ವಿಷಯಕ್ಕೆ ಹೋಗು

ಲೋಗೋ (ಪ್ರೋಗ್ರಾಮ್ಮಿಂಗ್ ಭಾಷೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೋಗೋ ಒಂದು ಶೈಕ್ಷಣಿಕ ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ ಭಾಷೆ. ಇದನ್ನು ೧೯೬೭ರಲ್ಲಿ ವಾಲ್ಲಿ ಫ್ಯೂರ್ಝೀಗ್, ಸೇಮೂರ್ ಪೇಪರ್ಟ್ ಮತ್ತು ಸಿಂತಿಯಾ ಸೋಲೊಮನ್ ಅವರು ವಿನ್ಯಾಸ ಮಾಡಿದರು.[೧]

ಲೋಗೋವು ಒಂದು ಸಾಮಾನ್ಯ ಹಾಗೂ ಬಹೂಪಯೋಗಿ ಪ್ರೋಗ್ರಾಮ್ಮಿಂಗ್ ಭಾಷೆಯಾಗಿದೆ. ಇದರಲ್ಲಿ ಒಂದು ತ್ರಿಕೋನಾಕಾರದ ಸೂಚಕವು ನಾವು ನೀಡಿದ ಆದೇಶದ ಪ್ರಕಾರ ಪರದೆಯ ಮೇಲೆ ಚಲಿಸುತ್ತದೆ. ಈ ಸೂಚಕಕ್ಕೆ ಇಂಗ್ಲಿಶ್ ಭಾಷೆಯಲ್ಲಿ turtle ಅಂದರೆ ಆಮೆ ಎಂಬ ಪದವನ್ನು ಬಳಸುತ್ತಾರೆ. ಅಂತೆಯೇ ಲೋಗೋಗೆ turtle graphics ಎಂಬ ಹೆಸರೂ ಇದೆ. ಈ ಸೂಚಕವು ಆದೇಶದ ಪರಕಾರ ಮುಂದೆ, ಹಿಂದೆ, ಬಲ, ಎಡ, ಇತ್ಯಾದಿ ಚಲನೆಗಳನ್ನು ಮಾಡಬಲ್ಲುದು. ಜೊತೆಗೆ ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ ಭಾಷೆಗಳ ಎಲ್ಲ ಗುಣವೈಶಿಷ್ಟ್ಯಗಳನ್ನೂ ಈ ಲೋಗೋ ಭಾಷೆಯು ಒಳಗೊಂಡಿದೆ.

ಲೋಗೋ ಪ್ರಾಗ್ರಾಮ್ಮಿಂಗ್ ಭಾಷೆಯು Lisp (ಲಿಸ್ಪ್) ಎಂಬ ಇನ್ನೊಂದು ಪ್ರೋಗ್ರಾಮ್ಮಿಂಗ್ ಭಾಷೆಯಿಂದ ವ್ಯುತ್ಪತ್ತಿಯಾಗಿದೆ. ಬೇರೆ ಬೇರೆ ಜನರು ಮತ್ತು ಸಂಸ್ಥೆಗಳು ಲೋಗೋದ ಹಲವು ಆವೃತ್ತಿಗಳನ್ನು ತಯಾರಿಸಿದ್ದಾರೆ. ಲೋಗೋಗೆ ಯಾವುದೇ ಅಂತಾರಾಷ್ಟ್ರೀಯ ಶಿಷ್ಟತೆ ಎಂಬುದಿಲ್ಲ. ಆದರೂ ಯುಸಿಬಿಲೋಗೋವು ಹೆಚ್ಚು ಜನಪ್ರಿಯ ಹಾಗೂ ಪ್ರಚಲಿತವಾಗಿದೆ. ಲೋಗೋ ಭಾಷೆಯಲ್ಲಿ ಕಂಪ್ಯೂಟರ್ ಪ್ರತಿಯೊಂದು ಸಾಲನ್ನೂ ಒಂದಾದ ನಂತರ ಒಂದರಂತೆ ಓದಿ ತಕ್ಷಣ ಅದರಲ್ಲಿಯ ಆದೇಶದ ಪ್ರಕಾರ ಕೆಲಸ ಮಾಡುತ್ತದೆ.

ಇತಿಹಾಸ[ಬದಲಾಯಿಸಿ]

ಲೋಗೋವನ್ನು ೧೯೬೭ರಲ್ಲಿ ಕೇಂಬ್ರಿಜ್‍ನಲ್ಲಿ ವಾಲ್ಲಿ ಫ್ಯೂರ್ಝೀಗ್, ಸೇಮೂರ್ ಪೇಪರ್ಟ್ ಮತ್ತು ಸಿಂತಿಯಾ ಸೋಲೊಮನ್ ಅವರು ತಯಾರು ಮಾಡಿದರು. ಲೋಗೋ ತಯಾರಿ, ಶಿಕ್ಷಣ ಮತ್ತು ಸಂಶೋಧನೆಯ ಮೊದಲ ನಾಲ್ಕು ವರ್ಷಗಳನ್ನು ಬಿಬಿಎನ್ ಟೆಕ್ನೋಲೋಜೀಸ್ ಎಂಬ ಕಂಪೆನಿಯಲ್ಲಿ ಮಾಡಲಾಯಿತು. ಲೋಗೋದ ಪ್ರಪ್ರಥಮ ಆವೃತ್ತಿಯನ್ನು ಪಿಡಿಪಿ-೧ ಕಪ್ಯೂಟರ್‍ನಲ್ಲಿ ಲಿಸ್ಪ್ ಭಾಷೆಯನ್ನು ಬಳಸಿ ತಯಾರಿಸಲಾಯಿತು. ಅದರ ಉದ್ದೇಶ ಮಕ್ಕಳಿಗೆ ಗಣಿತ ಮತ್ತು ಪ್ರೋಗ್ರಾಮ್ಮಿಂಗ್‌ನ ಪ್ರಾಥಮಿಕ ಸಿದ್ಧಾಂತಗಳನ್ನು ಹೇಳಿಕೊಡುವುದಾಗಿತ್ತು.[೨]

