ವಚನಕಾರರ ಅಂಕಿತ ನಾಮಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೨ ನೆಯ ಶತಮಾನದ ಮೂಲ ವಚನಕಾರರಿಂದಿಡಿದು, ೨೦ನೇ ಶತಮಾನದ ವಚನಕಾರರವರೆಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ವಚನಗಳನ್ನು ರಚಿಸಿ,ಹಲವಾರು ಅಂಕಿತನಾಮಗಳಿಂದ ಗುರುತಿಸಿಕೊಂಡಿದ್ದಾರೆ. ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ವಚನಕಾರರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ.

ಕ್ರಮ ಸಂಖ್ಯೆ ವಚನಕಾರರ ಹೆಸರು ಅಂಕಿತನಾಮ
ಜೇಡರ ದಾಸಿಮಯ್ಯ ರಾಮನಾಥ
ಅಲ್ಲಮಪ್ರಭು ಗುಹೇಶ್ವರ
ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ
ಬಸವಣ್ಣ ಕೂಡಲ ಸಂಗಮದೇವ
ಮುಕ್ತಾಯಕ್ಕ ಅಜಗಣ್ಣ
ಚೆನ್ನಬಸವಣ್ಣ ಕೂಡಲ ಚೆನ್ನಸಂಗಯ್ಯ
ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ
ಮಡಿವಾಳ ಮಾಚಯ್ಯ ಕಲಿದೇವರದೇವ
ಗಂಗಾಂಬಿಕೆ ಗಂಗಾಪ್ರಿಯ ಕೂಡಲ ಸಂಗಮದೇವ
೧೦ ನೀಲಾಂಬಿಕೆ/ನೀಲಲೋಚನೆ ಸಂಗಯ್ಯ
೧೧ ಆದಯ್ಯ ಸೌರಾಷ್ಟ್ರ ಸೋಮೇಶ್ವರ
೧೨ ಡೋಹಾರ ಕಕ್ಕಯ್ಯ ಅಭಿನವ ಮಲ್ಲಿಕಾರ್ಜುನ
೧೩ ಮೋಳಿಗೆ ಮಾರಯ್ಯ ನಿಃಕಳಂಕ ಮಲ್ಲಿಕಾರ್ಜುನ
೧೪ ಸೊನ್ನಲಿಗೆ ಸಿದ್ದರಾಮ ಕಪಿಲಸಿದ್ದ ಮಲ್ಲಿಕಾರ್ಜುನ
೧೫ ಮಧುವಯ್ಯ ಅರ್ಕೇಶ್ವರಲಿಂಗ
೧೬ ಅಮುಗೆ ರಾಯಮ್ಮ ಅಮುಗೇಶ್ವರ
೧೭ ನೀಲಮ್ಮ ಬಸವ
೧೮ ಅಕ್ಕಮ್ಮ ರಾಮೇಶ್ವರ ಲಿಂಗ
೧೯ ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಭೀಮೇಶ್ವರಾ
೨೦ ಸೂಳೆ ಸಂಕವ್ವ ನಿರ್ಲಜ್ಜೇಶ್ವರ
೨೧ ಕದಿರ ಕಾಯಕದ ಕಾಳವ್ವೆ ಗುಮ್ಮೇಶ್ವರ
೨೨ ರೇಮಮ್ಮೆ ನಿರಂಗಲಿಂಗ
೨೩ ಗುಡ್ಡವ್ವೆ ನಿಂಬೇಶ್ವರಾ
೨೪ ವೀರಮ್ಮ ಶಾಂತೇಶ್ವರ ಪ್ರಭುವೇ
೨೫ ಬಾಚಿಕಾಯಕದ ಕಾಳವ್ವೆ ಕರ್ಮಹರ ಕಾಳೇಶ್ವರಾ
೨೬ ಕೇತಲದೇವಿ ಕುಂಬೇಶ್ವರ
೨೭ ರೇಚವ್ವೆ ನಿಜಶಾಂತೇಶ್ವರ
೨೮ ಕಾಮಮ್ಮ ನಿರ್ಭೀತಿ ನಿಜಲಿಂಗದಲ್ಲಿ
೨೯ ಲಕ್ಷ್ಮಮ್ಮ ಅಗಜೇಶ್ವರಲಿಂಗವು
೩೦ ಗಂಗಮ್ಮ ಗಂಗೇಶ್ವರಲಿಂಗದಲ್ಲಿ
೩೧ ಮಸಣಮ್ಮ ನಿಜಗುಣೇಶ್ವರಲಿಂಗದಲ್ಲಿ
೩೨ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಉರಿಲಿಂಗ ಪೆದ್ದಿಗಳರಸ
೩೩ ರೇಕಮ್ಮ ಶ್ರೀ ಗುರು ಸಿದ್ದೇಶ್ವರ
೩೪ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಮಸಣಯ್ಯಪ್ರಿಯ ಗಜೇಶ್ವರಾ
೩೫ ಕದಿರ ರೆಮ್ಮವ್ವೆ ರೆಮ್ಮಿಯೊಡೆಯ ಗುಮ್ಮೇಶ್ವರಾ
೩೬ ಗೊಗ್ಗವ್ವೆ ನಾಸ್ತಿನಾಥ
೩೭ ಅಕ್ಕನಾಗಮ್ಮ ಸಂಗನ ಬಸವಣ್ಣ
೩೮ ಸತ್ಯಕ್ಕ ಶಂಭುಜಕೇಶ್ವರಾ
೩೯ ಮೋಳಿಗೆ ಮಹಾದೇವಿ ನಿಃಕಳಂಕ ಮಲ್ಲಿಕಾರ್ಜುನಲಿಂಗ
೪೦ ಲಿಂಗಮ್ಮ ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
೪೧ ನಿಜಗುಣ ಶಿವಯೋಗಿ ಶಂಭುಲಿಂಗ
೪೨ ಶ್ರೀಜಯಚಾಮರಾಜೇಂದ್ರ ಒಡೆಯರ್ ಶ್ರೀ ವಿದ್ಯಾ
೪೩ ಡಾ.ಪುಟ್ಟರಾಜ ಕವಿ ಗವಾಯಿಗಳು ಗುರು ಕುಮಾರ ಪಂಚಾಕ್ಷರೇಶ್ವರ
೪೪ ಶ್ರಿ ಆದಿತ್ಯ ಪಾಳೇಗಾರ ಆತ್ಮಲಿಂಗ

.

ಗ್ರಂಥ ಋಣ[ಬದಲಾಯಿಸಿ]

  • ಶಿವಶರಣೆಯರ ವಚನಗಳು ಸಮಗ್ರ ಸಂಪುಟ - ಡಾ.ಆರ್.ಸಿ. ಹಿರೇಮಠ್
  • ಸ್ಪರ್ಧಾ ಚೈತ್ರ - ಪ್ರಧಾನ ಸಂಪಾದಕರು-ಬಿ.ಎಸ್. ವಸಂತಕುಮಾರ್

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]