ಲಂಡನ್‌ ಗೋಪುರ

Coordinates: 51°30′29″N 0°4′34″W / 51.50806°N 0.07611°W / 51.50806; -0.07611
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

51°30′29″N 0°4′34″W / 51.50806°N 0.07611°W / 51.50806; -0.07611

ಥೇಮ್ಸ್ ನದಿಯಿಂದ ಕಂಡುಬರುವ ಲಂಡನ್ ಗೋಪುರದೊಂದಿಗೆ "ಟ್ರೈಟರ್ಸ್ ಗೇಟ್" ಎಂದು ಕರೆಯಲಾಗುವ ವಾಟರ್ ಗೇಟ್ ನೋಟ.

ಹರ್ ಮೆಜೆಸ್ಟೀಸ್ ರಾಯಲ್ ಪ್ಯಾಲೇಸ್ ಎಂಡ್ ಫೋರ್ಟ್‌ರೆಸ್ , ಸಾಮಾನ್ಯವಾಗಿ ಲಂಡನ್ ಗೋಪುರ ಎಂದು ಹೆಸರಾಗಿದೆ. ಇದು ಇಂಗ್ಲೆಂಡ್‌ನ ಸೆಂಟ್ರಲ್ ಲಂಡನ್‌ನ ಥೇಮ್ಸ್ ನದಿಯ ಉತ್ತರ ದಂಡೆಯಲ್ಲಿರುವ ಐತಿಹಾಸಿಕ ಕೋಟೆಯಾಗಿದೆ. ಇದು ಲಂಡನ್ ಬರೋ ಆಫ್ ಟವರ್ ಹ್ಯಾಮ್ಲೆಟ್ಸ್‌ನಲ್ಲಿ ನೆಲೆಗೊಂಡಿದೆ. ಲಂಡನ್ ನಗರದ ಪೂರ್ವ ತುದಿಯಿಂದ ಟವರ್ ಹಿಲ್ ಎಂಬ ಮುಕ್ತ ಪ್ರದೇಶದಿಂದ ಪ್ರತ್ಯೇಕವಾಗಿದೆ. ಇದನ್ನು ಇಂಗ್ಲೆಂಡ್ ವಿರುದ್ಧ ನಾರ್ಮನ್ ವಿಜಯದ ಭಾಗವಾಗಿ ೧೦೬೬ರ ಕೊನೆಯಲ್ಲಿ ಸ್ಥಾಪಿಸಲಾಯಿತು. ಇಡೀ ಕೋಟೆಗೆ ವೈಟ್ ಟವರ್ ಎಂದು ಹೆಸರು ನೀಡುವ ಇದನ್ನು ವಿಲಿಯಂ ದಿ ಕನ್‌‌ಕ್ವೈರರ್ ೧೦೭೮ರಲ್ಲಿ ನಿರ್ಮಿಸಿದ. ಇದು ಹೊಸ ಆಡಳಿತದಿಂದ ಲಂಡನ್ ಮೇಲೆ ದಬ್ಬಾಳಿಕೆಯ ಕಹಿ ಚಿಹ್ನೆಯಾಗಿದೆ. ಕನಿಷ್ಠ ೧೧೦೦ರವರೆಗೆ ಕೋಟೆಯನ್ನು ಕಾರಾಗೃಹವಾಗಿ ಬಳಸಲಾಯಿತು. ಆದರೂ ಅದು ಮುಖ್ಯ ಉದ್ದೇಶವಾಗಿರಲಿಲ್ಲ. ಇತಿಹಾಸ ಪೂರ್ವದಲ್ಲಿ ಭವ್ಯ ಅರಮನೆಯಾಗಿದ್ದ ಅದು, ರಾಜಮನೆತನದ ನಿವಾಸವಾಗಿ ಕಾರ್ಯನಿರ್ವಹಿಸಿತು. ಒಟ್ಟಾರೆಯಾಗಿ, ಗೋಪುರವು ಅನೇಕ ಕಟ್ಟಡಗಳ ಸಂಕೀರ್ಣವಾಗಿದ್ದು, ರಕ್ಷಣಾತ್ಮಕ ಗೋಡೆಗಳ ಎರಡು ಏಕಕೇಂದ್ರಕ ಉಂಗುರ‌ಗಳು ಮತ್ತು ಕಂದಕದ ನಡುವೆ ಸ್ಥಾಪಿಸಲಾಗಿದೆ. ಮುಖ್ಯವಾಗಿ ಇದಕ್ಕೆ ೧೨ ಮತ್ತು ೧೩ನೇ ಶತಮಾನಗಳಲ್ಲಿ ರಾಜರುಗಳಾದ ರಿಚರ್ಡ್ ದಿ ಲಯನ್‌ಹಾರ್ಟ್, ಹೆನ್ರಿ III ಮತ್ತು ಎಡ್ವರ್ಡ್೧ಅವರಿಂದ ಅನೇಕ ಹಂತಗಳ ವಿಸ್ತರಣೆ ಉಂಟಾಯಿತು. ೧೩ನೇ ಶತಮಾನದ ಕೊನೆಯಲ್ಲಿ ಸ್ಥಾಪಿಸಿದ ಸಾಮಾನ್ಯ ವಿನ್ಯಾಸವು ಆ ಸ್ಥಳದಲ್ಲಿ ನಂತರದ ಚಟುವಟಿಕೆಯ ನಡುವೆಯೂ ಉಳಿದಿದೆ.

ಇಂಗ್ಲೀಷ್ ಇತಿಹಾಸದಲ್ಲಿ ಲಂಡನ್ ಗೋಪುರವು ಮುಖ್ಯ ಪಾತ್ರವನ್ನು ವಹಿಸಿದೆ. ಇದನ್ನು ಅನೇಕ ಬಾರಿ ಮುತ್ತಿಗೆ ಹಾಕಲಾಯಿತು ಮತ್ತು ಅದನ್ನು ನಿಯಂತ್ರಿಸುವುದು ದೇಶವನ್ನು ನಿಯಂತ್ರಿಸುವುದಕ್ಕಾಗಿ ಅವಶ್ಯಕವಾಗಿತ್ತು. ಗೋಪುರವು ಶಸ್ತ್ರಾಗಾರ, ಬೊಕ್ಕಸ, ಪ್ರಾಣಿ ಸಂಗ್ರಹಾಲಯ, ರಾಜಮನೆತನದ ಟಂಕ ಸಾಲೆ, ಸಾರ್ವಜನಿಕ ದಾಖಲೆಗಳ ಕಚೇರಿ ಮತ್ತು ಯುನೈಟೆಡ್ ಕಿಂಗ್ಡಮ್‌ನ ಕ್ರೌನ್ ಜಿವೆಲ್ಸ್ ನೆಲೆಯಾಗಿ ಕಾರ್ಯನಿರ್ವಹಿಸಿದೆ. ೧೪ನೇ ಶತಮಾನದ ಪೂರ್ವದಿಂದ ಚಾರ್ಲ್ಸ್ II ಆಡಳಿತದವರೆಗೆ ರಾಜನ ಕಿರೀಟಧಾರಣೋತ್ಸವ ಕುರಿತು ಗೋಪುರದಿಂದ ವೆಸ್ಟ್‌ಮಿನಿಸ್ಟರ್ ಅಬ್ಬೆವರೆಗೆ ಮೆರವಣಿಗೆಯ ನೇತೃತ್ವ ವಹಿಸಲಾಯಿತು. ರಾಜನ ಗೈರಿನಲ್ಲಿ, ಕಾನ್ಸ್‌ಟೇಬಲ್ ಆಫ್ ಟವರ್ ಕೋಟೆಯ ಉಸ್ತುವಾರಿ ವಹಿಸಿದ್ದ. ಮಧ್ಯಯುಗೀನ ಅವಧಿಯಲ್ಲಿ ಇದೊಂದು ಪ್ರಬಲ ಮತ್ತು ನಂಬಿಕಾರ್ಹ ಸ್ಥಾನವಾಗಿತ್ತು. ೧೫ನೇ ಶತಮಾನದ ಕೊನೆಯಲ್ಲಿ ಕೋಟೆಯು ಪ್ರಿನ್ಸೆಸ್‌ ಇನ್ ದಿ ಟವರ್‌ನ ಕಾರಾಗೃಹವಾಗಿತ್ತು. ಟ್ಯೂಡರ್ಸ್ ನೇತೃತ್ವದಲ್ಲಿ, ಗೋಪುರವು ರಾಜಮನೆತನದ ನಿವಾಸವಾಗಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗಿತ್ತು. ಕೋಟೆಯನ್ನು ಮರುಬಲಪಡಿಸುವ ಮತ್ತು ದುರಸ್ತಿಗೆ ಪ್ರಯತ್ನಗಳು ನಡೆದರೂ, ಅದರ ರಕ್ಷಣೆಗಳು ಫಿರಂಗಿದಳವನ್ನು ನಿಭಾಯಿಸುವ ಬೆಳವಣಿಗೆಗಳಲ್ಲಿ ಹಿಂದುಳಿಯಿತು.

ಕೋಟೆಯನ್ನು ಕಾರಾಗೃಹವಾಗಿ ಬಳಸಿದ ಅತ್ಯುಚ್ಚ ಅವಧಿಯು ೧೬ ಮತ್ತು ೧೭ನೇ ಶತಮಾನಗಳಾಗಿತ್ತು. ಎಲಿಜಬೆತ್ I ಮುಂತಾದವರು ರಾಣಿಯಾಗುವುದಕ್ಕಿಂತ ಮುಂಚೆ ಕೋಟೆಯ ಗೋಡೆಗಳ ನಡುವೆ ಬಂಧಿತರಾಗಿ ಅವಕೃಪೆಗೆ ಒಳಗಾದರು. ಈ ಬಳಕೆಯು ಸೆಂಟ್ ಟು ದಿ ಟವರ್ ನುಡಿಗಟ್ಟಿಗೆ ದಾರಿಕಲ್ಪಿಸಿತು. ೧೬ನೇ ಶತಮಾನದ ಧಾರ್ಮಿಕ ಪ್ರಚಾರಕರು ಮತ್ತು ೧೯ನೇ ಶತಮಾನದ ಲೇಖಕರು ಜನಪ್ರಿಯಗೊಳಿಸಿದ ಚಿತ್ರಹಿಂಸೆ ಮತ್ತು ಸಾವಿನ ಸ್ಥಳವೆಂಬ ನಿರಂತರ ಅಪಖ್ಯಾತಿಯ ನಡುವೆ, ೨೦ನೇ ಶತಮಾನದ ವಿಶ್ವ ಯುದ್ಧಗಳ ಮುಂಚೆ ಗೋಪುರದಲ್ಲಿ ಕೇವಲ ೭ ಜನರಿಗೆ ಮಾತ್ರ ಮರಣದಂಡನೆ ವಿಧಿಸಲಾಯಿತು. ಮರಣದಂಡನೆಗಳನ್ನು ಸಾಮಾನ್ಯವಾಗಿ ಕೋಟೆಯ ಉತ್ತರಕ್ಕಿರುವ ಕುಖ್ಯಾತ ಟವರ್ ಹಿಲ್‌ನಲ್ಲಿ ನಡೆಸಲಾಯಿತು. ಸುಮಾರು ೪೦೦ ವರ್ಷಗಳಲ್ಲಿ ೧೧೨ಮರಣದಂಡನೆಗಳು ಅಲ್ಲಿ ಸಂಭವಿಸಿದವು. ೧೯ನೇ ಶತಮಾನದ ಉತ್ತರಾರ್ಧದಲ್ಲಿ, ರಾಜಮನೆತನದ ಟಂಕಸಾಲೆ ಮುಂತಾದ ಸಂಸ್ಥೆಗಳು ಕೋಟೆಯಿಂದ ಹೊರಗೆ ಇತರ ಸ್ಥಳಗಳಿಗೆ ಸ್ಥಳಾಂತರಗೊಂಡು ಅನೇಕ ಕಟ್ಟಡಗಳು ಖಾಲಿಯಾದವು. ಆಂಥೋನಿ ಸಾಲ್ವಿನ್ ಮತ್ತು ಜಾನ್ ಟೇಲರ್ ಅದರ ಮಧ್ಯಯುಗೀನ ನೋಟಕ್ಕೆ ಮರುಸ್ಥಾಪಿಸುವ ಅವಕಾಶವನ್ನು ಪಡೆದರು ಮತ್ತು ಅನೇಕ ಖಾಲಿ ಮಧ್ಯಯುಗೀನ ನಂತರದ ಕಟ್ಟಡಗಳನ್ನು ತೆರವು ಮಾಡಿದರು. ಒಂದನೇ ಮತ್ತು ಎರಡನೇ ವಿಶ್ವ ಸಮರಗಳಲ್ಲಿ, ಗೋಪುರವನ್ನು ಪುನ ಕಾರಾಗೃಹವಾಗಿ ಬಳಸಲಾಯಿತು ಮತ್ತು ಬೇಹುಗಾರಿಕೆಗಾಗಿ ೧೨ ಜನರಿಗೆ ಮರಣದಂಡನೆ ಶಿಕ್ಷೆಗೆ ಗೋಪುರವು ಸಾಕ್ಷಿಯಾಯಿತು. ಯುದ್ಧಗಳ ನಂತರ,ದಿ ಬ್ಲಿಟ್ಜ್‌ (ನಾಜಿ ಜರ್ಮನಿಯಿಂದ ಬ್ರಿಟನ್ ಮೇಲೆ ಬಾಂಬ್ ದಾಳಿ)ನಿಂದ ಉಂಟಾದ ಹಾನಿಯನ್ನು ಸರಪಡಿಸಲಾಯಿತು ಮತ್ತು ಸಾರ್ವಜನಿಕರಿಗೆ ಕೋಟೆಯನ್ನು ಮರುತೆರೆಯಲಾಯಿತು. ಇಂದು ಲಂಡನ್ ಗೋಪುರವು ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದರ ಮೇಲ್ವಿಚಾರಣೆಯನ್ನು ಧರ್ಮದತ್ತಿ ಐತಿಹಾಸಿಕ ರಾಜಮನೆತನದ ಅರಮನೆಗಳು ವಹಿಸಿದವು ಮತ್ತು ವಿಶ್ವ ಪರಂಪರೆ ಸ್ಥಳವಾಗಿ ರಕ್ಷಿಸಲಾಯಿತು.

ವಾಸ್ತುಶಿಲ್ಪ[ಬದಲಾಯಿಸಿ]

ವಿನ್ಯಾಸ[ಬದಲಾಯಿಸಿ]

೧೫೯೭ರಲ್ಲಿ ಲಂಡನ್ ಗೋಪುರ ಮತ್ತು ಅದರ ಲಿಬರ್ಟಿಗಳ ನಕ್ಷೆ

ಸ್ಯಾಕ್ಸನ್ ಲಂಡನ್ ನೋಟದ ಮೂಲಕ ಗೋಪುರವನ್ನು ಅತ್ಯಂತ ಪ್ರಬಲವಾದ ಮತ್ತು ಪರಿಣಾಮಕಾರಿಯಾದ ರಕ್ಷಣೆಗಳಿಂದ ನೆಲೆಗೊಳಿಸಲಾಗಿದೆ. ಇದರ ಬಗ್ಗೆ ಪ್ರಾಕ್ತನ ಶಾಸ್ತ್ರಜ್ಞ ಅಲನ್ ವಿನ್ಸ್ ಸಲಹೆಗಳು ಉದ್ದೇಶಪೂರ್ವಕವಾಗಿವೆ.[೧] ಇದು ದೃಷ್ಟಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗಮನಸೆಳೆಯುವಂತಿದ್ದು, ಥೇಮ್ಸ್ ನದಿಯ ದಂಡೆಯ ಮೇಲೆ ವಾಹನಸಂಚಾರಕ್ಕೆ ತೆರೆದುಕೊಂಡಿದೆ.[೨] ಕೋಟೆಯು ಮೂರು ವಾರ್ಡ್‌ಗಳು ಅಥವಾ ಆವರಣಗಳಿಂದ ನಿರ್ಮಿತವಾಗಿದೆ. ಅತ್ಯಂತ ಒಳಗಿನ ವಾರ್ಡ್ ವೈಟ್ ಟವರ್ ಒಳಗೊಂಡಿದ್ದು, ಇದು ಕೋಟೆಯ ಅತ್ಯಂತ ಪೂರ್ವದ ಹಂತವಾಗಿದೆ. ಉತ್ತರ, ಪೂರ್ವ ಮತ್ತು ಪಶ್ಚಿಮಕ್ಕೆ ಅದನ್ನು ಸುತ್ತುವರಿದಿರುವುದು ಒಳವಾರ್ಡ್ ಆಗಿದ್ದು, ರಿಚರ್ಡ್ ದಿ ಲಯನ್‌ಹಾರ್ಟ್ ಆಳ್ವಿಕೆಯಲ್ಲಿ ಅದನ್ನು ನಿರ್ಮಿಸಲಾಯಿತು(೧೧೮೯-೧೧೯೯) ಅಂತಿಮವಾಗಿ ಕೋಟೆಯನ್ನು ಸುತ್ತುವರಿದಿರುವ ಹೊರ ವಾರ್ಡನ್ನು ಎಡ್ವರ್ಡ್ I ನೇತೃತ್ವದಲ್ಲಿ ನಿರ್ಮಿಸಲಾಯಿತು. ಲಂಡನ್ ಗೋಪುರವನ್ನು ವಿಲಿಯಂ ದಿ ಕನ್ಕ್ವೈರರ್ ಸ್ಥಾಪನೆ ಮಾಡಿದ ನಂತರ ಅನೇಕ ಹಂತಗಳ ವಿಸ್ತರಣೆಯಾಗಿದ್ದರೂ, ಎಡ್ವರ್ಡ್ I ೧೨೮೫ರವರೆಗೆ ಮರುನಿರ್ಮಾಣವನ್ನು ಪೂರ್ಣಗೊಳಿಸುವ ತನಕ ಸಾಮಾನ್ಯ ವಿನ್ಯಾಸವು ಹಾಗೇ ಉಳಿದಿತ್ತು. ಕೋಟೆಯು ಬಹುತೇಕ12 acres (4.9 ha)ವಿಸ್ತೀರ್ಣವನ್ನು ಆವರಿಸಿದ್ದು, ಟವರ್ ಲಿಬರ್ಟೀಸ್ ಒಳಗೊಂಡ ಟವರ್ ಆಫ್ ಲಂಡನ್ ಸುತ್ತ ಮತ್ತಷ್ಟು6 acres (2.4 ha) ವಿಸ್ತೀರ್ಣವನ್ನು ಆವರಿಸಿದೆ- ಇದು ಕೋಟೆಯ ನೇರ ಪ್ರಭಾವದಲ್ಲಿರುವ ಮತ್ತು ಮಿಲಿಟರಿ ಕಾರಣಗಳಿಗಾಗಿ ತೆರವಾದ ನೆಲವಾಗಿದೆ.[೩] ಕೋಟೆಯ ಪಕ್ಕದಲ್ಲಿರುವ ನೆಲವನ್ನು ತೆರವಿನ ಸ್ಥಿತಿಯಲ್ಲಿ ಇಡಬೇಕೆಂದು ಹೆನ್ರಿ III ಆದೇಶ ನೀಡಿದ ನಂತರ, ೧೩ನೇ ಶತಮಾನದಲ್ಲಿ ಲಿಬರ್ಟಿಗಳ ಪೂರ್ವವರ್ತಿಗಳನ್ನು ಇರಿಸಲಾಯಿತು.[೪] ಜನಪ್ರಿಯ ಕಲ್ಪನೆಯ ನಡುವೆಯೂ, ಲಂಡನ್ ಗೋಪುರವು ಕಾಯಂ ಚಿತ್ರಹಿಂಸೆ ಕೋಣೆಯನ್ನು ಹೊಂದಿರಲಿಲ್ಲ. ಆದರೂ ವೈಟ್ ಟವರ್ ನೆಲಮಾಳಿಗೆಯು ನಂತರದ ಅವಧಿಗಳಲ್ಲಿ ರಾಕ್(ಚಿತ್ರಹಿಂಸೆ ಉಪಕರಣ)ನ್ನು ಒಳಗೊಂಡಿತು.[೫] ಟವರ್ ವಾರ್ಫ್‌ನ್ನು ಎಡ್ವರ್ಡ್ I ನೇತೃತ್ವದಲ್ಲಿ ಥೇಮ್ಸ್ ನದಿ ದಂಡೆಯಲ್ಲಿ ನಿರ್ಮಿಸಲಾಯಿತು ಮತ್ತು ರಿಚರ್ಡ್ II (೧೩೭೭-೧೩೯೯)ಆಳ್ವಿಕೆಯಲ್ಲಿ ಪ್ರಸಕ್ತ ಗಾತ್ರಕ್ಕೆ ವಿಸ್ತರಿಸಲಾಯಿತು.[೬]

ವೈಟ್ ಟವರ್(ಬಿಳಿಯ ಗೋಪುರ)[ಬದಲಾಯಿಸಿ]

ಪ್ರಥಮ ಮಹಡಿ ಮಟ್ಟದಲ್ಲಿದ್ದ ವೈಟ್ ಟವರ್‌ಗೆ ಮೂಲ ಪ್ರವೇಶ ದ್ವಾರ.