೧೯೬೯ರಲ್ಲಿ ಮೊಟ್ಟಮೊದಲ ಲೋಗೋ ರೋಬಾಟ್ ತಯಾರಾಯಿತು. ಇದು ಪರದೆಯ ಬದಲಿಗೆ ನೆಲದಲ್ಲಿ ಓಡಾಡುವ ಚಿಕ್ಕ ಯಂತ್ರವಾಗಿತ್ತು. ಕಂಪ್ಯೂಟರ್‍ಗಳಿಗೆ ಪರದೆಗಳು ಬಂದ ನಂತರ ಈ ಯಂತ್ರದ ಬದಲಿಗೆ ಪರದೆಯಲ್ಲಿ ಓಡಾಡುವ ಸೂಚಕ ಬಂತು.

ಗ್ರಾಫಿಕ್ಸ್[ಬದಲಾಯಿಸಿ]

ಲೋಗೋದಲ್ಲಿ ಪ್ರಮುಖವಾಗಿರುವುದು ಗ್ರಾಫಿಕ್ಸ್. ಪರದೆಯಲ್ಲಿ ಕಾಣಿಸುವ ಸೂಚಕವನ್ನು ಬೇರೆ ಬೇರೆ ಆದೇಶಗಳು ಮೂಲಕ ಬೇರೆ ಬೇರೆ ರೀತಯಲ್ಲಿ ಚಲಾಯಿಸಬಹುದು. ಸೂಚಕ ಹೀಗೆ ಚಲಿಸುತ್ತನ ಹಲವು ವಿನ್ಯಾಸಗಳ ಚಿತ್ರಗಳನ್ನು ಪರದೆಯಲ್ಲಿ ಮೂಡಿಸಬಲ್ಲುದು. ಇವೆಲ್ ಮೂಲತಃ ನೆಲದಲ್ಲಿ ಓಡಾಡುವ ಯಂತ್ರವು ಒಂದು ಪೆನ್ನನ್ನು ಧರಿಸಿ ಕಾಗದದ ಮೇಲೆ ಬಿಡಿಸುತ್ತಿದ್ದ ಚಿತ್ರಗಳಾಗಿದ್ದವು. ಕಂಪ್ಯೂಟರ್‍ಗೆ ಪರದೆಗಳು ಬಂದ ನಂತರ ಈ ಯಂತ್ರ ಇಲ್ಲವಾಯಿತು.

ಪ್ರೋಗ್ರಾಮ್ಮಿಂಗ್‍ನ ಮೂಲ ತತ್ತ್ವಗಳು[ಬದಲಾಯಿಸಿ]

ಲೋಗೋ ಒಂದು ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ ಭಾಷೆ. ಅಂದರೆ ಪ್ರೋಗ್ರಾಮ್ಮಿಂಗ್ ಭಾಷೆಯಲ್ಲಿ ಇರಬೇಕಾದ ಎಲ್ಲ ಗುಣವೈಶಿಷ್ಟ್ಯಗಳು ಅದರಲ್ಲಿವೆ. ಸ್ಥಿರ ಮೊತ್ತ (constant), ಬದಲಿಕ (variable), function or procedure, ಇವೆಲ್ಲ ಅದರಲ್ಲಿವೆ. ಕೆಲವು ಉದಾಹರಣೆಗಳು

ಮುಂದೆ ೧೦೦ - ೧೦೦ ಹೆಜ್ಜೆ ಮುಂದೆ ಹೋಗು
ಬಲ ೯೦  - ೯೦ ಡಿಗ್ರಿಗಳಷ್ಟು ಬಲಕ್ಕೆ ತಿರುಗು
..
ಚೌಕ ೫೦  - ೫೦ ಹೆಜ್ಜೆಯಷ್ಟು ದೊಡ್ಡ ಚೌಕವನ್ನು ರಚಿಸು

ಆವೃತ್ತಿಗಳು[ಬದಲಾಯಿಸಿ]

ಕನ್ನಡ ಲೋಗೋದ ಸ್ಕ್ರೀನ್‍ಶಾಟ್

ಹಲವು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಕಂಪೆನಿಗಳು ಲೋಗೋದ ಬೇರೆ ಬೇರೆ ಆವೃತ್ತಿಗಳನ್ನು ತಯಾರಿಸಿದ್ದಾರೆ. ಅವುಗಳಲ್ಲಿ ಕೆಲವು ಪ್ರಮುಖವಾದವು-

ಉಲ್ಲೇಖಗಳು[ಬದಲಾಯಿಸಿ]

  1. Abelson, Hal; Goodman, Nat (December 1974). "LOGO Manual". Artificial Intelligence Lab, Massachusetts Institute of Technology.
  2. "ಆರ್ಕೈವ್ ನಕಲು". Archived from the original on 2011-12-07. Retrieved 2017-10-01.
  3. ಎಂಎ‌ಸ್‍ಡಬ್ಲ್ಯುಲೋಗೋ ಜಾಲತಾಣ
  4. "ಕನ್ನಡ ಲೋಗೋದ ಜಾಲತಾಣ". Archived from the original on 2020-04-29. Retrieved 2017-10-01.