ವಿಷಯಕ್ಕೆ ಹೋಗು

ವಾದಿರಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾದಿರಾಜ ಕನ್ನಡ ಚಲನಚಿತ್ರರಂಗದ ಇತಿಹಾಸದ ಪ್ರಮುಖ ನಟ ಮತ್ತು ನಿರ್ಮಾಪಕರಲ್ಲಿ ಒಬ್ಬರು. 'ನಾಂದಿ' ಮತ್ತು 'ಅದೇ ಕಣ್ಣು' ಅವರು ನಿರ್ಮಿಸಿದ ಪ್ರಮುಖ ಚಿತ್ರಗಳಲ್ಲಿ ಕೆಲವು.

ಉಪಾಧ್ಯಾಯ ಶ್ರೀನಿವಾಸ ವಾದಿರಾಜ್‌ ಅವರು ಜನಿಸಿದ್ದು ೧೯೨೭ರಲ್ಲಿ. ಉಡುಪಿ ಜಿಲ್ಲೆಯ ಪಣಿಯಾಡಿಯಲ್ಲಿ ಹುಟ್ಟಿದರು. ಅಭಿನಯ ಕಲೆಯಲ್ಲಿ ತೊಡಗಿದ್ದ ತಮ್ಮ ತಂದೆಯವರಿಂದ ಪ್ರಭಾವಿತರಾದ ವಾದಿರಾಜ್‌ ಕೇವಲ ಚಲನಚಿತ್ರಗಳಲ್ಲಷ್ಟೇ ಅಲ್ಲದೆ ಸಹಸ್ರಾರು ನಾಟಕಗಳಲ್ಲೂ ಅಭಿನಯಿಸಿದ್ದರು. ೧೯೫೪ರಲ್ಲಿ ‘ಕೋಕಿಲವಾಣಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಾದಿರಾಜ್‌ ನಟಿಸಿದ ಚಿತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚಿನದು. ೧೯೫೮ರ ವರ್ಷದಲ್ಲಿ ತೆರೆಕಂಡ ಕೃಷ್ಣಗಾರುಡಿ ಚಿತ್ರ ಅವರನ್ನು ಪ್ರಖ್ಯಾತರನ್ನಾಗಿಸಿತು. ಮುಂದೆ ಕಂಡ ‘ಧರ್ಮ ವಿಜಯ’, ‘ಸ್ವರ್ಣ ಗೌರಿ’ ಮುಂತಾದ ಚಿತ್ರಗಳಲ್ಲಿನ ಅವರ ಹಾಸ್ಯನಟನೆ ಅಪಾರ ಜನಮೆಚ್ಚುಗೆ ಪಡೆಯಿತು.

ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಹರಿಣಿ ಇವರ ಸಹೋದರಿ. ಅವಿವಾಹಿತರಾಗಿದ್ದ ವಾದಿರಾಜ್ ಫೆಬ್ರುವರಿ ೨೦೦೪ರಲ್ಲಿ ಈ ಲೋಕವನ್ನಗಲಿದರು.

"https://kn.wikipedia.org/w/index.php?title=ವಾದಿರಾಜ&oldid=949744" ಇಂದ ಪಡೆಯಲ್ಪಟ್ಟಿದೆ