ವೈಟ್ ಟವರ್ ಕೇಂದ್ರ ಗೋಪುರವಾಗಿದೆ(ಡೋಂಜೊನ್ ಎಂದು ಕೂಡ ಹೆಸರಾಗಿದೆ).[೭]ಇದು ಮಧ್ಯಯುಗೀನ ಕೋಟೆಯಲ್ಲಿ ಸಾಮಾನ್ಯವಾಗಿ ಪ್ರಬಲವಾದ ರಚನೆಯಾಗಿದೆ ಮತ್ತು ಪ್ರಭುವಿಗೆ(ಈ ಪ್ರಕರಣದಲ್ಲಿ ರಾಜ ಅಥವಾ ಅವರ ಪ್ರತಿನಿಧಿ)ಸೂಕ್ತವಾದ ಬಿಡಾರಗಳನ್ನು ಹೊಂದಿದೆ.[೮] ಮಿಲಿಟರಿ ಇತಿಹಾಸಜ್ಞ ಅಲೆನ್ ಬ್ರೌನ್ ಪ್ರಕಾರ, ಮಹಾ ಗೋಪುರ(ವೈಟ್ ಟವರ್)ಕೂಡ ಅದರ ಶಕ್ತಿ, ಗಾಂಭೀರ್ಯದ ಗುಣಗಳಿಂದ ಮತ್ತು ರಾಜನ ವಸತಿಯಿಂದ ಅತ್ಯುತ್ತಮ ಡೊಂಜೊನ್ ಆಗಿದೆ.[೯] ಕ್ರೈಸ್ತ ಜಗತ್ತಿನಲ್ಲಿ ಅತೀ ದೊಡ್ಡ ಕೇಂದ್ರ ಗೋಪುರಗಳಲ್ಲಿ ಒಂದಾಗಿದ್ದು,[೧೦] ವೈಟ್ ಟವರ್ ಅತ್ಯಂತ ಸಂಪೂರ್ಣ ಹನ್ನೊಂದನೇ ಶತಮಾನದ ಯುರೋಪ್‌ನ ಅರಮನೆ ಎಂದು ಬಣ್ಣಿಸಲಾಗಿದೆ.[೧೧]

ವೈಟ್ ಟವರ್, ಅದರ ವಿಸ್ತರಿಸಿದ ಮೂಲೆ ಗೋಪುರಗಳ ರಹಿತವಾಗಿ, ತಳದಲ್ಲಿ 36 by 32 metres (118 by 105 ft) ನಷ್ಟು ಅಳತೆಯುಳ್ಳದ್ದಾಗಿದೆ ಮತ್ತು ದಕ್ಷಿಣದ ಕೋಟೆ(ತೆನೆ) ಮಾಳಿಗೆಯಲ್ಲಿ 27 m (90 ft) ಎತ್ತರಕ್ಕೆ ಏರುತ್ತದೆ. ರಚನೆಯು ಮೂಲತಃ ಮೂರು ಮಹಡಿಗಳ ಎತ್ತರದಿಂದ ಕೂಡಿದ್ದು, ನೆಲಮಾಳಿಗೆಯ ಮಹಡಿ, ಪ್ರವೇಶ ಮಟ್ಟ ಮತ್ತು ಮೇಲ್ಮಹಡಿಯನ್ನು ಹೊಂದಿದೆ. ಪ್ರವೇಶವು ನಾರ್ಮನ್ ಕೇಂದ್ರ ಗೋಪುರದಲ್ಲಿ ಸಾಮಾನ್ಯವಾಗಿರುವಂತೆ, ನೆಲದ ಮೇಲಿರುತ್ತದೆ. ಈ ಪ್ರಕರಣದಲ್ಲಿ ದಕ್ಷಿಣಾಭಿಮುಖವಾಗಿ ಇರುತ್ತದೆ ಮತ್ತು ಮರದ ಮೆಟ್ಟಲಿನ ಮೂಲಕ ಪ್ರವೇಶ ಕಲ್ಪಿಸಲಾಗಿದೆ. ದಾಳಿಯು ನಡೆದಲ್ಲಿ ಅದನ್ನು ತೆಗೆಯಬಹುದಾಗಿದೆ. ಹೆನ್ರಿ IIಆಳ್ವಿಕೆಯ ಸಂದರ್ಭದಲ್ಲಿ(೧೧೫೪-೧೧೮೯)., ಗೋಪುರದ ದಕ್ಷಿಣದ ಕಡೆಗೆ ಪ್ರವೇಶಕ್ಕೆ ಹೆಚ್ಚುವರಿ ರಕ್ಷಣೆಗಳನ್ನು ಒದಗಿಸಲು ವಿಸ್ತರಣೆಯನ್ನು ಸೇರಿಸಲಾಯಿತಾದರೂ, ಅದು ಉಳಿಯಲಿಲ್ಲ. ಪ್ರತಿಯೊಂದು ಮಹಡಿಯು ಮೂರು ಕೋಣೆಗಳಾಗಿ ವಿಭಜನೆಯಾಗಿದ್ದು, ಪಶ್ಚಿಮದಲ್ಲಿ ಅತೀ ದೊಡ್ಡದಾದ, ಈಶಾನ್ಯದಲ್ಲಿ ಸಣ್ಣ ಕೋಣೆ ಮತ್ತು ಆಗ್ನೇಯದಲ್ಲಿ ಪ್ರವೇಶ ಮತ್ತು ಮೇಲ್ಮಹಡಿಗಳನ್ನು ಹೊಂದಿರುವ ಪ್ರಾರ್ಥನಾಮಂದಿರವನ್ನು ಒಳಗೊಂಡಿದೆ.[೧೨] ಕಟ್ಟಡದ ಪಶ್ಚಿಮ ಮೂಲೆಗಳಲ್ಲಿ ಚೌಕದ ಗೋಪುರಗಳಿವೆ ಮತ್ತು ಈಶಾನ್ಯದಲ್ಲಿ ದುಂಡನೆಯ ಗೋಪುರವಿದ್ದು, ಸುರುಳಿಯಾಕಾರದ ಮೆಟ್ಟಿಲನ್ನು ಹೊಂದಿದೆ. ಆಗ್ನೇಯ ಮೂಲೆಯಲ್ಲಿ ದೊಡ್ಡ ಅರೆ ವೃತ್ತಾಕಾರದ ವಿಸ್ತರಣೆಯನ್ನು ಹೊಂದಿದ್ದು, ಇದು ಪ್ರಾರ್ಥನಾಮಂದಿರದ ಕಮಾನುಗೂಡಿಗೆ ನೆಲೆಯಾಗಿದೆ. ಕಟ್ಟಡವು ನಿರಾತಂಕ ನಿವಾಸ ಮತ್ತು ಭದ್ರಕೋಟೆಯಾಗುವ ಇಚ್ಛೆ ಹೊಂದಿದ್ದರಿಂದ, ಗೋಡೆಗಳಿಗೆ ಶೌಚಾಲಯಗಳನ್ನು ನಿರ್ಮಿಸಲಾಯಿತು ಮತ್ತು ನಾಲ್ಕು ಬೆಂಕಿಗೂಡುಗಳು ಸುಖೋಷ್ಣತೆಯನ್ನು ಒದಗಿಸಿದವು.[೧೧]

ಮುಖ್ಯ ಕಟ್ಟಡ ವಸ್ತು ಕೆಂಟ್‌ನ ರಾಗ್- ಸ್ಟೋನ್‌ ಆಗಿದ್ದು, ಸ್ಥಳೀಯ ಮಣ್ಣುಕಲ್ಲನ್ನು ಕೂಡ ಬಳಸಲಾಗಿದೆ. ಆದರೂ ಸ್ವಲ್ಪ ಉಳಿದುಕೊಂಡಿದ್ದು, ಕೇಯಿನ್ ಸ್ಟೋನ್ ಗೋಪುರದ ಮುಖದಲ್ಲಿ ವಿವರಗಳನ್ನು ಒದಗಿಸಲು ಉತ್ತರ ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಯಿತು. ೧೭ಮತ್ತು ೧೮ನೇ ಶತಮಾನದಲ್ಲಿ ಪೋರ್ಟ್‌ಲ್ಯಾಂಡ್‌ ಸ್ಟೋನ್‌ನಿಂದ ಬಹುತೇಕ ಬದಲಿಸಲಾಯಿತು. ಗೋಪುರದ ಬಹುತೇಕ ಕಿಟಕಿಗಳು ೧೮ನೇ ಶತಮಾನದಲ್ಲಿ ವಿಸ್ತರಿಸಿದ್ದರೂ, ಕೇವಲ ಎರಡು ಮೂಲ ಕಿಟಕಿಗಳನ್ನು-ಮರುವಿನ್ಯಾಸಗೊಳಿಸಿದ್ದರೂ, ಉದಾಹರಣೆಗಳು ಗ್ಯಾಲರಿ ಮಟ್ಟದ ದಕ್ಷಿಣ ಗೋಡೆಯಲ್ಲಿ ಉಳಿದಿವೆ.[೧೩]

ಗೋಪುರವನ್ನು ದಿಬ್ಬದ ಬದಿಯಲ್ಲಿ ಎತ್ತರದ ಮಟ್ಟದಲ್ಲಿ ನಿರ್ಮಿಸಲಾಗಿದ್ದು, ನೆಲಮಾಳಿಗೆಯ ಉತ್ತರದ ಬದಿಯು ಆಂಶಿಕವಾಗಿ ನೆಲದ ಮಟ್ಟಕ್ಕಿಂತ ಕಡಿಮೆಯಿದೆ.[೧೪] ಬಹುತೇಕ ಕೇಂದ್ರ ಗೋಪುರಗಳ ಮಾದರಿಯಲ್ಲಿ ಕೆಳಗಿನ ಮಹಡಿಯು ದಾಸ್ತಾನು ಕೋಣೆಯಾಗಿದ್ದು, ದಾಸ್ತಾನಿಗೆ ಬಳಸಲಾಗುತ್ತಿತ್ತು.[೧೫] ಕೋಣೆಗಳಲ್ಲಿ ಒಂದು ಕೋಣೆಯು ಬಾವಿಯನ್ನು ಹೊಂದಿತ್ತು. ವಿನ್ಯಾಸವು ಗೋಪುರದ ನಿರ್ಮಾಣವಾದಾಗಿನಿಂದ ಅದೇ ರೀತಿ ಉಳಿದಿದ್ದರೂ, ನೆಲಮಾಳಿಗೆಯ ಒಳಾಂಗಣವು ೧೮ನೇ ಶತಮಾನದ ದಿನಾಂಕಕ್ಕೆ ಸೇರಿದೆ. ಅದರ ನೆಲಮಟ್ಟವನ್ನು ತಗ್ಗಿಸಿ, ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಮರದ ಕಮಾನುಗಳನ್ನು ಇಟ್ಟಿಗೆಯಿಂದ ಬದಲಾಯಿಸಲಾಯಿತು.[೧೪] ನೆಲಮಾಳಿಗೆಯಲ್ಲಿ ಸಣ್ಣ ರಂಧ್ರಗಳ ಮೂಲಕ ಬೆಳಗಲಾಗಿತ್ತು.[೧೧]

ವೈಟ್ ಟವರ್ ಒಳಗಿರುವ ಸೇಂಟ್ ಜಾನ್ಸ್ ಪ್ರಾರ್ಥನಾ ಮಂದಿರ

ಪ್ರವೇಶದ ಮಹಡಿಯನ್ನು ಬಹುಶಃ ಕಾನ್ಸ್‌ಟೇಬಲ್ ಆಫ್ ದಿ ಟವರ್ ಮತ್ತು ಇತರೆ ಮುಖ್ಯ ಅಧಿಕಾರಿಗಳ ಬಳಕೆಗೆ ಉದ್ದೇಶಿಸಲಾಗಿತ್ತು. ದಕ್ಷಿಣದ ಪ್ರವೇಶದ್ವಾರವನ್ನು ೧೭ನೇ ಶತಮಾನದ ಸಂದರ್ಭದಲ್ಲಿ ಮುಚ್ಚಲಾಗಿತ್ತು ಮತ್ತು ೧೯೭೩ರವರೆಗೆ ಮರುತೆರೆದಿರಲಿಲ್ಲ. ಮೇಲಿನ ಮಹಡಿಗೆ ತೆರಳುವವರು ಪೂರ್ವದಲ್ಲಿ ಸಣ್ಣ ಕೋಣೆಯ ಮೂಲಕ ಹಾದುಹೋಗಬೇಕಿತ್ತು. ಇದನ್ನು ಪ್ರವೇಶದ ಮಹಡಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಸೇಂಟ್ ಜಾನ್ಸ್ ಪ್ರಾರ್ಥನಾಮಂದಿರದ ನೆಲಮಾಳಿಗೆಯು ಆಗ್ನೇಯ ಮೂಲವನ್ನು ಆಕ್ರಮಿಸಿದ್ದು, ಪೂರ್ವದ ಕೋಣೆಯಿಂದ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ನೆಲಮಾಳಿಗೆಯ ಉತ್ತರ ಗೋಡೆಯಲ್ಲಿ ಗೂಡೊಂದನ್ನು ಕಲ್ಪಿಸಲಾಗಿದ್ದು, ಟವರ್ ಹಿಸ್ಟರಿ ಎಟ್ ದಿ ರಾಯಲ್ ಆರ್ಮರೀಸ್ ಪಾಲಕರ ಪ್ರಕಾರ, ಕಿಟಕಿರಹಿತ ರೂಪ ಮತ್ತು ನಿರ್ಬಂಧಿತ ಪ್ರವೇಶವು ರಾಜಮನೆತನದ ಒಡವೆಗಳನ್ನು ಮತ್ತು ಮುಖ್ಯ ದಾಖಲೆಗಳನ್ನು ಸುರಕ್ಷಿತವಾಗಿ ಇಡುವ ಭದ್ರಕೋಣೆಗೆ ವಿನ್ಯಾಸಗೊಳಿಸಲಾಗಿತ್ತು ಎಂದು ಸೂಚಿಸಲಾಗಿದೆ.[೧೪]

