬಂದರೆ ಆ ಚಿತ್ರವನ್ನು ಅಳಿಸುವಿಕೆಗೆ ಗುರುತುಮಾಡಬಹುದು. ಉದಾಹರಣೆ: ಚಿತ್ರವೊಂದು ಅದರ file page ನಲ್ಲಿ ಕಾಪಿರೈಟಿನ ಬಗ್ಗೆ ಮಾಹಿತಿ ಹೊಂದಿಲ್ಲದೇ ಇನ್ನೆಲ್ಲಾದರೂ ಕಾಪಿರೈಟಿನ ಉಲ್ಲಂಘನೆಯ ಎಚ್ಚರಿಕೆ ಪಡೆದಿದ್ದರೆ ಅದನ್ನು ಅಳಿಸುವಿಕೆಗೆ ಹಾಕಬಹುದು.

ಉತ್ತಮ ಬಳಕೆಗಾಗಿನ ಚಿತ್ರಗಳು Fair use images[ಬದಲಾಯಿಸಿ]

ಕಾಪಿರೈಟ್ ಹೊಂದಿರುವವನ ಒಪ್ಪಿಗೆಯಿಲ್ಲದಿದ್ದರೂ ಕೆಲವೊಂದು ಒಳ್ಳೆಯ ಉದ್ದೇಶಗಳಿಗಾಗಿ ಅವನ ಚಿತ್ರಗಳನ್ನು ಬಳಸಲು ಅಮೇರಿಕಾದ ಕಾನೂನು ಒಪ್ಪಿಗೆ ನೀಡುತ್ತದೆ. ಆದರೆ ಇನ್ನಿತರ ದೇಶಗಳಲ್ಲಿ ಈ ತರದ ನಿಯಮವಿಲ್ಲ. ವಿಕಿಪೀಡಿಯದಲ್ಲಿನ ಮಾಹಿತಿಗಳು ಎಲ್ಲರಿಗೂ ಮುಕ್ತವಾಗಿರಬೇಕು ಎಂಬ ಉದ್ದೇಶವಿರುವುದರಿಂದ ಈ ತರಹದ ಯೋಗ್ಯ ಬಳಕೆಯ ನಿಯಮದಡಿ ಬರುವ ಚಿತ್ರಗಳೆಲ್ಲಾ ವಿಕಿಯಲ್ಲಿನ ಅಪ್ಲೋಡಿಗೆ ಯೋಗ್ಯವಲ್ಲ.

ಕಾಪಿರೈಟ್ ಹೊಂದಿರುವ ಚಿತ್ರಗಳನ್ನು ಯೋಗ್ಯಬಳಕೆಯ ಹೆಸರಿನಲ್ಲಿ ದುರುಪಯೋಗ ಮಾಡುವುದು ಅಪರಾಧ. ಯೋಗ್ಯ ಬಳಕೆಯ ಚಿತ್ರಗಳು ಎಂದು ತಪ್ಪಾಗಿ ಟ್ಯಾಗ್ ಮಾಡಿದ ಚಿತ್ರಗಳನ್ನು ಅಳಿಸಬಹುದು. ಈ ತರಹದ ತಪ್ಪುಗಳನ್ನು ನಿರ್ವಾಹಕರು ಅಥವಾ ಸಾಮಾನ್ಯ ವಿಕಿಪೀಡಿಯನ್ನರು ಸರಿಪಡಿಸಲು ಪ್ರಯತ್ನಿಸಬಹುದು. ಬಳಕೆದಾರನೊಬ್ಬ ಉದ್ದೇಶಪೂರ್ವಕವಾಗಿ ಕಾಪಿರೈಟ್ ಹೊಂದಿರೋ ಚಿತ್ರಗಳನ್ನು ಉಚಿತ ಬಳಕೆಯ ಹೆಸರಿನಲ್ಲಿ ದುರ್ಬಳಕೆ ಮಾಡುತ್ತಿದ್ದಾನೆ ಎಂದು ಕಂಡುಬಂದರೆ ಅವನು/ಅವಳನ್ನು ವಿಕಿಯಿಂದ ಬ್ಯಾನ್ ಮಾಡಬಹುದು.

ಇವುಗಳನ್ನೂ ನೋಡಿ:

ವಾಟರ್ ಮಾರ್ಕ್, ಶ್ರೇಯ, ತಲೆಬರಹ ಮತ್ತು ಅಸ್ಪಷ್ಟತೆ[ಬದಲಾಯಿಸಿ]

ವಿಕಿಗೆ ಅಪ್ಲೋಡ್ ಮಾಡಬೇಕಾದ ಚಿತ್ರಗಳು ವಾಟರ್ ಮಾರ್ಕನ್ನು ಹೊಂದಿರಬಾರದು. ಚಿತ್ರದಲ್ಲಿ ತೆಗೆದವರ ಹೆಸರು ಅಥವಾ ಯಾವುದೇ ಶ್ರೇಯಸ್ಸು, ತಲೆಬರಹ , ಅಸ್ಪಷ್ಟತೆಗಳಿದ್ದಲ್ಲಿ ಅದು ವಿಕಿ ಅಪ್ಲೋಡಿಗೆ ಅನರ್ಹ. ಚಿತ್ರ ತಲೆಬರಹದ ಬಗ್ಗೆಯೋ, ಅಸ್ಪಷ್ಟತೆಯ ಬಗ್ಗೆಯೋ ಇದ್ದು ಅದು ಸಂಬಂಧಿತ ಲೇಖನದಲ್ಲಿದ್ದರೆ ಮಾತ್ರ ಅದರಲ್ಲಿನ ತಲೆಬರಹ, ಅಸ್ಪಷ್ಟತೆಗಳನ್ನು ವಿಕಿ ಅಪ್ಲೋಡಿಗೆ ಪರಿಗಣಿಸಬಹುದು. ಸಹಿ, ತಲೆಬರಹಗಳೂ ಚಿತ್ರದ ಭಾಗವೇ ಆಗಿರುವ ಚಾರಿತ್ರಿಕ ಚಿತ್ರಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಬಹುದು. ಚಿತ್ರಕ್ಕೆ ಸಂಬಂಧಿಕ ಫೋಟೋ ಶ್ರೇಯವನ್ನು ಚಿತ್ರದ ಬಗೆಗಿನ ಮಾಹಿತಿ ಪುಟದಲ್ಲಿ ನೀಡಿರಬೇಕು.

ಖಾಸಗಿತನದ ನಿಯಮಗಳು[ಬದಲಾಯಿಸಿ]

ಸಾರ್ವಜನಿಕ ವ್ಯಕ್ತಿಗಳ ಚಿತ್ರವನ್ನು ಸಾರ್ವಜನಿಕ ಸ್ಥಳದಲ್ಲಿ ತೆಗೆಯಲು ವ್ಯಕ್ತಿಯ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ. ಆದರೆ ಅದೇ ವ್ಯಕ್ತಿ ಯಾವುದೋ ಖಾಸಗಿ ಸ್ಥಳದಲ್ಲಿದ್ದಾಗ ಅವರ ಚಿತ್ರ ತೆಗೆಯಲು ಅವರ ಒಪ್ಪಿಗೆ ಪಡೆಯುವುದು ಅಗತ್ಯ. ಈ ತರಹದ ರೂಪದರ್ಶಿಯ ಒಪ್ಪಿಗೆಗೂ ಚಿತ್ರ ತೆಗೆದ ಛಾಯಾಗ್ರಾಹಕನ ಕಾಪಿರೈಟಿಗೂ ಸಂಬಂಧವಿಲ್ಲ.

