ಲಾಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾರ ಸುತ್ತುವ ಉರುಳೆಯಿರುವ ಲಾಳಿ

ಲಾಳಿಯು ಮಗ್ಗದಿಂದ ನೆಯ್ಗೆ ಮಾಡುವಾಗ ಅಡ್ಡ ನೂಲಿನ ದಾರವನ್ನು ಹೊಂದಿರುವ ಹಿಡುಕವನ್ನು ಒಪ್ಪವಾಗಿ ಮತ್ತು ಅಡಕವಾಗಿ ಇಡಲು ವಿನ್ಯಾಸಗೊಳಿಸಲಾದ ಸಾಧನ. ಹೊಕ್ಕಿನೊಳಗೆ ನೇಯ್ಗೆಮಾಡಲು ಹಾಸುಗಳ ನೂಲಿನ ದಾರಗಳ ನಡುವೆ ಲಾಳಿಗಳನ್ನು ಎಸೆಯಲಾಗುತ್ತದೆ ಅಥವಾ ತಾತ್ಕಾಲಿಕ ಬೇರ್ಪಡಿಕೆಗಳ ಮೂಲಕ ಹಿಂದೆ ಮುಂದೆ ಸಾಗಿಸಲಾಗುತ್ತದೆ.

"ಕಡ್ಡಿ ಲಾಳಿಗಳು" ಎಂದು ಕರೆಯಲ್ಪಡುವ ಅತ್ಯಂತ ಸರಳವಾದ ಲಾಳಿಗಳನ್ನು ಚಪ್ಪಟೆಯಾದ ಅಗಲವಲ್ಲದ ಮರದ ತುಂಡಿನಿಂದ ತಯಾರಿಸಲಾಗಿರುತ್ತದೆ. ಇವು ಹೊಕ್ಕು ನೂಲನ್ನು ಹಿಡಿದಿಡಲು ತುದಿಗಳಲ್ಲಿ ಕಚ್ಚುಗಳನ್ನು ಹೊಂದಿರುತ್ತವೆ. ಹೆಚ್ಚು ಸಂಕೀರ್ಣವಾದ ಲಾಳಿಗಳು ದಾರದ ಉರುಳೆಗಳು ಅಥವಾ ಗಾಲಿಗಳನ್ನು ಒಳಗೊಂಡಿರುತ್ತವೆ.

ಅಮೇರಿಕದಲ್ಲಿ, ಲಾಳಿಗಳನ್ನು ಹಲವುವೇಳೆ ಹೂಬಿಡುವ ಡಾಗ್‍ವುಡ್ ಮರದ ಕಟ್ಟಿಗೆಯಿಂದ ತಯಾರಿಸಲಾಗುತ್ತದೆ, ಏಕೆಂದರೆ ಅದು ಗಟ್ಟಿಯಾಗಿರುತ್ತದೆ, ಚೂರುಗಳಾಗಿ ಒಡೆಯುವುದನ್ನು ಪ್ರತಿರೋಧಿಸುತ್ತದೆ, ಮತ್ತು ಇದಕ್ಕೆ ಬಹಳ ನಯವಾದ ಮೆರುಗು ಬರುವಂತೆ ಹೊಳಪು ಕೊಡಬಹುದು.

ಉಲ್ಲೇಖಗಳು[ಬದಲಾಯಿಸಿ]

  • Chandler, Deborah (1995). Learning to Weave, Loveland, Colorado: Interweave Press LLC.  
"https://kn.wikipedia.org/w/index.php?title=ಲಾಳಿ&oldid=988063" ಇಂದ ಪಡೆಯಲ್ಪಟ್ಟಿದೆ