ಲೀ ಮಿನ್ ಹೋ
thumb|Lee Min Ho
ಲೀ ಮಿನ್ ಹೋ ದಕ್ಷಿಣ ಕೊರಿಯಾದ ನಟ ಮತ್ತು ಗಾಯಕ.ಅವರು ಜೂನ್ ೨೨ ೧೯೮೭ ರಂದು ದಕ್ಷಿಣ ಕೊರಿಯಾದ ಹ್ಯುಕ್ಸೊಕ್-ಡಾಂಗ್, ಡೊಂಗ್ಜಕ್-ಗು, ಸಿಯೋಲ್ನಲ್ಲಿ ಜನಿಸಿದರು.
ಆರಂಭಿಕ ಜೀವನ
[ಬದಲಾಯಿಸಿ]ಲೀ ಮಿನ್ ಹೋ ಮಗುವಾಗಿದ್ದಾಗ,ವೃತ್ತಿಪರ ಫುಟ್ಬಾಲ್ ಆಟಗಾರನಾಗಲು ಆಶಿಸಿದ್ದರು.ಅವರು ದಕ್ಷಿಣ ಕೊರಿಯಾದ ವ್ಯವಸ್ಥಾಪಕ ಹಾಗು ಮಾಜಿ ಆಟಗಾರ ಚಾ ಬಮ್-ಕುನ್ ಯುವಕರ ಫುಟ್ಬಾಲ್ ವರ್ಗ ಆಯ್ಕೆಯಾದರು, ಆದರೆ ಪ್ರಾಥಮಿಕ ಶಾಲೆಯ ೫ನೇ ಗ್ರೇಡ್ನಲ್ಲಿ ಇರುವಾಗ ಗಾಯಗೊಂಡು ಈ ಮಹತ್ವಾಕಾಂಕ್ಷೆ ಕೊನೆಯಾಯಿತು.ತಮ್ಮ ಪ್ರೌಢಶಾಲೆಯ ಎರಡನೇ ವರ್ಷದಲ್ಲಿ, ಲೀ ಮಾಡೆಲಿಂಗ್ ಮತ್ತು ನಟನೆಯ ಕಡೆ ತಿರುಗಿದರು.ಲೀ ಮಿನ್ ಹೋ "ಬಾಯ್ಸ್ ಓವರ್ ಫ್ಲೋವೆರ್" ಎಂಬ ಒಂದು ಧಾರಾವಾಹಿ ಇಂದ "ಗು ಜೂನ್ ಪ್ಯೊ" ಎಂಬ ಹೆಸರಿನಿಂದ ಖ್ಯಾತಿ ಪಡೆದರು. ತರಬೇತಿ ಮೂಲಕ, ಲೀ ಆಡಿಶನ್ ಪ್ರಾರಂಭಿಸಿದರು ಮತ್ತು ಅನೇಕ ದೂರದರ್ಶನ ನಾಟಕಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು.ತನ್ನ ಚೊಚ್ಚಲ ಪಾತ್ರ 'ಇಬಿಎಸ್' ಸರಣಿಯಲ್ಲಾಯಿತು (ಸೀಕ್ರೆಟ್ ಕ್ಯಾಂಪಸ್). ತಮ್ಮ ವೃತ್ತಿಜೀವನದ ಆರಂಭದಲ್ಲಿ, [[೧]] 'ಲೀ ಮಿನ್' ಹೆಸರಿನ ಮೂಲಕ ವೇದಿಕೆಗೆ ಹೋದರು ಏಕೆಂದರೆ ತನ್ನ ಸಂಸ್ಥೆ ಅವರ ಜನ್ಮ ನಾಮ ತುಂಬಾ ಸಾಮಾನ್ಯವಾಗಿತ್ತು ಎಂದು ಭಾವಿಸಿದರು.