ವ್ಯಕ್ತಿಯೊಬ್ಬನ ಖಾಸಗಿತನದ ಉಲ್ಲಂಘನೆಯಾಗುವ ಸಾಧ್ಯತೆಯಿರುವುದರಿಂದ ಖಾಸಗಿ ಸ್ಥಳದಲ್ಲಿ ತೆಗೆದ ವ್ಯಕ್ತಿಯೊಬ್ಬನ ಚಿತ್ರವನ್ನು ಅಪ್ಲೋಡ್ ಮಾಡುವ ಮೊದಲು ಆ ವ್ಯಕ್ತಿಯ ಅನುಮತಿ ಪಡೆಯುವುದು ಅನಿವಾರ್ಯ. ನಿಮ್ಮ ಚಿತ್ರವನ್ನೇ ನೀವು ಅಪ್ಲೋಡ್ ಮಾಡುತ್ತೀರೆಂದರೆ ಅದಕ್ಕೆ ನಿಮ್ಮ ಒಪ್ಪಿಗೆ ಇದೆ ಎಂದೇ ಭಾವಿಸಲಾಗುತ್ತದೆ.


ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳು ಎಂದರೆ ಏನು ?[ಬದಲಾಯಿಸಿ]

ಯಾವುದೇ ಸ್ಥಳದಲ್ಲಿ ಖಾಸಗಿತನದ ಅಪೇಕ್ಷೆಯಿಂದ ಜನ ಸೇರಿದ್ದಾರೆ ಅದನ್ನು ಖಾಸಗಿ ಸ್ಥಳವೆಂದೂ ಅಂತಹ ಅಪೇಕ್ಷೆಯಿಲ್ಲದ್ದನ್ನು ಸಾರ್ವಜನಿಕ ಸ್ಥಳವೆಂದೂ ತಿಳಿಯಬಹುದು.

ಖಾಸಗಿ ಸ್ಥಳಗಳ ಉದಾಹರಣೆಗಳು
 • ಒಬ್ಬ ವ್ಯಕ್ತಿಯ ಮನೆ
 • ಯಾವುದಾದರೂ ಲಾಕರ್ ರೂಂ, ಶೌಚಾಲಯ, ಸ್ನಾನಗೃಹ, ಡ್ರೆಸ್ಸಿಂಗ್ ರೂಂ ಒಳಗೆ
 • ಯಾವುದಾದರೂ ಔಷಧಿಯ ಸೌಲಭ್ಯಗಳ ಒಳಗೆ
 • ಹೋಟೇಲು , ಮೈದಾನದಂತಹ ಸಾರ್ವಜನಿಕ ಸ್ಥಳಗಳಲ್ಲಿನ ರೂಮು ಅಥವಾ ಟೆಂಟುಗಳು
 • ಸಾರ್ವಜನಿಕರಿಗೆ ಮುಕ್ತ ಪ್ರವೇಶವಿಲ್ಲದ ಕಟ್ಟಡವೊಂದರ ಭಾಗಗಳಲ್ಲಿ
ಸಾರ್ವಜನಿಕ ಸ್ಥಳಗಳ ಉದಾಹರಣೆಗಳು
 • ರಸ್ತೆ ಅಥವಾ ಪುಟ್ಫಾತಿನ ಮೇಲೆ
 • ಸಾರ್ವಜನಿಕರಿಗೆ ಗೋಚರವಾಗುವಂತಿರುವ ಖಾಸಗಿ ಕಟ್ಟಡವೊಂದರ ಹೊರಭಾಗದಲ್ಲಿ
 • ಸಾರ್ವಜನಿಕ ಪ್ರವೇಶಕ್ಕೆ ತೆರೆದಿರುವ ಪಾರ್ಕುಗಳು, ಮನರಂಜನಾ ತಾಣಗಳು
 • ಛಾಯಾಚಿತ್ರಗಳನ್ನು ತೆಗೆಯಲು ಅನುಮತಿ ಇರುವ ಕಾರ್ಯಕ್ರಮದಲ್ಲಿ
 • ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರುವ ಕಟ್ಟಡದ ಭಾಗಗಳು

ಶಾಸನಾತ್ಮಕ ಸಮಸ್ಯೆಗಳು[ಬದಲಾಯಿಸಿ]

ಕಾಪಿರೈಟ್ ಉಲ್ಲಂಘನೆಗಳಲ್ಲದೇ ಮಾನಹಾನಿ,personality rights, ಖಾಸಗಿತನದ ಉಲ್ಲಂಘನೆಗೆ ಸಂಬಂಧಪಟ್ಟ ಶಾಸನಾತ್ಮಕ ನಿಯಮಗಳು ಫೋಟೋಗ್ರಾಫರನ್ನು, ಅಪ್ಲೋಡ್ ಮಾಡಿದವನನ್ನು ಅಥವಾ ವಿಕಿಮೀಡಿಯ ಫೌಂಡೇಶನ್ನನ್ನು ಬಾಧಿಸಬಹುದು. ಸಂಬಂಧಪಟ್ಟ ವ್ಯಕ್ತಿ ಒಪ್ಪಿಗೆ ನೀಡುವ ತನಕ ಆ ಚಿತ್ರವನ್ನು ವಾಣಿಜ್ಯಿಕ ಉದ್ದೇಶಗಳಿಗೆ ಬಳಸುವಂತಿಲ್ಲ.

ಚಿತ್ರವೊಂದರ ತಲೆಬರಹದ ಮೂಲಕವೂ ವ್ಯಕ್ತಿಯ ಮಾನಹಾನಿಯಾಗಬಹುದು. "ಒಬ್ಬ ಮಾದಕವಸ್ತು ಸರಬರಾಜುದಾರ" ಎಂಬ ತಲೆಬರಹವು ಅನೇಕ ದೇಶಗಳಲ್ಲಿ ಮಾನಹಾನಿಯೆಂದು ಪರಿಗಣಿಸಲ್ಪಡುತ್ತದೆ. ಕೆಲವೊಂದು ವೃತ್ತಪತ್ರಿಕೆ ಮತ್ತು ಮ್ಯಾಗಜೀನ್ಗಳು ಕಾಪಿರೈಟಿನ ನಿಯಮಗಳನ್ನು ಗೌರವಿಸದೇ ಕೆಲವು ಚಿತ್ರಗಳನ್ನು ತಮ್ಮ ಸಂಚಿಕೆಗಳಲ್ಲಿ ಬಳಸಿಕೊಂಡಿರುತ್ತವೆ. ಅಂತಹ ವಿವಾದಿತ ಚಿತ್ರಗಳನ್ನು ವಿಕಿಯಲ್ಲಿ ಬಳಸುವಂತಿಲ್ಲ.

ನೈತಿಕ ಸಮಸ್ಯೆಗಳು[ಬದಲಾಯಿಸಿ]

ಶಾಸನಬದ್ದವಾಗಿ ತೆಗೆದಿದ್ದರೂ ಲ

 • ಚಿತ್ರದಿಂದ ವ್ಯಕ್ತಿಯ ಮಾನಹಾನಿಯಾಗುವಂತಿದ್ದರೆ ಅಥವಾ ವ್ಯಕ್ತಿಯನ್ನು ಅಸಂಬದ್ದವಾಗಿ ತೋರಿಸಿದ್ದರೆ
 • ಚಿತ್ರವನ್ನುಅನ್ಯಾಯದಿಂದ ಪಡೆದಿದ್ದರೆ
 • ಚಿತ್ರದಿಂದ ವ್ಯಕ್ತಿಯ ಅಥವಾ ಅವರ ಕುಟುಂಬದ ಖಾಸಗಿತನಕ್ಕೆ ಧಕ್ಕೆಯಾಗುವಂತಿದ್ದರೆ

