ವರ್ಣರೇಖನ
ಮಿಶ್ರಣಗಳನ್ನು ಬೇರ್ಪಡಿಕೆ ಮಾಡಲು ಉಪಯೋಗಿಸುವ ಪ್ರಯೋಗಶಾಲೆಯ ತಂತ್ರಜ್ಞಾನಗಳ ಒಂದು ಗುಂಪನ್ನು ವರ್ಣರೇಖನ ಎಂದು ಕರೆಯುತ್ತಾರೆ.ಮೊಬೈಲ್ ಹಂತವೆಂಬ ದ್ರವದಲ್ಲಿ ಈ ಮಿಶ್ರಣವನ್ನು ಕರಗಿಸಿ ನಂತರ ಅದನ್ನು ಸ್ಥಾಯಿ ಹಂತದವೆಂಬ ಮತ್ತೊಂದು ಆಕಾರದೊಳಗೆ ಸಾಗಿಸುತ್ತಾರೆ.ಈ ಮಿಶ್ರಣದಲ್ಲಿ ಒಳಗೊಂಡ ವಿಧವಿಧವಾದ ವಸ್ತುಗಳು ವಿವಿಧ ವೇಗದಲ್ಲಿ ಸಂಚರಿಸಿ ಬೇರ್ಪಡಸಲಾಗುತ್ತದೆ.ಈ ಬೇರ್ಪಡಿಕೆಯು ಮೊಬೈಲ್ ಹಂತ ಹಾಗು ಸ್ಥಾಯಿ ಹಂತದ ನಡುವಿರುವ ಭೇದಾತ್ಮಕ ವಿಭಜನದಿಂದಾಗಿ ನಡೆಯುತ್ತದೆ.ಸಂಯುಕ್ತದ ವಿಭಾಗ ಗುಣಾಂಕದಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳ ಪರಿಣಾಮವಾಗಿ ಸ್ಥಾಯಿ ಹಂತದ ಭೇದಾತ್ಮಕ ಧಾರಣವಾಗಿ ಬೇರ್ಪಡಿಕೆಯನ್ನು ಬದಲಾಯಿಸುತ್ತದೆ.ವರ್ಣರೇಖನ ಪೂರ್ವಭಾವಿಯೂ ಆಗಬಹುದು, ವಿಶ್ಲೇಷಣಾತ್ಮಕವೂ ಆಗಬಹುದು.ಪೂರ್ವಭಾವಿ ವರ್ಣರೇಖನದಲ್ಲಿ ನಾವು ಮಿಶ್ರಣಗಳನ್ನು ಬೇರ್ಪಡಿಸಿ ಮುಂದುವರಿದ ಉಪಯೋಗಕ್ಕಾಗಿ ಬಳಕೆ ಮಾಡುತ್ತಾರೆ. ವಿಶ್ಲೇಷಣಾತ್ಮಕ ವರ್ಣರೇಖನ ಸಾಮಾನ್ಯವಾಗಿ ಸಣ್ಣ ಪ್ರಮಾಣದ ಮಿಶ್ರಣಗಳಿಗಾಗಿ ಉಪಯೋಗಿಸುತ್ತಾರೆ. ಅದರ ಜೊತೆಗೆ ಇದನ್ನು ಮಿಶ್ರಣಗಳಲ್ಲಿರುವ ವಿಶ್ಲೇಷಣಗಳ ಸಂಬಂಧಿತ ಪ್ರಮಾಣಗಳನ್ನು ಅಳೆಯಲು ಸಹಾ ಉಪಯೋಗಿಸುತ್ತಾರೆ.