ಮೇಲಿನ ಮಹಡಿಯು ಪಶ್ಚಿಮದಲ್ಲಿ ಮಹಾ ಸಭಾಂಗಣವನ್ನು ಮತ್ತು ಪೂರ್ವದಲ್ಲಿ ನಿವಾಸದ ಕೋಣೆಯನ್ನು ಹೊಂದಿತ್ತು.– ಎರಡೂ ಮೂಲತಃ ನೆಲಮಹಡಿಗೆ ತೆರೆದಿದ್ದು, ಗೋಡೆಗೆ ನಿರ್ಮಿಸಲಾದ ಗ್ಯಾಲರಿಯಿಂದ ಸುತ್ತುವರಿದಿದೆ –ಮತ್ತು ಆಗ್ನೇಯದಲ್ಲಿ ಸೇಂಟ್ ಜಾನ್ಸ್ ಪ್ರಾರ್ಥನಾ ಮಂದಿರವಿದೆ. ೧೫ನೇ ಶತಮಾನದಲ್ಲಿ ಮೇಲಿನ ಮಟ್ಟಕ್ಕೆ ಹೊಸ ಮಹಡಿಯ ಮಟ್ಟವನ್ನು ಪ್ರಸಕ್ತ ಛಾವಣಿಯ ಜತೆಗೆ ಅಳವಡಿಸಲಾಯಿತು.[೧೬][೧೨] ಸೇಂಟ್ ಜಾನ್ಸ್ ಪ್ರಾರ್ಥನಾ ಮಂದಿರವು ವೈಟ್ ಟವರ್(ಬಿಳಿಯ ಗೋಪುರ)ದ ಮೂಲ ವಿನ್ಯಾಸದ ಭಾಗವಾಗಿರಲಿಲ್ಲ. ನೆಲಮಾಳಿಗೆಯ ಗೋಡೆಗಳ ನಂತರ ಕಮಾನುಗೂಡಿನ ಆಕಾರದ ವಿಸ್ತರಣೆಯನ್ನು ನಿರ್ಮಿಸಲಾಯಿತು.[೧೪] ಗೋಪುರದ ರಚನೆಯಾದಾಗಿನಿಂದ ಅದರ ನಿರ್ವಹಣೆ ಮತ್ತು ವಿನ್ಯಾಸದಲ್ಲಿ ಬದಲಾವಣೆಗಳ ಕಾರಣದಿಂದ, ಪ್ರಾರ್ಥನಾ ಮಂದಿರವನ್ನು ಹೊರತುಪಡಿಸಿ, ಮೂಲ ಒಳಾಂಗಣದಲ್ಲಿ ಉಳಿದಿದ್ದು ಕಡಿಮೆಯಾಗಿತ್ತು.[೧೭] ಪ್ರಾರ್ಥನಾಮಂದಿರದ ಪ್ರಸಕ್ತ ತೆರೆದ ಮತ್ತು ಅಲಂಕೃತವಲ್ಲದ ನೋಟವು ನಾರ್ಮನ್ ಯುಗದಲ್ಲಿ ಹೇಗಿತ್ತು ಎನ್ನುವುದನ್ನು ನೆನಪಿಸುತ್ತದೆ. ೧೩ನೇ ಶತಮಾನದಲ್ಲಿ, ಹೆನ್ರಿIIIರ ಆಡಳಿತದ ಸಂದರ್ಭದಲ್ಲಿ, ಪ್ರಾರ್ಥನಾಮಂದಿರವನ್ನು ಚಿನ್ನ ಲೇಪಿತ ಶಿಲುಬೆ ಮುಂತಾದ ಆಭರಣ ಮತ್ತು ಬಣ್ಣದ ಗಾಜಿನ ಕಿಟಕಿಗಳಿಂದ ಅಲಂಕರಿಸಲಾಗಿತ್ತು. ಇವು ವಿರ್ಜಿನ್ ಮೇರಿ ಮತ್ತು ಹೋಲಿ ಟ್ರಿನಿಟಿಯನ್ನು ಬಿಂಬಿಸುತ್ತಿತ್ತು.[೧೮]

ಅತೀ ಒಳಗಿನ ವಾರ್ಡ್[ಬದಲಾಯಿಸಿ]

ಅತೀ ಒಳಗಿನ ವಾರ್ಡ್ ವೈಟ್ ಟವರ್‌ನ ತಕ್ಷಣದ ದಕ್ಷಿಣಕ್ಕಿರುವ ಪ್ರದೇಶವನ್ನು ಆವರಿಸಿದ್ದು, ಒಂದೊಮ್ಮೆ ಥೇಮ್ಸ್ ನದಿಯ ತುದಿಯ ಪ್ರದೇಶದವರೆಗೆ ವ್ಯಾಪಿಸಿತ್ತು. ಇತರೆ ಕೋಟೆಗಳ ರೀತಿಯಲ್ಲಿ, ಉದಾಹರಣೆಗೆ, ೧೧ನೇ ಶತಮಾನದ ಹೆನ್ ಡೊಮೆನ್ ರೀತಿಯಲ್ಲಿ ಅತ್ಯಂತ ಒಳಗಿನ ವಾರ್ಡ್ ಬಹುಶಃ ಗೋಪುರದ ಅಡಿಪಾಯದಿಂದ ಮರದ ಕಟ್ಟಡಗಳಿಂದ ತುಂಬಿತ್ತು. ರಾಜಮನೆತನದ ಬಿಡಾರಗಳು ವೈಟ್ ಟವರ್‌ನಿಂದ ಅತ್ಯಂತ ಒಳಗಿನ ವಾರ್ಡ್‌ಗೆ ಅತಿಕ್ರಮಿಸುವುದು ಅನಿಶ್ಚಿತವಾಗಿದ್ದರೂ, ೧೧೭೦ರ ದಶಕದಲ್ಲಿ ಇದು ಸಂಭವಿಸಿತು.[೧೩] ಬಿಡಾರಗಳನ್ನು ೧೨೨೦ ಮತ್ತು ೧೨೩೦ರ ದಶಕಗಳಲ್ಲಿ ನವೀಕರಿಸಲಾಯಿತು ಮತ್ತು ವಿಸ್ತರಿಸಲಾಯಿತು. ಅದು ವಿಂಡ್ಸರ್ ಕೋಟೆ ರೀತಿಯಲ್ಲಿ ಇತರ ಅರಮನೆ ನಿವಾಸಗಳ ಜತೆ ಹೋಲಿಕೆಯಾಯಿತು.[೧೯] ನದಿಯುದ್ದಕ್ಕೂ ಅತ್ಯಂತ ಒಳಗಿನ ವಾರ್ಡ್ ಗೋಡೆಯ ಮೂಲೆಗಳಲ್ಲಿ ಸ್ಥಾಪಿತವಾದ ವೇಕ್‌ಫೀಲ್ಡ್ ಮತ್ತು ಲ್ಯಾಂಥೋರ್ನ್ ಗೋಪುರಗಳ ನಿರ್ಮಾಣವು ೧೨೨೦ರಲ್ಲಿ ಆರಂಭವಾಯಿತು.[೨೦][nb ೧] ಬಹುಶಃ ಅವು ರಾಣಿ ಮತ್ತು ರಾಜನಿಗೆ ಕ್ರಮವಾಗಿ ಖಾಸಗಿ ನಿವಾಸಗಳಾಗಿ ಕಾರ್ಯನಿರ್ವಹಿಸಿರಬಹುದು. ರಾಜಮನೆತನದ ಕೋಣೆಗಳು ಹೇಗೆ ಅಲಂಕೃತವಾದವು ಎನ್ನುವುದಕ್ಕೆ ಮುಂಚಿನ ಸಾಕ್ಷ್ಯವು ಹೆನ್ರಿ IIIಆಡಳಿತಾವಧಿಯಿಂದ ಸಿಕ್ಕಿದೆ: ರಾಣಿಯ ಕೋಣೆಗೆ ಸುಣ್ಣ ಬಳಿಯಲಾಯಿತು ಮತ್ತು ಹೂವುಗಳ ನಕಲಿ ಕಲ್ಲಿನಕೆತ್ತನೆಗಳ ವರ್ಣಚಿತ್ರವನ್ನು ಬಿಡಿಸಲಾಯಿತು. ಎರಡು ಗೋಪುರಗಳ ನಡುವೆ ವಾರ್ಡ್ ದಕ್ಷಿಣಕ್ಕೆ ಮಹಾ ಸಭಾಂಗಣ ಅಸ್ತಿತ್ವದಲ್ಲಿದೆ.[೨೧] ಇದು ಹೆನ್ರಿIII ವಿಂಚೆಸ್ಟರ್ ಕೋಟೆಯಲ್ಲಿ ನಿರ್ಮಿಸಿದ ರೀತಿಯಲ್ಲಿದ್ದರೂ ಗಾತ್ರದಲ್ಲಿ ಸ್ವಲ್ಪ ಸಣ್ಣದಾಗಿದೆ.[೨೨] ವೇಕ್‌ಫೀಲ್ಡ್ ಗೋಪುರದ ಬಳಿ ಪೋಸ್ಟರ್ನ್ ಗೇಟ್‌ಯಿದ್ದು, ಕಿಂಗ್ ನಿವಾಸಗಳಿಗೆ ಖಾಸಗಿ ಪ್ರವೇಶಕ್ಕೆ ಅವಕಾಶ ನೀಡಿದೆ. ಅತ್ಯಂತ ಒಳಗಿನ ವಾರ್ಡ್ ಮೂಲತಃ ರಕ್ಷಣಾತ್ಮಕ ರಂಧ್ರದಿಂದ ಸುತ್ತುವರಿದಿದ್ದು, ೧೨೨೦ರ ದಶಕದಲ್ಲಿ ತುಂಬಲಾಯಿತು. ಈ ಸಮಯದಲ್ಲಿ, ವಾರ್ಡ್‌ನಲ್ಲಿ ಅಡುಗೆಮನೆಯನ್ನು ನಿರ್ಮಿಸಲಾಯಿತು.[೨೩] ೧೬೬೬ ಮತ್ತು ೧೬೭೬ರ ನಡುವೆ ಅತ್ಯಂತ ಒಳಗಿನ ವಾರ್ಡ್ ಬದಲಿಸಲಾಯಿತು ಮತ್ತು ಅರಮನೆ ಕಟ್ಟಡಗಳನ್ನು ತೆಗೆಯಲಾಯಿತು.[೨೪] ವೈಟ್ ಟವರ್ ಸುತ್ತಲಿನ ಪ್ರದೇಶವನ್ನು ತೆರವು ಮಾಡಲಾಯಿತು. ಇದರಿಂದ ಅಲ್ಲಿಗೆ ತಲುಪುವ ಯಾರೇ ಆದರೂ ತೆರೆದ ಮೈದಾನವನ್ನು ದಾಟಬೇಕಿತ್ತು. ಜಿವೆಲ್ ಹೌಸ್ ನೆಲಸಮ ಮಾಡಲಾಯಿತು ಮತ್ತು ಕ್ರೌನ್ ಜಿವೆಲ್ಸ್(ರಾಜಪ್ರಭುತ್ವದ ಆಭರಣಗಳು)ಮಾರ್ಟಿನ್ ಗೋಪುರಕ್ಕೆ ಸ್ಥಳಾಂತರವಾದವು.[೨೫]

Interior of the innermost ward. To the right is the 11th-century White Tower; the structure at the end of the walkway to the left is Wakefield Tower. Beyond that can be seen Traitors' Gate.

ಒಳಗಿನ ವಾರ್ಡ್[ಬದಲಾಯಿಸಿ]

ವಾಟರ್‌ಲೂ ಬ್ಯಾರಕ್‌ಗಳ ದಕ್ಷಿಣದ ಮುಖ.

ಒಳಗಿನ ವಾರ್ಡ್‌ನ್ನು ರಿಚರ್ಡ್ ದಿ ಲಯನ್‌ಹಾರ್ಟ್ ಆಡಳಿತಾವಧಿಯಲ್ಲಿ ಸೃಷ್ಟಿಸಲಾಯಿತು. ಅತ್ಯಂತ ಒಳಗಿನ ವಾರ್ಡ್‍‌ನ ಪಶ್ಚಿಮಕ್ಕೆ ಕಂದಕವನ್ನು ಅಗೆದಾಗ, ಕೋಟೆಯ ಗಾತ್ರವನ್ನು ಪರಿಣಾಮಕಾರಿಯಾಗಿ ದುಪ್ಪಟ್ಟುಗೊಳಿಸಲಾಯಿತು.[೨೬][೨೭] ಹೆನ್ರಿIII ವಾರ್ಡ್‌ನ ಪೂರ್ವಮತ್ತು ಉತ್ತರದ ಗೋಡೆಗಳನ್ನು ಸೃಷ್ಟಿಸಿದರು ಮತ್ತು ವಾರ್ಡ್ ಆಯಾಮಗಳು ಇಂದಿಗೂ ಉಳಿದುಕೊಂಡಿವೆ.[೪] ಹೆನ್ರಿಯ ಬಹುತೇಕ ಕಾರ್ಯಗಳು ಉಳಿದುಕೊಂಡಿದ್ದು, ಅವರು ನಿರ್ಮಿಸಿದ ೯ ಗೋಪುರಗಳ ಪೈಕಿ ಕೇವಲ ಎರಡು ಮಾತ್ರ ಸಂಪೂರ್ಣವಾಗಿ ಮರುನಿರ್ಮಾಣವಾಗಿವೆ.[೨೮] ವೇಕ್‌ಫೀಲ್ಡ್ ಮತ್ತು ಲ್ಯಾಂಥೋರ್ನ್ ಗೋಪುರಗಳ ನಡುವೆ, ಅತ್ಯಂತ ಒಳಗಿನ ಗೋಡೆ ಒಳಗಿನ ವಾರ್ಡ್‌ಗೆ ಕೂಡು ಗೋಡೆಯಾಗಿ ಸೇವೆ ಸಲ್ಲಿಸುತ್ತದೆ.[೨೯] ಒಳಗಿನ ವಾರ್ಡ್‌ಗೆ ಮುಖ್ಯ ಪ್ರವೇಶ ದ್ವಾರವು ಗೇಟ್‌ಹೌಸ್ ಮೂಲಕವಿದ್ದು, ಈಗಿನ ಬ್ಯೂಚಾಂಪ್ ಗೋಪುರದ ಸ್ಥಳದ ಪಶ್ಚಿಮ ಗೋಡೆಯಲ್ಲಿದೆ. ಒಳಗಿನ ವಾರ್ಡ್‌ನ ಪಶ್ಚಿಮ ಕೂಡು ಗೋಡೆಯನ್ನು ಎಡ್ವರ್ಡ್ I ಮರುನಿರ್ಮಾಣ ಮಾಡಿದ.[೩೦] ೧೩ನೇ ಶತಮಾನದ ಬ್ಯೂಚಾಂಪ್ ಗೋಪುರವು ರೋಮನ್ನರು ೫ನೇ ಶತಮಾನದಲ್ಲಿ ನಿರ್ಗಮನವಾಗುವ ತನಕ ಬ್ರಿಟನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಇಟ್ಟಿಗೆಯನ್ನು ಕಟ್ಟಡದ ವಸ್ತುವಾಗಿ ಬಳಸಿದ್ದರ ಗುರುತಾಗಿದೆ.[೩೧] ಬ್ಯೂಚಾಂಪ್ ಗೋಪುರವು ಕೂಡು ಗೋಡೆಯಲ್ಲಿ ಹರಡಿರುವ ೧೩ ಗೋಪುರಗಳಲ್ಲಿ ಒಂದಾಗಿದೆ. ನೈರುತ್ಯ ಮೂಲೆಯಿಂದ ಅಪ್ರದಕ್ಷಿಣವಾಗಿ, ಅವು ಬೆಲ್, ಬ್ಯೂಚಾಂಪ್, ಡೆವೆರೆಕ್ಸ್, ಬೋಯರ್, ಬ್ರಿಕ್, ಮಾರ್ಟಿನ್, ಕಾನ್ಸ್‌ಟೇಬಲ್, ಬ್ರಾಡ್ ಆರೊ, ಸಾಲ್ಟ್, ಲ್ಯಾಂಥೋರ್ನ್, ವೇಕ್‌ಫೀಲ್ಡ್ ಮತ್ತು ಬ್ಲಡಿ ಟವರ್ ಒಳಗೊಂಡಿವೆ.[೨೯] ಈ ಗೋಪುರಗಳು ಸಮರ್ಥ ಶತ್ರುವಿನ ವಿರುದ್ಧ ನಿಯೋಜನೆಗೆ ವ್ಯೂಹ ಸಿಡಿತಕ್ಕೆ ಸ್ಥಾನಗಳನ್ನು ಕಲ್ಪಿಸುತ್ತದೆ ಅವು ವಾಸ್ತವ್ಯವನ್ನು ಸಹ ಒಳಗೊಂಡಿವೆ. ಹೆಸರು ಸೂಚಿಸುವಂತೆ ಬೆಲ್ ಟವರ್ ಗಂಟೆ ಗೋಪುರಕ್ಕೆ ನೆಲೆಯಾಗಿದ್ದು, ದಾಳಿಯ ಸಂದರ್ಭದಲ್ಲಿ ಕಟ್ಟೆಚ್ಚರವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಉದ್ದದ ಬಿಲ್ಲುಗಳನ್ನು, ಅಡ್ಡಬಿಲ್ಲುಗಳನ್ನು ಮತ್ತು ಕವಣೆಯಂತ್ರದ ತಯಾರಿಕೆಗೆ ಮತ್ತು ಇತರೆ ಮುತ್ತಿಗೆಯ ಮತ್ತು ಕೈ ಶಸ್ತ್ರಾಸ್ತ್ರಗಳ ತಯಾರಿಕೆಗೆ ಜವಾಬ್ದಾರಿಯಾದ ರಾಜಮನೆತನದ ಬಿಲ್ಲಿನ ತಯಾರಕ ಬೋಯರ್ ಗೋಪುರದಲ್ಲಿ ಕಾರ್ಯಾಗಾರವನ್ನು ಹೊಂದಿದ್ದಾನೆ. ಲ್ಯಾಂಥರ್ನ್ ಗೋಪುರದ ಮೇಲಿನ ಸಣ್ಣ ಗೋಪುರವನ್ನು ರಾತ್ರಿಯಲ್ಲಿ ಗೋಪುರವನ್ನು ಸಮೀಪಿಸುವ ವಾಹನಗಳು ಸಂಜ್ಞಾಕೇಂದ್ರವಾಗಿ ಬಳಸಿದವು.[೩೨]