ಅಂತಹ ಚಿತ್ರಗಳನ್ನು ಬಳಸುವುದು ನೈತಿಕವಾಗಿ ಸರಿಯಲ್ಲ

ಇವುಗಳು ಯಾವುದೇ ಒಂದು ಶಾಸನಕ್ಕೆ ಬದ್ದವಾಗಿಲ್ಲದೇ ಇದ್ದರೂ ನೈತಿಕವಾಗಿ ಸರಿಯಲ್ಲ. ಚಿತ್ರವನ್ನು ಎಷ್ಟು ಅನ್ಯಾಯದ ಮಾರ್ಗದಿಂದ ತೆಗೆಯಲಾಗಿದೆ ಅಥವಾ ಅದರಿಂದ ವ್ಯಕ್ತಿಯ ಖಾಸಗಿತನಕ್ಕೆ ಎಷ್ಟು ಧಕ್ಕೆಯಾಗುತ್ತದೆ ಎಂಬುದನ್ನು ನಿರ್ಧರಿಸಲು ಅದನ್ನು ಎಲ್ಲಿ ತೆಗೆಯಲಾಗಿದೆ, ಅದರ ತಲೆಬರಹ್, ಟಿಪ್ಪಣಿಗಳು ಏನಿದೆ, ಆ ಚಿತ್ರದಲ್ಲಿ ಏನು ತೋರಿಸಲ್ಪಡುತ್ತಿದೆ ಎಂಬುದನ್ನು ಗಮನಿಸಬೇಕು. ಉದಾಹರಣೆಗೆ:ಸಾರ್ವಜನಿಕ ಸ್ಥಳದಲ್ಲಿನ ಸಾರ್ವಜನಿಕ ವ್ಯಕ್ತಿಯೊಬ್ಬನ ಸಹಜವಲ್ಲದ ನಡತೆ ಗುಪ್ತ ಕ್ಯಾಮೆರಾವೊಂದರಲ್ಲಿ ಸೆರೆ ಹಿಡಿಯಲ್ಪಟ್ಟಿದ್ದರೆ ಅದನ್ನು ಅಪ್ಲೋಡ್ ಮಾಡಬಹುದೇ ಇಲ್ಲವೇ ಎಂಬುದನ್ನು ಸದಸ್ಯರು ಚರ್ಚಿಸಿ ನಿರ್ಧರಿಸಬಹುದು.

ಉದಾಹರಣೆಗಳು[ಬದಲಾಯಿಸಿ]

ವಸ್ತುವಿನ ಅನುಮತಿಯಿಲ್ಲದೇ ಅಪ್ಲೋಡ್ ಮಾಡಬಹುದಂತವುಗಳು
 • ಬೀದಿಯಲ್ಲಿ ನರ್ತಿಸುತ್ತಿರುವ ಬೀದಿ ನೃತ್ಯಗಾರನ/ಗಾರ್ತಿಯ ನೃತ್ಯದ ಚಿತ್ರ
 • ಸಾರ್ವಜನಿಕ ಸ್ಥಳದಲ್ಲಿ ದೊಡ್ಡ ಗುಂಪಿನ ಭಾಗವಾಗಿರುವ ಅನಾಮಧೇಯ ವ್ಯಕ್ತಿಯ ಚಿತ್ರ
 • ಫೋಟೋಗ್ರಫಿಗೆ ಅನುಮತಿಯಿರುವ ಪಾರ್ಟಿಯೊಂದರಲ್ಲಿ ಭಾಗವಹಿಸಿದವರ ಚಿತ್ರ
 • ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರುವ ಪಂದ್ಯವೊಂದರಲ್ಲಿ ಆಡುತ್ತಿರುವ ಆಟಗಾರನೊಬ್ಬನ ಚಿತ್ರ
ವಸ್ತುವಿನ ಅನುಮತಿ ಪಡೆಯಬೇಕಾದವುಗಳು
 • ಗುರುತಿಸಬಹುದಾದ ಹುಡುಗಿಯೊಬ್ಬಳನ್ನು "ಡುಮ್ಮಿ" ಎಂಬ ತಲೆಬರಹ ಕೊಡುವುದಕ್ಕೆ ಮೊದಲು(ಅದರಿಂದ ವ್ಯಕ್ತಿಯ ಮಾನಹಾನಿಯಾಗುವಂತಿದ್ದರೆ)
 • ಫೋಟೋಗ್ರಫಿಯ ಅನುಮತಿಯಿಲ್ಲದ ಪಾರ್ಟಿಯಲ್ಲಿ ತೆಗೆದ ಚಿತ್ರಗಳಿಗೆ(ಖಾಸಗಿತನದ ಉಲ್ಲಂಘನೆ)
 • ಬೆತ್ತಲೆ, ಒಳ ಉಡುಪುಗಳು ಅಥವಾ ಈಜುಡುಗೆಯಲ್ಲಿರುವ ಚಿತ್ರಗಳು(ಖಾಸಗಿತನದ ಉಲ್ಲಂಘನೆ)
 • ವ್ಯಕ್ತಿ ಖಾಸಗಿತನದಲ್ಲಿರುವ ದೃಶ್ಯಗಳನ್ನು ದೂರಗ್ರಾಹಿ ಲೆನ್ಸ್ ಬಳಸಿ ತೆಗೆದಿದ್ದು

ಪರ್ಯಾಯ ಮಾರ್ಗಗಳು[ಬದಲಾಯಿಸಿ]

ಚಿತ್ರವೊಂದರ ಬಲಕೆಯ ಅನುಮತಿಯ ಅಗತ್ಯವಿದ್ದು ಅದಕ್ಕೆ ಅನುಮತಿ ದೊರಕದಿದ್ದರೆ ಕೆಳಗಿನ ತಂತ್ರಗಳನ್ನು ಬಳಸಬಹುದು

 • ಗುರುತಿಸಬಹುದಾದಂತಹ ಚಹರೆಗಳನ್ನು ಅಸ್ಪಷ್ಟವಾಗಿಸೋ, ಗೆರೆಯೆಳೆದೋ ವ್ಯಕ್ತಿಯನ್ನು ಗುರುತಿಸಲಾಗದಂತೆ ಮಾಡಬಹುದು
 • ವ್ಯಕ್ತಿಯ ಮುಖ ಕಾಣದಂತೆ ಚಿತ್ರವನ್ನು ಬೇರೊಂದು ಕೋನದಲ್ಲಿಯೂ ತೆಗೆಯಬಹುದು

ವಿಕಿಪೀಡಿಯಕ್ಕೆ ಅಪ್ಲೋಡ್ ಮಾಡಬಹುದಾದ ಚಿತ್ರದ ಆಯ್ಕೆ[ಬದಲಾಯಿಸಿ]

ಚಿತ್ರಗಳ ಸ್ವರೂಪ(Image Format)[ಬದಲಾಯಿಸಿ]

ಅಪ್ಲೋಡ್ ಮಾಡುವ ಭಿನ್ನ ಸ್ವರೂಪದ ಚಿತ್ರಗಳ ಕೆಳಗಿನಂತೆ ಆಯಾ ಸ್ವರೂಪಗಳಲ್ಲಿರಬೇಕು.

 1. ರೇಖಾಚಿತ್ರ,ವರ್ಣಚಿತ್ರ,ತೈಲಚಿತ್ರ,ಲೋಗೋಗಳು, ನಕಾಶೆ ಮತ್ತು ಬಾವುಟಗಳ ಚಿತ್ರಗಳನ್ನು SVG ಸ್ವರೂಪದಲ್ಲಿ ಅಪ್ಲೋಡ್ ಮಾಡಬೇಕು. ಆ ಸ್ವರೂಪದಲ್ಲಿ ಇಲ್ಲದಿದ್ದರೆ PNG ಸ್ವರೂಪದಲ್ಲಿ ಅಪ್ಲೋಡ್ ಮಾಡಬಹುದು
 2. ತಂತ್ರಾಶಗಳ ಛಾಯಾಚಿತ್ರಗಳು PNG ಸ್ವರೂಪದಲ್ಲಿರಬೇಕು
 3. ಛಾಯಾಚಿತ್ರಗಳು ಮತ್ತು ಸ್ಕಾನ್ ಮಾಡಿದ ಚಿತ್ರಗಳು JPEG ಸ್ವರೂಪದಲ್ಲಿದ್ದರೆ ಸೂಕ್ತ. ಇಲ್ಲದಿದ್ದಲ್ಲಿ PNG ಸ್ವರೂಪದಲ್ಲಿರುವುದನ್ನೂ ಬಳಸಬಹುದು
 4. ಟೀವಿ ಮತ್ತು ಚಲನಚಿತ್ರಗಳ screenshotಗಳು: JPEG ಸ್ವರೂಪದಲ್ಲಿರಬೇಕು
 5. ಅನಿಮೇಷನ್ ಇರುವ ಚಿತ್ರಗಳು GIF ಸ್ವರೂಪದಲ್ಲಿರಬೇಕು
 6. ವೀಡಿಯೋಗಳು Ogg/Theora ಅಥವಾ WebM ಸ್ವರೂಪದಲ್ಲಿರಬೇಕು

ಪಠ್ಯವನ್ನು ಹೊಂದಿರುವ ಚಿತ್ರಗಳು[ಬದಲಾಯಿಸಿ]

ನೀವು ಪಠ್ಯ ಒಳಗೊಂಡಿರುವ ಚಿತ್ರವನ್ನು ರಚಿಸಿದಾಗ , ದಯವಿಟ್ಟು ಪಠ್ಯವಿಲ್ಲದ ಚಿತ್ರವನ್ನು ಅಪ್ಲೋಡ್ ಮಾಡಿ.

