ಲುಂಗ್ಲೇಯ್
ಲುಂಗ್ಲೇಯ್ ಈಶಾನ್ಯ ಭಾರತದ ಮಿಝೋರಂ ರಾಜ್ಯದ ದಕ್ಷಿಣ ಮಧ್ಯ ಭಾಗದಲ್ಲಿ ಸ್ಥಿತವಾಗಿರುವ ಪಟ್ಟಣವಾಗಿದೆ. ಲುಂಗ್ಲೇಯ್ ಪದದ ಅರ್ಥ ಅಕ್ಷರಶಃ 'ಕಲ್ಲಿನ ಸೇತುವೆ'. ಇದು ಮಿಝೊರಮ್‍ನ ಅತ್ಯಂತ ಉದ್ದದ ನದಿಯಾದ ಟ್ಲಾಂಗ್‍ನ ಸಣ್ಣ ಉಪನದಿಯಾದ ನಘಾಸಿ ಸುತ್ತಲಿನ ನದಿ ಹರಿವು ಪ್ರದೇಶದಲ್ಲಿ ಕಂಡುಬರುವ ಸೇತುವೆಯಂಥ ಕಲ್ಲಿನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ರಾಜಧಾನಿ ಐಝ್ವಾಲ್‍ನಿಂದ ೧೬೫ ಕಿ.ಮಿ. ದಕ್ಷಿಣಕ್ಕೆ ಇರುವ ಇದು ಅದರ ನಂತರ ಅತಿ ದೊಡ್ಡ ಪಟ್ಟಣವಾಗಿದೆ.
ಪ್ರವಾಸೋದ್ಯಮ[ಬದಲಾಯಿಸಿ]
ಸಾಟಿಯಿಲ್ಲದ ನೈಸರ್ಗಿಕ ರಮಣೀಯ ಸೌಂದರ್ಯದಿಂದ ಅನುಗ್ರಹಿತವಾದ ಲುಂಗ್ಲೇಯ್ ದೂರ ದೂರಗಳಿಂದ ಹಲವಾರು ಪ್ರವಾಸಿಗಳನ್ನು ಸೆಳೆಯುತ್ತದೆ. ಪ್ರವಾಸಿಗಳು ಈ ಸ್ಥಳದ ಮೋಡಿಮಾಡುವ ನೋಟದಿಂದ ಸಂಪೂರ್ಣವಾಗಿ ರೋಮಾಂಚನಗೊಳ್ಳುತ್ತಾರೆ. ಲುಂಗ್ಲೇಯ್ ಜಿಲ್ಲೆಯ ಕೆಲವು ಗಮನಾರ್ಹ ಪ್ರವಾಸಿ ತಾಣಗಳೆಂದರೆ:
- ಜ಼ೋಬಾಕ್ ಕ್ರೀಡಾ ಅಕಾಡೆಮಿ
- ಕಾಮ್‍ಜ಼ಾಲ್ ಉದ್ಯಾನವನ
- ಖಾನ್‍ಗ್ಲುಂಗ್ ವನ್ಯಜೀವಿ ಅಭಯಾರಣ್ಯ
- ಸೈಕುತಿ ಸಭಾಂಗಣ[೧] - ಇಲ್ಲಿ ಬಹುತೇಕ ಎಲ್ಲ ಸಂಗೀತ ಮೇಳಗಳು ಮತ್ತು ಆಚರಣೆಗಳು ಆಯೋಜಿಸಲ್ಪಡುತ್ತವೆ. ಸಭಾಂಗಣದಲ್ಲಿ ಅನನ್ಯವಾದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಇಲ್ಲಿ ಸ್ಥಳೀಯ ವರ್ಣಚಿತ್ರಕಾರರು ತಮ್ಮ ಕೌಶಲವನ್ನು ಪ್ರದರ್ಶಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಾರೆ.
- ಥುವಾಮ್‍ಲುವಾಯಾ ಮುವಾಲ್ - ಕೃತಕ ಹುಲ್ಲುನೆಲವುಳ್ಳ ಮಿಜ಼ೊರಮ್‍ನಲ್ಲಿನ ಎರಡನೇ ಫ಼ುಟ್‍ಬಾಲ್ ಕ್ರೀಡಾಂಗಣ.[೨]
ಸ್ವಲ್ಪ ಸಾಹಸವನ್ನು ಸೇರಿಸಲು ಬಯಸುವ ಮಿಜ಼ೊರಮ್‍ಗೆ ಪ್ರವಾಸ ಮಾಡುವ ಪ್ರವಾಸಿಗರಿಗೆ ತಮ್ಮ ಅಂತರ್ಗತ ಕ್ರೀಡಾ ಕೌಶಲಗಳು ಮತ್ತು ಕ್ರೀಡಾ ಮನೋಭಾವವನ್ನು ಅನ್ವೇಷಿಸಲು, ಲುಂಗ್ಲೇಯ್ ಯಥೇಷ್ಟ ಪಿಕ್ನಿಕ್ ತಾಣಗಳನ್ನು ಒದಗಿಸುತ್ತದೆ. ಲುಂಗ್ಲೇಯ್ ಜಿಲ್ಲೆಯು ಪ್ರವಾಸಿಗರಿಗೆ ನೈಸರ್ಗಿಕ ವೈಭವ ಮತ್ತು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳನ್ನು ಆನಂದಿಸುವ ಅವಕಾಶ ನೀಡುತ್ತದೆ.
ಉಲ್ಲೇಖಗಳು[ಬದಲಾಯಿಸಿ]
- ↑ "Saikuti hall". Architech Consultants. Retrieved 19 August 2012.
- ↑ "Lunglei-ah Artificial Turf phah zo". The Zozam Times. Archived from the original on 16 April 2013. Retrieved 19 August 2012.
ಹೊರಗಿನ ಕೊಂಡಿಗಳು[ಬದಲಾಯಿಸಿ]
- Lunglei local News
- Sinlung News
- moviesverse Official Website
- vegamovies Official Website
- isaimini Official Website
- 9xmovies Official Website
- downloadhub Official Website
- extramovies Official Website
- moviesda Official Website
- moviezwap Official Website
- tamilplay Official Website
- movie4me Official Website