ಲೌರಿಯಾ ನಂದನ್ಗಢ್
ಲೌರಿಯಾ ನಂದನ್‌ಗಢ್ (ಅಥವಾ ಲೌರಿಯಾ ನವಂದ್‌ಗಢ್) ಉತ್ತರ ಭಾರತದ ಬಿಹಾರ ರಾಜ್ಯದ ಪಶ್ಚಿಮ ಚಂಪಾರನ್ ಜಿಲ್ಲೆಯಲ್ಲಿರುವ ನಗರ ಅಥವಾ ಪಟ್ಟಣವಾಗಿದೆ.[೧] ಇದು ಬುರ್ಹಿ ಗಂಡಕ್ ನದಿಯ ದಡದ ಹತ್ತಿರ ಸ್ಥಿತವಾಗಿದೆ . ಇಲ್ಲಿ ನಿಂತಿರುವ ಅಶೋಕನ ಒಂದು ಸ್ತಂಭದಿಂದ (ಲೌರ್) ಮತ್ತು ಸ್ತೂಪ ದಿಬ್ಬ ನಂದನ್‌ಗಢ್‍ನಿಂದ ಈ ಗ್ರಾಮವು ತನ್ನ ಹೆಸರನ್ನು ಪಡೆದುಕೊಂಡಿದೆ. ಇದು ಒಂದು ಐತಿಹಾಸಿಕ ತಾಣವಾಗಿದೆ. ಮೌರ್ಯರ ಕಾಲದ ಅವಶೇಷಗಳು ಇಲ್ಲಿ ಕಂಡುಬಂದಿವೆ.
ಲೌರಿಯಾ ಮೂರು ಸಾಲುಗಳಲ್ಲಿ 15 ಸ್ತೂಪ ದಿಬ್ಬಗಳನ್ನು ಹೊಂದಿದ್ದು, ಪ್ರತಿ ಸಾಲು 600 ಮೀ ಗಿಂತ ಎತ್ತರವಿದೆ; ಮೊದಲ ಸಾಲು ಸ್ತಂಭದ ಬಳಿ ಪ್ರಾರಂಭವಾಗಿ ಪೂರ್ವದಿಂದ ಪಶ್ಚಿಮಕ್ಕೆ ಹೋಗುತ್ತದೆ, ಆದರೆ ಇತರ ಎರಡು ಸಾಲುಗಳು ಅದಕ್ಕೆ ಲಂಬ ಕೋನಗಳಲ್ಲಿವೆ ಮತ್ತು ಪರಸ್ಪರ ಸಮಾನಾಂತರವಾಗಿವೆ. [೧]
ಅಶೋಕನ ಕಂಬ
[ಬದಲಾಯಿಸಿ]ಹಳ್ಳಿಯಿಂದ ಅರ್ಧ ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿ ಮತ್ತು ದಿಬ್ಬದಿಂದ 2 ಕಿ.ಮೀ ದೂರದಲ್ಲಿ ಅಶೋಕನ ಪ್ರಸಿದ್ಧ ಸ್ತಂಭವಿದೆ.[೨] ಇದು 32 ಅಡಿಗಿಂತ(10 ಮೀ) ಹೆಚ್ಚು ಎತ್ತರವಿರುವ ನಯಗೊಳಿಸಿದ ಮರಳುಗಲ್ಲಿನ ಒಂದೇ ಖಂಡವಾಗಿದೆ. ಮೇಲ್ಭಾಗವು ಗಂಟೆಯಾಕಾರವಿದ್ದು ಅಲಂಕೃತ ಬ್ರಾಹ್ಮಿ ಹೆಬ್ಬಾತುಗಳುಳ್ಳ ವೃತ್ತಾಕಾರದ ಅಬ್ಯಾಕಸ್‍ನೊಂದಿಗೆ ಇದ್ದು ಸಿಂಹದ ಪ್ರತಿಮೆಗೆ ಆಧಾರ ಒದಗಿಸುತ್ತದೆ.[೩]
-
1911 ರಲ್ಲಿ ಛಾಯಾಚಿತ್ರವನ್ನು ತೆಗೆಯಲಾಗಿದೆ.
-
ಶಾಸನಗಳ ನಿಕಟ ನೋಟ.
-
ಶಾಸನಗಳು.
-
ಶಾಸನಗಳು.
-
ಸಿಂಹದ ಮುಂಭಾಗದ ನಿಕಟದರ್ಶನ (ದವಡೆಗಳು ಮುರಿದುಹೋಗಿವೆ). ಅಬ್ಯಾಕಸ್ನ ಹೆಬ್ಬಾತುಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Archaeological Survey Of India; Excavations - Important - Bihar". Archaeological Survey of India. Archived from the original on 8 December 2016. Retrieved 2011-01-01.
- ↑ Vishnu, Asha (1993). Material Life of Northern India: Based on an Archaeological Study, 3rd Century B.C. to 1st Century B.C. (in ಇಂಗ್ಲಿಷ್). Mittal Publications. p. 175. ISBN 9788170994107.
- ↑ "Lauria Nandangarh". Retrieved 2006-09-09.