ಲೀಟರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲೀಟರ್


ಲೀಟರ್ ಘನ ಅಳತೆಯ ಒಂದು ಏಕಮಾನ. ಲೀಟರ್ ಎಸ್ಐ ಏಕಮಾನವಲ್ಲವಾದರೂ ಅದನ್ನು ಎಸ್ಐ ಪದ್ಧತಿಯೊಂದಿಗೆ ಬಳಕೆಗೆ ಒಪ್ಪಿಕೊಳ್ಳಲಾಗಿದೆ ಮತ್ತು ಮೆಟ್ರಿಕ್ ಪದ್ಧತಿಯ ಹಲವು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದೆ. ೧೦೦೦ ಲೀಟರ್‌ಗಳಿಗೆ ಸಮವಾದ ಘನ ಮೀಟರ್ ಘನ ಅಳತೆಯ ಅಧಿಕೃತ ಎಸ್ಐ ಏಕಮಾನವಾಗಿದೆ. ಒಂದು ಲೀಟರ್ ಎಂದರೆ ಒಂದು ಘನ ಡೆಸಿಮೀಟರ್‍ಗೆ ಸಮ ಅಥವಾ ೧೦೦೦ ಘನ ಸೆಂಟಿಮೀಟರ್.

"https://kn.wikipedia.org/w/index.php?title=ಲೀಟರ್&oldid=409700" ಇಂದ ಪಡೆಯಲ್ಪಟ್ಟಿದೆ