ಪ್ರಗತಿಯ ದಿನಗಳು
[ಬದಲಾಯಿಸಿ]ಅವರು ಮೊದಲಬಾರಿಗೆ(೨೦೦೭)ರಲ್ಲಿ ಪ್ರಮುಖ ಪಾತ್ರವಾಗಿ ಒಂದು ಪ್ರೌಢಶಾಲಾ ನಾಟಕ ಮ್ಯಾಕೆರೆಲ್ ರನ್ ನಲ್ಲಿ ಕಾಣಿಸಿಕೊಂಡರು.ಅವರು ೨೦೦೮ರಲ್ಲಿ ದೂರದರ್ಶನದ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡರು (ನಾಟಕಗಳು ಗೆಟ್ ಅಪ್ ಮತ್ತು ಐ ಆಮ್ ಸ್ಯಾಮ್ ) ಮತ್ತು ಎರಡು ಸಿನೆಮಾ('ಪಬ್ಲಿಕ್ ಎನಿಮಿ ರಿಟರ್ನ್ಸ್'ಮತ್ತು 'ಅವರ್ಸ್ ಸ್ಕೂಲ್ ಇ.ಟಿ')ಯಲ್ಲಿ ಕಾಣಿಸಿಕೊಂದರು.ಅವರು ೨೦೧೦ರಲ್ಲಿ 'ಪೆರ್ಸ್ನಲ್ ಟೇಸ್ಟ್' ಎಂಬ ಧಾರವಾಹಿಯಲ್ಲಿ ಮಹತ್ವಾಕಾಂಕ್ಷೆಯ ಪರಿಪೂರ್ಣತಾವಾದಿ ಯುವ ವಾಸ್ತುಶಿಲ್ಪಿಯಾಗಿಯೂ ಮತ್ತು ಒಂದು ನಪುಮ್ಸಕ ಲಿಂಗ ಪಾತ್ರವನ್ನು ಮಾಡಿದ್ದಾರೆ.ಅವರು ೨೦೧೨ರಲ್ಲಿ 'ಸಿಟಿ ಹನ್ಟರ್'ನಲ್ಲಿ ಕಾಣಿಸಿಕೊಂಡರು.ಅವರು ಯಾಕೊಹಾಮಾ, ಒಸಾಕಾ, ಶಾಂಘೈ, ಬೀಜಿಂಗ್, ಕೌಲಾಲಂಪುರ್, ಮನಿಲಾ ಮತ್ತು ತೈಪೆ ನಗರಗಳಲ್ಲಿ ಏಷ್ಯಾದ ಒಂದು ಅಭಿಮಾನಿ ಸಭೆಯಲ್ಲಿ ಪ್ರವಾಸ ಕೈಗೊಂಡರು.ಮಾರ್ಚ್ ೨೯ ೨೦೧೩ರಂದು ಲೀ ಮಿನ್ ಹೋ 'ದ ಹೈಯರ್ಸ್'ಎಂಬ ಹೊಸ ನಾಟಕದಿಂದ ದೂರದರ್ಶನಕ್ಕೆ ವಾಪಸಾಗುತ್ತೇನೆ ಎಂದು ಘೋಷಿಸಿದರು. [[೨]] ಈ ಪ್ರದರ್ಶನ ಅಕ್ಟೋಬರ್ ೯,೨೦೧೩ರಂದು ಕೊರಿಯಾದಲ್ಲಿನ 'ಎಸ್ಬಿಎಸ್'ಚಾನಲಿನಲ್ಲಿ ಪ್ರಸಾರ ಆರಂಭವಾಯಿತು.ಜನವರಿ ೩೦,೨೦೧೪ ರಂದು, ಚೀನಾದಲ್ಲಿನ ಸಿಸಿಟಿವಿ ಲೂನಾರ್ ನ್ಯೂ ಇಯರ್ ಗಾಲಾದಲ್ಲಿ ಅವರು ಕಾಣಿಸಿಕೊಂಡರು,ಅವರೇ ಮೊದಲ ಕೊರಿಯನ್ ಬೇರೆ ಭಾಷೆಯ ಚಾನಲ್ಲಿನಲ್ಲಿ ಕಾಣಿಸಿಕೊಂಡಿದ್ದು.