ಚಿತ್ರವನ್ನು ಕ್ರಾಪ್ ಮಾಡುವುದು[ಬದಲಾಯಿಸಿ]

ಚಿತ್ರದಲ್ಲಿರುವ ಸಂಬಂಧಪಡದ ವಿಷಯಗಳನ್ನು ತೆಗೆಯಲ್ಲು ಮೂಲ ಚಿತ್ರವನ್ನು ಕ್ರಾಪ್ ಮಾಡಬಹುದು. ಆದರೆ ಅದರಿಂದ ಮೂಲ ವಿಷಯಕ್ಕೆ ಧಕ್ಕೆಯಾಗುವಂತಿಲ್ಲ. ಉದಾಹರಣೆ; ನೀವು ಜಾರ್ಜ್ ವಾಷಿಂಗ್ಟನ್ ಅವರ ಬಗ್ಗೆ ಲೇಖನವೊಂದನ್ನು ಬರೆಯುತ್ತಿದ್ದೀರಿ ಮತ್ತು ಅದಕ್ಕಾಗಿ ಜಾರ್ಜ್ ವಾಷಿಂಗ್ಟನ್ ಮತ್ತು ಅಬ್ರಹಾಂ ಲಿಂಕನ್ ಅವರು ಇರುವ ಚಿತ್ರವನ್ನು ಬಳಸಲು ಯೋಚಿಸುತ್ತಿದ್ದೀರಿ ಅಂದರೆ ಚಿತ್ರವನ್ನು ಕ್ರಾಪ್ ಮಾಡಿ ಬರೀ ಜಾರ್ಜ್ ವಾಷಿಂಗ್ಟನ್ ಅವರೊಬ್ಬರೇ ಇರುವ ಭಾಗವನ್ನು ಬಳಸುವಂತಿಲ್ಲ. ಕ್ರಾಪ್ ಮಾಡಿದ ಚಿತ್ರವನ್ನು ಬಳಸುವುದಾದರೆ ಅವರಿಬ್ಬರೂ ಇರುವ ಮೂಲ ಚಿತ್ರವನ್ನೂ ಜೊತೆಯಲ್ಲಿ ಬಳಸಬೇಕು. ಮೂಲ ಚಿತ್ರದಲ್ಲೇ ತಲೆಬರಹ, ಅಡಿಟಿಪ್ಪಣಿಗಳಿದ್ದರೆ ಅವನ್ನು ಕ್ರಾಪ್ ಮಾಡುವಂತಿಲ್ಲ. ಕ್ರಾಪ್ ಮಾಡಿದರೆ ಮೂಲ ಚಿತ್ರವನ್ನೂ ಜೊತೆಗೇ ಅಪ್ಲೋಡ್ ಮಾಡಬೇಕು,

ಅನಿಮೇಷನ್ ಇರುವ ಚಿತ್ರಗಳು[ಬದಲಾಯಿಸಿ]

ತುಂಬಾ ಅನಿಮೇಷನ್ ಇರುವ ಚಿತ್ರಗಳನ್ನು GIF ಬದಲು Ogg/Theora ಸ್ವರೂಪದಲ್ಲಿ ಬಳಸಬಹುದು. Ogg ಸ್ವರೂಪಲ್ಲಿರೋ ಚಿತ್ರಗಳು ಪುಟ ತೆರೆದಾಗ ತಾನೇ ತಾನಾಗಿ ಕೆಲಸ ಮಾಡುವುದಿಲ್ಲ. ಆದರೆ ಅದರಲ್ಲಿರುವ ಧ್ವನಿಯ ಗುಣಮಟ್ಟ ಬೇರೆ ಸ್ವರೂಪದವುಗಳಿಗಿಂತ ಚೆನ್ನಾಗಿರುತ್ತದೆ.

ಚಿತ್ರವೊಂದು ತುಂಬಾ ಸಣ್ಣ ಸೈಜಿನಲ್ಲಿರದೇ ಇದ್ದಲ್ಲಿ ಸಾಮಾನ್ಯ ಚಿತ್ರವೊಂದನ್ನು ಕೊಟ್ಟು ಅದಕ್ಕೆ ಅನಿಮೇಷನ್ನಿನ ಕೊಂಡಿ ಕೊಡುವುದು ಒಳ್ಳೆಯದು. ಪ್ರಿಂಟ್ ಮಾಡಬೇಕಾದಾಗ ಅನಿಮೇಷನ್ ಇರುವ ಚಿತ್ರಗಳಿಂದಾಗಬಹುದಾದ ಸಮಸ್ಯೆಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು.

ಅಪ್ಲೋಡ್ ಮಾಡುವ ಚಿತ್ರಗಳ ಗಾತ್ರ[ಬದಲಾಯಿಸಿ]

ವಿಕಿಪೀಡಿಯ ಮತ್ತು ಅದಕ್ಕೆ ಸಂಬಂದಿತ ವಿಕಿಮೀಡಿಯ ತಾಣಗಳು ಮುಖ್ಯ ಉದ್ದೇಶ ಮಾಹಿತಿಯ ಸಂಗ್ರಹಣೆಯಾಗಿರುವುದರಿಂದ ಚಿತ್ರಗಳನ್ನು ಹೆಚ್ಚಿನ ರೆಸಲ್ಯೂಷನ್ನಿನಲ್ಲಿ ಅಪ್ಲೋಡ್ ಮಾಢುವುದು ಒಳ್ಳೆಯದು. ಅಪ್ಲೋಡ್ ಮಾಡಬಹುದಾದ ಚಿತ್ರವೊಂದರ ಗರಿಷ್ಟ ಸೈಜ್ ೧ ಜಿಬಿ ಆಗಿದೆ. ಹಾಗಾಗಿ ಅಪ್ಲೋಡ್ ಮಾಡುವಾಗ ವಿಕಿ ಸರ್ವರಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

 • ನಿಯಮದ ಉಲ್ಲಂಘನೆಗಳು : ಚಿತ್ರವನ್ನು ಯೋಗ್ಯ ಉದ್ದೇಶದ ಅಡಿಯಲ್ಲಿ ಬಳಸುತ್ತಿದ್ದರೆ ಚಿತ್ರದ ರೆಸಲ್ಯೂಷನ್ ಎಷ್ಟು ಸಣ್ಣವಿರಲು ಸಾಧ್ಯವೋ ಅಷ್ಟಿದ್ದರೆ ಒಳ್ಳೆಯದು . ಇದರಿಂದ ವಿಕಿ ಚಿತ್ರವನ್ನೇ ಮುಖ್ಯ ಚಿತ್ರದ ಬದಲಿಗೆ ಬಳಸುವುದು ತಪ್ಪುತ್ತದೆ.
 • ವಿಕಿಯ ಸರ್ವರುಗಳು ಲೇಖನದಲ್ಲಿನ ಅಗತ್ಯಗಳಿಗನುಸಾರವಾಗಿ ಚಿತ್ರದ ಗಾತ್ರವನ್ನು ಬದಲಾಯಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಚಿತ್ರವೊಂದನ್ನು ಬೇರೆ ಬೇರೆ ಗಾತ್ರಗಳಲ್ಲಿ ಅಪ್ಲೋಡ್ ಮಾಡುವ ಅಗತ್ಯವಿಲ್ಲ.