ಇತಿಹಾಸ
[ಬದಲಾಯಿಸಿ]ವರ್ಣರೇಖನವನ್ನು ಮೊಟ್ಟ ಮೊದಲ ಬಾರಿ ಉಪಯೋಗಿಸಿದ್ದು ರಶಿಯಾದಲ್ಲಿದ್ದ ಇಟಾಲಿಯನ್ ವಿಜ್ಞಾನಿ ಮಿಖಾಯಿಲ್ ಸ್ವೆಟ್,೧೯೦೦ರಲ್ಲಿ.ಅವರು ಪ್ರಾಥಮಿಕವಾಗಿ ಸಸ್ಯಗಳ ವರ್ಣದ್ರವ್ಯಗಳಾದ ಕ್ಲೋರೊಫಿಲ್, ಕ್ಯಾರೊಟಿನಾಯ್ಡ್ಗಳು, ಕ್ಸಾಂಥೋಫಿಲ್ ಮುಂತಾದವುಗಳನ್ನು ಬೇರ್ಪಡಸಲು ವರ್ಣರೇಖನವನ್ನು ೨೦ನೇ ಶತಮಾನದಲ್ಲಿ ಉಪಯೋಗಿಸಿದರು.ಈ ಘಟಕಗಳಿಗೆ ವಿಧವಿಧವಾದ ಬಣ್ನಗಳಿದ್ದರಿಂದಾಗಿ (ಹಸಿರು, ಕಿತ್ತಳೆ, ಮತ್ತು ಹಳದಿ ಕ್ರಮವಾಗಿ) ಅದಕ್ಕೆ ತಕ್ಕ ಹೆಸರು ಸಿಕ್ಕಿತ್ತು.೧೯೩೦ರಿಂದ ೧೯೪೦ವರೆಗೆ ವಿವಿಧ ರೀತಿಯ ವರ್ಣರೇಖನಗಳು ಸೃಷ್ಟಿಕೊಂಡು ವಿವಿಧ ರೀತಿಯ ಬೇರ್ಪಡಿಕೆಯ ಕಾರ್ಯವಿಧಾನಗಳಿಗೆ ಅನುಕೂಲವಾಯಿತು.ಅರ್ಚರ್ ಜಾನ್ ಪೊರ್ಟರ್ ಮಾರ್ಟಿನ್ ಮತ್ತು ರಿಚರ್ಡ್ ಲಾರೇನ್ಸ್ ಸಿಂಜ್ ಅವರ ಶ್ರಮದಿಂದಾಗಿ ೧೯೪೦-೧೯೫೦ ಕಾಲದಲ್ಲಿ ವರ್ಣರೇಖನವು ಗಣನೀಯವಾಗಿ ಅಭಿವೃದ್ಧಿಯಾಯಿತು.ಅವರು ವಿಭಜನೆ ವರ್ಣರೇಖನದ ತತ್ವಗಳನ್ನು ಮತ್ತು ಮೂಲ ತಂತ್ರಗಳನ್ನು ಸ್ಥಾಪಿಸಿ;ಅವರ ಈ ಕೆಲಸವು ವಿವಿಧ ರೀತಿಯ ವರ್ಣರೇಖನ ವಿಧಾನಗಳಾದ ಕಾಗದ ವರ್ಣರೇಖನ,ಅನಿಲ ವರ್ಣರೇಖನ ಮತ್ತು ಉನ್ನತ ಕಾರ್ಯಕ್ಷಮತೆಯ ದ್ರವ ವರ್ಣರೇಖನ ಮುಂತಾದ ವರ್ಣರೇಖನಗಳ ಪ್ರಗತಿಗೆ ಕಾರಣವಾಯಿತು.ಅಂದಿನದಿಂದ ಈ ತಂತ್ರಜ್ಞಾನ ವೇಗವಾಗಿ ಮು೦ದುವರಿಯಿತು.