ದೂರದರ್ಶನ ನಾಟಕ
[ಬದಲಾಯಿಸಿ]ಲೀ ಮಿನ್ ಹೋ ಎಷ್ಟೋ ಧಾರವಾಹಿಗಳನ್ನು ಮಾಡಿದ್ದಾರೆ.ಅವರು ೨೦೦೩ ರಲ್ಲಿ "ಶಾರ್ಪ್"ನಲ್ಲಿ "ವಿಧ್ಯಾರ್ಥಿ"ಯ ಪಾತ್ರವನ್ನು ನಿರ್ವಹಿಸಿದ್ದಾರೆ.ಅವರು ೨೦೦೪ರಲ್ಲಿ "ನೊನ್ ಸ್ಟೊಪ್ ೫"ರಲ್ಲಿ "ಎಮ್ ಸಿ ಮೋನ್ಗ್"ಎಂಬ ಪಾತ್ರವನ್ನು ನಿರ್ವಹಿಸಿದಾರೆ.೨೦೦೫ರಲ್ಲಿ "ರೆಸಿಪಿ ಆಫ಼್ ಲವ್"ನಲ್ಲಿ "ವೈಟರ್"ಪಾತ್ರವನ್ನು ನಿರ್ವಹಿಸಿದ್ದಾರೆ.ಅವರು ೨೦೦೬ರಲ್ಲಿ "ಸೇಕ್ರೆಟ್ ಕ್ಯಮ್ಪಸ್"ನಲ್ಲಿ "ಪಾರ್ಕ್ ದೂ ಯಾನ್"ಎಂಬ ಪಾತ್ರವನ್ನು ನಿರ್ವಹಿಸಿದಾರೆ.೨೦೦೭ರಲ್ಲಿ "ಮ್ಯಕಿರಿರೆಲ್ ರನ್"ನಲ್ಲಿ "ಚಾ ಗೊನ್ಗ್ ಚಾನ್"ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.೨೦೦೮ರಲ್ಲಿ "ಗೆಟಪ್"ರಲ್ಲಿ "ಮಿನ್ ವೂಕ್ ಗಿ"ಯ ಪಾತ್ರವನ್ನು ನಿರ್ವಹಿಸಿದ್ದಾರೆ.೨೦೦೯ರಲ್ಲಿ "ಬಯ್ಸ್ ಒವೆರ್ ಫ಼್ಲವೆರ್"ನಲ್ಲಿ "ಗು ಜುನ್ ಪಯೊ"ಪಾತ್ರವನ್ನು ನಿರ್ವಹಿಸಿದಾರೆ.೨೦೧೦ರಲ್ಲಿ "ಪರ್ಸ್ನಲ್ ಟಯ್ಸ್ಟ್"ನಲ್ಲಿ "ಜಿನ್ ಹೊ"ಎಂಬ ಪಾತ್ರವನ್ನು ನಿರ್ವಹಿಸಿದ್ದರೆ.೨೦೧೧ರಲ್ಲಿ "ಸಿಟಿ ಹನ್ಟರ್"ನಲ್ಲಿ "ಲೀ ಯೂನ್ ಸನ್ಗ್"ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.೨೦೧೦ ರಲ್ಲಿ "ಫ಼ಯ್ಠ್"ನಲ್ಲಿ "ಛಿಒ ಯನ್ಗ್"ಎಂಬ ಪಾತ್ರವನ್ನು ನಿರ್ವಹಿಸಿದ್ದರೆ.೨೦೧೩ರಲ್ಲಿ "ದಿ ಹಯರ್ಸ್"ನಲ್ಲಿ "ಕಿಮ್ ಟ್ಯನ್"ಎಂಬ ಪಾತ್ರವನ್ನು ನಿರ್ವಹಿಸಿದ್ದರೆ.೨೦೧೬ರಲ್ಲಿ "ದ ಲೆಜೆನ್ದ್ ಆಫ಼್ ಥೆ ಬ್ಲೂ ಸಿ"ನಲ್ಲಿ "ಟಿ ಬಿ ಯೆ"ಪಾತ್ರವ್ನ್ನು ನಿರ್ವಹಿಸಿದ್ದಾರೆ.