ಹೆನ್ರಿ ವಿಸ್ತರಣೆ ಫಲವಾಗಿ, ಗೋಪುರದ ಹೊರಗೆ ಮುಂಚೆಯಿದ್ದ ನಾರ್ಮನ್ ಪ್ರಾರ್ಥನಾಮಂದಿರ ಸೇಂಟ್ ಪೀಟರ್ ಅಡ್ ವಿಂಕುಲಾವನ್ನು ಕೋಟೆಗೆ ಸೇರಿಸಲಾಯಿತು. ಹೆನ್ರಿ ಪ್ರಾರ್ಥನಾಮಂದಿರವನ್ನು ಸ್ವತಃ ಅವನಿಗೆ ಮತ್ತು ಅವನ ರಾಣಿಗೆ ಗಾಜಿನ ಕಿಟಕಿಗಳನ್ನು ಮತ್ತು ಮಳಿಗೆಗಳನ್ನು ಸೇರಿಸುವ ಮೂಲಕ ಅಲಂಕರಿಸಿದ.[೨೮] ಇದನ್ನು ಎಡ್ವರ್ಡ್I £೩೦೦ಗಿಂತ ಹೆಚ್ಚಿನ ವೆಚ್ಚದಲ್ಲಿ ಮರುನಿರ್ಮಾಣ ಮಾಡಿದ.(೨೦೦೮ರಲ್ಲಿ ಅದರ ಮೌಲ್ಯ £೧೪೨,೦೦೦)[nb ೨][೩೪]ಪುನಃ ಹೆನ್ರಿ VIII ೧೫೧೯ರಲ್ಲಿ ಮರುನಿರ್ಮಾಣ ಮಾಡಿದ. ಪ್ರಸಕ್ತ ಕಟ್ಟಡವು ಈ ಅವಧಿಯ ದಿನಾಂಕದಿಂದ ಕೂಡಿದ್ದು, ಪ್ರಾರ್ಥನಾಮಂದಿರವನ್ನು ೧೯ನೇ ಶತಮಾನದಲ್ಲಿ ಮರುಸಜ್ಜುಗೊಳಿಸಲಾಗಿದೆ.[೩೫] ವೇಕ್‌ಫೀಲ್ಡ್ ಗೋಪುರದ ತಕ್ಷಣದ ಪಶ್ಚಿಮಕ್ಕೆ, ಬ್ಲಡಿ ಟವರ್‌ನ್ನು ಒಳವಾರ್ಡ್‌ನ ಕೂಡು ಗೋಡೆ ನಿರ್ಮಾಣದ ಕಾಲದಲ್ಲೇ ನಿರ್ಮಿಸಲಾಯಿತು ಮತ್ತು ವಾಟರ್ ಗೇಟ್ ರೀತಿಯಲ್ಲಿ ಥೇಮ್ಸ್ ನದಿಯಿಂದ ಕೋಟೆಗೆ ಪ್ರವೇಶವನ್ನು ಒದಗಿಸಿತು. ಇದೊಂದು ಸಣ್ಣ ರಚನೆಯಾಗಿದ್ದು, ಪೋರ್ಟ್‌ಕುಲ್ಲಿಸ್ (ಜಾರುವ ಬಾಗಿಲು)ಮತ್ತು ಗೇಟ್‌ನಿಂದ ರಕ್ಷಣೆ ಪಡೆದಿದೆ.[೩೬] ಬ್ಲಡಿ ಟವರ್ ಪ್ರಿನ್ಸಸ್ ಇನ್ ದಿ ಟವರ್ ಹತ್ಯೆಯ ಸ್ಥಳವೆಂದು ನಂಬಿದ್ದರಿಂದ ೧೬ನೇ ಶತಮಾನದಲ್ಲಿ ಈ ಹೆಸರನ್ನು ಪಡೆಯಿತು.[೩೭] ೧೩೯೯ ಮತ್ತು ೧೩೪೧ರ ನಡುವೆ,ಕೂಡು ಗೋಡೆಗೆ ಬೆಲ್ ಮತ್ತು ಸಾಲ್ಟ್ ಗೋಪುರಗಳ ನಡುವೆ ಗೇಟ್‌ಹೌಸ್ ನಿರ್ಮಿಸಲಾಯಿತು.[೩೮] ಟ್ಯೂಡರ್ ಅವಧಿಯಲ್ಲಿ, ಉತ್ತರ ಒಳವಾರ್ಡ್ ಒಳಗೆ ಯುದ್ಧಸಾಮಗ್ರಿಗಳ ದಾಸ್ತಾನಿಗೆ ಕಟ್ಟಡಗಳ ಪಂಕ್ತಿಯನ್ನು ನಿರ್ಮಿಸಲಾಯಿತು.[೩೯] ಕೋಟೆಯ ಕಟ್ಟಡಗಳನ್ನು ಸ್ಟಾರ್ಟ್ ಅವಧಿಯಲ್ಲಿ ಮರುರೂಪಿಸಲಾಯಿತು. ಬಹುತೇಕ ಆಫೀಸ್ ಆಫ್ ಆರ್ಡ್‌ನನ್ಸ್ ಆಶ್ರಯದಲ್ಲಿ ಮರುರೂಪಿಸಲಾಯಿತು. ೧೬೬೩ರಲ್ಲಿ ಒಳ ವಾರ್ಡ್‌ನಲ್ಲಿ ಹೊಸ ಉಗ್ರಾಣವನ್ನು(ಈಗ ನ್ಯೂ ಆರ್ಮರೀಸ್ ಎಂದು ಹೆಸರಾಗಿದೆ)ನಿರ್ಮಿಸಲು £೪,೦೦೦(೨೦೦೮ರಲ್ಲಿ £೪೬೦,೦೦೦ ಖರ್ಚು ಮಾಡಲಾಗಿದೆ)ಖರ್ಚುಮಾಡಲಾಗಿದೆ.[nb ೩][೪೦] ವೈಟ್ ಟವರ್ ಉತ್ತರಕ್ಕೆ ಗ್ರಾಂಡ್ ಸ್ಟೋರ್‌ಹೌಸ್ ನಿರ್ಮಾಣವನ್ನು ೧೬೮೮ರಲ್ಲಿ ಆರಂಭಿಸಲಾಯಿತು. ಶಿಥಿಲಗೊಂಡ ಟ್ಯುಡರ್ ಉಗ್ರಾಣಗಳ ಪಂಕ್ತಿಯ ಸ್ಥಳದಲ್ಲೇ ಅದನ್ನು ನಿರ್ಮಿಸಲಾಯಿತು.[೪೧]ಅದು ೧೮೪೧ರಲ್ಲಿ ಬೆಂಕಿಯಿಂದ ನಾಶವಾಗಿತ್ತು. ಸ್ಥಳದಲ್ಲಿ ವಾಟರ್‌ಲೂ ಸೈನಿಕರ ಸಾಲುಮನೆಗಳನ್ನು ನಿರ್ಮಿಸಲಾಯಿತು ಮತ್ತು ಇಂದಿಗೂ ಉಳಿದಿದ್ದು,[೪೨] ಕ್ರೌನ್ ಜಿವೆಲ್ಸ್‌ಗೆ ಆವಾಸಸ್ಥಾನವಾಗಿದೆ.[೪೩]

ಹೊರ ವಾರ್ಡ್[ಬದಲಾಯಿಸಿ]

ಎಡ್ವರ್ಡ್ I ಗೋಪುರಕ್ಕೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಮೂರನೇ ವಾರ್ಡ್ ಸೃಷ್ಟಿಸಲಾಯಿತು ಮತ್ತು ಕಿರಿದಾದ ಆವರಣ ಸಂಪೂರ್ಣವಾಗಿ ಕೋಟೆಯನ್ನು ಸುತ್ತುವರಿದಿದೆ. ಇದೇ ಸಮಯದಲ್ಲಿ ಕೋಟೆಯ ವಾಯವ್ಯ ಮೂಲೆಯಲ್ಲಿ ಲೆಗ್ಸ್ ಮೌಂಟ್ ಎಂದು ಹೆಸರಾದ ಕೊತ್ತಲವನ್ನು ನಿರ್ಮಿಸಲಾಯಿತು. ಈಶಾನ್ಯ ಮೂಲೆಯಲ್ಲಿರುವ ಕೊತ್ತಲ ಬ್ರಾಸ್ ಮೌಂಟ್ ನಂತರದ ಸೇರ್ಪಡೆಯಾಗಿದೆ. ಪೂರ್ವ ಗೋಡೆಯಲ್ಲಿರುವ ಮೂರು ಆಯಾತಾಕಾರದ ಗೋಪುರಗಳನ್ನು15 metres (49 ft) ೧೮೪೩ರಲ್ಲಿ ಉರುಳಿಸಲಾಯಿತು. ಕೊತ್ತಲಗಳು ಟ್ಯೂಡರ್ ಅವಧಿಗೆ ಸೇರಿದ್ದೆಂದು ಸಾಮಾನ್ಯವಾಗಿ ಹೇಳಿದರೂ, ಇದನ್ನು ಬೆಂಬಲಿಸುವ ಯಾವುದೇ ಸಾಕ್ಷ್ಯಗಳಿಲ್ಲ; ಪ್ರಾಕ್ತನಶಾಸ್ತ್ರ ತನಿಖೆಗಳು ಲೆಗ್ಸ್ ಮೌಂಟ್ ಎಡ್ವರ್ಡ್ ಯುಗಕ್ಕೆ ಸೇರಿದ್ದೆಂದು ಸೂಚಿಸುತ್ತವೆ.[೪೪] ಸ್ಥಗಿತಗೊಂಡ ಕೋಟೆ(ತೆನೆ)ಮಾಳಿಗೆ (ಕೋಟೆಯ ಕಂಡಿಕೈಪಿಡಿ ಎಂದು ಕೂಡ ಕರೆಯಲಾಗುತ್ತದೆ)ಯು ಲೆಗ್ಸ್ ಮೌಂಟ್ ದಕ್ಷಿಣ ಬದಿಯಲ್ಲಿದ್ದು, ಲಂಡನ್ ಗೋಪುರದಲ್ಲಿ ಉಳಿದಿರುವ ಏಕಮಾತ್ರ ಮಧ್ಯಯುಗೀನ ಕೋಟೆ(ತೆನೆ)ಮಾಳಿಗೆಯಾಗಿದೆ(ಉಳಿದವು ವಿಕ್ಟೋರಿಯನ್ ಬದಲಿಗಳು).[೪೫] ಕೋಟೆಯ ಹೊಸ 50-metre (160 ft)ಮಿತಿಗಳ ಆಚೆ ಹೊಸ ಕಂದಕವನ್ನು ಅಗೆಯಲಾಗಿದ್ದು,[೪೬] ಇದು ಮೂಲತಃ 4.5 metres (15 ft)ಮಧ್ಯದಲ್ಲಿ ಇಂದಿರುವುದಕ್ಕಿಂತ ಆಳವಾಗಿತ್ತು.[೪೪] ಹೊಸ ಕೂಡುಗೋಡೆಯ ಸೇರ್ಪಡೆಯೊಂದಿಗೆ, ಲಂಡನ್ ಗೋಪುರದ ಹಳೆಯ ಮುಖ್ಯ ಪ್ರವೇಶವನ್ನು ಮಸುಕಾಗಿಸಲಾಯಿತು ಮತ್ತು ಅನಗತ್ಯವೆನಿಸಿತು; ಬಾಹ್ಯ ಗೋಡೆಯ ಪರಿಧಿಯ ನೈರುತ್ಯ ಮೂಲೆಯಲ್ಲಿ ಹೊಸ ಪ್ರವೇಶವನ್ನು ಕಲ್ಪಿಸಲಾಯಿತು. ಸಂಕೀರ್ಣವು ಒಳ ಮತ್ತು ಹೊರ ಗೇಟ್‌ಹೌಸ್ ಮತ್ತು ಕಾಪುಗೋಪುರವನ್ನು[೪೭] ಹೊಂದಿದೆ. ಕನಿಷ್ಠ ೧೩೩೦ರ ದಶಕದವರೆಗೆ ರಾಜಮನೆತನದ ಮೃಗಾಲಯದ ಭಾಗವಾಗಿ ಪ್ರಾಣಿಗಳ ಜತೆ ಸಂಬಂಧ ಹೊಂದಿರುವುದರಿಂದ ಇದು ಲಯನ್ ಟವರ್ ಎಂದು ಹೆಸರಾಗಿದೆ.[೪೮] ಲಯನ್ ಟವರ್ ಸ್ವತಃ ಉಳಿದುಕೊಂಡಿಲ್ಲ.[೪೭] ಥೇಮ್ಸ್ ನದಿಯಿಂದ ಮುಂಚೆ ಮುಳುಗಿದ್ದ ನೆಲಕ್ಕೆ ಲಂಡನ್ ಗೋಪುರದ ದಕ್ಷಿಣ ಬದಿಯನ್ನು ಎಡ್ವರ್ಡ್ ವಿಸ್ತರಿಸಿದ. ಈ ಗೋಡೆಯಲ್ಲಿ, ೧೨೭೫ಮತ್ತು ೧೨೭೯ರ ನಡುವೆ ಅವರು ಸೇಂಟ್ ಥಾಮಸ್ ಗೋಪುರವನ್ನು ನಿರ್ಮಿಸಿದ. ಇದು ನಂತರ ಟ್ರೈಟರ್ಸ್ ಗೇಟ್ ಎಂದು ಹೆಸರಾಯಿತು. ಇದು ಕೋಟೆಯ ವಾಟರ್-ಗೇಟ್‌ ರೀತಿಯಲ್ಲಿ ಬ್ಲಡಿ ಟವರ್‌ಗೆ ಬದಲಿಯಾಯಿತು. ಇಂಗ್ಲೆಂಡ್‌ನಲ್ಲಿ ಕಟ್ಟಡವು ವಿಶಿಷ್ಠವಾಗಿದ್ದು, ಪ್ಯಾರಿಸ್‌ನ ಲೋವೆರ್‌ನಲ್ಲಿ ಈಗ ನೆಲಸಮವಾದ ವಾಟರ್ ಗೇಟ್‌ಗೆ ಅತೀ ಸಮಾಂತರವಾಗಿದೆ. ಕೋಟೆಯ ಮೇಲೆ ನದಿಯ ಕಡೆಯಿಂದ ದಾಳಿಯ ಸಂದರ್ಭವನ್ನು ಎದುರಿಸಲು ಬಂದರುಕಟ್ಟೆ ಬಾಣದ ರಂಧ್ರಗಳನ್ನು ಒಳಗೊಂಡಿದ್ದು, ಪ್ರವೇಶದ್ವಾರದಲ್ಲಿ ಒಳಕ್ಕೆ ಪ್ರವೇಶಿಸುವವರನ್ನು ನಿಯಂತ್ರಿಸಲು ಜಾಲಂಧರದ ಚೌಕಟ್ಟನ್ನು ನಿರ್ಮಿಸಲಾಗಿದೆ. ಪ್ರಥಮ ಮಹಡಿಯಲ್ಲಿ ಐಷಾರಾಮಿ ಬಿಡಾರಗಳಿವೆ.[೪೯] ಎಡ್ವರ್ಡ್ ರಾಜಮನೆತನದ ಟಂಕಸಾಲೆಯನ್ನು ಗೋಪುರಕ್ಕೆ ಸ್ಥಳಾಂತರಿಸಿದ. ಮುಂಚಿನ ಅದರ ನಿಖರ ಸ್ಥಳವು ಅಜ್ಞಾತವಾಗಿತ್ತು. ಬಹುಶಃ ಹೊರ ವಾರ್ಡ್ ಅಥವಾ ಲಯನ್ ಟವರ್‌ನಲ್ಲಿ ಇದ್ದಿರಬಹುದು.[೫೦] ೧೫೬೦ರಲ್ಲಿ ಟಂಕಸಾಲೆಯು ಸಾಲ್ಟ್ ಟವರ್ ಬಳಿ ಹೊಸ ವಾರ್ಡ್‌ನಲ್ಲಿರುವ ಕಟ್ಟಡದಲ್ಲಿ ನೆಲೆಗೊಂಡಿತ್ತು.[೫೧] ೧೩೪೮ ಮತ್ತು ೧೩೫೫ರ ನಡುವೆ, ಎರಡನೇ ವಾಟರ್-ಗೇಟ್ ಕ್ರೇಡಲ್ ಟವರ್‌ನ್ನು ಸೇಂಟ್ ಥಾಮಸ್ ಗೋಪುರದ ಪೂರ್ವಕ್ಕೆ ರಾಜನ ಖಾಸಗಿ ಬಳಕೆಗಾಗಿ ಸೇರ್ಪಡೆ ಮಾಡಲಾಯಿತು.[೩೮]

The Tower of London's outer curtain wall, with the curtain wall of the inner ward just visible behind. In the centre is Legge's Mount.

ಅಡಿಪಾಯ ಮತ್ತು ಪೂರ್ವೇತಿಹಾಸ[ಬದಲಾಯಿಸಿ]

೧೦೬೬ರ ಅಕ್ಟೋಬರ್ ೧೪ರಂದು ಬ್ಯಾಟಲ್ ಆಫ್ ಹೇಸ್ಟಿಂಗ್ಸ್‌ನಲ್ಲಿ ಜಯಶಾಲಿಯಾಗಿ, ದಾಳಿಮಾಡಿದ್ದ ಡ್ಯೂಕ್ ಆಫ್ ನಾರ್ಮಂಡಿ, ವಿಲಿಯಂ ದಿ ಕನ್ಕ್ವೈರರ್, ಪ್ರಮುಖ ಸ್ಥಾನಗಳನ್ನು ಬಲಪಡಿಸುವ ಮೂಲಕ ವರ್ಷದ ಉಳಿದ ಅವಧಿಯನ್ನು ಅವನ ಹಿಡುವಳಿಯನ್ನು ರಕ್ಷಿಸುವಲ್ಲಿ ಕಳೆದ. ಮಾರ್ಗ ಮಧ್ಯದಲ್ಲಿ ಅವನು ಅನೇಕ ಕೋಟೆಗಳನ್ನು ಪತ್ತೆಮಾಡಿದರು. ಲಂಡನ್‌ನತ್ತ ಅವನು ಸುತ್ತುಬಳಸಿನ ಮಾರ್ಗವನ್ನು ಹಿಡಿದ.[೫೨][೫೩] ಕ್ಯಾಂಟರ್‌ಬರಿಯನ್ನು ತಲುಪಿದಾಗ ಮಾತ್ರ ಇಂಗ್ಲೆಂಡ್‌ನ ದೊಡ್ಡ ನಗರದತ್ತ ಅವನು ತಿರುಗಿದ. ಲಂಡನ್‌ನೊಳಗೆ ಬಲವತ್ತಾದ ಸೇತುವೆಯನ್ನು ಸ್ಯಾಕ್ಸನ್ ಪಡೆಗಳು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಂತೆ, ಅವನು ದಕ್ಷಿಣ ಇಂಗ್ಲೆಂಡ್ ಸುತ್ತ ತಮ್ಮ ಪ್ರಯಾಣವನ್ನು ಮುಂದುವರಿಸುವ ಮುಂಚೆ ಸೌತ್‌ವಾರ್ಕ್‌ನ್ನು ಧ್ವಂಸಮಾಡಲು ಬದಲಿಗೆ ನಿರ್ಧರಿಸಿದ.[೫೪] ಮಾರ್ಗ ಮಧ್ಯದಲ್ಲಿ ನಾರ್ಮನ್ ಜಯಗಳ ಸರಣಿಯು ನಗರದ ಪೂರೈಕೆ ಮಾರ್ಗಗಳನ್ನು ಕಡಿದುಹಾಕಿತು ಮತ್ತು ೧೦೬೬ರ ಡಿಸೆಂಬರ್‌ನಲ್ಲಿ ಒಂಟಿಯಾದ ಮತ್ತು ಹೆದರಿದ ಅದರ ನಾಯಕರು ಯಾವುದೇ ಹೋರಾಟವಿಲ್ಲದೇ ಲಂಡನ್‌ನನ್ನು ಬಿಟ್ಟುಕೊಟ್ಟರು.[೫೫][೫೬] ೧೦೬೬ ಮತ್ತು ೧೦೮೭ರ ನಡುವೆ ೩೬ ಕೋಟೆಗಳನ್ನು ವಿಲಿಯಂ ಸ್ಥಾಪಿಸಿದ. [೫೩]ಆದರೂ ಡೋಮ್ಸ್‌ಡೇ ಪುಸ್ತಕದ ಉಲ್ಲೇಖಗಳು ಅವನ ಅಧೀನಾಧಿಕಾರಿಗಳು ಸ್ಥಾಪಿಸಿದ್ದಾರೆಂದು ಸೂಚಿಸುತ್ತದೆ.[೫೭] ಹೊಸ ಆಡಳಿತದ ಗಣ್ಯರು ಊಳಿಗಮಾನ್ಯ ಯುರೋಪ್‌ನ ಇಡೀ ಇತಿಹಾಸದಲ್ಲಿ ಕೋಟೆಯ ನಿರ್ಮಾಣದ ಅತ್ಯಂತ ವಿಸ್ತರಿತ ಮತ್ತು ಕೇಂದ್ರಿತ ಕಾರ್ಯಕ್ರಮವನ್ನು ಕೈಗೊಂಡರು.[೫೮] ಅವು ಬಹುಪಯೋಗಿ ಕಟ್ಟಡಗಳಾಗಿದ್ದು, ರಕ್ಷಣಾವ್ಯವಸ್ಥೆಗಳಾಗಿ(ಶತ್ರು ಪ್ರದೇಶದಲ್ಲಿ ಕಾರ್ಯಾಚರಣೆಗಳ ನೆಲೆಯಾಗಿ ಬಳಸಲಾಯಿತು), ಆಡಳಿತದ ಕೇಂದ್ರಗಳು ಮತ್ತು ನಿವಾಸಗಳಾಗಿ ಕಾರ್ಯನಿರ್ವಹಿಸಿದವು[೫೯].

