ವಿಷಯಕ್ಕೆ ಹೋಗು

ಲಕ್ಕೂರು ಸಿ. ಆನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಕ್ಕೂರು ಸಿ. ಆನಂದಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ-ಬಂಡಾಯ ಕಾವ್ಯ ಮಾರ್ಗದ ಮೂರನೆಯ ತಲೆಮಾರಿಗೆ ಸೇರಿದವರು. ಸೃಜನಶೀಲ ಯುವ ಬರಹಗಾರ. ಕವಿ, ಸಂಶೋಧಕ, ವಿಮಶ‍ಕ, ಸಂಘಟನಾಕಾರ, ಅನುವಾದಕಾರ. ಮಾತೃಭಾಷೆ ತೆಲುಗು.ಲಕ್ಕೂರು ಸಿ. ಆನಂದ ಅವರು ಕೆಂಗೇರಿಯ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಕೋಲಾರ ಜಿಲ್ಲೆಯ ಕವಿ ಲಕ್ಕೂರು ಆನಂದ ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಆಳವಾದ ಅಧ್ಯಯನ ನಡೆಸಿದ್ದಾರೆ.ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಬಂದ ಆತ್ಮ ಕಥೆಗಳೆಂದರೆ, ರಾಣಿ ಶಿವ ಶಂಕರ ಶರ್ಮರ " ಕೊನೆಯ ಬ್ರಾಹ್ಮಣ" ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟವಾಗಿದ್ದು, ನೇರ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವರು ದಿನಾಂಕ: ೨೦-೦೫-೨೦೨೪ ರಂದು ನಿಧನರಾದರು.

ಕೃತಿಗಳು

[ಬದಲಾಯಿಸಿ]
  1. ಊರಿಂದ ಊರಿಗೆ,
  2. ಇಪ್ಪತ್ತರ ಕಲ್ಲಿನ ಮೇಲೆ,
  3. ಬಟವಾಡೆಯಾಗದ ರಸೀತಿ,
  4. ಇತಿ ನಿನ್ನ ವಿಧೇಯನು,
  5. ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳುಉಲ್ಲೇಖ ದೋಷ: Invalid <ref> tag; refs with no name must have content.

ಅನುವಾದಿತ ಕೃತಿಗಳು

[ಬದಲಾಯಿಸಿ]
  1. ಸ್ಮೃತಿ ಕಿಣಾನ್ತಂ,
  2. ಕೊನೆ ಬ್ರಾಹ್ಮಣ,
  3. ಆಕಾಶ ದೇವರ,
  4. ನಗ್ನ ಮುನಿಯ ಸಮಗ್ರ ಕಥೆಗಳು,
  5. ಅರುದ್ರ ಇವರ ಅನುವಾದಿತ ಕೃತಿಗಳು.

ಪ್ರಶಸ್ತಿ/ಗೌರವ/ಸನ್ಮಾನಗಳು

[ಬದಲಾಯಿಸಿ]
  1. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರು
  2. ಆಂಧ್ರದ ಶ್ರೀ ಶ್ರೀ ಕಾವ್ಯ ಪುರಸ್ಕಾರ,
  3. ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ,
  4. ದು ನಿಂ ಬೆಳಗಲಿ ಪ್ರಶಸ್ತಿ,
  5. ವಿಭಾ ಸಾಹಿತ್ಯ ಪ್ರಶಸ್ತಿ,
  6. ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ,
  7. ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಇವರಿಗೆ ಸಂದಿದೆ

ಉಲ್ಲೇಖ

[ಬದಲಾಯಿಸಿ]


https://www.wikiwand.com/kn/ಆಳ್ವಾಸ್_ನುಡಿಸಿರಿ kannada.oneindia.com/literature/articles/2005/010205khasnis.html kannada.oneindia.com/literature/poem/2005/250105lakkur.html


ಕನ್ನಡ ಸಾಹಿತ್ಯ ತೆಲುಗು ಸಾಹಿತ್ಯ ಬಂಡಾಯ ಸಾಹಿತ್ಯ