ಪದಗಳು
[ಬದಲಾಯಿಸಿ]ವರ್ಣರೇಖನದಲ್ಲಿ ಬೇರ್ಪಡಿಸಬೇಕಾದ ವಸ್ತುವನ್ನು ಅನಲೈಟ್ ಎಂದು ಕರೆಯುತ್ತಾರೆ.ವಿಶ್ಲೇಷಣಾತ್ಮಕ ವರ್ಣರೇಖನವನ್ನು ಅಸ್ತಿತ್ವವನ್ನು ನಿರ್ಧರಿಸಲು ಹಾಗು ಮಿಶ್ರಣದಲ್ಲಿರುವ ಅನಲೈಟ್ ಸಾಂದ್ರತೆಯನ್ನು ತಿಳಿಯಲು ಉಪಯೋಗಿಸುತ್ತಾರೆ.ಮಿಶ್ರಣದಲ್ಲಿರುವ ವಸ್ತುಗಳನ್ನು ಜೋಡಿಸಿದಲು ಉಪಯೋಗಿಸುವ ಸ್ಥಾಯಿ ಹಂತವನ್ನು ಬಂಧಿತ ಹಂತವೆಂದು ಹೇಳುತ್ತಾರೆ.ವರ್ಣರೇಖನದ ದೃಶ್ಯ ಉತ್ಪಾದನೆಯನ್ನು ಕ್ರೊಮ್ಯಾಟೋಗ್ರಾಮ್ ಎಂದು ಹೇಳುತ್ತಾರೆ.ವರ್ಣರೇಖನದಲ್ಲಿ ಅತ್ಯಾಧುನಿಕ ಬೇರ್ಪಡಿಕೆಗಾಗಿ ಉಪಯೋಗಿಸುವ ಉಪಕರಣವನ್ನು ಕ್ರೋಮಾಟೊಗ್ರಾಫ್ ಎಂದು ಹೇಳುತ್ತಾರೆ.ಸ್ತ೦ಭವನ್ನು ಬಿಟ್ಟು ಹೋಗುವ ಮೊಬೈಲ್ ಹಂತವನ್ನು ಎಲುವೇಟ್ ಎಂದು ಕರೆಯುತ್ತಾರೆ.ಅನಲೈಟನ್ನು ಕರೆದೊಯ್ಯುವ ದ್ರಾವಕವನ್ನು ಪ್ರೋದ್ಧಾವಕ ದ್ರವವೆಂದು ಕರೆಯುತ್ತಾರೆ.ದ್ರಾವಕಗಳನ್ನು ಅದರ ಎಲುವೇಟ್ ಶಕ್ತಿಯ ಅನುಗುಣವಾಗಿ ಒಂದು ಪಟ್ಟಿಯಾಗಿ ಕ್ರೋಡೀಕರಿಸುವುದನ್ನು ಎಲುವೋಟ್ರೋಪಿಕ್ ಸರಣಿ ಎಂದು ಕರೆಯುತ್ತಾರೆ.ನಿರ್ದಿಷ್ಟ ದಿಕ್ಕಿನಲ್ಲಿ ಸಾಗುವ ಹಂತವನ್ನು ಮೊಬೈಲ್ ಹಂತವೆಂದು ಕರೆಯುತ್ತಾರೆ.ಅದು ದ್ರವ,ಅನಿಲ, ಅಥವ ಸೂಪರ್ಕ್ರಿಟಿಕಲ್ ದ್ರವದ ರೂಪದಲ್ಲಿ ಇರಬಹುದು.ಪೂರ್ವಭಾವಿ ವರ್ಣರೇಖನವನ್ನು ಮುಂದಿನ ಉಪಯೋಗಕ್ಕಾಗಿ ವಸ್ತುಗಳನ್ನು ಶುದ್ಧೀಗೊಲಿಸಲು ಉಪಯೋಗಿಸುತ್ತಾರೆ.ಅನಲೈಟ್ ಸ್ತಂಬದೋಳಗೆ ಮುಂದೆ ಸಾಗಲು ಬೇಕಾದ ಸಮಯವನ್ನು ಧಾರಣ ಸಮಯವೆಂದು ಹೇಳುತ್ತಾರೆ.ವರ್ಣರೇಖನದಲ್ಲಿ ವಿಶ್ಲೇಷಿಸುವ ವಸ್ತುವನ್ನು ಮಾದರಿ ಎಂದು ಹೇಳುತ್ತಾರೆ.