ಚಿತ್ರದ ತಲೆಬರಹ ಮತ್ತು ಫೈಲಿನ ಹೆಸರು[ಬದಲಾಯಿಸಿ]

ಚಿತ್ರಕ್ಕೆ ಸೂಕ್ತವೆನಿಸುವ ಹೆಸರನ್ನು ಕೊಡಬೇಕು. ಉದಾಹರಣೆಗೆ ಆಫ್ರಿಕಾದ ನಕಾಶೆಯೊಂದನ್ನು "ಆಫ್ರಿಕಾ.png" ಅಂತ ಉಳಿಸಬಹುದು. ಆದರೆ ವಿಕಿಪೀಡಿಯದಲ್ಲಿ ನೂರಾರು ಆಫ್ರಿಕಾ ನಕಾಶೆಗಳಿರಬಹುದು. "ಜನವರಿ ೨೦೧೨ರ ಆಫ್ರಿಕಾದ ರಾಜಕೀಯ ನಕಾಶೆ.png" ಎಂಬ ಹೆಸರು ಈ ತರದ ಗೊಂದಲಗಳನ್ನು ನಿವಾರಿಸಬಲ್ಲದು. ಚಿತ್ರವೊಂದನ್ನು ಅಪ್ಲೋಡ್ ಮಾಡುವ ಮೊದಲು ಆ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳು ಈಗಾಗಲೇ ಇದೆಯೇ ಎಂಬುದನ್ನು ಪರೀಕ್ಷಿಸಿ. ಇದ್ದರೆ, ನಿಮ್ಮ ಲೇಖನದಲ್ಲಿ ಈಗಾಗಲೇ ಇರುವ ಚಿತ್ರಗಳ ಬದಲು ನಿಮ್ಮ ಚಿತ್ರವನ್ನು ಬಳಸಬೇಕೇ ಅಥವಾ ಅವುಗಳ ಜೊತೆಗೆ ನಿಮ್ಮದನ್ನೂ ಬಳಸಬೇಕೆ ಎಂಬುದನ್ನು ನಿರ್ಧರಿಸಬಹುದು. ಈಗಾಗಲೇ ಚಿತ್ರವಿದ್ದಲ್ಲಿ ಅದೇ ಹೆಸರನ್ನು ಅಥವಾ ಸಂಬಂಧಿತ ಹೆಸರನ್ನು ಬಳಸಬಹುದು. ಚಿತ್ರದ ಹೆಸರಿನಲ್ಲಿ ಇಂಗ್ಲೀಷಿನ special characterಗಳನ್ನು ಬಳಸುವುದನ್ನೊ ಅಥವಾ ಅಗತ್ಯಕ್ಕಿಂತ ಹೆಚ್ಚು ಉದ್ದುದ್ದನ ಹೆಸರನ್ನು ಬಳಸುವುದನ್ನೋ ಸಾಧ್ಯವಾದಷ್ಟೂ ನಿಲ್ಲಿಸಬೇಕು. ಇದರಿಂದ ಕೆಲವು ಬಳಕೆದಾರರ ಕಂಪ್ಯೂಟರ್ಗಳಲ್ಲಿ ಆ ಫೈಲುಗಳು ಡೌನ್ ಲೋಡ್ ಆಗದೇ ಇರಬಹುದು. ಚಿತ್ರಗಳ ಹೆಸರುಗಳು case sensitive ಆಗಿರುತ್ತವೆ. "Africa.png" ಎಂಬ ಚಿತ್ರವು "AFRICA.PNG" ಎಂಬ ಚಿತ್ರಕ್ಕಿಂತ ಭಿನ್ನ ಎಂದು ಪರಿಗಣಿಸಲ್ಪಡುತ್ತದೆ. ಚಿತ್ರದ ಫೈಲಿನಲ್ಲಿ ಸಾಧ್ಯವಾದಷ್ಟೂ lower case ಅಕ್ಷರಗಳನ್ನು ಬಳಸುವುದು ಸಾಮಾನ್ಯ ನಿಯಮ

ಈಗಾಗಲೇ ಇರುವ ಚಿತ್ರವನ್ನು ಬದಲಿಸಬೇಕೆಂದಿದ್ದಲ್ಲಿ ನೀವು ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರವನ್ನು ಅಪ್ಲೋಡ್ ಮಾಡಬಹುದು. ಉದಾಹರಣೆ

 • ಸ್ಕಾನ್ ಮಾಡಿದ ಚಿತ್ರದ ಬದಲು ಇನ್ನೂ ಉತ್ತಮ ಸ್ಕಾನರಿನಿಂದ ಸ್ಕಾನ್ ಮಾಡಿದ ಚಿತ್ರವನ್ನು ಬಳಸಬೇಕೆಂದಿದ್ದರೆ
 • ಮೂಲಚಿತ್ರವನ್ನು ಇನ್ನೂ ಉತ್ತಮ ರೀತಿಯಲ್ಲಿ ಸೆರೆಹಿಡಿದಿದ್ದರೆ

ಇದರಿಂದ ಬಳಕೆದಾರರಿಗೆ ಎರಡೂ ಚಿತ್ರಗಳನ್ನು ಹೋಲಿಕೆ ಮಾಡುವ ಅವಕಾಶ ಸಿಗುತ್ತದೆ ಮತ್ತು ಒಂದು ಚಿತ್ರವನ್ನು ಅಳಿಸಿ ಮತ್ತೆ ಅಪ್ಲೋಡ್ ಮಾಡುವ, ಸಂಬಂಧಪಟ್ಟ ಎಲ್ಲಾ ಲೇಖನಗಳನ್ನೂ ಬದಲಾಯಿಸುವ ತೊಂದರೆ ತಪ್ಪುತ್ತದೆ. ಆದರೆ ಚಿತ್ರದ ಸ್ವರೂಪವೇ ಬದಲಾದರೆ ಮೂಲ ಚಿತ್ರದಲ್ಲಿನ ಎಕ್ಸ್ಟೆಂಷನ್(extension) ಈಗಿನದ್ದಕ್ಕಿಂತ ಬದಲಾಗುವುದರಿಂದ ಈ ನಿಯಮ ಅನ್ವಯವಾಗುವುದಿಲ್ಲ

ಚಿತ್ರವೊಂದಕ್ಕೆ ಅಗತ್ಯ ಮಾಹಿತಿಗಳು[ಬದಲಾಯಿಸಿ]

 • ಚಿತ್ರಕ್ಕೆ ಒಂದು ಚಿತ್ರದ ಕಾಪಿರೈಟ್ ಟ್ಯಾಗ್ ಇರಬೇಕು.

ಜೊತೆಗೆ ಕೆಳಕಂಡ ವಿಷಯಗಳೂ ಅಷ್ಟೇ ಅಗತ್ಯ.

 • ಮಾಹಿತಿ: ಚಿತ್ರ ಯಾವ ವಿಷಯಕ್ಕೆ ಸಂಬಂಧಿಸಿದ್ದು ಎಂಬ ಮಾಹಿತಿಯಿರಬೇಕು. ಚಿತ್ರವೊಂದು ಯಾವುದರ ಚಿತ್ರ, ಯಾವಾಗ ತೆಗೆದದ್ದು ಎಂಬ ಮಾಹಿತಿಗಳ ಜೊತೆಗೆ ಅದನ್ನು ಅದರ ಬಗೆಗಿನ ಹೆಚ್ಚಿನ ಮಾಹಿತಿಯುಳ್ಳ ಲೇಖನಕ್ಕೆ ಲಿಂಕ್ ಮಾಡಬಹುದು.

