ಲಕ್ಷ್ಮೀನರಸಿಂಹ ದೇವಾಲಯ, ಜಾವಗಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಕ್ಷ್ಮೀನರಸಿಂಹ ದೇವಾಲಯ
ಹಿಂದೂ ದೇವಾಲಯ
ಲಕ್ಷ್ಮೀನರಸಿಂಹ ದೇವಾಲಯ (ಕ್ರಿ.ಶ. 1250) ಹಾಸನ ಜಿಲ್ಲೆಯ ಜಾವಗಲ್‍ನಲ್ಲಿ
ಲಕ್ಷ್ಮೀನರಸಿಂಹ ದೇವಾಲಯ (ಕ್ರಿ.ಶ. 1250) ಹಾಸನ ಜಿಲ್ಲೆಯ ಜಾವಗಲ್‍ನಲ್ಲಿ
Country ಭಾರತ
Stateಕರ್ನಾಟಕ
DistrictHassan District
Languages
ಸಮಯ ವಲಯಯುಟಿಸಿ+5:30 (IST)

ಜಾವಗಲ್‍ನಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯವು 13 ನೇ ಶತಮಾನದ ಮಧ್ಯಭಾಗದ ಹೊಯ್ಸಳ ವಾಸ್ತುಶಿಲ್ಪಕ್ಕೆ ಒಂದು ಉದಾಹರಣೆಯಾಗಿದೆ. ಜಾವಗಲ್ ಹಳೇಬೀಡಿನಿಂದ ೨೦ ಕಿ.ಮಿ. ದೂರವಿದೆ. ದಶಾವತಾರಗಳಲ್ಲಿ ಒಬ್ಬನಾದ ನರಸಿಂಹ ಈ ದೇವಾಲಯದ ಮುಖ್ಯ ದೇವತೆ. ಕ್ರಿ.ಶ 1250 ರಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜ ವೀರ ಸೋಮೇಶ್ವರನು ಇದನ್ನು ನಿರ್ಮಿಸಿದನು.[೧] ಈ ದೇವಾಲಯವು ಭಾರತದ ಪುರಾತತ್ವ ಸರ್ವೇಕ್ಷಣೆಯ ಕರ್ನಾಟಕ ರಾಜ್ಯ ವಿಭಾಗದ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ.[೨]

ದೇವಾಲಯದ ಯೋಜನೆ[ಬದಲಾಯಿಸಿ]

ಅವಲೋಕನ[ಬದಲಾಯಿಸಿ]

ಜಾವಗಲ್ ನಲ್ಲಿರುವ ಲಕ್ಷ್ಮೀನರಸಿಂಹ ದೇವಸ್ಥಾನದ ವಿವರ

ದೇವಾಲಯದ ಯೋಜನೆ ಸರಳವಾಗಿದ್ದು ಇತರ ಹೊಯ್ಸಳ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಒಂದು ತ್ರಿಕೂಟ (ಮೂರು ದೇಗುಲಗಳು) ದೇವಾಲಯವಾಗಿದೆ.[೩] ಆದರೆ ಮಧ್ಯದ ದೇವಾಲಯ ಮಾತ್ರ ಶಿಖರ ಮತ್ತು ಸುಖನಾಸಿಯನ್ನು ಹೊಂದಿದೆ.[೪][೫] ಮೂರೂ ದೇಗುಲಗಳು ಸಮಾನ ಗಾತ್ರದ್ದಾಗಿದ್ದು ಚದರ ಯೋಜನೆಯನ್ನು ಹೊಂದಿವೆ ಮತ್ತು ಒಂದು ಸಾಮಾನ್ಯ ಆವೃತ ಸಭಾಂಗಣದಿಂದ (ಮಂಟಪ) ಜೋಡಿಸಲ್ಪಟ್ಟಿವೆ. ಆವೃತ ಸಭಾಂಗಣದ ಮುಂದೆ ತೆರೆದ ಮುಖಮಂಟಪವಿದೆ. ಪಾರ್ಶ್ವದ ದೇಗುಲಗಳು ಸಭಾಂಗಣಕ್ಕೆ ನೇರವಾಗಿ ಸಂಪರ್ಕ ಹೊಂದಿವೆ. ಮಧ್ಯದ ದೇಗುಲವನ್ನು ಒಂದು ಹಜಾರವು ಗರ್ಭಗುಡಿಯನ್ನು[೬] ಸಭಾಂಗಣಕ್ಕೆ ಸಂಪರ್ಕಿಸುತ್ತದೆ.[೭][೮] ಪಾರ್ಶ್ವದ ದೇಗುಲಗಳು ಶಿಖರವನ್ನು ಹೊಂದಿಲ್ಲ. ದೇಗುಲಗಳ ಕೆಳಗಿನ ಭಾಗವು ಪ್ರತಿ ಬದಿಗೆ ಐದು ಪ್ರಕ್ಷೇಪಗಳನ್ನು ಹೊಂದಿದೆ.