ವಿಲಿಯಂ ಪ್ರವೇಶಕ್ಕಾಗಿ ಸಿದ್ಧತೆ ನಡೆಸಲು ಮತ್ತು ವಿಜಯೋತ್ಸವ ಆಚರಿಸಲು ಮುಂಚಿತವಾಗಿ ತಂಡವನ್ನು ಕಳಿಸಿದ ಮತ್ತು ಕೋಟೆಯೊಂದನ್ನು ಪತ್ತೆಮಾಡಿದ. ವಿಲಿಯಂ ಜೀವನಚರಿತ್ರೆಕಾರ ವಿಲಿಯಂ ಆಫ್ ಪೊಯಿಟಿಯರ್ಸ್ ಮಾತುಗಳಲ್ಲಿ,ಬೃಹತ್ ಮತ್ತು ನಿರ್ದಯ ಜನರ ತಾಳ್ಮೆಗೇಡಿತನದ ವಿರುದ್ಧ ಕೆಲವು ರಕ್ಷಣಾವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಯಿತು. ಲಂಡನ್ ಪ್ರಜೆಗಳನ್ನು ಬೆದರಿಸಲು ಇದು ಪ್ರಥಮ ಪ್ರಾಮುಖ್ಯತೆ ಪಡೆದಿತ್ತು ಎಂದು ವಿಲಿಯಂ ಅರಿತುಕೊಂಡ".[೫೨] ಆ ಸಮಯದಲ್ಲಿ ಲಂಡನ್ ಇಂಗ್ಲೆಂಡ್‌ನ ಅತೀ ದೊಡ್ಡ ಪಟ್ಟಣವಾಗಿತ್ತು. ವೆಸ್ಟ್‌ಮಿನ್‌ಸ್ಟರ್ ಅಬ್ಬೆ ಮತ್ತು ಎಡ್ವರ್ಡ್ ದಿ ಕನ್ಫೆಸರ್ ನೇತೃತ್ವದ ಹಳೆಯ ಪ್ಯಾಲೆಸ್ ಆಫ್ ವೆಸ್ಟ್‌ಮಿನ್‌ಸ್ಟರ್ ಅದನ್ನು ಆಡಳಿತದ ಕೇಂದ್ರವೆಂದು ಗುರುತಿಸಿತ್ತು ಹಾಗು ಸಂಪದಭಿವೃದ್ಧಿ ಬಂದರಿನೊಂದಿಗೆ ವಸಾಹತಿನ ಮೇಲೆ ನಿಯಂತ್ರಣ ಸಾಧಿಸುವುದು ನಾರ್ಮನ್ನರಿಗೆ ಅವಶ್ಯಕವಾಗಿತ್ತು.[೫೫] ಲಂಡನ್‌ನ ಇತರ ಎರಡು ಕೋಟೆಗಳು- ಬೇನಾರ್ಡ್ಸ್ ಕೋಟೆ ಮತ್ತು ಮಾಂಟ್‌ಫಿಚೆಟ್ ಕೋಟೆಯನ್ನು ಅದೇ ಸಮಯದಲ್ಲಿ ಸ್ಥಾಪಿಸಲಾಯಿತು.[೬೦] ನಂತರ ಲಂಡನ್ ಗೋಪುರವೆಂದು ಹೆಸರಾದ ರಕ್ಷಣಾತ್ಮಕ ವ್ಯವಸ್ಥೆಯು ರೋಮನ್ ಪಟ್ಟಣದ ಗೋಡೆಗಳ ಆಗ್ನೇಯ ಮೂಲೆಯಲ್ಲಿ ನಿರ್ಮಿಸಲಾಗಿದೆ. ಮರುಜೋಡಣೆಯ ರಕ್ಷಣೆಗಳಾಗಿ ಬಳಸಲಾದ ಇದಕ್ಕೆ ದಕ್ಷಿಣದಿಂದ ಥೇಮ್ಸ್ ನದಿ ಹೆಚ್ಚುವರಿ ರಕ್ಷಣೆಯನ್ನು ನೀಡಿತು.[೫೨] ಕೋಟೆಯ ಈ ಅತೀ ಮುಂಚಿನ ಹಂತವು ಕಂದಕದಿಂದ ಆವರಿಸಿತ್ತು ಮತ್ತು ಮರದ ಕಟಕಟೆಯಿಂದ ರಕ್ಷಣೆ ನೀಡಲಾಗಿತ್ತು. ಬಹುಶಃ ವಿಲಿಯಂಗೆ ಸೂಕ್ತವಾದ ವಾಸ್ತವ್ಯವನ್ನು ಹೊಂದಿತ್ತು.[೬೧]

೧೧ನೇ ಶತಮಾನದ ಕೊನೆಯ ದಿನಾಂಕಕ್ಕೆ ಸೇರಿದ ವೈಟ್ ಟವರ್

ಬಹುತೇಕ ಮುಂಚಿನ ನಾರ್ಮನ್ ಕೋಟೆಗಳನ್ನು ಮರದಿಂದ ನಿರ್ಮಿಸಲಾಗಿತ್ತು. ಆದರೆ ೧೧ನೇ ಶತಮಾನದ ಕೊನೆಯಲ್ಲಿ ಲಂಡನ್ ಗೋಪುರ ಸೇರಿದಂತೆ ಕೆಲವನ್ನು ನವೀಕರಿಸಲಾಯಿತು ಅಥವಾ ಕಲ್ಲಿನಿಂದ ಬದಲಾಯಿಸಲಾಯಿತು.[೬೦] ಇಡೀ ಕೋಟೆಗೆ ತನ್ನ ಹೆಸರನ್ನು ನೀಡಿದ ವೈಟ್ ಟವರ್ ಕೆಲಸವು ಸಾಮಾನ್ಯವಾಗಿ ೧೦೭೮ರಲ್ಲಿ ಆರಂಭವಾಯಿತು.[೧೦] ಆದರೂ ನಿಖರ ದಿನಾಂಕವು ಅನಿಶ್ಚಿತವಾಗಿದೆ. ವಿಲಿಯಂ ಬಿಷಪ್ ಆಫ್ ರೋಚೆಸ್ಟರ್, ಗುಂಡುಲ್ಫ್‌ಗೆ ಅದರ ನಿರ್ಮಾಣದ ಜವಾಬ್ದಾರಿ ವಹಿಸಿದ. ಆದರೂ ವಿಲಿಯಂ ೧೦೮೭ರಲ್ಲಿ ನಿಧನರಾಗುವ ತನಕ ಅದು ಪೂರ್ಣವಾಗಿಲ್ಲದಿರಬಹುದು.[೧೦] ವೈಟ್ ಟವರ್ ಇಂಗ್ಲೆಂಡ್‌ನ ಅತೀ ಮುಂಚಿನ ಕೇಂದ್ರ ಗೋಪುರವಾಗಿದ್ದು, ಮುಂಚಿನ ಕೋಟೆಯ ಬಲವಾದ ಅಂಶವಾಗಿದೆ. ಇದು ರಾಜನಿಗೆ ಮಹಾ ವಾಸ್ತವ್ಯವನ್ನು ಕೂಡ ಹೊಂದಿತ್ತು.[೬೨] ಬಿಷಪ್ ರಾನಲ್ಫ್ ಫ್ಲಾಂಬಾರ್ಡ್‌ನನ್ನು ಅಲ್ಲಿ ಸೆರೆಇರಿಸಿದಾಗ ಅದನ್ನು ಬಹುಶಃ ೧೧೦೦ರೊಳಗೆ ಪೂರ್ಣಗೊಳಿಸಿರಬಹುದು.[೧೭][nb ೪] ಕಠಿಣ ತೆರಿಗೆಗಳನ್ನು ಹೇರಿದ್ದರಿಂದ ಫ್ಲಾಂಬಾರ್ಡ್‌ರನ್ನು ಇಂಗ್ಲೀಷರು ದ್ವೇಷಿಸುತ್ತಿದ್ದರು. ಆದರೂ ಅವನು ಗೋಪುರದಲ್ಲಿ ಬಂಧಿಸಿದ್ದ ಪ್ರಥಮ ದಾಖಲಿತ ಕೈದಿಯಾದರೂ, ಅಲ್ಲಿಂದ ಪರಾರಿಯಾದ ಪ್ರಥಮ ವ್ಯಕ್ತಿ ಅವನಾಗಿದ್ದ. ಅವನು ವೈನ್ ಬಟ್‌ನಲ್ಲಿ ಅಡಗಿಸಿದ ಕಳ್ಳಸಾಗಣೆ ಹಗ್ಗವನ್ನು ಬಳಸಿ ತಪ್ಪಿಸಿಕೊಂಡ. ಅವನನ್ನು ಐಷಾರಾಮಿಯಾಗಿ ಅನುಮತಿಸಿದ ಸೇವಕರ ನಡುವೆ ಇರಿಸಲಾಗಿತ್ತು. ಆದರೆ ೧೧೦೧ರ ಫೆಬ್ರವರಿ ೨ರಂದು ತನ್ನನ್ನು ಸೆರೆಹಿಡಿದವರಿಗೆ ಔತಣಕೂಟ ಏರ್ಪಡಿಸಿದ. ಅವರನ್ನು ಕುಡಿತದ ಅಮಲಿನಲ್ಲಿ ಮುಳುಗಿಸಿ, ಯಾರೂ ನೋಡದೇ ಇರುವಾಗ, ಗುಪ್ತ ಕೋಣೆಯಿಂದ ತೆರಳಿ ಗೋಪುರದಿಂದ ಹೊರಕ್ಕೆ ಹೋದ. ಈ ಪಲಾಯನವು ಅಚ್ಚರಿಮೂಡಿಸಿತು. ಒಬ್ಬರು ಸಮಕಾಲೀನ ಚರಿತ್ರೆ ಲೇಖಕರು ಬಿಷಪ್ ವಿರುದ್ಧ ವಾಮಾಚಾರದ ದೂರು ನೀಡಿದರು.[೬೪]

ಆಂಗ್ಲೋ-ಸಾಕ್ಸನ್ ಚರಿತ್ರೆ ಯಲ್ಲಿ ಲಂಡನ್ ಗೋಪುರದ ಸುತ್ತ ಗೋಡೆಯನ್ನು ಕಟ್ಟಬೇಕೆಂದು ರಾಜ ವಿಲಿಯಂ II ೧೦೯೭ರಲ್ಲಿ ಆದೇಶಿಸಿದ ಎನ್ನುವುದನ್ನು ದಾಖಲಿಸಿದೆ. ಇದನ್ನು ಬಹುಶಃ ಕಲ್ಲಿನಿಂದ ಕಟ್ಟಲಾಗಿದ್ದು, ಕೋಟೆಯ ಉತ್ತರ ಮತ್ತು ಪಶ್ಚಿಮ ಬದಿಗಳ ಸುತ್ತ ಕಮಾನಿನಂತಿರುವ ಮರದ ಕಟಕಟೆಯ ಬದಲಿಗೆ ರೋಮನ್ ಗೋಡೆ ಮತ್ತು ಥೇಮ್ಸ್ ನದಿಯ ನಡುವೆ ಇದನ್ನು ನಿರ್ಮಿಸಲಾಗಿದೆ.[೬೫] ಲಂಡನ್ ಮೇಲಿನ ನಾರ್ಮನ್ ವಿಜಯವು ಹೊಸ ಆಡಳಿತದ ವರ್ಗದಿಂದ ಮಾತ್ರವಲ್ಲದೇ, ನಗರವು ರಚನೆಯಾದ ರೀತಿಯಲ್ಲಿ ಬಿಂಬಿತವಾಗಿದೆ. ನೆಲವನ್ನು ಸ್ವಾಧೀನಪಡಿಸಿಕೊಂಡು ನಾರ್ಮನ್ನರ ನಡುವೆ ಮರುವಿತರಣೆ ಮಾಡಲಾಯಿತು. ಆರ್ಥಿಕ ಕಾರಣಗಳಿಗಾಗಿ ನೂರಾರು ಯಹೂದಿಗಳನ್ನು ಅವರು ಕರೆತಂದರು.[೬೬] ರಾಜಪ್ರಭುತ್ವದ ನೇರ ರಕ್ಷಣೆಯಲ್ಲಿ ಯಹೂದಿಗಳು ಆಗಮಿಸಿದರು. ಇದರ ಫಲವಾಗಿ ಯಹೂದಿ ಸಮುದಾಯಗಳನ್ನು ಕೋಟೆಗಳ ಸಮೀಪದಲ್ಲಿ ಸಾಮಾನ್ಯವಾಗಿ ಕಾಣಬಹುದು.[೬೭] ಯಹೂದಿ ವಿರೋಧಿಗಳಿಂದ ಹಿಂಸಾಚಾರದ ಬೆದರಿಕೆಯುಂಟಾದಾಗ, ಯಹೂದಿಗಳು ಗೋಪುರವನ್ನು ಹಿಮ್ಮೆಟ್ಟುವ ನೆಲೆಯಾಗಿ ಬಳಸಿಕೊಂಡರು.[೬೬]