ಉದಾಹರಣೆಗೆ: ಸಾರ್ವಜನಿಕ ಸ್ಥಳವೊಂದರಲ್ಲಿ ತೆಗೆದ ಖ್ಯಾತನಾಮರ ಚಿತ್ರದಲ್ಲಿ ಈ ಚಿತ್ರವನ್ನು ಇಂತಿಂತ ದಿನಾಂಕದಂದು, ಇಂತಹ ಕಾರ್ಯಕ್ರಮದಲ್ಲಿ ತೆಗೆಯಲಾಯಿತು ಎಂಬ ಮಾಹಿತಿ ನೀಡಿರಬೇಕು.

 • ಚಿತ್ರದ ಮೂಲ: ಚಿತ್ರದ ಕಾಪಿರೈಟ್ ಹೊಂದಿರುವ ವ್ಯಕ್ತಿಯ ಹೆಸರು ಅಥವಾ ಚಿತ್ರವನ್ನು ಇಂತಹ ಜಾಲತಾಣದಿಂದ ತೆಗೆದುಕೊಳ್ಳಲಾಗಿದೆ ಎಂದು ಸೂಚಿಸುವ ಕೊಂಡಿ
 • ಚಿತ್ರವನ್ನು ಜಾಲತಾಣವೊಂದರಿಂದ ತೆಗೆದುಕೊಂಡಿದ್ದರೆ, URL ನಲ್ಲಿ ಜಾಲತಾಣದಲ್ಲಿ ಚಿತ್ರ ಹೊಂದಿರುವ ವೆಬ್ ಪುಟದ ಕೊಂಡಿ ಅಥವಾ ಆ ಚಿತ್ರದ ನೇರ ಕೊಂಡಿ ಇರಬೇಕು.
 • ಪುಸ್ತಕವೊಂದರಿಂದ ತೆಗೆದುಕೊಂಡಿರುವ ಚಿತ್ರವಾಗಿದ್ದರೆ ಆ ಚಿತ್ರ ಯಾವ ಪುಟದಲ್ಲಿತ್ತು ಎನ್ನುವ ಜೊತೆಗೆ ಪುಸ್ತಕದ ಸಂಪೂರ್ಣ ಮಾಹಿತಿ ಕೊಡಬೇಕು(ಲೇಖಕರ ಹೆಸರು, ಶೀರ್ಷಿಕೆ, ISBN ನಂಬರ್, ಕಾಪಿರೈಟಿನ ದಿನಾಂಕ, ಪ್ರಕಾಶಕರ ಹೆಸರು ಇತ್ಯಾದಿ)
 • ನೀವೇ ತೆಗೆದಿರುವ ಚಿತ್ರವಾಗಿದ್ದರೆ "ಸ್ವಂತ ಕೃತಿ"(own work) ಎಂಬ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
 • ಲೇಖಕ: ಚಿತ್ರವನ್ನು ಸೃಷ್ಠಿಸಿದವ. (ಚಿತ್ರದ ಕಾಪಿರೈಟ್ ಹೊಂದಿರುವವನಿಗಿಂತ ಬೇರೆಯಾಗಿದ್ದಲ್ಲಿ ಅದನ್ನು ಸ್ಪಷ್ಟಪಡಿಸಬೇಕು). ಚಿತ್ರವನ್ನು ಮೂಲ ಲೇಖಕನ ಒಪ್ಪಿಗೆಯೊಂದಿಗೆ ಅಪ್ಲೋಡ್ ಮಾಡುತ್ತಿದ್ದಲ್ಲಿ ಮೂಲ ಲೇಖಕನ ಸಂಪರ್ಕ ಮಾಹಿತಿಗಳನ್ನು ನೀಡಬೇಕು,
 • ಅನುಮತಿಗಳು: ಚಿತ್ರವನ್ನು ಯಾರು ಮತ್ತು ಹೇಗೆ ಬಳಸಿಕೊಳ್ಳಬಹುದೆಂದು ತಿಳಿಸುವ ಕಾಪಿರೈಟಿನ ಮಾಹಿತಿ ನೀಡಬೇಕು
 • ದಿನಾಂಕ ಚಿತ್ರವನ್ನು ಎಂದು ತೆಗೆದದ್ದು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಬರೀ ವರ್ಷವನ್ನು ಕೊಡುವುದು ಸರಿಯಾದ ಕ್ರಮವಲ್ಲ.
 • ಚಿತ್ರವನ್ನು ವಿಕಿಕಾಮನ್ನ್ ಗೆ ಅಪ್ಲೋಡ್ ವಿಜಾರ್ಡ್ ಮೂಲಕ ಅಪ್ಲೋಡ್ ಮಾಡಲು ಪ್ರಯತ್ನಿಸಿದರೆ ಚಿತ್ರದಲ್ಲಿರುವ metadata ದಿಂದ ಅದೇ ದಿನಾಂಕವನ್ನು ತೆಗೆದುಕೊಳ್ಳುತ್ತದೆ
 • ಸ್ಥಳ ಚಿತ್ರವನ್ನು ಎಲ್ಲಿ ತೆಗೆದಿದ್ದು ಎಂಬ ಬಗೆಗಿನ ಮಾಹಿತಿ. ಸ್ಥಳದ ನಿಖರವಾದ ಅಕ್ಷಾಂಶ, ರೇಖಾಂಶಗಳನ್ನು(ತಿಳಿದಿದ್ದರೆ) ನಮೂದಿಸಬಹುದು.
 • ಚಿತ್ರದ ಇನ್ನಿತರ ಆವೃತ್ತಿಗಳು ಚಿತ್ರದ ಕ್ರಾಪ್ ಮಾಡಿದ, ಮಾಡದ ಅಥವಾ ಬೇರಿನ್ಯಾವುದೇ ಆವೃತ್ತಿಗಳು ವಿಕಿಪೀಡಿಯದಲ್ಲಿದ್ದರೆ ಅದರ ಬಗೆಗಿನ ಮಾಹಿತಿಯನ್ನು ನೀಡಬಹುದು.
 • Rationale for use (ಇಂಗ್ಲೀಷ್ ವಿಕಿಪೀಡಿಯದಲ್ಲಿನ non-free images). ಈ ಮಾಹಿತಿ ಇಂಗ್ಲೀಷ್ ವಿಕಿಪೀಡಿಯದಲ್ಲಿನ non-free images ಎಂಬ ವಿಭಾಗಕ್ಕೆ ಅನ್ವಯಿಸುತ್ತದೆ.

ಲೇಖನಗಳಿಗೆ ಚಿತ್ರಗಳನ್ನು ಸೇರಿಸುವುದು[ಬದಲಾಯಿಸಿ]

ವಿಷಯ[ಬದಲಾಯಿಸಿ]

ಚಿತ್ರದ ಮೂಲ ಉದ್ದೇಶ ಲೇಖನದ ಬಗೆಗೆ ಓದುಗನ ಗ್ರಹಿಕೆಯನ್ನು ಹೆಚ್ಚಿಸುವುದೇ ಆಗಿದೆ. ಓದುಗರ ಗಮನ ಸೆಳೆಯುವ ಏಕೈಕ ಉದ್ದೇಶದಿಂದ ಗಾಬರಿಗೊಳಿಸುವಂತಹ ಅಥವಾ ವಿಷಯಕ್ಕೆ ಸಂಬಂಧಪಡದಂತಹ ಚಿತ್ರಗಳನ್ನು ಲೇಖನದಲ್ಲಿ ಬಳಸುವಂತಿಲ್ಲ.

ಚಿತ್ರಗಳನ್ನು ಇರಿಸುವ ಜಾಗ[ಬದಲಾಯಿಸಿ]

ಚಿತ್ರಗಳನ್ನು ಎಲ್ಲಿ ಇರಿಸಬೇಕೆಂಬ ಮಾಹಿತಿಗೆ Wikipedia:Image markup ಮತ್ತು ಯಾವ್ಯಾವ ಮಾರ್ಕಪ್ಗಳನ್ನು ಬಳಸಬಹುದೆಂದು ತಿಳಿಯಲು Wikipedia:Picture tutorial ವನ್ನು ಸಂದರ್ಶಿಸಬಹುದು.