ದೇವಾಲಯವು ಒಂದು ಜಗತಿ ಮೇಲೆ ನಿಂತಿದೆ. ಇದು ಅನೇಕ ಹೊಯ್ಸಳ ದೇವಸ್ಥಾನಗಳಿಗೆ ಸಾಮಾನ್ಯವಾಗಿದೆ. ವೇದಿಕೆ, ಇದರ ದೃಶ್ಯ ಆಕರ್ಷಣೆಯ ಜೊತೆಗೆ ಜಗತಿಯು ಭಕ್ತರಿಗೆ ದೇವಾಲಯದ ಸುತ್ತ ಪ್ರದಕ್ಷಿಣೆ ಮಾರ್ಗವನ್ನು ಒದಗಿಸುತ್ತದೆ. ಇದು ದೇವಾಲಯದ ರೂಪರೇಖೆಯನ್ನು ನಿಕಟವಾಗಿ ಅನುಸರಿಸುತ್ತದೆ. ಕೇಂದ್ರ ದೇಗುಲದ ಹಾಗೂ ಹಜಾರದ ಮೇಲಿನ ಶಿಖರ ನಾಶವಾಗಿಲ್ಲ ಮತ್ತು ಅತ್ಯಂತ ಅಲಂಕೃತವಾಗಿದೆ.

ಅಲಂಕಾರ ಮತ್ತು ಶಿಲ್ಪಗಳು[ಬದಲಾಯಿಸಿ]

ದೇಗುಲಗಳ ಹೊರಗಿನ ಗೋಡೆಗಳು ಮತ್ತು ಮಂಟಪದ ಅಲಂಕಾರಿಕ ಯೋಜನೆ "ಹೊಸ ರೀತಿಯ"ದ್ದಾಗಿದೆ. ದೇವಾಲಯದ ಸುತ್ತಲೂ ಎರಡು ಮುಂಜೂರುಗಳು ವಿಸ್ತರಿಸುತ್ತವೆ. ಎರಡೂ ಮುಂಜೂರುಗಳ ನಡುವೆ ಚೌಕಸ್ಥಂಭಗಳ ಮೇಲೆ ಚಿಕಣಿ ಅಲಂಕಾರಿಕ ಗೋಪುರಗಳು ಇವೆ. ಎರಡನೇ ಮುಂಜೂರಿನ ಕೆಳಗೆ ಹಿಂದೂ ದೇವತೆಗಳ ಮತ್ತು ಅವರ ಪರಿಚಾರಕರ ಚಿತ್ರಗಳ ಗೋಡೆಯ ಫಲಕ ಉಬ್ಬು ಶಿಲ್ಪದ ರೂಪದಲ್ಲಿದೆ.[೯]  ಇದರ ಕೆಳಗೆ, ತಳದಲ್ಲಿ ಆರು ಸಮಾನ ಅಗಲದ ಆಯತಾಕಾರದ ಅಲಂಕರಣಪಟ್ಟಿಗಳು ಇವೆ. ಮೇಲಿನಿಂದ ಪ್ರಾರಂಭಿಸಿ, ಮೊದಲ ಅಲಂಕರಣಪಟ್ಟಿಯಲ್ಲಿ ಹಂಸ (ಪಕ್ಷಿಗಳು) , ಎರಡನೆಯದರಲ್ಲಿ ಮಕರ (ಜಲ ರಾಕ್ಷಸರು), ಮೂರನೆಯದರಲ್ಲಿ ಮಹಾಕಾವ್ಯಗಳು ಮತ್ತು (ಸಾಮಾನ್ಯವಾಗಿ ಹಿಂದೂ ಮಹಾಕಾವ್ಯ ರಾಮಾಯಣ, ಮಹಾಭಾರತ ಮತ್ತು ಕೃಷ್ಣನ ಕಥೆಗಳಿಂದ) ಇತರ ಕಥೆಗಳು, ಭಕ್ತ ಪ್ರಹಲ್ಲಾದನ ಕಥೆ,ಸಮುದ್ರ ಮಂಥನದ ಕಥೆ,ವಾಲಿ ಸಂಹಾರಗಳನ್ನ ನೋಡಬಹುದು.ನಾಲ್ಕನೆಯದರಲ್ಲಿ ಎಲೆಗಳ ಸುರುಳಿಗಳು,ಮೊಗ್ಗುಗಳನ್ನ ಕಾಣಬಹುದು. ಐದನೆಯದರಲ್ಲಿ ಕುದುರೆಗಳು ಮತ್ತು ಆರನೆಯದರಲ್ಲಿ ಆನೆಗಳು.[೧೦][೧೧]