೧೧೩೫ರಲ್ಲಿ ಹೆನ್ರಿ I ನಿಧನದಿಂದ ಇಂಗ್ಲೆಂಡ್‌ನಲ್ಲಿ ಉತ್ತರಾಧಿಕಾರದ ವಿವಾದವನ್ನು ಉಳಿಸಿತು; ರಾಜನು ಚಕ್ರವರ್ತಿನಿ ಮ್ಯಾಟಿಲ್ಡಾಗೆ ಬೆಂಬಲ ಘೋಷಿಸಲು ಅತ್ಯಂತ ಪ್ರಬಲ ಬ್ಯಾರನ್‌ಗಳ ಮನವೊಲಿಸಿದರೂ, ಹೆನ್ರಿ ನಿಧನರಾಗಿ ಕೇವಲ ಕೆಲವೇ ದಿನಗಳಲ್ಲಿ ಸಿಂಹಾಸನಕ್ಕೆ ಹಕ್ಕು ಪ್ರತಿಪಾದಿಸಲು ಸ್ಟೀಫನ್ ಆಫ್ ಬ್ಲಾಯಿಸ್ ಫ್ರಾನ್ಸ್‌ನಿಂದ ಆಗಮಿಸಿದ. ನಗರ ಮತ್ತು ಅದರ ಗೋಪುರದ ಪ್ರಾಮುಖ್ಯತೆಯು ಅವನು ಲಂಡನ್ ವಶಪಡಿಸಿಕೊಂಡ ವೇಗದಿಂದ ಗುರುತಿಸಲ್ಪಟ್ಟಿದೆ. ಕೆಲವು ಕಾಲದವರೆಗೆ ರಾಜಮನೆತನದ ನಿವಾಸವಾಗಿ ಬಳಸದಿದ್ದ ಕೋಟೆಯನ್ನು ಸಾಮಾನ್ಯವಾಗಿ ಕಾನ್ಸ್‌ಟೇಬಲ್ ಉಸ್ತುವಾರಿಯಲ್ಲಿ ಬಿಡಲಾಗಿತ್ತು. ಈ ಸಮಯದಲ್ಲಿ ಜೆಫ್ರಿ ಡೆ ಮ್ಯಾಂಡೆವಿಲ್ಲೆ ಈ ಹುದ್ದೆಯನ್ನು ಹೊಂದಿದ್ದ. ಗೋಪುರವನ್ನು ಆಯಕಟ್ಟಿನ ಮುಖ್ಯ ಸ್ಥಾನದಲ್ಲಿರುವ ಅಜೇಯ ಕೋಟೆಯೆಂದು ಪರಿಗಣಿಸಿದ್ದರಿಂದ ಅದನ್ನು ಹೊಂದಿರುವುದು ಅತ್ಯಂತ ಅಮೂಲ್ಯವಾಗಿತ್ತು. ಮ್ಯಾಂಡೆವಿಲ್ಲೆ ಇದನ್ನು ದುರ್ಬಳಕೆ ಮಾಡಿಕೊಂಡು, ಬ್ಯಾಟಲ್ ಆಫ್ ಲಿಂಕನ್‌ನಲ್ಲಿ ೧೧೪೧ರಲ್ಲಿ ಸ್ಟೀಫನ್ ಸೆರೆಸಿಕ್ಕಿದ ನಂತರ ಮ್ಯಾಟಿಲ್ಡಾಗೆ ನಿಷ್ಠೆಯನ್ನು ವ್ಯಕ್ತಪಡಿಸಿದ. ಒಂದೊಮ್ಮೆ ಅವರ ಬೆಂಬಲ ಕುಂದಿದ ನಂತರ, ನಂತರದ ವರ್ಷದಲ್ಲಿ ಅವನು ಸ್ಟೀಫನ್‌ಗೆ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ. ಕಾನ್ಸ್‌ಟೇಬಲ್ ಪಾತ್ರದ ಮೂಲಕ, ಮ್ಯಾಂಡೆವಿಲ್ಲೆ "ಇಂಗ್ಲೆಂಡ್‌ನ ಅತೀ ಶ್ರೀಮಂತ ಮತ್ತು ಶಕ್ತಿಶಾಲಿ ವ್ಯಕ್ತಿಯಾದ"[೬೮]. ಮ್ಯಾಟಿಲ್ಡಾ ಜತೆ ಗುಪ್ತ ಮಾತುಕತೆಗಳನ್ನು ನಡೆಸುವ ಮೂಲಕ ಇದೇ ತಂತ್ರವನ್ನು ಮ್ಯಾಂಡೆವಿಲ್ಲೆ ಪುನಃ ಪ್ರಯತ್ನಿಸಿದಾಗ, ಸ್ಟೀಫನ್ ಅವನನ್ನು ಬಂಧಿಸಿದ ಮತ್ತು ಅವನ ಕೋಟೆಗಳ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುವಂತೆ ಬಲಪ್ರಯೋಗಿಸಿದ. ಅವನ ಅತ್ಯಂತ ನಿಷ್ಠ ಬೆಂಬಲಿಗರನ್ನು ಮ್ಯಾಂಡೆವಿಲ್ಲೆ ಬದಲಿಗೆ ನೇಮಿಸಿದ. ಅಲ್ಲಿಯವರೆಗೆ ಈ ಸ್ಥಾನವು ವಂಶಪಾರಂಪರ್ಯವಾಗಿತ್ತು. ಮೊದಲಿಗೆ ಜೆಫ್ರಿ ಡೆ ಮ್ಯಾಂಡೆವಿಲ್ಲೆ ಅದನ್ನು ಹೊಂದಿದ್ದ(ವಿಲಿಯಂ ದಿ ಕನ್ವೈರರ್ ಸ್ನೇಹಿತರು ಮತ್ತು ಸ್ಟೀಫನ್ ಮತ್ತು ಮ್ಯಾಟಿಲ್ಡ ವ್ಯವಹರಿಸುತ್ತಿದ್ದ ಜೆಫ್ರಿಯ ಪೂರ್ವಜರು). ಆದರೆ ಸ್ಥಾನದ ಅಧಿಕಾರವು ಹೇಗಿತ್ತೆಂದರೆ, ಆಗಿನಿಂದ ರಾಜಪ್ರಭುತ್ವದ ಉದ್ಯೋಗಿಯ ಕೈಯಲ್ಲಿ ಉಳಿಯಿತು. ಈ ಸ್ಥಾನವನ್ನು ಸಾಮಾನ್ಯವಾಗಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದವರಿಗೆ ನೀಡಲಾಗಿತ್ತು. ಇತರ ಕರ್ತವ್ಯಗಳ ಕಾರಣದಿಂದ ಅವರು ಕೋಟೆಯಲ್ಲಿ ಸದಾ ಉಳಿಯುತ್ತಿರಲಿಲ್ಲ. ಕೋಟೆ ಮತ್ತು ಅದರ ರಕ್ಷಕ ಸೈನ್ಯದ ನಿರ್ವಹಣೆಗೆ ಕಾನ್ಸ್‌ಟೇಬಲ್ ಕಾರಣಕರ್ತರಾದರೂ, ಪೂರ್ವದ ಹಂತದಿಂದ ಅವನ ಕರ್ತವ್ಯದಲ್ಲಿ ನೆರವಾಗಲು ಅವನಿಗೆ ಅಧೀನಾಧಿಕಾರಿಯಾದ ಟವರ್‌ನ ಲೆಫ್ಟಿನೆಂಟ್ ಇರುತ್ತಿದ್ದರು.[೬೮] ಕಾನ್ಸ್‌ಟೇಬಲ್‌ರಿಗೆ ನಗರಕ್ಕೆ ಸಂಬಂಧಿಸಿದ ನಾಗರಿಕ ಕರ್ತವ್ಯಗಳಿರುತ್ತಿತ್ತು. ಸಾಮಾನ್ಯವಾಗಿ ಅವರಿಗೆ ನಗರದ ನಿಯಂತ್ರಣವನ್ನು ನೀಡಲಾಗಿತ್ತು ಮತ್ತು ತೆರಿಗೆಗಳನ್ನು ಹೇರಲು, ಕಾನೂನು ಜಾರಿ ಮಾಡಲು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಕಾರಣಕರ್ತರಾಗಿದ್ದರು. ೧೧೯೧ರಲ್ಲಿ ಲಾರ್ಡ್ ಮೇಯರ್ ಆಫ್ ಲಂಡನ್ ಸ್ಥಾನದ ಸೃಷ್ಟಿಯು ಕಾನ್ಸ್‌ಟೇಬಲ್ ಅವರ ಅನೇಕ ನಾಗರಿಕ ಅಧಿಕಾರಗಳನ್ನು ತೆಗೆದುಹಾಕಿತು. ಇದು ಇಬ್ಬರ ನಡುವೆ ಸಂಘರ್ಷಕ್ಕೆ ಕೆಲವು ಬಾರಿ ದಾರಿ ಕಲ್ಪಿಸಿತು.[೬೯]

ವಿಸ್ತರಣೆ[ಬದಲಾಯಿಸಿ]

೧೧೦೦ರಲ್ಲಿ ಸ್ಥಾಪನೆಯಾದಂತೆ ಕೋಟೆಯು ತನ್ನ ಸ್ವರೂಪವನ್ನು ರಿಚರ್ಡ್ ದಿ ಲಯನ್‌ಹಾರ್ಟ್ ಆಳ್ವಿಕೆ(೧೧೮೯-೧೧೯೯)ವರೆಗೆ ಉಳಿಸಿಕೊಂಡಿತು.[೭೦] ರಿಚರ್ಡ್‌ನ ಲಾರ್ಡ್ ಚಾನ್ಸಲರ್ ಮತ್ತು ದಂಡಯಾತ್ರೆಲ್ಲಿರುವಾಗ ಇಂಗ್ಲೆಂಡ್ ಉಸ್ತುವಾರಿ ವ್ಯಕ್ತಿ ವಿಲಿಯಂ ಲಾಂಗ್‌ಚಾಂಪ್ ನೇತೃತ್ವದಲ್ಲಿ ಕೋಟೆಯನ್ನು ವಿಸ್ತರಿಸಲಾಯಿತು. ಇಂಗ್ಲೆಂಡ್‌ನಲ್ಲಿ ಕೋಟೆಯ ಕಟ್ಟಡದ ಮೇಲೆ ರಿಚರ್ಡ್ ಖರ್ಚು ಮಾಡಿದ ಅಂದಾಜು £೭,೦೦೦ ನಿಂದ ಪೈಪ್ ರಾಲ್ಸ್(ಹಣಕಾಸಿನ ದಾಖಲೆಗಳು) ೧೧೮೯ ಡಿಸೆಂಬರ್ ಮತ್ತು ೧೧೯೦ ನವೆಂಬರ್ ೧೧ರ ನಡುವೆ[೭೧] ಲಂಡನ್ ಗೋಪುರದಲ್ಲಿ £೨,೮೮೧ ೧s ೧೦d ಖರ್ಚು ಮಾಡಿದ್ದನ್ನು ದಾಖಲಿಸಿದೆ.[೭೨] ಸಮಕಾಲೀನ ಚರಿತ್ರೆ ಲೇಖಕ ರೋಜರ್ ಆಫ್ ಹೌಡನ್ ಪ್ರಕಾರ, ಲಾಂಗ್‌ಚಾಂಪ್ ಕೋಟೆಯ ಸುತ್ತ ಕಂದಕ ವನ್ನು ಅಗೆದ ಮತ್ತು ಥೇಮ್ಸ್ ನದಿಯಿಂದ ಅದರಲ್ಲಿ ನೀರು ತುಂಬಿಸಲು ವಿಫಲ ಪ್ರಯತ್ನ ನಡೆಸಿದ.[೨೬] ಲಾಂಗ್‌ಚಾಂಪ್ ಗೋಪುರದ ಕಾನ್ಸ್‌ಟೇಬಲ್ ಕೂಡ ಆಗಿದ್ದು, ರಿಚರ್ಡ್ ಕಿರಿಯ ಸಹೋದರ ಪ್ರಿನ್ಸ್ ಜಾನ್ ಜತೆ ಯುದ್ಧಕ್ಕೆ ಸಿದ್ಧತೆ ನಡೆಸುವಾಗ ಅದರ ವಿಸ್ತರಣೆಯನ್ನು ಕೈಗೊಂಡ. ಪ್ರಿನ್ಸ್ ಜಾನ್, ರಿಚರ್ಡ್ ಗೈರಿನಲ್ಲಿ ಅಧಿಕಾರವನ್ನು ಕಬಳಿಸಲು ಇಂಗ್ಲೆಂಡ್‌ಗೆ ಆಗಮಿಸಿದ. ಲಾಂಗ್‌ಚಾಂಪ್‌ನ ಮುಖ್ಯಕೋಟೆಯಾಗಿ, ಅವನು ಗೋಪುರವನ್ನು ಸಾಧ್ಯವಾದಷ್ಟು ಪ್ರಬಲವಾಗಿಸಿದ. ಹೊಸ ರಕ್ಷಣಾ ವ್ಯವಸ್ಥೆಗಳನ್ನು ಮೊದಲಿಗೆ ೧೧೯೧ರಲ್ಲಿ ಗೋಪುರವನ್ನು ಅದರ ಇತಿಹಾಸದಲ್ಲೇ ಮೊದಲ ಬಾರಿಗೆ ಮುತ್ತಿಗೆ ಹಾಕಿದಾಗ ಪರೀಕ್ಷಿಸಲಾಯಿತು. ಕೇವಲ ಮೂರು ದಿನಗಳ ನಂತರ ಲಾಂಗ್‌ಚಾಂಪ್ ಜಾನ್‌ಗೆ ಶರಣಾಗತಿಯಾದ. ಮುತ್ತಿಗೆಯನ್ನು ಮುಂದುವರಿಯಲು ಬಿಡುವುದಕ್ಕಿಂತ ಶರಣಾಗತಿಯಿಂದ ತನಗೆ ಲಾಭವಾಗುತ್ತೆಂದು ಅವನು ನಿರ್ಧರಿಸಿದ.[೭೩]

ಥೇಮ್ಸ್ ನದಿಯೊಂದಿಗೆ ಗೋಪುರ ಮತ್ತು ದಕ್ಷಿಣಕ್ಕಿರುವ ಗೋಪುರದ ಸೇತುವೆ.೧೩ನೇ ಶತಮಾನದಲ್ಲಿ ಹೊರ ಕೂಡುಗೋಡೆಗಳನ್ನು ಸ್ಥಾಪಿಸಲಾಯಿತು.

ಜಾನ್ ೧೧೯೯ರಲ್ಲಿ ರಿಚರ್ಡ್ ಉತ್ತರಾಧಿಕಾರಿಯಾಗಿ ರಾಜನಾದ. ಆದರೆ ಅವನ ಅನೇಕ ಬ್ಯಾರನ್‌ಗಳು ಅವನ ವಿರುದ್ಧ ತಿರುಗಿದ್ದರಿಂದ ಅವನ ಆಡಳಿತವು ಅಪ್ರಿಯವಾಗಿತ್ತು. ೧೨೧೪ರಲ್ಲಿ ರಾಜ ವಿಂಡ್ಸರ್ ಕೋಟೆಯಲ್ಲಿದ್ದಾಗ, ರಾಬರ್ಟ್ ಫಿಟ್ಸ್‌ವಾಲ್ಟರ್ ಲಂಡನ್‌ಗೆ ಸೇನೆಯನ್ನು ಮುನ್ನಡೆಸಿ, ಗೋಪುರಕ್ಕೆ ಮುತ್ತಿಗೆ ಹಾಕಿದ. ರಕ್ಷಕ ಸೈನ್ಯದ ನೇತೃತ್ವದಲ್ಲಿ ಗೋಪುರವು ಪ್ರತಿರೋಧ ತೋರಿದರೂ, ಜಾನ್ ಒಂದೊಮ್ಮೆ ಮ್ಯಾಗ್ನಾ ಕಾರ್ಟಾಗೆ ಸಹಿ ಹಾಕಿದ ನಂತರ ಮುತ್ತಿಗೆಯನ್ನು ತೆರವು ಮಾಡಲಾಯಿತು.[೭೪] ರಾಜ ಸುಧಾರಣೆ ಭರವಸೆಗಳ ಬಗ್ಗೆ ವಚನಭಂಗ ಮಾಡಿದ್ದರಿಂದ ಪ್ರಥಮ ಬ್ಯಾರನ್‌ಗಳ ಯುದ್ಧ ಹೊರಹೊಮ್ಮಲು ದಾರಿ ಕಲ್ಪಿಸಿತು. ಮ್ಯಾಗ್ನಾ ಕಾರ್ಟಾ‌ಗೆ ಸಹಿ ಹಾಕಿದ ನಂತರವೂ, ಫಿಟ್ಸ್‌ವಾಲ್ಟರ್ ಲಂಡನ್ ಮೇಲಿನ ತನ್ನ ನಿಯಂತ್ರಣವನ್ನು ಕಾಯ್ದುಕೊಂಡ. ಯುದ್ಧದ ಸಂದರ್ಭದಲ್ಲಿ, ಗೋಪುರದ ರಕ್ಷಣಾಪಡೆ ಬ್ಯಾರನ್‌ಗಳ ಪಡೆಯ ಜತೆ ಸೇರಿಕೊಂಡಿತು. ಜಾನ್ ೧೨೧೬ರಲ್ಲಿ ಪದಚ್ಯುತನಾದ ಮತ್ತು ಬ್ಯಾರನ್‌ಗಳು ಫ್ರೆಂಚ್ ರಾಜನ ಹಿರಿಯ ಪುತ್ರ ಪ್ರಿನ್ಸ್ ಲೂಯಿಸ್‌ಗೆ ಇಂಗ್ಲೀಷ್ ಸಿಂಹಾಸನದ ಪ್ರಸ್ತಾಪ ಮಾಡಿದರು. ಆದಾಗ್ಯೂ,೧೨೧೬ರ ಅಕ್ಟೋಬರ್‌ನಲ್ಲಿ ಜಾನ್ ನಿಧನದ ನಂತರ, ಅವರ ಹಿರಿಯ ಪುತ್ರ ಪ್ರಿನ್ಸ್ ಹೆನ್ರಿಯ ಹಕ್ಕು ಪ್ರತಿಪಾದನೆಗೆ ಬೆಂಬಲಿಸಲು ಅನೇಕರು ಆರಂಭಿಸಿದರು. ಲೂಯಿಸ್ ಮತ್ತು ಹೆನ್ರಿಯನ್ನು ಬೆಂಬಲಿಸುವ ಬಣಗಳ ನಡುವೆ ಯುದ್ಧ ಮುಂದುವರಿಯಿತು ಮತ್ತು ಫಿಟ್ಸ್‌ವಾಲ್ಟರ್ ಲೂಯಿಸ್‌ಗೆ ಬೆಂಬಲಿಸಿದ. ಫಿಟ್ಸ್‌ವಾಲ್ಟರ್ ಲಂಡನ್ ಮತ್ತು ಗೋಪುರದ ಮೇಲೆ ಇನ್ನೂ ನಿಯಂತ್ರಣವನ್ನು ಹೊಂದಿದ್ದ.ಹೆನ್ರಿ ಬೆಂಬಲಿಗರು ಜಯಶಾಲಿಯಾಗುತ್ತಾರೆಂದು ಸ್ಪಷ್ಟವಾಗುವ ತನಕ ಇವೆರಡೂ ಅವನ ಸ್ವಾಧೀನದಲ್ಲಿತ್ತು.[೭೪]

೧೩ನೇ ಶತಮಾನದಲ್ಲಿ ರಾಜ ಹೆನ್ರಿ III (೧೨೧೬–೧೨೭೨)ಮತ್ತು ಎಡ್ವರ್ಡ್ I (೧೨೭೨–೧೩೦೭) ಕೋಟೆಯನ್ನು ವಿಸ್ತರಿಸಿದರು. ಅವಶ್ಯಕವಾಗಿ ಈಗ ಕಂಡುಬರುವಂತೆ ಅದನ್ನು ಸೃಷ್ಟಿಸಿದರು.[೨೦] ಹೆನ್ರಿಯು ಅವನ ಬ್ಯಾರನ್‌ಗಳಿಂದ ಸಂಪರ್ಕ ಕಳೆದುಕೊಂಡರು ಮತ್ತು ತಿಳಿವಳಿಕೆಯ ಪರಸ್ಪರ ಕೊರತೆಯಿಂದ ಅವನ ಆಳ್ವಿಕೆಯ ಬಗ್ಗೆ ಅಶಾಂತಿ ಮತ್ತು ಅಸಾಮಾಧಾನಕ್ಕೆ ದಾರಿ ಕಲ್ಪಿಸಿತು. ಇದರ ಫಲವಾಗಿ, ಲಂಡನ್ ಗೋಪುರವು ಅಜೇಯ ರಕ್ಷಣಾವ್ಯವಸ್ಥೆಯಾಗಿ ಖಾತರಿಪಡಿಸಿಕೊಳ್ಳಲು ಅವನು ಉತ್ಸುಕನಾಗಿದ್ದ. ಅದೇ ಸಮಯದಲ್ಲಿ ಹೆನ್ರಿ ಸೌಂದರ್ಯಪ್ರಜ್ಞೆಯುಳ್ಳವನಾಗಿದ್ದು, ಕೋಟೆಯನ್ನು ವಾಸಕ್ಕೆ ಹಿತಕರ ಸ್ಥಳವಾಗಿ ಮಾಡಲು ಇಚ್ಛಿಸಿದ್ದ.[೭೫] ೧೨೧೬ರಿಂದ ೧೨೨೭ರವರೆಗೆ ಲಂಡನ್ ಗೋಪುರಕ್ಕೆ ಸುಮಾರು £೧೦೦೦೦ಖರ್ಚು ಮಾಡಲಾಯಿತು. ಈ ಅವಧಿಯಲ್ಲಿ ವಿಂಡ್ಸರ್ ಕೋಟೆಯ ಕೆಲಸಕ್ಕೆ ಖರ್ಚು ಮಾಡಿದ ಹಣ ಮಾತ್ರ ಜಾಸ್ತಿಯಾಗಿತ್ತು(£೧೫,೦೦೦). ಅತ್ಯಂತ ಒಳಗಿನ ವಾರ್ಡ್‌ನ ಭವ್ಯ ಕಟ್ಟಡಗಳ ಮೇಲಿನ ಬಹುತೇಕ ಕೆಲಸಗಳ ಬಗ್ಗೆ ಗಮನವಹಿಸಲಾಗಿತ್ತು.[೧೯] ಬಿಳಿಯ ಗೋಪುರಕ್ಕೆ ಸುಣ್ಣ ಬಳಿಯುವ ಸಂಪ್ರದಾಯ(ಅದರಿಂದಾಗಿ ವೈಟ್ ಟವರ್ ಎಂಬ ಹೆಸರು ಹುಟ್ಟಿಕೊಂಡಿದೆ)೧೨೪೦ರಲ್ಲಿ ಆರಂಭವಾಯಿತು.[೭೬]