ಚಿತ್ರದ ಗ್ಯಾಲರಿಗಳು[ಬದಲಾಯಿಸಿ]

ಸಾಮಾನ್ಯವಾಗಿ ಲೇಖನದಲ್ಲಿ ಸೂಕ್ತ ಶೀರ್ಷಿಕೆ ಹೊಂದಿದ ಬಿಡಿ ಚಿತ್ರಗಳನ್ನು ಬಳಸಲಾಗುತ್ತದೆ. ಆದರೆ ಲೇಖನದ ಮಾಹಿತಿಗೆ ಪೂರಕವಾಗಿದ್ದರೂ ಪ್ರತೀ ಚಿತ್ರದ ಶೀರ್ಷಿಕೆ ಕೊಡಲಾಗದಿದ್ದರೆ ಅಂತಹ ಚಿತ್ರಗಳ ಗುಂಪನ್ನು ಗ್ಯಾಲರಿಯಾಗಿ ಬಳಸಬಹುದು. ಆದರೆ ಆ ಗುಂಪು ಅಥವಾ ಗ್ಯಾಲರಿಯಲ್ಲಿನ ಚಿತ್ರಗಳು ವಿಕಿಗೆ ಮೌಲ್ಯವನ್ನು ಓದುಗನ ಗ್ರಹಿಕೆಯನ್ನು ಹೆಚ್ಚಿಸುವಂತಿರಬೇಕು. ಗ್ಯಾಲರಿಯಲ್ಲಿನ ಚಿತ್ರಗಳಿಗೆ ಸೂಕ್ತ ಶೀರ್ಷಿಕೆಯನ್ನು ಕೊಡತಕ್ಕದ್ದು. ಆ ಶೀರ್ಷಿಕೆ ಗ್ಯಾಲರಿಯ ಲೇಖನದ ವಿಷಯಕ್ಕೆ ಪೂರಕವಾಗಿರಬೇಕು. ಗ್ಯಾಲರಿಯಲ್ಲಿನ ಚಿತ್ರಗಳ ಆಯ್ಕೆಯಲ್ಲೂ ಎಚ್ಚರ ಅಗತ್ಯ. ಒಂದೇ ಚಿತ್ರದ ಅಥವಾ ಒಂದೇ ರೀತಿಯದರ ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು.

 • ಲೇಖನಕ್ಕೆ ಸಂಬಂಧವಿಲ್ಲದ ಚಿತ್ರಗಳನ್ನು ಗ್ಯಾಲರಿಯಲ್ಲಿ ಹಾಕಿದ್ದರೆ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಅಥವಾ ಅಳಿಸುವ ನಿರ್ಧಾರವನ್ನು ಕೈಗೊಳ್ಳಬಹುದು.
 • ಬರೀ ಚಿತ್ರಗಳನ್ನು ಅಥವಾ ಗ್ಯಾಲರಿಗಳನ್ನು ಹೊಂದಿರುವ ಲೇಖನಗಳ ಸೃಷ್ಠಿಯನ್ನು ಸಾಧ್ಯವಿದ್ದಷ್ಟೂ ನಿರ್ಬಂಧಿಸಬೇಕು. ಬರೀ ಚಿತ್ರಗಳ ಅಪ್ಲೋಡಿಗಾಗಿ ಕಾಮನ್ಸ್ ಇರುವುದರಿಂದ ಅದರ ಬಳಕೆ ಸೂಕ್ತ ಎಂದು ಸಂಬಂಧಿಸಿದ ಲೇಖಕರಿಗೆ ಮನವರಿಕೆ ಮಾಡಿಕೊಡಬೇಕು.
 • ಹಲವು ಚಿತ್ರಗಳನ್ನು ತೋರಿಸಲು ಅನಿಮೇಷನ್ ಇರುವ(GIF) ಚಿತ್ರಗಳನ್ನು ಬಳಸುವಂತಿಲ್ಲ.
 • ಯೋಗ್ಯ ಬಳಕೆಯ ವರ್ಗದಲ್ಲಿನ ಚಿತ್ರಗಳನ್ನು ಗ್ಯಾಲರಿಯಲ್ಲಿ ಬಳಸುವಂತಿಲ್ಲ

ಕೊಲಾಜ್ ಮತ್ತು ಸಂಕಲನಗಳು( Collages and montages)[ಬದಲಾಯಿಸಿ]

ಕೊಲಾಜ್ ಅಥವಾ ಚಿತ್ರ ಸಂಕಲನದ ಮೂಲಕ ಪರಸ್ಪರ ಸಂಬಂಧವಿರೋ ಹಲವು ವಿಷಯಗಳನ್ನು ತೋರಿಸಲಾಗುತ್ತದೆ. ಕೊಲಾಜಿನಲ್ಲಿ ಬಳಸಲಾಗುವ ಚಿತ್ರಗಳಿಗೆ ತಮ್ಮದೇ ಆದ ಸೂಕ್ತ ಲೈಸನ್ಸ್ ಇರಬೇಕು. ಓದುಗನ ಅಗತ್ಯಕ್ಕೆ ತಕ್ಕಂತೆ ಗ್ಯಾಲರಿಯನ್ನು ಬದಲಾಯಿಸಿಕೊಳ್ಳುವ ಅವಕಾಶವಿರುವುದರಿಂದ ಕೊಲಾಜಿನ ಬದಲು ಗ್ಯಾಲರಿ ಬಳಸುವ ಅವಕಾಶವಿದ್ದಲ್ಲಿ ಗ್ಯಾಲರಿಯನ್ನು ಬಳಸಬೇಕು.

ಚಿತ್ರಗಳ ಸರಣಿ[ಬದಲಾಯಿಸಿ]

ಲೇಖನವೊಂದರಲ್ಲಿ ಮಾಹಿತಿಗಿಂತ ಚಿತ್ರಗಳೇ ಹೆಚ್ಚಿದ್ದಲ್ಲಿ ಅವುಗಳಲ್ಲಿ ಕೆಲವನ್ನು ಚಿತ್ರದ ಚರ್ಚಾಪುಟಕ್ಕೆ ತಳ್ಳಬಹುದು. ಇದಕ್ಕೆ <gallery> ಬಳಸಬಹುದು. ಆದರೆ ಯೋಗ್ಯ ಬಳಕೆಯ ವರ್ಗದಲ್ಲಿನ ಚಿತ್ರಗಳನ್ನು ಕೆಳಗಿನ ಕಾರಣಗಳಿಂದ ಚರ್ಚಾಪುಟಕ್ಕೆ ತಳ್ಳುವಂತಿಲ್ಲ.

 • ಯೋಗ್ಯ ಬಳಕೆಯ ಚಿತ್ರಗಳನ್ನು ಲೇಖನಗಳಲ್ಲಿ ಮಾತ್ರ ಬಳಸಬೇಕು(fair use rationale ಅನ್ವಯ)
 • ಯೋಗ್ಯ ಬಳಕೆಯ ಚಿತ್ರಗಳನ್ನು ಲೇಖನದಲ್ಲಿ ಬಳಸದಿದ್ದಲ್ಲಿ ಅವು ಕಾಲಾಂತರದಲ್ಲಿ ಅಳಿಸಲ್ಪಡುತ್ತವೆ. ನೋಡಿ Wikipedia:Fair use#Policy and Wikipedia:Criteria for speedy deletion#Images/Media.

