ವಿಕಿಕೋಟ್
ಗೋಚರ
ಜಾಲತಾಣದ ವಿಳಾಸ | www.wikiquote.org |
---|---|
ವಾಣಿಜ್ಯ ತಾಣ | ಅಲ್ಲ |
ತಾಣದ ಪ್ರಕಾರ | ಉದ್ಧರಣ ಭಂಡಾರ |
ನೊಂದಾವಣಿ | ಐಚ್ಛಿಕ |
ಲಭ್ಯವಿರುವ ಭಾಷೆ | ಬಹುಭಾಷಾ |
ಒಡೆಯ | ವಿಕಿಮೀಡಿಯ ಫೌಂಡೇಶನ್ |
ಸೃಷ್ಟಿಸಿದ್ದು | ಜಿಮ್ಮಿ ವೇಲ್ಸ್ ಮತ್ತು ವಿಕಿಮೀಡಿಯ ಸಮುದಾಯ. |
ಪ್ರಾರಂಭಿಸಿದ್ದು | ಜುಲೈ 10, 2003 |
ಅಲೆಕ್ಸಾ ಶ್ರೇಯಾಂಕ | 4,250 ,ನವೆಂಬರ್ 2016)[೧] |
ಸಧ್ಯದ ಸ್ಥಿತಿ | ಸಕ್ರಿಯ |
ವಿಕಿಕೋಟ್ (Wikiquote) ವಿಕಿಮೀಡಿಯ ಫೌಂಡೇಶನ್ ಸಂಚಾಲಿತ ವಿಕಿಪೀಡಿಯ ಯೋಜನೆಗಳಲ್ಲಿ ಒಂದು ಇದು ಮೀಡಿಯಾವಿಕಿ ತಂತ್ರಾಂಶದ ಮೂಲಕ ಕಾರ್ಯ ನಿರ್ವಹಿಸುತ್ತದೆ.ಇದು ಡೇನಿಯಲ್ ಆಲ್ಸ್ಟನ್ ಕಲ್ಪನೆಯಾಗಿದ್ದು,ಇದನ್ನು ಆಧರಿಸಿ ಬ್ರಿಯಾನ್ ವಿಬ್ಬೇರ್ ಕಾರ್ಯಗತಗೊಳಿಸಿದರು. ಈ ಯೋಜನೆಯ ಉದ್ದೇಶವು ಪ್ರಮುಖ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು , ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು,ಜನಪ್ರಿಯ ಗಾದೆಗಳು ,ನಾಣ್ಣುಡಿ,ಉಲ್ಲೇಖ ಸಮೇತ ಸೇರಿಸುವದಾಗಿದೆ.[೨]
ಇತಿಹಾಸ
[ಬದಲಾಯಿಸಿ]ದಿನಾಂಕ | ಘಟನೆ |
---|---|
27 ಜೂನ್ 2003 | ತಾತ್ಕಾಲಿಕವಾಗಿ ವೋಲೋಫ್ ಭಾಷೆ ವಿಕಿಪೀಡಿಯ ಆರಂಭ (wo.wikipedia.com). |
10 ಜುಲೈ 2003 | ಸ್ವಂತ ಸಬ್ಡೊಮೈನ್ ದಾಖಲಿಸಿದರು (quote.wikipedia.org). |
25 ಆಗಸ್ಟ್ 2003 | ಸ್ವಂತ ಡೊಮೇನ್ ದಾಖಲಿಸಿದರು (wikiquote.org). |
17 ಜುಲೈ 2004 | ಹೊಸ ಭಾಷೆ ಸೇರಿಸಲಾಯಿತು. |
13 ನವೆಂಬರ್ 2004 | ಇಂಗ್ಲೀಷ್ ಆವೃತ್ತಿ 2,000 ಪುಟಗಳು ತಲುಪಿತು. |
ನವೆಂಬರ್ 2004 | 24 ಭಾಷೆಗಳಲ್ಲಿ ಪ್ರಾರಂಭ. |
ಮಾರ್ಚ್ 2005 | ಒಟ್ಟು 10,000 ಪುಟಗಳು ತಲುಪಿತು. ಇಂಗ್ಲೀಷ್ ಆವೃತ್ತಿ 3,000 ಪುಟಗಳು ಹೊಂದಿತು. |
ಜೂನ್ 2005 | 34 ಭಾಷೆಗಳು ತಲುಪಿತು, ಒಂದು ಶಾಸ್ತ್ರೀಯ (ಲ್ಯಾಟಿನ್) ಸೇರಿದಂತೆ ಮತ್ತು ಒಂದು ಕೃತಕ (ಎಸ್ಪೆರಾಂಟೊ) |
4 ನವೆಂಬರ್ 2005 | ಇಂಗ್ಲೀಷ್ ವಿಕಿಕೋಟ್ 5,000 ಪುಟಗಳು ತಲುಪಿತು. |
ಏಪ್ರಿಲ್ 2006 | ಫ್ರೆಂಚ್ ವಿಕಿಕೋಟ್ ಕಾನೂನು ಕಾರಣಗಳಿಗಾಗಿ ತೆಗೆದುಹಾಕಲಾಯಿತು. |
4 ಡಿಸೆಂಬರ್ 2006 | ಫ್ರೆಂಚ್ ವಿಕಿಕೋಟ್ ಪುನಃ ಆರಂಭ. |
7 ಮೇ 2007 | ಇಂಗ್ಲೀಷ್ ವಿಕಿಕೋಟ್ 10,000 ಪುಟಗಳು ತಲುಪುಪಿತು. |
ಜುಲೈ 2007 | 40 ಭಾಷೆಗಳಲ್ಲಿ. |
ಫೆಬ್ರವರಿ 2010 | ಒಟ್ಟು 100,000 ಲೇಖನಗಳು ಎಲ್ಲಾ ಭಾಷೆಗಳಿಗೆ ಸೇರಿ. |
ಬಹುಭಾಷಾ ಆವೃತ್ತಿ
[ಬದಲಾಯಿಸಿ]ನವೆಂಬರ್ 2016 ರಂತೆ 89 ಆವೃತ್ತಿಗಳು ಇವೆ. ಸೆಪ್ಟೆಂಬರ್ 2016 ರ ಪ್ರಕಾರ, ಮೂವತ್ತೊಂದು ಆವೃತ್ತಿಗಳು ಪ್ರತಿ 1,000 ಕ್ಕೂ ಹೆಚ್ಚು ಲೇಖನಗಳು ಒಳಗೊಂಡಿವೆ.[೩] [೪]
ಕನ್ನಡ ವಿಕಿಕೋಟ್
[ಬದಲಾಯಿಸಿ]ಕನ್ನಡ ಆವೃತ್ತಿ ವಿಕಿಕೋಟ್ನಲ್ಲಿ ೧ ಜುಲೈ ೨೦೨೦ ನಂತೆ 265 ಲೇಖನ ಪುಟಗಳಿವೆ.