೧೨೩೮ರಲ್ಲಿ ಆರಂಭವಾಗಿ, ಕೋಟೆಯು ಪೂರ್ವ, ಉತ್ತರ ಮತ್ತು ವಾಯವ್ಯಕ್ಕೆ ವಿಸ್ತರಣೆಯಾಯಿತು. ಹೆನ್ರಿ III ಆಳ್ವಿಕೆಯಿಂದ ಎಡ್ವರ್ಡ್ I ಆಡಳಿತದವರೆಗೆ ಈ ಕೆಲಸವು ಮುಂದುವರಿಯಿತು. ನಾಗರಿಕ ಅಶಾಂತಿಯಿಂದಾಗಿ ಕೆಲಸಕ್ಕೆ ಆಗಾಗ್ಗೆ ಅಡಚಣೆಯಾಯಿತು. ಹೊಸ ಸೃಷ್ಟಿಗಳಲ್ಲಿ ಗೋಪುರಗಳಿಂದ ಹರಡಿದ ಹೊಸ ರಕ್ಷಣಾತ್ಮಕ ಪರಿಧಿ ಸೇರಿತ್ತು. ಪಶ್ಚಿಮ, ಉತ್ತರ ಮತ್ತು ಪೂರ್ವದ ಬದಿಗಳಲ್ಲಿ ನದಿಯಿಂದ ರಕ್ಷಣೆ ಪಡೆಯದ ಗೋಡೆಗೆ ರಕ್ಷಣಾತ್ಮಕ ಕಂದಕವನ್ನು ತೋಡಲಾಯಿತು. ಪೂರ್ವ ವಿಸ್ತರಣೆಯು ಕೋಟೆಯನ್ನು ಹಳೆಯ ರೋಮನ್ ವಸಾಹತಿನ ವ್ಯಾಪ್ತಿಯ ಆಚೆ ಒಯ್ದಿತು. ಕೋಟೆಯ ರಕ್ಷಣೆಗಳಿಗೆ ಸೇರಿಸಿದ ನಗರದ ಗೋಡೆಯಿಂದ ಇದು ಗುರುತಿಸಲ್ಪಟ್ಟಿತು.[೭೬] ಗೋಪುರವು ದೀರ್ಘ ಕಾಲದವರೆಗೆ ದಬ್ಬಾಳಿಕೆಯ ಸಂಕೇತವಾಗಿತ್ತು ಮತ್ತು ಇದನ್ನು ಲಂಡನ್ ಪ್ರಜೆಗಳು ತಿರಸ್ಕಾರದಿಂದ ಕಂಡರು. ಇದರಿಂದಾಗಿ ಹೆನ್ರಿಯ ಕಟ್ಟಡ ಕಾರ್ಯಕ್ರಮವು ಜನಪ್ರಿಯತೆ ಕಳೆದುಕೊಂಡಿತ್ತು. ೧೨೪೦ರಲ್ಲಿ ಗೇಟ್‌ಹೌಸ್ ಕುಸಿದುಬಿದ್ದಾಗ ಈ ಹಿನ್ನಡೆಯ ಬಗ್ಗೆ ಸ್ಥಳೀಯರು ಸಂಭ್ರಮಿಸಿದರು.[೭೭] ವಿಸ್ತರಣೆಯು ಸ್ಥಳೀಯವಾಗಿ ಅಡ್ಡಿವುಂಟುಮಾಡಿತು ಮತ್ತು £೧೬೬ ವನ್ನು ಸೇಂಟ್ ಕ್ಯಾಥರೀನ್ ಆಸ್ಪತ್ರೆ ಮತ್ತು ಹೋಲಿ ಟ್ರಿನಿಟಿಯ ಪ್ರಯರ್‌ಗೆ ಪರಿಹಾರದ ರೂಪದಲ್ಲಿ ನೀಡಲಾಯಿತು.[೭೮]

ಬ್ಯಾರನ್‌ಗಳು ಅಪಾಯಕಾರಿಯಾಗಿ ದುರಾಡಳಿತ ಮಾಡುತ್ತಿದ್ದಾರೆಂದು ಅನಿಸಿದಾಗ ಹೆನ್ರಿ III ಆಗಾಗ್ಗೆ, ಲಂಡನ್ ಗೋಪುರದಲ್ಲಿ ನ್ಯಾಯಾಲಯ ನಿರ್ವಹಿಸಿದರು ಮತ್ತು ಕನಿಷ್ಠ ಎರಡು ಸಂದರ್ಭಗಳಲ್ಲಿ (೧೨೩೬ಮತ್ತು ೧೨೬೧)ಅಲ್ಲಿ ಪಾರ್ಲಿಮೆಂಟ್ ನಿರ್ವಹಿಸಿದರು. ೧೨೫೮ರಲ್ಲಿ, ಅತೃಪ್ತರಾದ ಬ್ಯಾರನ್‌ಗಳು, ಸಿಮನ್ ಡೆ ಮಾಂಟ್‌ಫರ್ಟ್ ನೇತೃತ್ವದಲ್ಲಿ ಕಾಯಂ ಪಾರ್ಲಿಮೆಂಟ್‌ಗಳನ್ನು ನಿರ್ವಹಿಸುವುದರ ಜತೆ ಸುಧಾರಣೆಗೆ ಒಪ್ಪಿಕೊಳ್ಳುವಂತೆ ರಾಜನಿಗೆ ಒತ್ತಾಯಿಸಿದರು. ಲಂಡನ್ ಗೋಪುರವನ್ನು ತೊರೆಯುವುದು ಷರತ್ತುಗಳಲ್ಲಿ ಸೇರಿತ್ತು. ಹೆನ್ರಿ III ಅಧಿಕಾರವನ್ನು ಕಳೆದುಕೊಳ್ಳುವ ಬಗ್ಗೆ ಕಹಿಭಾವನೆ ಹೊಂದಿದ್ದ ಮತ್ತು ಅವನ ಪ್ರಮಾಣವನ್ನು ಮುರಿಯಲು ಪೋಪ್‌ರ ಅನುಮತಿಯನ್ನು ಕೋರಿದ. ಬಾಡಿಗೆ ಬಂಟರ ಬೆಂಬಲದೊಂದಿಗೆ, ಹೆನ್ರಿ ೧೨೬೧ರಲ್ಲಿ ಸ್ವತಃ ಗೋಪುರದಲ್ಲಿ ಪ್ರತಿಷ್ಠಾಪನೆಯಾದ. ಬ್ಯಾರನ್‌ಗಳ ಜತೆ ಮಾತುಕತೆ ಮುಂದುವರಿಯುತ್ತಿದ್ದಂತೆ, ರಾಜನು ಕೋಟೆಯ ಒಳಗೆ ಆಶ್ರಯ ಪಡೆದ. ಆದರೂ ಯಾವುದೇ ಸೇನೆ ಅದರ ವಶಕ್ಕೆ ತೆರಳಲಿಲ್ಲ. ರಾಜ ಗೋಪುರದ ನಿಯಂತ್ರಣವನ್ನು ಹಸ್ತಾಂತರಿಬೇಕೆಂಬ ಷರತ್ತಿನೊಂದಿಗೆ ಮತ್ತೊಮ್ಮೆ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಹೆನ್ರಿ ೧೨೬೫ರಲ್ಲಿ ಎವೆಶಾಮ್ ಯುದ್ಧದಲ್ಲಿ ಗಮನಾರ್ಹ ಜಯಗಳಿಸಿದ. ಇದರಿಂದ ಅವನಿಗೆ ದೇಶ ಮತ್ತು ಲಂಡನ್ ಗೋಪುರದ ಮೇಲೆ ನಿಯಂತ್ರಣವನ್ನು ಸಾಧಿಸಲು ಅವಕಾಶ ಕಲ್ಪಿಸಿತು. ಕಾರ್ಡಿನಲ್ ಓಟ್ಟೊಬುವನ್ ಇಂಗ್ಲೆಂಡ್‌ಗೆ ಆಗಮಿಸಿ, ಇನ್ನೂ ಬಂಡಾಯವೆದ್ದವರನ್ನು ಚರ್ಚ್ ಸಂಪರ್ಕದಿಂದ ಹೊರತಾಗಿಸಲು ಪ್ರಯತ್ನಿಸಿದ. ಈ ಕ್ರಮವು ತೀವ್ರ ಅಪ್ರಿಯತೆ ಗಳಿಸಿತು ಮತ್ತು ಗೋಪುರದ ರಕ್ಷಣೆಯನ್ನು ಕಾರ್ಡಿನಲ್‌ಗೆ ವಹಿಸಿದಾಗ ಪರಿಸ್ಥಿತಿ ಬಿಗಡಾಯಿಸಿತು. ಗಿಲ್ಬರ್ಟ್ ಡೆ ಕ್ಲೇರ್, ಹರ್ಟ್‌ಪೋರ್ಡ್ ೬ನೇ ಅರ್ಲ್ ೧೨೬೭ರ ಏಪ್ರಿಲ್‌ನಲ್ಲಿ ಲಂಡನ್‌ಗೆ ದಂಡಯಾತ್ರೆ ಹೊರಟು ಕೋಟೆಗೆ ಮುತ್ತಿಗೆ ಹಾಕಿದ. ಪಾದ್ರಿಗಿಂತ ಕೆಳದರ್ಜೆಯ ವಿದೇಶಿಯನ ಕೈಯಲ್ಲಿ ಗೋಪುರ ರಕ್ಷಣೆಯನ್ನು ನೀಡುವ ಹುದ್ದೆ ನಂಬಿಕೆಗೆ ಅರ್ಹವಲ್ಲ ಎಂದು ಘೋಷಿಸಿದ.[೭೯] ದೊಡ್ಡ ಸೇನೆ ಮತ್ತು ಮುತ್ತಿಗೆ ಯಂತ್ರಗಳ ನಡುವೆಯು ಗಿಲ್ಬರ್ಟ್ ಡೆ ಕ್ಲೇರ್ ಕೋಟೆಯನ್ನು ವಶಕ್ಕೆ ತೆಗೆದುಕೊಳ್ಳಲು ವಿಫಲನಾದ. ಅರ್ಲ್ ಹಿಮ್ಮೆಟ್ಟಿದ ಮತ್ತು ರಾಜನಿಗೆ ರಾಜಧಾನಿಯ ನಿಯಂತ್ರಣಕ್ಕೆ ಅವಕಾಶ ನೀಡಿದ ಮತ್ತು ಗೋಪುರವು ಹೆನ್ರಿಯ ಉಳಿದ ಆಳ್ವಿಕೆಯಲ್ಲಿ ಶಾಂತಿಯನ್ನು ಅನುಭವಿಸಿತು.[೮೦]

ಅವನು ಅಪರೂಪವಾಗಿ ಲಂಡನ್‌ನಲ್ಲಿದ್ದರೂ, ಎಡ್ವರ್ಡ್ I ಗೋಪುರಕ್ಕೆ ದುಬಾರಿಯಾದ ಹೊಸರೂಪ ನೀಡುವ ಕೆಲಸ ಕೈಗೆತ್ತಿಕೊಂಡ. ಇದಕ್ಕೆ ೧೨೭೫ಮತ್ತು ೧೨೮೫ರ ನಡುವೆ £೨೧೦೦೦ ವೆಚ್ಚವಾಯಿತು. ಹೆನ್ರಿ IIIರ ಇಡೀ ಆಳ್ವಿಕೆಯ ಸಂದರ್ಭದಲ್ಲಿ ಕೋಟೆಗೆ ಖರ್ಚು ಮಾಡಿದ ಎರಡು ಪಟ್ಟು ಹಣಕ್ಕಿಂತ ಹೆಚ್ಚಾಗಿತ್ತು.[೮೧] ೨೦೦೮ರಲ್ಲಿ ಇದು £೧೦.೫ದಶಲಕ್ಷಕ್ಕೆ ಸಮನಾಗಿದೆ.[nb ೫] ಎಡ್ವರ್ಡ್ I ಪರಿಣತ ಕೋಟೆ ನಿರ್ಮಾಣಕಾರನಾಗಿದ್ದು, ದಂಡಯಾತ್ರೆಗಳ ಸಂದರ್ಭದಲ್ಲಿ ಮುತ್ತಿಗೆ ಯುದ್ಧದ ಅನುಭವವನ್ನು ಬಳಸಿಕೊಂಡು, ಕೋಟೆಯ ಕಟ್ಟಡಕ್ಕೆ ನಾವೀನ್ಯತೆಗಳನ್ನು ತಂದನು.[೮೧] ಅವನ ವೇಲ್ಸ್‌ನಲ್ಲಿನ ಕೋಟೆ ನಿರ್ಮಾಣದ ಕಾರ್ಯಕ್ರಮವು ಪೌರಸ್ತ್ಯ ಪ್ರಭಾವಗಳನ್ನು ಬಳಸಿಕೊಂಡು ಯುರೋಪ್‌ನಾದ್ಯಂತ ಕೋಟೆ ಗೋಡೆಗಳಲ್ಲಿ ಬಾಣದರಂಧ್ರಗಳ ವ್ಯಾಪಕ ಬಳಕೆಯನ್ನು ಪರಿಚಯಿಸಲು ಕಾರಣವಾಯಿತು.[೮೨] ಲಂಡನ್ ಗೋಪುರದಲ್ಲಿ, ಹೆನ್ರಿIII ಅಗೆದ ಕಂದಕವನ್ನು ಎಡ್ವರ್ಡ್ ಮುಚ್ಚಿದ ಮತ್ತು ಆ ಮಾರ್ಗದಲ್ಲಿ ಹೊಸ ಕೂಡುಗೋಡೆಯನ್ನು ನಿರ್ಮಿಸಿ, ಹೊಸ ಆವರಣ ಸೃಷ್ಟಿಸಿದ. ಹೊಸ ಕೂಡುಗೋಡೆಯ ಮುಂದೆ ಹೊಸ ಕಂದಕವನ್ನು ಸೃಷ್ಟಿಸಲಾಯಿತು. ಹೆನ್ರಿ IIIಕೂಡು ಗೋಡೆಯ ಪಶ್ಚಿಮ ಭಾಗವನ್ನು ಮರುನಿರ್ಮಾಣ ಮಾಡಲಾಯಿತು. ಬ್ಯೂಚಾಂಪ್ ಗೋಪುರವು ಕೋಟೆಯ ಹಳೆಯ ಗೇಟ್‌ಹೌಸ್‌ಗೆ ಬದಲಿಯಾಗಿ ಬಂತು. ಎರಡು ಗೇಟ್‌ಹೌಸ್‌ಗಳು ಮತ್ತು ಕಾಪುಗೋಪುರ ಸೇರಿದಂತೆ ವ್ಯಾಪಕ ರಕ್ಷಣೆಗಳೊಂದಿಗೆ ಹೊಸ ಪ್ರವೇಶವನ್ನು ಸೃಷ್ಟಿಸಲಾಯಿತು.[೮೩] ಕೋಟೆಯನ್ನು ಸ್ವಾವಲಂಬಿಯಾಗಿ ಮಾಡುವ ಯತ್ನದಲ್ಲಿ ಎಡ್ವರ್ಡ್ I ಎರಡು ನೀರಿನ ಗಿರಣಿಗಳನ್ನು ಕೂಡ ಸೇರಿಸಿದರು.[೮೪] ೧೨೭೮ರಲ್ಲಿ ಲಂಡನ್ ಗೋಪುರದಲ್ಲಿ ೬೦೦ ಯಹೂದಿಗಳನ್ನು ಸೆರೆಯಲ್ಲಿಡಲಾಯಿತು. ಅವರ ವಿರುದ್ಧ ನಾಣ್ಯವನ್ನು ಕತ್ತರಿಸಿದ ಆರೋಪ ಮಾಡಲಾಗಿತ್ತು.[೬೬] ಎಡ್ವರ್ಡ್ ನೇತತ್ವದಲ್ಲಿ ದೇಶದ ಯಹೂದಿ ಜನಸಂಖ್ಯೆಯ ಕಿರುಕುಳವು ೧೨೭೬ರಲ್ಲಿ ಆರಂಭವಾಯಿತು ಮತ್ತು ೧೨೯೦ರಲ್ಲಿ ಉಚ್ಚಾಟನೆಯ ಆದೇಶ ಹೊರಡಿಸುವಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿತು. ಇದು ಯಹೂದಿಗಳನ್ನು ದೇಶದಿಂದ ಹೊರದೂಡುವಂತೆ ಮಾಡಿತು.[೮೫]

ನಂತರದ ಮಧ್ಯಯುಗೀನ ಅವಧಿ[ಬದಲಾಯಿಸಿ]

