ವಯನಾಡು
ವಯನಾಡು (ಮಲಯಾಳಂ: വയനാട്) ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಮುಖ ಪ್ರವಾಸಿತಾಣ. ತನ್ನ ಶುಭ್ರ ಪರಿಸರವನ್ನುಳಿಸಿಕೊಂಡಿರುವ ಕೇರಳದ ಕೆಲವೇ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಾಗರಿಕತೆಯನ್ನೇ ಕಾಣದ ಕೆಲ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂಬಲಕುತಿಮಲ ಮತ್ತು ಎಡಕ್ಕಲ್ಲಿನ ಕೆಳಬೆಟ್ಟಗಳಲ್ಲಿ ಪೂರ್ವೇತಿಹಾಸದ ಕಾಲದ ಮೊಟ್ಟಮೊದಲಿನ ಕೆತ್ತನೆಗಳು ದೊರಕಿವೆ.
ಪ್ರಮುಖ ಪ್ರವಾಸಿ ತಾಣಗಳು[ಬದಲಾಯಿಸಿ]
- ಚೆಂಬ್ರ ಶಿಖರ - ಚಾರಣಕ್ಕೆ ಸೂಕ್ತವಾದದ್ದು.
- ಎಡಕಲ್ಲು ಗುಡ್ಡ ಅಥವಾ ಎಡಕಲ್ಲು ಗುಹೆ - ಇಲ್ಲಿ ೧೦೦೦ ಮೀಟರ್ ಎತ್ತರದ ಗುಡ್ಡದ ಮೇಲೆ ಮೂರು ಗುಹೆಗಳು ಒಟ್ಟಾಗಿವೆ. ಮಧ್ಯಪ್ರಾಚೀನ ಶಿಲಾಯುಗದ ನಾಗರೀಕತೆಯ ಕುರುಹಾಗಿ ಈ ಗುಹೆಗಳ ಗೋಡೆಗಳ ಮೇಲೆ ಅನೇಕ ಕೆತ್ತನೆಗಳನ್ನು ಕಾಣಬಹುದು. ಇದನ್ನು ತಲುಪಲು ೧ ಕಿ.ಮೀ ಎತ್ತರದ ಗುಡ್ಡ ಹತ್ತಬೇಕಾಗುತ್ತದೆ.
- ಸುಲ್ತಾನ್ ಬತೇರಿ - ಟಿಪ್ಪುವಿನ ಕೋಟೆ ಎಂದೂ ಪ್ರಸಿದ್ಢ . ಇಲ್ಲಿ ಒಂದು ಹಳೆಯ ಜೈನ ದೇವಾಲಯವಿದೆ. ಟಿಪ್ಪು ಸುಲ್ತಾನನು ಇಲ್ಲಿ ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ.
- ಮೀನುಮುಟ್ಟಿ ಜಲಪಾತ - ಇದನ್ನು ೨ ಕಿ.ಮೀ ಚಾರಣ ಹಾದಿಯ ಮೂಲಕ ತಲುಪಬೇಕು. ಇದು ವಯನಾಡ್ ಜಿಲ್ಲೆಯ ಅತಿ ದೊಡ್ಡ ಜಲಪಾತವಾಗಿದ್ದು, ೩೦೦ ಮೀಟರ್ ಎತ್ತರದಿಂದ ಮೂರು ಹಂತಗಳಲ್ಲಿ ಬೀಳುತ್ತದೆ.
- ಬಾಣಾಸುರಸಾಗರ ಅಣೆಕಟ್ಟು - ಬಾಣಾಸುರಸಾಗರದಲ್ಲಿರುವ ಅಣೆಕಟ್ಟನ್ನು ಭಾರತದಲ್ಲಿಯೇ ಅತಿದೊಡ್ಡ ಮಣ್ಣಿನ ಅಣೆಕಟ್ಟೆಂದು ಪರಿಗಣಿಸಲಾಗಿದೆ.
- ಪೂಕೋಟೆ ಅಥವಾ ಪೂಕೊಡೆ ಸರೋವರ - ಇದೊಂದು ಪ್ರಾಕೃತಿಕ ಸಿಹಿನೀರಿನ ಸರೋವರ. ವನಭೋಜನಕ್ಕೆ (ಪಿಕ್ನಿಕ್) ಗೆ ಹೇಳಿ ಮಾಡಿಸಿದ ತಾಣ.
ಪರಿಶೀಲಿಸಿದ ಕೊಂಡಿಗಳು[ಬದಲಾಯಿಸಿ]

Wayanad district ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.