ವಿಷಯಕ್ಕೆ ಹೋಗು

ವಸತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಾಸಸ್ಥಾನ ಇಂದ ಪುನರ್ನಿರ್ದೇಶಿತ)
ಪ್ರತ್ಯೇಕ ವಸತಿಯ ನಕ್ಷೆ

ಮನೆ (ವಾಸಸ್ಥಾನ) ಎಂದರೆ ಒಬ್ಬ ವ್ಯಕ್ತಿ, ಕುಟುಂಬ, ಮನೆಜನ ಅಥವಾ ಒಂದು ಬುಡಕಟ್ಟಿನ ಹಲವಾರು ಕುಟುಂಬಗಳಿಗೆ ಶಾಶ್ವತ ಅಥವಾ ಅರೆಶಾಶ್ವತ ನಿವಾಸವಾಗಿ ಬಳಸಲಾದ ವಾಸಿಸುವ ಸ್ಥಳ. ಇದು ಹಲವುವೇಳೆ ಒಂದು ಮನೆ, ಅಪಾರ್ಟ್‌ಮಂಟ್, ಅಥವಾ ಬೇರೆ ಕಟ್ಟಡ, ಅಥವಾ ಪರ್ಯಾಯವಾಗಿ ಚರ ವಸತಿ, ದೋಣಿಮನೆ, ಮಡಸಬಹುದಾದ ಡೇರೆ ಅಥವಾ ಇತರ ಯಾವುದೇ ಸಾಗಿಸಬಲ್ಲ ಆಶ್ರಯವಾಗಿರುತ್ತದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ೧೨ನೇ ಕಲಮಿನಲ್ಲಿ ಪ್ರತಿಷ್ಠಾಪಿತವಾದ ಏಕಾಂತತಾ ಹಕ್ಕಿಗೆ ಸಂಬಂಧಿಸಿದ ಅನೇಕ ದೇಶಗಳಲ್ಲಿನ ಸಂವಿಧಾನಿಕ ಕಾನೂನಿನ ನಿಯಮವೆಂದರೆ ಒಬ್ಬ ವ್ಯಕ್ತಿಯ ಆಶ್ರಯ ಸ್ಥಳವಾಗಿ ಮನೆಯ ಅನುಲ್ಲಂಘನೀಯತೆ.[]

ಮನೆಗಳು ಸಾಮಾನ್ಯವಾಗಿ ಮಲಗಲು, ಆಹಾರ ತಯಾರಿಸಲು, ತಿನ್ನಲು ಮತ್ತು ನೈರ್ಮಲ್ಯಕ್ಕೆ ಪ್ರದೇಶಗಳು ಮತ್ತು ಸೌಲಭ್ಯಗಳನ್ನು ಒದಗಿಸುತ್ತವೆ. ದೊಡ್ಡ ಗುಂಪುಗಳು ನರ್ಸಿಂಗ್ ಹೋಂ, ಮಕ್ಕಳ ವಸತಿಕೇಂದ್ರ, ಕಾನ್ವೆಂಟ್ ಅಥವಾ ಯಾವುದೇ ಹೋಲಿಕೆಯ ಸಂಸ್ಥೆಯಲ್ಲಿ ಇರಬಹುದು. ತೋಟದ ಮನೆಯು ಕೃಷಿ ಭೂಮಿ ಮತ್ತು ಸಾಕುಪ್ರಾಣಿಗಳಿಗಾಗಿ ಸೌಲಭ್ಯಗಳನ್ನೂ ಒಳಗೊಳ್ಳುತ್ತದೆ. ಹೆಚ್ಚು ಸುಭದ್ರ ನೆಲೆಗಳು ಲಭ್ಯವಿಲ್ಲದ ಕಡೆ, ಜನರು ಕೊಳಗೇರಿಗಳು ಮತ್ತು ಗುಡಿಸಲು ಪ್ರದೇಶಗಳಲ್ಲಿ ಕಂಡುಬರುವ ಅನೌಪಚಾರಿಕ ಮತ್ತು ಕೆಲವೊಮ್ಮೆ ಅಕ್ರಮವಾದ ಗುಡಿಸಿಲುಗಳಲ್ಲಿ ಇರಬಹುದು.