ಪ್ರದರ್ಶಿತವಾಗುವ ಚಿತ್ರಗಳ ಗಾತ್ರ[ಬದಲಾಯಿಸಿ]

ಪಠ್ಯದ ಪಕ್ಕದಲ್ಲಿರುವ ಚಿತ್ರಗಳು caption ಹೊಂದಿರಬೇಕು ಮತ್ತು "thumb" (thumbnail) ಆಯ್ಕೆಯನ್ನು ಹೊಂದಿರಬೇಕು ಅದರಿಂದ ಚಿತ್ರವನ್ನು ಕೆಳಗಿನ ಅಳತೆಯಲ್ಲಿ ಪ್ರದರ್ಶಿಸಲು ಸಾಧ್ಯವಾಗುತ್ತದೆ.

 • A1. ಲಾಗಿನ್ ಆಗದೇ ಇರುವ ಬಳಕೆದಾರನಿಗೆ width—​ ನಲ್ಲಿರುವುದು upright (B ವಿಭಾಗ ನೋಡಿ)—​ defaulted 220px ನಲ್ಲಿ ಕಾಣುತ್ತದೆ (pixels).
 • A2. ಲಾಗಿನ್ ಆಗಿರುವ ಬಳಕೆದಾರನಿಗೆ the width—​before any scaling due to upright—​ ಬಳಕೆದಾರನ ಪ್ರಾಶಸ್ತ್ಯಗಳಲ್ಲಿದ್ದಂತೆ ಗೋಚರಿಸುತ್ತದೆ. user preferences; ಬಳಕೆದಾರ ಪ್ರಾಶಸ್ತ್ಯಗಳನ್ನು ಬದಲಿಸದೇ ಇದ್ದರೆ ಇದು ೨೨೦ ಪಿಕ್ಸಲ್ಲಿನಲ್ಲಿ ಕಾಣುತ್ತದೆ.
 • B. If the upright parameter is present, then the initial width determined by A1 or A2 is multiplied by the upright scaling factor. This allows article editors to adjust the user's "base" image-size preference, according to the characteristics of a particular image. For example:
  • |thumb|upright=1.4 might be used for an image with fine detail, so that it will be rendered "40% larger than the user generally specified".
  • |thumb|upright=0.75 might be used for an image with little detail, which can be adequately displayed "25% smaller than the user generally specified".
  • "Landscape" images (short and wide) often call for upright greater than 1. Similarly, "portrait" images (tall and narrow) may look best with upright less than 1.

ಮುಖ್ಯಾಂಶಗಳು:

 • thumb ಅನ್ನು ಬಿಟ್ಟು ಬಿಡುವುದು ಒಂದು ಸಾಮಾನ್ಯ ತಪ್ಪು. ಇದರಿಂದ ಚಿತ್ರ ಬೃಹತ್ ಗಾತ್ರದಲ್ಲಿ ಗೋಚರಿಸುತ್ತದೆ.
 • |thumb (with upright completely missing) multiplies the width by 1.0 (i.e. does nothing)
 • |thumb|upright (with upright present, but no multiplier given) multiplies the width by 0.75 by default
 • The lead image (appearing at the top of the page) should usually be no wider than upright=1.35 (which is the default equivalent of 300px at preference selection of "220px").

ಚಿತ್ರವನ್ನು ಹಿಗ್ಗಿಸುವ ಅಥವಾ ಕುಗ್ಗಿಸುವ ಬಗೆಗಿನ ಮಾಹಿತಿಗಾಗಿ Wikipedia:Manual of Style/Images § Size ನೋಡಿ. Except with very good reason, do not use px (e.g. thumb|300px), which forces a fixed image width. In most cases upright=scaling factor should be used, thereby respecting the user's base preference (which may have been selected for that user's particular devices). When px is used, the resulting image should usually be no more than 500 pixels tall and no more than 400 pixels wide, for comfortable display on the smallest devices "in common use" (though this may still cause viewing difficulties on some unusual displays).

Images used in infoboxes are generated by many different means. The most common method used to implement upright is Module:InfoboxImage (see documentation there). Alternatively, infoboxes can use standard image syntax in the form of [[File:Westminstpalace.jpg|frameless|center|upright=scaling factor]]

ಚಿತ್ರಗಳ ಅಳಿಸುವಿಕೆ[ಬದಲಾಯಿಸಿ]

ವಿಕಿಪೀಡಿಯದಲ್ಲಿ ಅಪ್ಲೋಡ್ ಮಾಡಿದ ಯಾವುದಾದರೂ ಚಿತ್ರ ಇಲ್ಲಿನ ಬಳಕೆಗೆ ಸೂಕ್ತವಲ್ಲ ಎಂದು ನಿಮಗನಿಸಿದರೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು

 1. ಚಿತ್ರವನ್ನು ಅಪ್ಲೋಡ್ ಮಾಡಿದ ಬಳಕೆದಾರರನ್ನು ಸಂಪರ್ಕಿಸಿ ಅವರಿಗೆ ನಿಮ್ಮ ಕಳವಳಗಳನ್ನು ತಿಳಿಸಬಹುದು
 2. ಚಿತ್ರದ ಶೀರ್ಷಿಕೆಯಲ್ಲಿ ಅಳಿಸುವಿಕೆ ಸೂಚನೆಯ(deletion notice) ಬಳಕೆ
 3. ಚಿತ್ರವು ಕಾಪಿರೈಟಿನ ಉಲ್ಲಂಘನೆ ಮಾಡಿದ್ದರೆ{{db-f9}} ಅಥವಾ {{db-filecopyvio}} ಟ್ಯಾಗುಗಳ ಬಳಕೆ ಮಾಡಬಹುದು
 4. ಚಿತ್ರವು ಉಚಿತ ಲೈಸನ್ಸಿನದು ಎಂದು ನಮೂದಾಗಿದ್ದೂ ನಿಮಗೆ ಅದರ ಲೈಸನ್ಸಿನ ಬಗ್ಗೆ ಸಂದೇಹವಿದ್ದರೆ {{ffd}} ಎಂಬ ಟೆಂಪ್ಲೇಟನ್ನು ಹಾಕಿ ಫೈಲ್ಗಳ ಬಗ್ಗೆ ಇರುವ ಚರ್ಚಾಪುಟದಲ್ಲಿ ಅದರ ಬಗ್ಗೆ ಚರ್ಚಿಸಬಹುದು.
 5. ಬೇರೆ ಯಾವುದೇ ಕಾರಣಕ್ಕಾಗಿ ಚಿತ್ರವನ್ನು ಅಳಿಸಬೇಕೆಂದು ನೀವು ಭಾವಿಸಿದರೆ {{ffd}} ಎಂಬ ಟೆಂಪ್ಲೇಟನ್ನು ಹಾಕಿ ಫೈಲ್ಗಳ ಬಗ್ಗೆ ಇರುವ ಚರ್ಚಾಪುಟದಲ್ಲಿ ಅದರ ಬಗ್ಗೆ ಚರ್ಚಿಸಬಹುದು
 6. ಮೇಲಿನ ಪ್ರತೀ ಸಂದರ್ಭಗಳಲ್ಲೂ ನೀವು ಯಾಕೆ ಟೆಂಪ್ಲೇಟನ್ನು ಬಳಸುತ್ತಿದ್ದೀರಿ ಎಂಬ ವಿವರಣೆಯನ್ನು ಅಪ್ಲೋಡ್ ಮಾಡಿದ ಬಳಕೆದಾರನಿಗೆ ಕೊಟ್ಟು ಸಂಬಂಧಿತ ಚರ್ಚಾಪುಟದಲ್ಲಿ ಚರ್ಚೆಯನ್ನು ಮುಂದುವರಿಸಬಹುದು,

ಉದಾಹರಣೆಗಳು[ಬದಲಾಯಿಸಿ]

 • {{db-f9}} ಬಳಸಿದರೆ ಅದು ಕೆಳಗಿನಂತೆ ಕಾಣುತ್ತದೆ
  • {{db-filecopyvio}} ಬಳಸಿದರೆ ಅದು ಕೆಳಗಿನಂತೆ ಕಾಣುತ್ತದೆ
   • {{ffd}} ಬಳಸಿದರೆ ಅದು ಕೆಳಗಿನಂತೆ ಕಾಣುತ್ತದೆ
    This template should only be used on image pages.