ಭಾಗ ವರ್ಣರೇಖನದಲ್ಲಿ ಘಟಕಗಳನ್ನು ದ್ರಾವ್ಯ ಎಂದು ಸೂಚಿಸುತ್ತಾರೆ.ಒಂದು ವಸ್ತುವನ್ನು ಕರಗಿಸಬಹುದಾದ ವಸ್ತುವನ್ನು ದ್ರಾವಕ ಎಂದು ಕರೆಯುತ್ತಾರೆ.ವರ್ಣರೇಖನದ ವಿಧಾನಗಳಲ್ಲಿ ಸ್ಥಿರಗೊಳಿಸಿದ ವಸ್ತುವನ್ನು ಸ್ಥಾಯಿ ಹಂತವೆಂದು ಕರೆಯುತ್ತಾರೆ.ಬೇರ್ಪಡಿಕೆಯ ನಂತರ ವಿಶ್ಲೇಷಣಗಳ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಪತ್ತೆ ತಿಳಿಯಲು ಉಪಯೋಗಿಸುವ ಉಪಕರಣವನ್ನು ಡಿಟೆಕ್ಟರ್ ಎಂದು ಕರೆಯುತ್ತಾರೆ.ವರ್ಣರೇಖನವು ವಿಭಾಗವನ್ನು ಗುಣಾಂಕವೆಂಬ ಪರಿಕಲ್ಪನೆಯ ಮೇಲೆ ಆಧಾರವಾಗಿದೆ. ವಿವಿಧ ರೀತಿಯ ವರ್ಣರೇಖನ ತಂತ್ರಗಳು
ಸ್ತಂಭ ವರ್ಣರೇಖನ
[ಬದಲಾಯಿಸಿ]ಸ್ಥಾಯಿ ಹಂತವು ನಳಿಕೆಯೊಳಗೆ ಇದ್ದರೆ ಈ ರೀತಿಯ ಬೇರ್ಪಡಿಕೆಯ ತಂತ್ರವನ್ನು ಸ್ತಂಭ ವರ್ಣರೇಖನವೆಂದು ಕರೆಯುತ್ತಾರೆ.ಸ್ಥಾಯಿ ಹಂತದಲ್ಲಿರುವ ಕಣಗಳು ನಳಿಕೆಯ ಒಳಭಾಗವನ್ನು ತುಂಬಿಕ್ಕೊಳ್ಳುತ್ತದೆ.೧೯೭೮ರಲ್ಲಿ ಡಬ್ಲ್ಯೂ ಕ್ಲಾರ್ಕ್ ಸ್ಟಿಲ್ರವರು ಸ್ತಂಭ ವರ್ಣರೇಖನದ ಪರಿವರ್ತಿತ ಆವೃತ್ತಿಯನ್ನು ಫ್ಲಾಶ್ ಸ್ತಂಭ ವರ್ಣರೇಖನವೆಂಬ ಹೆಸರಿನಲ್ಲಿ ಪರಿಚಯಿಸಿದರು.ಇದು ಸ್ತಂಭ ವರ್ಣರೇಖನದ ರೀತಿಯಲ್ಲೇ ಇದ್ದರೂ ಕೂಡ ಇದರಲ್ಲಿರುವ ದ್ರಾವಕವನ್ನು ಸ್ತ೦ಭದೊಳಗೆ ಧನಾತ್ಮಕ ಒತ್ತಡದಿಂದ ಸೇರಿಸುತ್ತದೆ.ಗ್ರೇಡಿಯಂಟ್ ಪಂಪುಗಳ ಅಂತರ್ನಿವೇಶನದಿಂದಾಗಿ ಕ್ಷಿಪ್ರವಾಗಿ ವಿಚ್ಛೇದನಗಳು ಹಾಗು ಕಡಿಮೆ ದ್ರಾವಕ ಬಳಕೆಯಾಗಲು ಪ್ರಾರಂಭವಾಯಿತು.ಇದರಿಂದಾಗಿ ವರ್ಣರೇಖನದಲ್ಲಿ ಕೇವಲ ೨೦ನಿಮಿಷಗಳಲ್ಲಿ ಬೇರ್ಪಡಿಕೆಯನ್ನು ಮಾಡುವುದು ಸಾಧ್ಯವಾಯಿತು.
