ವಿಷಯಕ್ಕೆ ಹೋಗು

ಲಕ್ಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಕ್ಮೆ
ಸ್ಥಾಪನೆ೧೯೫೨
ಸಂಸ್ಥಾಪಕ(ರು)ಯಾಗ್ಯಾ ಆರ್ಯ
ಮುಖ್ಯ ಕಾರ್ಯಾಲಯ, ಭಾರತ
ಪ್ರಮುಖ ವ್ಯಕ್ತಿ(ಗಳು)ಪುಶ್ಕರಾಜ್ ಶೆನೋಯ್(CEO ಲಕ್ಮೆ)
ಪೂರ್ಣಿಮಾ ಲಂಬಾ (Head Innovations)
ಯಾಗ್ಯಾ ಆರ್ಯ (ambassador)[೧]
ಉದ್ಯಮPersonal care
ಉತ್ಪನ್ನಸೌಂದರ್ಯವರ್ಧಕಗಳು, ಮತ್ತು ಬ್ಯೂಟಿ ಸಲೂನ್ ಸೇವೆಗಳು
ಜಾಲತಾಣlakmeindia.com


Lakme Fashion Week - 2019

ಲಕ್ಮೆ ಸೌಂದರ್ಯವರ್ಧಕಗಳ ಒಂದು ಭಾರತೀಯ ಬ್ರಾಂಡ್. ಇದು ಹಿಂದೂಸ್ತಾನ್ ಯೂನಿಲಿವರ್ ಅವರ ಒಡೆತನದಲ್ಲಿದೆ. ಕರೀನಾ ಕಪೂರ್ ಅವರು ಈ ಬ್ರಾಂಡ್‌ನ ರಾಯಭಾರಿ. ಇದು ಭಾರತದ ಶೃಂಗಾರ ಬ್ರಾಂಡ್‍ಗಳಲ್ಲಿ ಮೊದಲನೆ ಸ್ಥಾನದಲ್ಲಿದೆ.[೨][೩] ಟಾಟಾ ಆಯಿಲ್ ಮಿಲ್ಸ್‍ನ ೧೦೦% ಅಂಗಸಂಸ್ಥೆಯಾಗಿ ಲಕ್ಮೆಯು ಪ್ರಾರಂಭವಾಯಿತು. ಇದು ನಂತರ ಸ್ವತಂತ್ರ ಕಂಪೆನಿಯಾಯಿತು. ಲಕ್ಮೆ ಎಂಬುದು ಫ್ರೆಂಚ್ ಒಪೆರಾ ಒಂದರ ಹೆಸರು. ಇದು ಸ್ವತಃ ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾದ ಲಕ್ಷ್ಮಿಯ (ಸಂಪತ್ತಿನ ದೇವತೆ) ಫ್ರೆಂಚ್ ರೂಪವಾಗಿದೆ. ಇದು ೧೯೫೨ರಲ್ಲಿ ಪ್ರಾರಂಭವಾಗಿ, ಪ್ರಸಿದ್ಧಿಯಾಯಿತು. ಏಕೆಂದರೆ, ಪ್ರಧಾನಿ ಜವಾಹರಲಾಲ್ ನೆಹರೂ ಭಾರತೀಯ ಮಹಿಳೆ ಸೌಂದರ್ಯ ಉತ್ಪನ್ನಗಳ ಮೇಲೆ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತಿರುವುದನ್ನು ಕಂಡು, ವೈಯಕ್ತಿಕವಾಗಿ ಭಾರತದಲ್ಲಿ ತಯಾರಿಸಲು ಜೆ.ಆರ್.ಡಿ ಟಾಟಾ ಅವರನ್ನು ವಿನಂತಿಸಿಕೊಂಡರು.[೪] ಸಿಮೋನೆ ಟಾಟಾ ನಿರ್ದೇಶಕರಾಗಿ ಕಂಪನಿ ಸೇರಿದರು, ನಂತರ ಅದ್ಯಕ್ಷೆಯಾದರು.[೫] ೧೯೯೬ ರಲ್ಲಿ, ಟಾಟಾ ಅವರು ಲಕ್ಮೆಯನ್ನು  ಹಿಂದೂಸ್ತಾನ್ ಯೂನಿಲಿವರ್‍ಗೆ ೨೦೦ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು[೬](೪೫ ದಶಲಕ್ಷ US$).

ವರದಿಗಳು[ಬದಲಾಯಿಸಿ]

  • ೨೦೧೨ ರ ಬ್ರ್ಯಾಂಡ್ ಟ್ರಸ್ಟ್ ರಿಪೋರ್ಟ್‍ನಲ್ಲಿ, ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‍ಗಳಲ್ಲಿ ಲಕ್ಮೆ ೧೦೪ ನೇ ಸ್ಥಾನ ಪಡೆದಿದೆ. 
  • ೨೦೧೩ರಲ್ಲಿ, ೭೧ನೇ ಸ್ಥಾನ ಪಡೆದಿದೆ. 
  • ೨೦೧೪ರಲ್ಲಿ, ೩೬ನೇ ಸ್ಥಾನದಲ್ಲಿದೆ.
  • ಲಕ್ಮೆ ಫ್ಯಾಷನ್ ವೀಕ್ (ಎಲ್ಎಫ್‍ಡಬ್ಲ್ಯೂ) ಗಾಗಿ ಮುಂಬೈನಲ್ಲಿ ನಡೆಯುವ ದ್ವಿ-ವಾರ್ಷಿಕ ಫ್ಯಾಷನ್ ಕಾರ್ಯಕ್ರಮಕ್ಕಾಗಿ ಶೀರ್ಷಿಕೆ ಪ್ರಾಯೋಜಕತ್ವವನ್ನು ಕಂಪನಿಯು ಹೊಂದಿದೆ.

References[ಬದಲಾಯಿಸಿ]

  1. "Shraddha Kapoor turns brand ambassador for Lakme". indianexpress.com. Retrieved November 12, 2015.
  2. "Top Cosmetic Brands in India". top10companiesinindia.co.in. Archived from the original on ಅಕ್ಟೋಬರ್ 21, 2015. Retrieved November 12, 2015.
  3. "Top 10 Cosmetic Brands in India". mapsofindia.com. Retrieved November 12, 2015.
  4. "Make in India: 10 Indian brands at par with foreign brands". India Today. 20 February 2015. Archived from the original on 15 ಜುಲೈ 2015. Retrieved 15 July 2015.
  5. "Simone Tata". The Sunday Indian. Archived from the original on 19 ಜನವರಿ 2018. Retrieved 15 July 2015.
  6. Amarnath & Ghosh; Nischinta Amarnath; Debashish Ghosh (2005). The voyage to excellence: the ascent of 21 women leaders of India IncHello. Pustak Mahal. p. 214. ISBN 81-223-0904-6.
"https://kn.wikipedia.org/w/index.php?title=ಲಕ್ಮೆ&oldid=1167771" ಇಂದ ಪಡೆಯಲ್ಪಟ್ಟಿದೆ