ಜಾವಗಲ್‍ನಲ್ಲಿನ ಲಕ್ಷ್ಮೀನರಸಿಂಹ ದೇವಸ್ಥಾನ - ಉತ್ತರದ ನೋಟ
ಜಾವಗಲ್‍ನಲ್ಲಿನ ಲಕ್ಷ್ಮೀನರಸಿಂಹ ದೇವಸ್ಥಾನದ ಒಂದು ಚಿತ್ರ
ಜಾವಗಲ್‍ನಲ್ಲಿನ ಲಕ್ಷ್ಮೀನರಸಿಂಹ ದೇವಸ್ಥಾನದ ಉತ್ತರದ ನೋಟ
ಜಾವಗಲ್‍ನಲ್ಲಿನ ಲಕ್ಷ್ಮೀನರಸಿಂಹ ದೇವಸ್ಥಾನದ ಮುಂಭಾಗದ ನೋಟ

ಚಿತ್ರಸಂಪುಟ[ಬದಲಾಯಿಸಿ]

ಈ ದೇವಸ್ಥಾನದಲ್ಲಿ ನೀವು ಬೇರೆ ಯಾವುದೇ ದೇವಸ್ಥಾನದಲ್ಲಿ ಕಾಣದ ಅಪರೂಪದ ಯುದ್ಧ ಸನ್ನಿವೇಶದ ಶಿಲ್ಪ ಕಲಾಕೃತಿಗಳನ್ನು ಕಾಣಬಹುದು. ಈ ಕಲಾಕೃತಿಗಳ ಮೂಲಕ ನಮ್ಮ ಪೂರ್ವಜರ ಯುದ್ಧ ಕೌಶಲ್ಯವು ಈಗಿನ ಆಧುನಿಕ ಯುದ್ಧ ಕೌಶಲ್ಯಕ್ಕಿಂತ ಮೇಲು ಸ್ತರದಲ್ಲಿ ಇತ್ತೆಂದು ತಿಳಿಯಬಹುದು. ಶೂನ್ಯ ವಾತಾವರಣದ ಯುದ್ಧ ಚೆಂಡುಗಳಲ್ಲಿ ಯೋದರ ಕುಳಿತು ಈ ಚೆಂಡುಗಳನ್ನು ಎದುರಾಳಿ ಪಡೆಗಳ ಮೇಲೆ ಉರುಳಿಸಿ ಅವರ ಮಧ್ಯದಲ್ಲಿ ಯುದ್ಧ ಮಾಡುವುದರ ಮೂಲಕ ಅವರ ಆತ್ಮಸ್ಥೈರ್ಯವನ್ನು ಕುಂದುವಂತೆ ಮಾಡಿ ಮಾನಸಿಕವಾಗಿ ಸೋಲನ್ನು ಒಪ್ಪಿಕೊಳ್ಳುವ ವಾತಾವರಣ ನಿರ್ಮಾಣ ಮಾಡುವುದು.ಅಲ್ಲದೇ ಆಧುನಿಕ ಯುದ್ಧ ಟ್ಯಾಂಕರ್ ತರಹ ಯೋಧರು ಬಿಲ್ಲು ಬಾಣಗಳನ್ನು ಹಿಡಿದು ಅರ್ಧ ದೇಹವನ್ನು ರಥದಲ್ಲಿ ಅಡಗಿಸಿ ಉಳಿದ ಭಾಗವನ್ನು ಹೊರಗಡೆ ತೋರಿಸಿ ಯುದ್ಧ ಮಾಡುವುದನ್ನು ಕಾಣಬಹುದು. ಇಷ್ಟೇ ಅಲ್ಲದೆ ನುರಿತ ಈಗ ನಶಿಸಿ ಹೋಗಿರುವ ಕಾಡು ಪ್ರಾಣಿಗಳನ್ನುಆ ಕಾಲದ ಯುದ್ಧದಲ್ಲಿ ಬಳಕೆ ಮಾಡಿಕೊಂಡಿರುವುದನ್ನು ಗಮನಿಸಬಹುದು.ದೇವಸ್ಥಾನದ ಮೇಲ್ಛಾವಣಿಯ ಮಳೆಯ ನೀರು ಹರಿದು ಹೋಗಲು ನಾಲೆಯ ವ್ಯವಸ್ಥೆ ಕಾಣಬಹುದು.

ಉಲ್ಲೇಖಗಳು[ಬದಲಾಯಿಸಿ]

  • Gerard Foekema, A Complete Guide to Hoysala Temples, Abhinav, 1996  
  • Kamath, Suryanath U. (2001) [1980]. A concise history of Karnataka: from pre-historic times to the present. Bangalore: Jupiter books. LCCN 80905179. OCLC 7796041.
  1. Foekema (1996), p73
  2. "Protected Monuments in Karnataka". Archaeological Survey of India, Government of India. Indira Gandhi National Center for the Arts. Retrieved 10 August 2012.
  3. Foekema (1996), p25
  4. Foekema (1996), p22
  5. Foekema (1996), pp73-74
  6. Foekema (1996), p21
  7. Foekema (1996), p74
  8. Kamath (2001), p134
  9. Foekema (1996), pp28-29
  10. Kamath (2001), p134
  11. Foekema (1996), p29, p74