ವಾದಿರಾಜರು

ವಿಕಿಪೀಡಿಯ ಇಂದ
Jump to navigation Jump to search

ವಾದಿರಾಜರು (೧೪೮೦ - ೧೬೦೦) ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.

ಹಯಗ್ರೀವ ದೇವರಿಗೆ ನೈವೇದ್ಯ ನೀಡುತ್ತಿರುವ ವಾದಿರಾಜರ ಒಂದು ಕಲಾಕೃತಿ

ಜೀವನ[ಬದಲಾಯಿಸಿ]

ಹದಿನೈದನೆಯ ಶತಮಾನದ ಅಂತ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನನ. ತಂದೆ ರಾಮಾಚಾರ್ಯ ಮತ್ತು ತಾಯಿ ಗೌರಮ್ಮ. ಪೂರ್ವಾಶ್ರಮದ ಹೆಸರು ಭೂವರಾಹ.

ವಾದಿರಾಜರು ನೂರಾ ಇಪ್ಪತ್ತು ವರ್ಷಗಳವರೆಗೆ ಕಣ್ಣಿಗೆ ಗೋಚರರಾಗಿದ್ದಂತಹವರುಹಯವದನ ವಾದಿರಾಜರ ಆರಾದ್ಯ ದೈವ. ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರ ಸನ್ಯಾಸ ಜೀವನದ ಅವಧಿ ೧೧೨ ವರ್ಷಗಳು. ಶಿರಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಇವರ ಬೃಂದಾವನವಿದೆ.

ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ವಾದಿರಾಜರು ಕೃತಿಗಳನ್ನು ರಚಿಸಿದ್ದಾರೆ. ಹಯವದನ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಈವರೆಗೆ ವಾದಿರಾಜರು ರಚಿಸಿರುವ ೩೪೩ ಕೀರ್ತನೆಗಳು ಲಭ್ಯವಾಗಿದ್ದು, ಅದರಲ್ಲಿ ೯ ದೀರ್ಘ ಕೃತಿಗಳು. ವಾದಿರಾಜರು ರಚಿಸಿರುವ ಲಕ್ಷೀಶೋಭಾನ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆಂಬ ನಂಬಿಕೆ ಇದೆ. ಲಕ್ಷೀಶೋಭಾನದಲ್ಲಿ ಬರುವ ಈ ಚರಣ ಆದಕ್ಕೆಕಾರಣವಾಗಿರಬಹುದು -

"ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವುದು ಮದನನಯ್ಯನ ಕೃಪೆಯಿಂದ"

ಇತರ ವಿವರಗಳು[ಬದಲಾಯಿಸಿ]

ವಾದಿರಾಜರು ಬ್ರಾಹ್ಮಣ ಮನೆತನಕ್ಕೆ ಸೇರಿದವರು. ತಮ್ಮ ಪಾಂಡಿತ್ಯದಿಂದಾಗಿ ವಿಜಯನಗರ ಅರಸರಿಂದ ಸನ್ಮಾನಿಸಲ್ಪಟ್ಟಿದ್ದರು. "ಕುಡುಮ" ಎಂದು ಕರೆಯಲಾಗುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳವೆಂದು ಹೆಸರಿಸಿದವರು ವಾದಿರಾಜರು.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]