ಲೆಮನ್ ಟಾರ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಮನ್ ಟಾರ್ಟ್ ಟಾರ್ಟ್‍ನ ವಿಧವಾದ ಒಂದು ಡೆಜ಼ರ್ಟ್ ಖಾದ್ಯ. ಅದು ನಿಂಬೆ ಪರಿಮಳದ ಹೂರಣದ ಜೊತೆಗಿನ ಒಂದು ಪೇಸ್ಟ್ರಿ ಹೊದಿಕೆಯನ್ನು ಹೊಂದಿರುತ್ತದೆ. ಯು.ಕೆ.ಯಲ್ಲಿ, ಲೆಮನ್ ಟಾರ್ಟ್ ಬೇಕ್ ಮಾಡಿದ (ಸಾಮಾನ್ಯವಾಗಿ ಮೊಟ್ಟೆಗಳು, ಸಕ್ಕರೆ, ನಿಂಬೆ ರಸ ಮತ್ತು ಕೆನೆಯಿಂದ ಮಾಡಲ್ಪಟ್ಟ) ನಿಂಬೆ ಕಸ್ಟರ್ಡ್ಅನ್ನು ಹೊಂದಿರುವ (ಹಲವುವೇಳೆ ಕೊಳವೆಯಾಕಾರದ ಟಾರ್ಟ್ ಡಬ್ಬಿಯಲ್ಲಿ ತಯಾರಿಸಲಾದ) ಒಂದು ಪೇಸ್ಟ್ರಿ ಗೂಡನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ಟಾರ್ಟ್ಅನ್ನು ಬಡಿಸುವ ಮುನ್ನ ಐಸಿಂಗ್ ಸಕ್ಕರೆಯಿಂದ ಸಿಂಪಡಿಸಲಾಗುತ್ತದೆ.