ವಿಷಯಕ್ಕೆ ಹೋಗು

ಲೆಕ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಕ್ಕ ಬರಹದಲ್ಲಿ, ಲೆಕ್ಕ ಪದವು ಸ್ವತ್ತುಗಳು, ಸಾಲಸೋಲಗಳು, ಆದಾಯ, ಖರ್ಚುಗಳು ಮತ್ತು ಸ್ವಾಮ್ಯವನ್ನು ಸೂಚಿಸುತ್ತದೆ. ಇದನ್ನು ಪ್ರತ್ಯೇಕವಾದ ಖಾತೆ ಪುಸ್ತಕದ ಪುಟಗಳಿಂದ ನಿರೂಪಿಸಲಾಗುತ್ತದೆ ಮತ್ತು ಇದಕ್ಕೆ ಮಾಡುವ ಮೌಲ್ಯದಲ್ಲಿನ ಬದಲಾವಣೆಗಳನ್ನು ಖರ್ಚು ಮತ್ತು ಜಮಾ ನಮೂದುಗಳಿಂದ ಕಾಲಾನುಸಾರವಾಗಿ ದಾಖಲಿಸಲಾಗುತ್ತದೆ. ಪೋಸ್ಟಿಂಗ್‍ಗಳು ಎಂದು ಸೂಚಿಸಲಾದ ಈ ನಮೂದುಗಳು ಅಂತಿಮ ನಮೂದಿನ ಪುಸ್ತಕ ಅಥವಾ ಖಾತೆ ಪುಸ್ತಕದ ಭಾಗವಾಗುತ್ತವೆ. ಸಾಮಾನ್ಯ ಹಣಕಾಸು ಲೆಕ್ಕಗಳ ಉದಾಹರಣೆಗಳೆಂದರೆ ಮಾರಾಟಗಳು, ಪ್ರಾಪ್ಯ ಖಾತೆಗಳು, ಅಡಮಾನ ಸಾಲಗಳು, ಸಾಲಗಳು, ಪಿಪಿ ಮತ್ತು ಇ, ಸಾಮಾನ್ಯ ಷೇರುಗಳು, ಸೇವೆಗಳು, ಕೂಲಿಗಳು ಮತ್ತು ವೇತನಪಟ್ಟಿ.

ಅಂತಹ ಮಾಹಿತಿಯನ್ನು ದಾಖಲಿಸುವ, ಪರಿಶೀಲಿಸುವ ಮತ್ತು ವರದಿ ಮಾಡುವ ವ್ಯವಸ್ಥೆಯನ್ನು ಲೆಕ್ಕಪತ್ರ ನಿರ್ವಹಣೆ ಎಂದು ಕರೆಯಲಾಗುತ್ತದೆ. ಲೆಕ್ಕಪತ್ರ ನಿರ್ವಹಣೆಯ ವೃತ್ತಿಗಾರರರನ್ನು ಲೆಕ್ಕಿಗರೆಂದು ಕರೆಯಲಾಗುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. John Downes, Jordon Elliot Goodman, Lucas Pacioli Dictionary of Finance and Investment Terms 1995 Barron Fourth Edition ISBN 0-8120-9035-7 page 3
"https://kn.wikipedia.org/w/index.php?title=ಲೆಕ್ಕ&oldid=988054" ಇಂದ ಪಡೆಯಲ್ಪಟ್ಟಿದೆ