ವಿಷಯಕ್ಕೆ ಹೋಗು

ಲೂಯಿಸಾ ಮೇ ಆಲ್ಕಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೂಯಿಸಾ ಮೇ ಆಲ್ಕಾಟ್
ಲೂಯಿಸಾ ಮೇ ಆಲ್ಕಾಟ್ ತನ್ನ ೨೫ನೆಯ ವಯಸ್ಸಿನಲ್ಲಿ
ಜನನ(೧೮೩೨-೧೧-೨೯)೨೯ ನವೆಂಬರ್ ೧೮೩೨
Germantown, Pennsylvania, United States
ಮರಣMarch 6, 1888(1888-03-06) (aged 55)
Boston, Massachusetts, United States
ಕಾವ್ಯನಾಮಎ.ಎಂ.ಬರ್ನಾರ್ಡ್
ವೃತ್ತಿNovelist[]
ರಾಷ್ಟ್ರೀಯತೆಅಮೆರಿಕನ್
ಕಾಲCivil War
ಪ್ರಕಾರ/ಶೈಲಿಗದ್ಯ, ಪದ್ಯ
ವಿಷಯYoung Adult stories
ಪ್ರಮುಖ ಕೆಲಸ(ಗಳು)Little Women


ಪ್ರಭಾವಿತರು

ಸಹಿ

ಲೂಯಿಸಾ ಮೇ ಆಲ್ಕಾಟ್ (ನವಂಬರ್ 29, 1832 –ಮಾರ್ಚ್ 6, 1888) ಮಕ್ಕಳಿಗಾಗಿ ಬಲು ಒಳ್ಳೆಯ ಕಥೆ ಕಾದಂಬರಿಗಳನ್ನು ರಚಿಸಿರುವ ಅಮೆರಿಕದ ಬರೆಹಗಾರ್ತಿ. ತಂದೆ ಬಡ ಅಧ್ಯಾಪಕನಾಗಿದ್ದ ಕಾರಣ ಸಂಸಾರದ ಜವಾಬ್ದಾರಿಯೆಲ್ಲ ಈಕೆಯ ಮೇಲೆ ಬಿತ್ತು. ಚಿಕ್ಕವಳಿರುವಾಗಲೇ ಬೊಂಬೆಗಳಿಗೆ ಬಟ್ಟೆ ಹೊಲಿದು ಹಣ ಸಂಪಾದಿಸುತ್ತಿದ್ದಳು. ಮನಸ್ಸಿಲ್ಲದಿದ್ದರೂ ನೇಯ್ಗೆ ಶಾಲೆಗೆ ಸೇರಿ ದುಡಿದಳು. ಅವಳ ಈ ಎಲ್ಲ ಅನುಭವಗಳೂ ಆಕೆಯ ಪುಸ್ತಕಗಳಲ್ಲಿ ಪ್ರತಿಫಲಿತವಾಗಿವೆ. ಅಮೆರಿಕದ ಪ್ರಸಿದ್ಧ ತತ್ತ್ವವೇತ್ತರೂ ಸಾಹಿತಿಗಳೂ ಆದ ರಾಲ್ಫ ವಾಲ್ಡೊ ಎಮರ್ಸನ್ ಮತ್ತು ಹೆನ್ರಿ ಡೇವಿಡ್ ಥೋರೊ ಈಕೆಯ ಸ್ನೇಹಿತರು. ಅವರ ಜೀವನದ ನಿಷ್ಠೆ, ಧ್ಯೇಯಗಳೂ ಈಕೆಯ ಬರೆಹ ಮತ್ತು ಬಾಳನ್ನು ತಿದ್ದಿದುವು. ಫ್ಲವರ್ ಫೇಬಲ್ಸ್ (1855) ಮೊದಲ ಕಥಾಸಂಕಲನ, ಎಲ್ಲವನ್ನೂ ಎಮರ್ಸನ್ನನ ಮಗಳಿಗೆ ಹೇಳಿದಂತೆ ರಚಿಸಲಾಗಿದೆ. ಈ ಪುಸ್ತಕದಿಂದ ಕರ್ತೃವಿಗೆ ಸಾಕಷ್ಟು ಹೆಸರಾಗಲೀ ಹಣವಾಗಲೀ ಸಿಗಲಿಲ್ಲ. ಅಮೆರಿಕದ ಅಂತರ್ಯುದ್ಧ ಕಾಲದಲ್ಲಿ ಆಲ್ಕಾಟ್ ದಾದಿಯಾಗಿ ಕೆಲಸಮಾಡಿದಳು. ಆಸ್ಪತ್ರೆಗಳ ಅಶುದ್ಧ ವಾತಾವರಣದಿಂದಾಗಿ ಟೈಫಾಯಿಡ್ ಜ್ವರಕ್ಕೆ ತುತ್ತಾಗಿ ಬಲುಬೇಗ ಕೆಲಸ ಬಿಡಬೇಕಾಗಿ ಬಂತು. ಆ ಸನ್ನಿವೇಶಗಳೆಲ್ಲ ಹಾಸ್ಪಿಟಲ್ ಸ್ಕೆಚಸ್ (1863) ಎಂಬ ಪುಸ್ತಕದಲ್ಲಿ ಚೆನ್ನಾಗಿ ವರ್ಣಿತವಾಗಿವೆ. ಅಟ್ಲಾಂಟಿಕ್ ಪತ್ರಿಕೆಯಲ್ಲಿ ಆಲ್ಕಾಟಳ ಅನೇಕ ಕಥೆಗಳು ಅಚ್ಚಾದುವು. ಮೂಡ್ಸ್ (1865), ಲಿಟ್ಲ್ ವಿಮೆನ್ (1868-69) ಆಕೆಯ ಪ್ರಸಿದ್ಧ ಕೃತಿ. ಈಗಲೂ ಇದು ಜನಪ್ರಿಯವಾಗಿದೆ. ಎನ್ ಓಲ್ದ್ ಫ್ಯಾಷನ್ಡ್ ಗರ್ಲ್ (1870), ಆರು ಸಂಪುಟಗಳ ಆಂಟ್ ಜೋಸ್ ಸ್ಕ್ರಾಪ್ ಬ್ಯಾಗ್ (1872-82), ಲಿಟ್ಲ್ ಮೆನ್ (1871), ವರ್ಕ್ (1873), ಮಾಡರ್ನ್ ಮೆಫಿಸ್ಟಾಫೆಲಿಸ್ (1877)ಜೋಸ್ ಬಾಯ್ಸ್ (1886)-ಇವು ಆಕೆಯ ಕೆಲವು ಮುಖ್ಯ ಕೃತಿಗಳು. ಜೀವನದ ಕೊನೆಯ ವರ್ಷಗಳಲ್ಲಿ ಈಕೆ ಕೃತಿರಚನೆ ಯೊಂದಿಗೆ ಸಮಾಜಸುಧಾರಣೆಗಾಗಿ ಶ್ರಮಿಸಿದ್ದಲ್ಲದೆ ಮಹಿಳೆಯರ ಮತಸ್ವಾತಂತ್ರ್ಯಕ್ಕಾಗಿ ಹೋರಾಡಿದಳು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

Archival Materials

Other

ಉಲ್ಲೇಖಗಳು

[ಬದಲಾಯಿಸಿ]
  1. "Good Wives by Louisa May Alcott". Book Snob. Retrieved 2 March 2014.