ಸಮತಲೀಯ ವರ್ಣರೇಖನ
[ಬದಲಾಯಿಸಿ]ಸ್ಥಾಯಿ ಹಂತವು ಸಮತಲದಲ್ಲಿದ್ದರೆ ವರ್ಣರೇಖನದಲ್ಲಿ ಈ ರೀತಿಯ ಬೇರ್ಪಡಿಕೆಯ ತಂತ್ರವನ್ನು ಸಮತಲೀಯ ವರ್ಣರೇಖನ ಎಂದು ಹೇಳುತ್ತಾರೆ.ಸಮತಲವು ಕಾಗದವೂ ಆಗಬಹುದು ಘನ ಕಣಗಳ ಪದರವೂ ಆಗಬಹುದು.ಮಿಶ್ರಣದಲ್ಲಿರುವ ಸಂಯುಕ್ತಗಳು ಮೊಬೈಲ್ ಹಂತಕ್ಕಿಂತ ಸ್ಥಾಯಿ ಹಂತಕ್ಕೆ ಯಾವ ರೀತಿ ಪ್ರಬಲವಾಗಿ ಪ್ರತಿಕ್ರಿಯಿಸುತ್ತವೆ ಎಂಬುವುದರ ಮೇಲೆ ಅದರ ವಿವಿಧ ದೂರದಲ್ಲಿ ಪ್ರಯಾಣ ಮಾಡಬಹುದಾದ ಶಕ್ತಿಯನ್ನು ತಿಲಿಯಬಹುದು.
ಕಾಗದ ವರ್ಣರೇಖನ
[ಬದಲಾಯಿಸಿ]ಮಿಶ್ರಣದ ಒಂದಂಶವನ್ನು ವರ್ಣರೇಖನ ಕಾಗದ ಮೇಲಿಟ್ಟು ಮಾಡುವ ವರ್ಣರೇಖನವನ್ನು ಕಾಗದ ವರ್ಣರೇಖನವೆಂದು ಕರೆಯುತ್ತಾರೆ.ಕಾಗದವನ್ನು ಪಾತ್ರೆಯಲ್ಲಿ ಆಳವಿಲ್ಲದ ಪದರದ ಮೇಲಿಟ್ಟು ಮುಚ್ಚಿಡುತ್ತಾರೆ.ಇದಕ್ಕೆ ಉಪಯೋಗಿಸುವ ಕಾಗದವನ್ನು ಸೆಲ್ಯುಲೋಸ್ನಿಂದ ತಯ್ಯಾರಿಕೆಯಾದದ್ದು.ಪೋಲಾರ್ ವಸ್ತುಗಳು ಸೆಲ್ಯುಲೋಸ್ ಕಾಗದದ ಮೇಲೆ ವೇಗವಾಗಿ ಅಂಟಿಕೋಳ್ಳುತ್ತದೆ.ಇದರಿಂದಾಗಿ ಅವುಗಳು ಬಹಳ ದೂರಕ್ಕೆ ಸಂಚರಿಸುವುದಿಲ್ಲ.
ತೆಳುವಾದ ವರ್ಣರೇಖನ
[ಬದಲಾಯಿಸಿ]ತೆಳುವಾದ ವರ್ಣರೇಖನವನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ ಹಾಗು ಅದು ಕಾಗದ ವರ್ಣರೇಖನಕ್ಕೆ ಸಮಾನವಾದದ್ದು.ಆದರೂ ಕೂಡ ಕಾಗದದ ಸ್ಥಾಯಿ ಹಂತವನ್ನು ಉಪಯೋಗಿಸದೆ ಒಂದು ಸಣ್ಣ ಹೊರಹೀರುಗವನ್ನು ಸ್ಥಾಯಿ ಹಂತಕ್ಕಾಗಿ ಉಪಯೋಗಿಸುತ್ತಾರೆ.ಈ ಹೊರಹೀರುಗಗಳಲ್ಲಿ ಮೂಖ್ಯವಾಗಿ ಸಿಲಿಕಾ ಜೆಲ್, ಅಲ್ಯೂಮಿನಿಯ, ಅಥವಾ ಸೆಲ್ಯುಲೋಸ್ ಮುಂತಾದವನ್ನು ಬಳಕೆ ಮಾಡುತ್ತಾರೆ.ಬೇಗವಾಗಿ ಹರಿಯುವುದು,ವಿವಿಧ ಹೊರಹೀರುಗಗಳ ನಡುವೆ ಆಯ್ಕ,ಉತ್ತಮ ವಿಯೋಜನೆಗಳಿರುವುದರಿಂದಾಗಿ ತೆಳುವಾದ ವರ್ಣರೇಖನವು ಕಾಗದ ವರ್ಣರೇಖನಗಿಂತ ಉತ್ತಮವಾದದ್ದು.
