ವಾಂತಾಂಗ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಂತಾಂಗ್ ಜಲಪಾತವು (ಮೀಜ಼ೊ ಭಾಷೆಯಲ್ಲಿ ವಾಂತಾಂಗ್ ಖಾವ್‍ಥ್ಲಾ ಎಂದು ಕರೆಯಲ್ಪಡುತ್ತದೆ) ಭಾರತದ ಮಿಝೋರಂ ರಾಜ್ಯದ ಸೆರ್ಛಿಪ್ ಜಿಲ್ಲೆಯಲ್ಲಿನ ಥೆನ್‍ಜ಼ಾಲ್‍ನ ದಕ್ಷಿಣಕ್ಕೆ ೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ. ಇದು ಮಿಜ಼ೋರಮ್‍ನಲ್ಲಿನ ಅತ್ಯಂತ ಎತ್ತರದ ಅಡತಡೆಯಿಲ್ಲದ ಜಲಪಾತವಾಗಿದೆ. ಇದು ಐಝ್ವಾಲ್‍ನಿಂದ ೯೨ ಕಿ.ಮಿ. ದೂರದಲ್ಲಿದೆ.[೧]

ಜಲಪಾತ[ಬದಲಾಯಿಸಿ]

ವಾಂತಾಂಗ್ ಖಾವ್‍ಥ್ಲಾ ಅಥವಾ ವಾಂತಾಂಗ್ ಜಲಪಾತವು ಮಿಜ಼ೊರಮ್‍ನ ವೇಗವಾಗಿ ಹರಿಯುವ ನದಿಗಳಲ್ಲಿನ ಜಲಪಾತಗಳು ಮತ್ತು ಸೋಪಾನಪಾತಗಳ ಪೈಕಿ ಅತಿ ಎತ್ತರದ ಮತ್ತು ಅತ್ಯಂತ ನಯನಮನೋಹರ ಜಲಪಾತವಾಗಿದೆ. ಇದು ಥೆನ್‍ಜ಼ಾಲ್ ಹತ್ತಿರ ವಾನ್ವಾ ನದಿಯಲ್ಲಿ ಸ್ಥಿತವಾಗಿದೆ. ಇದಕ್ಕೆ ಒಬ್ಬ ಶ್ರೇಷ್ಠ ಈಜುಗಾರನಾಗಿದ್ದ ವಾಂತಾಂಗಾನ ಹೆಸರು ನೀಡಲಾಗಿದೆ.

ಈ ಜಲಪಾತದ ಎತ್ತರ ೭೫೦ ಅಡಿ ಎಂದು ದಾಖಲಿಸಲಾಗಿದೆ. ಇದರ ಸುತ್ತಲಿರುವ ತೀರ ಕಡಿದಾದ ಅರಣ್ಯವುಳ್ಳ ಪರ್ವತಪಾರ್ಶ್ವಗಳ ಕಾರಣದಿಂದ ಇದರ ಹತ್ತಿರ ಹೋಗುವುದು ಕಷ್ಟವಾಗಿದೆಯಾದರೂ, ಒಂದು ಆರಾಮದಾಯಕ ನೋಟದ ಗೋಪುರವನ್ನು ನಿರ್ಮಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Vantawng Falls". india9. Retrieved 2010-06-24.