ಸಂಗೀತ ಬಿಡುಗಡೆಗಳು
[ಬದಲಾಯಿಸಿ]ಲೀ ಮಿನ್ ಹೋ ರವರ ಮೊದಲ ಆಲ್ಬಮ್(ಸಂಗೀತ) ಮೇ ೨೦೧೩ರಲ್ಲಿ ಬಿಡುಗಡೆಯಾಯಿತು.ಲೀ ಮನ್ ಹೋ ೨೦೦೯ರಲ್ಲಿ "ಮೈ ಎವ್ರಿಥಿನ್ಗ್" ಎಂಬ ಹಾಡನ್ನು 'ಬೊಯ್ಸ್ ಒವೆರ್ ಫ಼್ಲವೆರ್ಸ್'ನಲ್ಲಿ ಹಾಡಿದ್ದಾರೆ.೨೦೧೩ ರಲ್ಲಿ "ಪೈನ್ಫ಼ುಲ್ ಲವ್" ಎಂಬ ಹಾಡನ್ನು "ದಿ ಹೈಯರ್ಸ್"ನಲ್ಲಿ ಹಾಡಿದ್ದಾರೆ.೨೦೧೫ ರಲ್ಲಿ "ಥನ್ಕ್ಯು" ಎಂಬ ಹಾಡನ್ನು "ಥನ್ಕ್ಯು"ಆಲ್ಬಮ್ ನಲ್ಲಿ ಹಾಡಿದ್ದಾರೆ.ಇದರ ಲಿರಿಕ್ಸ್ ಲೀ ಮಿನ್ ಹೊ ರವರೆ ನೀಡಿದ್ದಾರೆ.ಅವರು ಎಷ್ಟೋ ಪ್ರಚಾರದ ಹಾಡುಗಳನ್ನು ಹಾಡಿದ್ದಾರೆ.೨೦೦೯ರಲ್ಲಿ "ಎಕ್ಸ್ತ್ರೆರ್ಮೆ,ಕಿಸ್ಸ್,ಯೂ ಆರ್ ಸೊ ಬೂಟಿಫ಼ುಲ್" ನಲ್ಲಿ ಹಾಡನ್ನು ಹಾಡಿದ್ದಾರೆ.
ಸಮಾಜ ಸೇವೆ
[ಬದಲಾಯಿಸಿ]ಗೌರವ ರಾಯಭಾರಿ ಯುನಿಸೆಫ್ 'ಲವ್ ನೆಟ್' ಪ್ರಚಾರ (ಮಲೇರಿಯಾ ತೊಲಗಿಸಲು) ದಲ್ಲಿ ಪಾಲ್ಗೊಂಡಿದ್ದರು.ಅದು ೨೦೧೦ ರಿಂದ ೨೦೧೧ರಲ್ಲಿ ನಡೆದಿತ್ತು.ಕೊನ್ಕುಕ್ ವಿಶ್ವವಿದ್ಯಾಲಯ ಪಿಆರ್ ರಾಯಭಾರಿಯಾಗಿದ್ದರು.ಅದು ೨೦೧೦ರಲ್ಲಿ.ಗೌರವ ಪ್ರಾಸಿಕ್ಯೂಟರ್ ಅಥವಾ ಮೂಲಭೂತವಾಗಿ ಕೊರಿಯಾ ಪ್ರಾಸಿಕ್ಯೂಟರ್ ಒಂದು ಪ್ ಅರ್ ರಾಯಭಾರಿ ನಡೆಸಿದರು.ಅದು ೨೦೧೨ರಲ್ಲಿ.ಚೈಲಿನ್ ಕ್ಯಾಮ್ಪೈನ್ನ ಪಿ ಅರ್ ರಾಯಭಾರಿಯಾಗಿದ್ದರು.ಅದು ೨೦೧೩ರಲ್ಲಿ.೨೦೧೪ರಲ್ಲಿ ಲೀ ಮಿನ್ ಹೋ ಅರಿವು ಮೂಡಿಸಲು ಮತ್ತು ಸಾಮಾಜಿಕ ಮತ್ತು ಮಾನವೀಯ ಕಾರಣಗಳಿಗಾಗಿ ಕೊಡುಗೆ ಪ್ರೋತ್ಸಾಹಿಸಲು 'ಪ್ರಾಮಿಸ್' ವೆಬ್ಸೈಟ್ ಸ್ಥಾಪಿಸಿದರು.ಪ್ರಾಮಿಸ್ ವಾಣಿಜ್ಯದ ಮುಂದುವರಿದ ಮಾರಾಟದಿಂದ ಚಾರಿಟಿ ಯೋಜನೆಗಳ ಕಾರ್ಯಗತಗೊಳಿಸಲು ಆಯ್ಕೆ ಪಾಲುದಾರರು ನೀಡಲಾಗುತ್ತದೆ.ಈ ಸೈಟ್ನಿಂದ ಲಾಭರಹಿತ ಸಂಸ್ಥೆ ಚಾರಿಟಿ ಮೂಲಕ ಮಲಾವಿ ಡಿಗ್ ಬಾವಿಗಳು ಸಹಾಯ ಅವನಿಗೆ ಮತ್ತು ಅವನ ಅಮೇರಿಕಾದ ಅಭಿಮಾನಿಗಳಿಂದ $೫೦,೦೦೦ ಬಂತು.