ಮನೆಯೆಂದರೆ ಮಾನವರಿಗೆ ವಸತಿಯಾಗಿ ಕಾರ್ಯನಿರ್ವಹಿಸುವ ಕಟ್ಟಡ. ಇದು ಅಲೆಮಾರಿ ಬುಡಕಟ್ಟುಗಳ ಮೂಲಭೂತ ಗುಡಿಸಲುಗಳಂತಹ ಸರಳ ವಾಸಸ್ಥಳಗಳಿಂದ ಹಿಡಿದು ಕೊಳಾಯಿ, ವಾತಾಯನ ಮತ್ತು ವಿದ್ಯುತ್ ವ್ಯವಸ್ಥೆಗಳಿರುವ ಕಟ್ಟಿಗೆ, ಇಟ್ಟಿಗೆ ಅಥವಾ ಇತರ ವಸ್ತುಗಳ ಸಂಕೀರ್ಣ, ಸ್ಥಿರ ರಚನೆಗಳನ್ನು ಒಳಗೊಳ್ಳಬಹುದು. ಬಹುತೇಕ ಸಮಕಾಲೀನ ಆಧುನಿಕ ಮನೆಗಳು ಕನಿಷ್ಠಪಕ್ಷ ಒಂದು ಮಲಗುವ ಕೋಣೆ, ಸ್ನಾನದ ಮನೆ, ಅಡಿಗೆ ಮನೆ, ಮತ್ತು ವಾಸದ ಕೊಠಡಿಯನ್ನು ಹೊಂದಿರುತ್ತವೆ. ಸಾಂಪ್ರದಾಯಿಕ ಕೃಷಿ ಉದ್ದೇಶಿತ ಸಮಾಜಗಳಲ್ಲಿ, ಕೋಳಿಗಳು ಅಥವಾ (ದನಗಳಂತಹ) ದೊಡ್ಡ ಜಾನುವಾರುಗಳಂತಹ ಸಾಕುಪ್ರಾಣಿಗಳು ಮಾನವರೊಂದಿಗೆ ಮನೆಯ ಒಂದು ಭಾಗವನ್ನು ಹಂಚಿಕೊಳ್ಳಬಹುದು. ಮನೆಯಲ್ಲಿ ಇರುವ ಸಾಮಾಜಿಕ ಘಟಕವನ್ನು ಮನೆಮಂದಿ/ಮನೆಜನ ಎಂದು ಕರೆಯಲಾಗುತ್ತದೆ. ಅತ್ಯಂತ ಸಾಮಾನ್ಯವಾಗಿ ಮನೆಜನರು ಯಾವುದೋ ವಿಧದ ಕುಟುಂಬ ಘಟಕವನ್ನು ರೂಪಿಸುತ್ತಾರಾದರೂ, ಮನೆಜನರೆಂದರೆ ಇತರ ಸಾಮಾಜಿಕ ಗುಂಪುಗಳು ಅಥವಾ ವ್ಯಕ್ತಿಗಳೂ ಆಗಿರಬಹುದು. ಜಾಗತೀಕರಣ, ನಗರೀಕರಣ ಮತ್ತು ಇತರ ಸಾಮಾಜಿಕ, ಆರ್ಥಿಕ, ಜನಸಂಖ್ಯಾ ಸಂಬಂಧಿ, ಹಾಗೂ ತಂತ್ರಜ್ಞಾನ ಸಂಬಂಧಿ ಕಾರಣಗಳ ಪರಿಣಾಮವಾಗಿ ವಸತಿಗಳ ವಿನ್ಯಾಸ ಮತ್ತು ರಚನೆ ಕೂಡ ಬದಲಾವಣೆಗೆ ಒಳಪಟ್ಟಿರುತ್ತದೆ. ವಿವಿಧ ಇತರ ಸಾಂಸ್ಕೃತಿಕ ಅಂಶಗಳು ಕೂಡ ಮನೆ ಸ್ಥಳದ ನಿರ್ಮಾಣ ಶೈಲಿ ಮತ್ತು ಮಾದರಿಗಳ ಮೇಲೆ ಪ್ರಭಾವ ಬೀರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ವಸತಿ&oldid=878926" ಇಂದ ಪಡೆಯಲ್ಪಟ್ಟಿದೆ