ಲಾಲ್ಬಿಯಕ್ತಂಗ ಪಚುವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾಲ್ಬಿಯಕ್ತಂಗ ಮಿಜೋರಾಂನ ಪತ್ರಕರ್ತ. ಮಿಜೋರಾಂ ಜರ್ನಲಿಸ್ಟ್ ಅಸೋಸಿಯೇಷನ್‌ನಿಂದ ಅವರು ಭಾರತದಲ್ಲಿ ಕೆಲಸ ಮಾಡುವ ಅತ್ಯಂತ ಹಿರಿಯ ಪತ್ರಕರ್ತ ಎಂದು ಘೋಷಿಸಸಲ್ಪಟ್ಟವರು. [೧] ಇವರು ೮ ನವೆಂಬರ್ ೨೦೨೧ ರಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. [೨]

ವೃತ್ತಿ[ಬದಲಾಯಿಸಿ]

ಲಾಲ್ಬಿಯಕ್ತಂಗ ಪಚುವು ೧೯೪೫ ರಲ್ಲಿ ಬ್ರಿಟಿಷ್ ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್‌ಗೆ ಸೇರಿದರು. ಎರಡನೆ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರಿಗಾಗಿ ಜಪಾನಿನ ಪಡೆಗಳ ವಿರುದ್ಧ ಹೋರಾಡಿದರು. [೩] ಅವರು ೧೯೫೩ [೪] ಜೋರಾಮ್ ಥುಪುವಾನ್ ಅವರೊಂದಿಗೆ ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು 1970 ರಿಂದ ತಮ್ಮದೇ ಆದ ಸ್ಥಳೀಯ ದಿನಪತ್ರಿಕೆ 'ಝೋರಾಮ್ [೫] ' ಅನ್ನು ಪ್ರಾರಂಭಿಸಿದರು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

  • ಪದ್ಮಶ್ರೀ (೨೦೨೧) [೬]
  • ಬರ್ಮಾ ಸ್ಟಾರ್ [೭]
  • ಸ್ವಾತಂತ್ರ್ಯ ಪದಕ [೮]
  • ಜೆ ಮತ್ತು ಕೆ ಪದಕ
  • ಸೈನ್ಯ ಸೇವಾ ಪದಕ [೯]

ವೈಯಕ್ತಿಕ[ಬದಲಾಯಿಸಿ]

ಲಾಲ್ಬಿಯಕ್ತಂಗ ಪಚುವು ಮಾರ್ಚ್ ೨೫, ೧೯೨೭ ರಂದು ಸೈಚಲ್ ಗ್ರಾಮದಲ್ಲಿ ಜನಿಸಿದರು. ಐಜ್ವಾಲ್‌ ಮಿಜೋರಾಂನಿಂದ ೮೦ ಕಿಮೀ ದೂರದಲ್ಲಿದೆ. [೧೦] ಅವರ ಪೋಷಕರು ಪು ಸತ್ಕುಂಗ ಮತ್ತು ಪೈ ಡೊಕುಂಗಿ.

ಉಲ್ಲೇಖಗಳು[ಬದಲಾಯಿಸಿ]

  1. https://www.onmanorama.com/news/nation/pachuau-hailed-as-oldest-working-journalist-of-india.html
  2. "Padma Awards 2021: Full list of Padma Vibhushan, Padma Bhushan, Padma Shri recipients". India Today. Retrieved 8 November 2021.
  3. "Padma Shri Lalbiakthanga Pachuau: India's oldest working journalist from Mizoram". eastmojo.com. Retrieved 8 November 2021.
  4. "Veteran Mizoram journalist Lalbiakthanga Pachuau gets Padma Shri". telegraph india. Retrieved 8 November 2021.
  5. "Mizoram journalist L Pachuau, litterateur C Kamlova get Padma Shri". eastmojo.com. Retrieved 8 November 2021.
  6. "13 eminent personalities from Northeast conferred with Padma Awards 2020, here's the list". Sentinelassam. Retrieved 8 November 2021.
  7. "From World War II to editing a daily: Meet India's 'oldest working' journalist". Hindustan times. Retrieved 8 November 2021.
  8. "GOVERNORIN IN PADMASHREE AWARD DAWNGTU PU LALBIAKTHANGA PACHUAU LAWMPUI". DIPR Mizoram. Retrieved 8 November 2021.
  9. "Padma Shri for lakadong pioneer, 94-year-old journalist". timesofindia. Retrieved 9 November 2021.
  10. "Mizoram governor felicitates Padma Shree Lalbiakthanga Pachuau". nenow. Retrieved 8 November 2021.