ವಿಷಯಕ್ಕೆ ಹೋಗು

ಲಿಂಕನ್ ಎಲ್ಸ್‌ವರ್ತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲ್ಸ್‌ವರ್ತ್, ಲಿಂಕನ್: 1880-1951. ಅಮೆರಿಕದ ಪರಿಶೋಧಕ. ಜನನ ಇಲಿನಾಯ್ನ ಚಿಕಾಗೊದಲ್ಲಿ (1880). ಕೊಲಂಬಿಯ ಮತ್ತು ಯೇಲ್ಗಳಲ್ಲಿ ಇವನ ವಿದ್ಯಾಭ್ಯಾಸ ನಡೆಯಿತು. ರೈಲುಮಾರ್ಗ ನಿರ್ಮಾಣದಲ್ಲಿ ಮೋಜಣಿದಾರ ಮತ್ತು ಎಂಜಿನಿಯರ್ ಆಗಿ ಕೆಲಸಮಾಡಿದ. ಅನಂತರ ವಾಯವ್ಯ ಕೆನಡದಲ್ಲಿ ಗಣಿ ಎಂಜಿನಿಯರ್ ಆಗಿಯೂ ಅನ್ವೇಷಕನಾಗಿಯೂ ಸೇವೆ ಸಲ್ಲಿಸಿದ. ಆರ್ಕ್ಟಿಕ್ ಪ್ರದೇಶದ (ಉತ್ತರ ಮೇರುವಲಯ) ಮೇಲಣ ವಿಮಾನ ಹಾರಾಟಗಳನ್ನು ನಡೆಸಿದ ರೋಲ್ಡ್‌ ಆಮಂಡ್ ಸನ್ನನ ಸಹವರ್ತಿ ಮತ್ತು ಆರ್ಥಿಕ ಬೆಂಬಲಿಗನಾಗಿದ್ದ. 1925ರಲ್ಲಿ ಇವರಿಬ್ಬರಿಗೂ ಸ್ಪಿಟ್ಸ್‌ ಬರ್ಗನಿಂದ ಉತ್ತರ ಅಕ್ಷಾಂಶ 870 43’ಯವರೆಗೂ ವಿಮಾನ ಹಾರಾಟ ನಡೆಸಿದರು. ಸ್ಪಿಟ್ಸ್‌ ಬರ್ಗನ್ನಿನಿಂದ ಉತ್ತರ ಮೇರುವಿನ ಮೂಲಕ ಅಲಾಸ್ಕಕ್ಕೆ ನಡೆದ (1926) ಹಾರಾಟದಲ್ಲಿ ಈತ ಸಹಚಾಲಕ. ಗ್ರಾಫ್ ಜೆಪ್ಪಿಲಿನ್ ಎಂಬ ವಿಮಾನದಲ್ಲಿ ಫ್ರಾನ್ಜ್‌ ಜೋಸೆಫ್ ಲ್ಯಾಂಡ್ ನಿಂದ ನಾರ್ದರ್ನ್ ಲ್ಯಾಂಡ್ಗಳವರೆಗೆ ನಡೆಸಿದ ಹಾರಾಟದಲ್ಲಿ (1931) ವೀಕ್ಷಕನಾಗಿದ್ದ. 1935ರಲ್ಲಿ ಪ್ರಥಮ ಬಾರಿಗೆ ಈತ ಅಂಟಾರ್ಕ್ಟಿಕ ಪ್ರದೇಶದ ಒಳಭಾಗವನ್ನು ಈತ ಪ್ರವೇಶಿಸಿದ್ದು 1939ರಲ್ಲಿ. ಇದರಿಂದಾಗಿ ಹಿಂದೆಂದೂ ಕಂಡರಿಯದಿದ್ದ 29,9,789.10ಕಿಮೀಗಳಷ್ಟು ಭೂ-ಪ್ರದೇಶವನ್ನು ಈತ ಕಂಡ. ಆವರ್ ಪೋಲಾರ್ ಫ್ಲೈತ್ (1925) ಮತ್ತು ಫಸ್ಟ್‌ ಕ್ರಾಸಿಂಗ್ ಆಫ್ ದಿ ಪೋಲಾರ್ ಸೀ (1927) ಎಂಬುವು ಎಲ್ಸ್‌ವರ್ತ್ ಮತ್ತು ಆಮಂಡ್ ಸನ್ನರು ಒಟ್ಟಾಗಿ ಬರೆದ ಗ್ರಂಥಗಳು. ಸ್ವಂತ ಕೃತಿಗಳಾದ ಸರಚ್ (1932), ಎಕ್ಸ್‌ ಫ್ಲ್ರೇರಿಂಗ್ ಟುಡೆ (1935) ಮತ್ತು ಬಿಯಾಂಡ್ ಹೊರೈಜನ್ಸ್‌ (1938) ಎಂಬುವುಗಳಲ್ಲಿ ತನ್ನ ಅನುಭವಗಳನ್ನು ಈತ ಚಿತ್ರಿಸಿದ್ದಾನೆ.

ಉಲ್ಲೇಖನಗಳು

[ಬದಲಾಯಿಸಿ]

[]

  1. Beekman H. Pool (2002). Polar Extremes: The World of Lincoln Ellsworth. University of Alaska Press.