ಚಿತ್ರಗಳು
[ಬದಲಾಯಿಸಿ]ಲೀ ಮಿನ್ ಹೋ ರವರು ಎಷ್ಟೋ ಚಿತ್ರಗಳಲ್ಲಿ ನಟಿಸಿದ್ದಾರೆ.ಅವರು ೨೦೦೮ರಲ್ಲಿ "ಪಬ್ಲಿಕ್ ಎನಿಮಿ ರಿಟರ್ನ್ಸ್"ನಲ್ಲಿ "ಜುನ್ಗ್ ಹಾ ಇಯೊನ್" ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.ಅದೇ ವರ್ಷ "ಅವರ್ ಸ್ಕೂಲ್'ಸ್ ಇ.ಟಿ" ಎಂಬ ಚಿತ್ರದಲ್ಲಿ "ಓ ಸನ್ಗ್ ಹೂನ್" ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.೨೦೧೫ ರಲ್ಲಿ "ಗನ್ಗ್ನಮ್ ಬ್ಲೂಸ್"ಎಂಬ ಚಿತ್ರದಲ್ಲಿ "ಕಿಮ್ ಜೊನ್ಗ್ ಡೆ" ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.ಲೀ ಮಿನ್ ಹೊ ೨೦೧೬ ರಲ್ಲಿ "ಬೊವ್ತಿ ಹುನ್ತೆರ್"ಎಂಬ ಚಿತ್ರದಲ್ಲಿ "ಇ ಸನ್"ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಲೀ ಮಿನ್ ಹೋ ರವರಿಗೆ ಒಬ್ಬ ಅಕ್ಕ ಇದ್ದಾರೆ.ಅವರು ಕೊನ್ಕುಂಕ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ಮತ್ತು ಆರ್ಟ್ ಓದುತ್ತಿದ್ದಾರೆ.ಲೀ ಮಿನ್ ಹೋ ತನ್ನ 'ಸಿಟಿ ಹಂಟರ್' ಸಹನಟ ಪಾರ್ಕ್ ಮಿನ್ ಯಂಗ್ ಜೊತೆ ಒಂದು ಸಂಬಂಧದಲ್ಲಿದರು, ಅವರ ಸಂಬಂಧ ಡೇಟಿಂಗ್ನ್ ಕೆಲವು ತಿಂಗಳ ನಂತರ ಕೊನೆಗೊಂಡಿತು.ಮಾರ್ಚ್ ೨೦೧೫ರಲ್ಲಿ ಲೀ ಮತ್ತು ದಕ್ಷಿಣ ಕೊರಿಯಾದ ಗಾಯಕಿ ಮತ್ತು ನಟಿ 'ಸುಜಿ' ಸಂಬಂಧ ಎಂದು ದೃಢಪಟ್ಟಿದೆ.
ಪ್ರಶಸ್ತಿಗಳು
[ಬದಲಾಯಿಸಿ]ಲೀ ಮಿನ್ ಹೋ ರವರಿಗೆ "ಬಾಯ್ಸ್ ಓವರ್ ಫ್ಲೋವೆರ್" ಎಂಬ ಒಂದು ಧಾರಾವಾಹಿ ಇಂದ "ಗು ಜೂನ್ ಪ್ಯೊ" ಎಂಬ ಪಾತ್ರಕ್ಕೆ ದೂರದರ್ಶನ ವಿಭಾಗದಲ್ಲಿ ೪೫ನೇ ಬೈಕ್ಸನ್ಗ್ ಆರ್ಟ್ಸ್ ಅವಾರ್ಡ್ಸನ ಅತ್ಯುತ್ತಮ ಹೊಸ ನಟ ಪ್ರಶಸ್ತಿ ದೊರಕಿದೆ.ಅವರು 'ಸಿಟಿ ಹಂಟರ್'(೨೦೧೧), ಇದರಿಂದ ಅವರು ೪೮ನೇ ಬೈಕ್ಸನ್ಗ್ ಆರ್ಟ್ಸ್ ಅವಾರ್ಡ್ಸನ ದೂರದರ್ಶನ ವರ್ಗದಲ್ಲಿ ಅತ್ಯಂತ ಜನಪ್ರಿಯ ನಟ ಎಂದು ನಾಮನಿರ್ದೇಶನಗೊಂಡಿತು ಮತ್ತು 'ದ ಹೈಎರ್ಸ್'(೨೦೧೩),ಇದರಿಂದ,ಹೆಚ್ಚು ಜನಪ್ರಿಯ ನಟನಿಗಾಗಿರುವ ಪ್ರಶಸ್ತಿ ದೊರಕಿದೆ.