ಸ್ಥಳಾಂತರಿಕ ವರ್ಣರೇಖನ
[ಬದಲಾಯಿಸಿ]ಸ್ಥಳಾಂತರಿಕ ವರ್ಣರೇಖನದ ಮೂಲಭೂತ ತತ್ತ್ವವೇನೆಂದರೆ: ವರ್ಣರೇಖನ ವ್ಯೂಹಕ್ಕೆ ಹೆಚ್ಚು ಆಕರ್ಷಣೆಯಿರುವ ಒಂದು ಅಣು ಬಂಧಿಸುವ ಸ್ಥಾನಗಳಿಗಾಗಿ ಸ್ಪರ್ದಿಸಿ ಇದರ ಮೂಲಕ ಕಡಿಮೆ ಆಕರ್ಷಣೆಯಿರುವ ಅಣುಗಳನ್ನು ಸ್ಥಳಾಂತರಿಸುತ್ತದೆ.ಪ್ರೋದ್ಧಾವನ ವರ್ಣರೇಖನಕ್ಕೂ ಸ್ಥಳಾಂತರಿಕ ವರ್ಣರೇಖನಕ್ಕೂ ಸ್ಪಷ್ಟವಾಗಿ ಗೋಚರಿಸುವ ವ್ಯತ್ಯಾಸಗಳಿವೆ.ಪ್ರೋದ್ಧಾವನ ಸ್ಥಿತಿಯಲ್ಲಿ ವಸ್ತುಗಳು ಸ್ತ೦ಭ ಹೊರಹೊಮ್ಮುತ್ತದೆ.
ಅನಿಲ ವರ್ಣರೇಖನ
[ಬದಲಾಯಿಸಿ]ಮೊಬೈಲ್ ಹಂತಕ್ಕೆ ಅನಿಲವನ್ನು ಉಪಯೋಗಿಸಿದರೆ ಈ ರೀತಿಯ ವರ್ಣರೇಖನವನ್ನು ಅನಿಲ ವರ್ಣರೇಖನ ಎಂದು ಕರೆಯುತ್ತಾರೆ.ಘನ ಅಥವಾ ಸ್ನಿಗ್ಧತೆಯ ದ್ರವ ಸ್ಥಾಯಿ ಹಂತ ಮತ್ತು ಮೊಬೈಲ್ ಅನಿಲದ ನಡುವಿರುವ ಅನಲೈಟಿನ ವಿಭಾಗವನ್ನು ಸಮತೋಲನದ ಮೇಲೆ ಅನಿಲ ವರ್ಣರೇಖನ ಆಧಾರಿತವಾಗಿದೆ.
ದ್ರವ ವರ್ಣರೇಖನ
[ಬದಲಾಯಿಸಿ]ಮೊಬೈಲ್ ಹಂತದಲ್ಲಿ ದ್ರವವನ್ನು ಉಪಯೋಗಿಸಿದರೆ ಈ ರೀತಿಯ ವರ್ಣರೇಖನವನ್ನು ದ್ರವ ವರ್ಣರೇಖನ ಎಂದು ಕರೆಯುತ್ತಾರೆ.ಇದನ್ನು ಸ್ತ೦ಭದಲ್ಲಾದರೂ ಸಮತಲದಲ್ಲಾದರೂ ನಾವು ಮಾಡಬಹುದು.ಈಗಿನ ಕಾಲದ ದ್ರವ ವರ್ಣರೇಖನದಲ್ಲಿ ಚಿಕ್ಕ ಪ್ಯಾಕಿಂಗ್ ಕಣಗಳನ್ನು ಹಾಗು ತುಲನಾತ್ಮಕವಾಗಿ ಅಧಿಕ ಒತ್ತಡವನ್ನು ಉಪಯೋಗಿಸುತ್ತಾರೆ.ಇದನ್ನು ಉನ್ನತ ಕಾರ್ಯಕ್ಷಮತೆಯ ದ್ರವ ವರ್ಣರೇಖನ ಎಂದು ಕರೆಯುತ್ತಾರೆ.