ಎಡ್ವರ್ಡ್ I ನೇತೃತ್ವದಲ್ಲಿ ವಿಸ್ತರಣೆಯ ಅಂತಿಮ ಅವಧಿಯ ನಂತರ ಲಂಡನ್ ಗೋಪುರದ ಮಾದರಿ

ಎಡ್ವರ್ಡ್ II ಆಳ್ವಿಕೆಯ ಸಂದರ್ಭದಲ್ಲಿ(೧೩೦೭-೧೩೨೭)ಲಂಡನ್ ಗೋಪುರದಲ್ಲಿ ಕಡಿಮೆ ಚಟುವಟಿಕೆಯಿಂದ ಕೂಡಿತ್ತು.[೮೬] ಆದಾಗ್ಯೂ, ಈ ಅವಧಿಯಲ್ಲಿ ಪ್ರೈವಿ ವಾರ್ಡ್‌ರೋಬ್(ಸರ್ಕಾರ) ಸ್ಥಾಪಿಸಲಾಯಿತು. ಸಂಸ್ಥೆಯು ಗೋಪುರದಲ್ಲಿ ನೆಲೆಗೊಂಡಿತ್ತು ಮತ್ತು ರಾಜ್ಯದ ಅಂಗಗಳ ಆಯೋಜನೆಗೆ ಕಾರಣವಾಗಿತ್ತು.[೮೭] ಮಾರ್ಗರೇಟ್ ಡಿ ಕ್ಲೇರ್, ಬಾರೋನೆಸ್ ಬ್ಯಾಡಲ್ಸ್‌ಮಿಯರ್ ಲಂಡನ್ ಗೋಪುರದಲ್ಲಿ ಸೆರೆಯಲ್ಲಿಟ್ಟ ಪ್ರಥಮ ಮಹಿಳೆಯಾಗಿದ್ದಾಳೆ. ಅವಳು ರಾಣಿ ಇಸಾಬೆಲ್ಲಾಗೆ ಲೀಡ್ಸ್ ಕೋಟೆಗೆ ಪ್ರವೇಶ ನಿರಾಕರಿಸಿ, ಇಸಾಬೆಲ್ಲಾ ಮೇಲೆ ದಾಳಿ ಮಾಡುವಂತೆ ತನ್ನ ಬಿಲ್ಲಾಳುಗಳಿಗೆ ಆದೇಶ ನೀಡಿದ್ದಳು.[೮೮] ಈ ಮೂಲಕ ರಾಜಪ್ರಭುತ್ವದ ಅಂಗರಕ್ಷಕ ಪಡೆಯ ೬ ಮಂದಿ ಹತ್ಯೆಗೊಳಗಾಗಿದ್ದರು.[೮೯][೯೦][೯೧] ಸಾಮಾನ್ಯವಾಗಿ ಉನ್ನತ ದರ್ಜೆಯ ನಿವಾಸಿಗಳಿಗೆ ಮೀಸಲಾದ ಗೋಪುರವು ದೇಶದ ಅತ್ಯಂತ ಮುಖ್ಯ ರಾಜಮನೆತನದ ಕಾರಾಗೃಹವಾಗಿತ್ತು.[೯೨] ಆದಾಗ್ಯೂ, ಇದು ಅವಶ್ಯಕವಾಗಿ ಅತ್ಯಂತ ರಕ್ಷಣೆಯಿಂದ ಕೂಡಿರಲಿಲ್ಲ. ಇತಿಹಾಸದಾದ್ಯಂತ ಜನರು ತಪ್ಪಿಸಿಕೊಳ್ಳಲು ಜೈಲುಪಹರೆಯವರಿಗೆ ಲಂಚ ನೀಡುತ್ತಿದ್ದರು. ೧೩೨೨ರಲ್ಲಿ ರೋಜರ್ ಮಾರ್ಟಿಮರ್, ಮಾರ್ಚ್‌ನ ಪ್ರಥಮ ಅರ್ಲ್‌ನಿಗೆ ಗೋಪುರದಿಂದ ತಪ್ಪಿಸಿಕೊಳ್ಳಲು ಗೋಪುರದ ಉಪ ಲೆಫ್ಟಿನೆಂಟ್ ನೆರವಾಗಿದ್ದ. ಅವನು ಮಾರ್ಟಿಮರ್ ಪರ ಜನರನ್ನು ಗೋಪುರದೊಳಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದ. ಅವರು ಅವನ ಕೋಣೆಯ ಗೋಡೆಯಲ್ಲಿ ರಂಧ್ರವನ್ನು ಕೊರೆದರು ಮತ್ತು ಮಾರ್ಟಿಮರ್ ಕಾಯುತ್ತಿದ್ದ ದೋಣಿಯ ಮೂಲಕ ಪರಾರಿಯಾಗಿದ್ದ. ಅವನು ಫ್ರಾನ್ಸ್‌ಗೆ ಪಲಾಯನ ಮಾಡಿದ ಮತ್ತು ಅಲ್ಲಿ ಎಡ್ವರ್ಡ್‌ನ ರಾಣಿಯನ್ನು ಸಂಧಿಸಿದ. ಅಲ್ಲಿ ಅವರು ಅಕ್ರಮ ಸಂಬಂಧ ಆರಂಭಿಸಿ, ರಾಜನನ್ನು ಪದಚ್ಯುತಗೊಳಿಸಲು ಸಂಚು ನಡೆಸಿದರು. ಇಂಗ್ಲೆಂಡ್‌ಗೆ ಪ್ರವೇಶಿಸಿದ ಕೂಡಲೇ ಮಾರ್ಟಿಮರ್ ಮೊದಲ ಕ್ರಮವು ಗೋಪುರವನ್ನು ವಶಕ್ಕೆ ತೆಗೆದುಕೊಂಡು ಅಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡುವುದಾಗಿತ್ತು. ಎಡ್ವರ್ಡ್ III ಆಳ್ವಿಕೆ ನಡೆಸಲು ತೀರಾ ಕಿರಿಯನಾಗಿದ್ದರಿಂದ, ಮಾರ್ಟಿಮರ್ ಸುಮಾರು ಮೂರು ವರ್ಷಗಳವರೆಗೆ ಆಳ್ವಿಕೆ ನಡೆಸಿದ. ೧೩೩೦ರಲ್ಲಿ ಎಡ್ವರ್ಡ್ ಮತ್ತು ಅವನ ಬೆಂಬಲಿಗರು ಮಾರ್ಟಿಮರ್‌ನನ್ನು ಸೆರೆಹಿಡಿದು, ಗೋಪುರದಲ್ಲಿ ಎಸೆದರು.[೯೩] ಎಡ್ವರ್ಡ್ III ಆಳ್ವಿಕೆ ಕಾಲದಲ್ಲಿ(೧೩೧೨-೧೩೭೭)ಇಂಗ್ಲೆಂಡ್ ಯುದ್ಧದಲ್ಲಿ ನವೀಕೃತ ಯಶಸ್ಸನ್ನು ಗಳಿಸಿತು.ಅವನ ತಂದೆ ಆಳ್ವಿಕೆಯಲ್ಲಿ ಸ್ಕಾಟರು ಮತ್ತು ಫ್ರೆಂಚರ ವಿರುದ್ಧ ಸಾಮ್ರಾಜ್ಯವು ಹಿನ್ನಡೆ ಗಳಿಸಿದ ನಂತರ ಈ ಬೆಳವಣಿಗೆ ಉಂಟಾಯಿತು. ಎಡ್ವರ್ಡ್ ಯಶಸ್ಸುಗಳಲ್ಲಿ ಕ್ರೇಸಿ ಮತ್ತು ಪಾಯಿಟರ್ಸ್ ಯುದ್ಧಗಳು ಸೇರಿವೆ. ಅದರಲ್ಲಿ ಫ್ರಾನ್ಸ್‌ನ ಜಾನ್ II ನನ್ನು ಯುದ್ಧಕೈದಿಯಾಗಿ ಸೆರೆಹಿಡಿಯಲಾಯಿತು ಮತ್ತು ರಾಜ ಸ್ಕಾಟ್‌ಲ್ಯಾಂಡ್ ಡೇವಿಡ್ II ನನ್ನು ನೆವಿಲ್ಲೆ ಕ್ರಾಸ್‌ನಲ್ಲಿ ಸೆರೆಹಿಡಿಯಲಾಯಿತು. ಈ ಅವಧಿಯಲ್ಲಿ, ಲಂಡನ್ ಗೋಪುರವು ಅನೇಕ ಯುದ್ಧಕೈದಿಗಳನ್ನು ಸೆರೆಯಲ್ಲಿಟ್ಟಿತ್ತು.[೯೪] ಎಡ್ವರ್ಡ್ II ಲಂಡನ್ ಗೋಪುರವನ್ನು ದುರಸ್ತಿಮಾಡಲಾಗದ ಸ್ಥಿತಿಗೆ ದೂಡಿದ್ದನು. ಆದರೆ ಎಡ್ವರ್ಡ್IIIಆಳ್ವಿಕೆ ಆರಂಭಿಸಿದಾಗ ಕೋಟೆಯು ಅಹಿತಕರ ಸ್ಥಳವಾಗಿತ್ತು.[೩೮] ಕೋಟೆಯ ಗೋಡೆಗಳಲ್ಲಿ ಸೆರೆಸಿಕ್ಕಿದ ಕುಲೀನ ವರ್ಗದವರು ಭೇಟೆ ಮುಂತಾದ ಚಟುವಟಿಕೆಗಳಲ್ಲಿ ನಿರತವಾಗಲು ಅಸಮರ್ಥರಾದರು. ಇದಕ್ಕೆ ಸೆರೆಮನೆಯಾಗಿ ಬಳಸಿದ ಇತರೆ ರಾಜಮನೆತನದ ಕೋಟೆಗಳಲ್ಲಿ ಅನುಮತಿ ನೀಡಲಾಗಿತ್ತು. ಉದಾಹರಣೆಗೆ ವಿಂಡ್ಸರ್. ಕೋಟೆಯನ್ನು ನವೀಕರಿಸಬೇಕೆಂದು ಎಡ್ವರ್ಡ್ III ಆದೇಶ ನೀಡಿದ.[೯೫]

ನೂರು ವರ್ಷಗಳ ಯುದ್ಧದ ಸಂದರ್ಭದಲ್ಲಿ ಗೋಪುರದಲ್ಲಿ ಬಂಧಿಸಿಟ್ಟ ಪ್ರಭಾವಶಾಲಿ ಫ್ರೆಂಚ್ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಚಾರ್ಲ್ಸ್, ಆರ್ಲಿಯನ್ಸ್ ಡ್ಯೂಕ್ ಮತ್ತು ಫ್ರಾನ್ಸ್ ರಾಜನ ಸೋದರಳಿಯ ಸೇರಿದ್ದಾರೆ.ಮೇಲಿನ ೧೫ನೇ ಶತಮಾನದ ಚಿತ್ರವು ಲಂಡನ್ ಗೋಪುರದ ಅತ್ಯಂತ ಮುಂಚಿನ ಉಳಿದಿರುವ ಸಾಂಕೇತಿಕವಲ್ಲದ ಚಿತ್ರ.ಇದು ವೈಟ್ ಟವರ್ ಮತ್ತು ವಾಟರ್ ಗೇಟ್ ತೋರಿಸುತ್ತದೆ.[೯೬]

ರಿಚರ್ಡ್ II೧೩೭೭ರಲ್ಲಿ ಕಿರೀಟಧಾರಣೆ ಮಾಡಿದಾಗ, ಅವನು ಗೋಪುರದಿಂದ ವೆಸ್ಟ್‌ಮಿನಿಸ್ಟರ್ ಅಬ್ಬೆವರೆಗೆ ಮೆರವಣಿಗೆಯ ನೇತೃತ್ವ ವಹಿಸಿದ. ಈ ಸಂಪ್ರದಾಯವು ೧೪ನೇ ಶತಮಾನದ ಪೂರ್ವದಲ್ಲಿ ಆರಂಭವಾಗಿ ೧೬೬೦ರವಗೆ ಉಳಿಯಿತು.[೯೪] ೧೩೮೧ರಲ್ಲಿ ರೈತರ ಬಂಡಾಯದ ಸಂದರ್ಭದಲ್ಲಿ ಲಂಡನ್ ಗೋಪುರದ ಮೇಲೆ ರಾಜ ಒಳಗಿರುವ ಸಂದರ್ಭದಲ್ಲೇ ಮುತ್ತಿಗೆ ಹಾಕಲಾಯಿತು. ರಿಚರ್ಡ್ ಬಂಡಾಯದ ನಾಯಕ ವ್ಯಾಟ್ ಟೈಲರ್‌‌ನನ್ನು ಭೇಟಿ ಮಾಡಲು ತೆರಳುತ್ತಿದ್ದಂತೆ, ಗುಂಪೊಂದು ಯಾವುದೇ ಪ್ರತಿರೋಧವಿಲ್ಲದೆ ಜಿವೆಲ್ ಹೌಸ್ ಲೂಟಿ ಮಾಡಿತು. ಕ್ಯಾಂಟರ್‌ಬರಿಯ ಆರ್ಚ್‌ಬಿಷಪ್ ಸೈಮನ್ ಸಡ್ಬರಿ ಪವಿತ್ರ ಸ್ಥಳಕ್ಕೆ ಗುಂಪು ಮರ್ಯಾದೆ ನೀಡುವುದೆಂಬ ಆಶಯದೊಂದಿಗೆ ಸೇಂಟ್ ಜಾನ್ಸ್ ಪ್ರಾರ್ಥನಾ ಮಂದಿರದಲ್ಲಿ ಆಶ್ರಯ ಪಡೆದರು. ಆದಾಗ್ಯೂ, ಅವರನ್ನು ದೂರತೆಗೆದುಕೊಂಡು ಹೋಗಿ ಟವರ್ ಹಿಲ್‌ನಲ್ಲಿ ರುಂಡಚ್ಛೇದನ ಮಾಡಲಾಯಿತು.[೯೭] ಆರು ವರ್ಷಗಳ ನಂತರ ಅಲ್ಲಿ ಪುನಃ ನಾಗರಿಕ ಅಶಾಂತಿ ಉಂಟಾಯಿತು ಮತ್ತು ರಿಚರ್ಡ್ ಸಾಮಾನ್ಯವಾಗಿ ಕ್ರಿಸ್‌ಮಸ್ ರಜಾ ದಿನಗಳನ್ನು ಕಳೆಯುತ್ತಿದ್ದ ವಿಂಡ್ಸರ್ ಬದಲಿಗೆ ಗೋಪುರದ ರಕ್ಷಣೆಯಲ್ಲಿ ಕ್ರಿಸಮಸ್ ದಿನಗಳನ್ನು ಕಳೆದ.[೯೮] ಹೆನ್ರಿ ಬಾಲಿಂಗ್‌ಬ್ರೋಕ್ ೧೩೯೯ರಲ್ಲಿ ದೇಶಭ್ರಷ್ಟತೆಯಿಂದ ಹಿಂದಿರುಗಿದ ನಂತರ, ರಿಚರ್ಡ್‌ನನ್ನು ವೈಟ್ ಟವರ್‌ನಲ್ಲಿ ಸೆರೆಯಲ್ಲಿಡಲಾಯಿತು. ರಿಚರ್ಡ್ ಅಧಿಕಾರವನ್ನು ತೊರೆದ ಮತ್ತು ಬೋಲಿಂಗ್‌ಬ್ರೋಕ್ ಸಿಂಹಾಸನದ ಮೇಲೆ ಬದಲಿಯಾಗಿ ಬಂದು, ಕಿಂಗ್ ಹೆನ್ರಿ IV ಎಂದು ನಾಮಾಂಕಿತನಾದ.[೯೭] ೧೫ನೇ ಶತಮಾನದಲ್ಲಿ, ಲಂಡನ್ ಗೋಪುರದಲ್ಲಿ ಕಡಿಮೆ ಕಟ್ಟಡ ಕೆಲಸಗಳಾಗಿತ್ತಾದರೂ, ಕೋಟೆಯು ಆಶ್ರಯದ ಸ್ಥಳವಾಗಿ ಪ್ರಾಮುಖ್ಯತೆಯಲ್ಲಿ ಉಳಿಯಿತು. ದಿವಂಗತ ರಿಚರ್ಡ್ II ಬೆಂಬಲಿಗರು ದಂಗೆಗೆ ಯತ್ನಿಸಿದಾಗ, ಹೆನ್ರಿ IVಲಂಡನ್ ಗೋಪುರದಲ್ಲಿ ಸುರಕ್ಷತೆ ಕಂಡುಕೊಂಡ. ಈ ಅವಧಿಯಲ್ಲಿ ಕೋಟೆಯು ಅನೇಕ ಗಣ್ಯರನ್ನು ಕೈದಿಗಳಾಗಿ ಸೆರೆಹಿಡಿದಿತ್ತು. ಸ್ಕಾಟಿಷ್ ಸಿಂಹಾಸನದ ಉತ್ತರಾಧಿಕಾರಿ, ನಂತರ ರಾಜ ಸ್ಕಾಟ್‌ಲ್ಯಾಂಡ್‌ನ ಜೇಮ್ಸ್ I ೧೪೦೬ರಲ್ಲಿ ಫ್ರಾನ್ಸ್‌ಗೆ ಪ್ರಯಾಣಿಸುವಾಗ ಅವನನ್ನು ಅಪಹರಿಸಿ, ಗೋಪುರದಲ್ಲಿ ಬಂಧಿಸಲಾಯಿತು. ಹೆನ್ರಿ V ನ ಆಳ್ವಿಕೆಯಲ್ಲಿ(೧೪೧೩-೧೪೨೨) ಫ್ರಾನ್ಸ್ ವಿರುದ್ಧ ನೂರು ವರ್ಷಗಳ ಯುದ್ಧದಲ್ಲಿ ಇಂಗ್ಲೆಂಡ್ ಅದೃಷ್ಟಕ್ಕೆ ನವಚೈತನ್ಯ ನೀಡಿತು. ಹೆನ್ರಿಯ ಅಜಿನ್‌ಕೋರ್ಟ್ ಯುದ್ಧ ಮುಂತಾದ ವಿಜಯಗಳ ಫಲವಾಗಿ, ಅನೇಕ ಉನ್ನತ ಸ್ಥಾನಮಾನದ ಕೈದಿಗಳನ್ನು ಲಂಡನ್ ಗೋಪುರದಲ್ಲಿ ಅವರು ಒತ್ತೆಹಣ ನೀಡುವ ತನಕ ಸೆರೆಹಿಡಿಯಲಾಗಿತ್ತು.[೯೯]

೧೫ನೇ ಶತಮಾನದ ದ್ವಿತೀಯಾರ್ಧದ ಬಹುಭಾಗವು ಸಿಂಹಾಸನದ ಹಕ್ಕುಪ್ರತಿಪಾದಕರಾದ ಹೌಸಸ್ ಆಫ್ ಲಂಕಾಸ್ಟರ್ ಮತ್ತು ಯಾರ್ಕ್ ನಡುವೆ ವಾರ್ಸ್ ಆಫ್ ದಿ ರೋಸಸ್‌ನಿಂದ ಮುಳುಗಿತ್ತು.[೧೦೦] ಕೋಟೆಯನ್ನು ಈ ಬಾರಿ ಪುನಃ ಯಾರ್ಕಿಸ್ಟ್ ಪಡೆಯಿಂದ ೧೪೬೦ರಲ್ಲಿ ಮುತ್ತಿಗೆ ಹಾಕಲಾಯಿತು. ಗೋಪುರವು ಫಿರಂಗಿ ಪಡೆಯ ಗುಂಡುಗಳಿಂದ ಹಾನಿಗೊಳಗಾಯಿತು. ಮತ್ತು ನಾರ್ಥಾಂಪ್ಟನ್ ಯುದ್ದದಲ್ಲಿ ಹೆನ್ರಿ VI ಸೆರೆಸಿಕ್ಕಿದಾಗ, ಅವನು ಶರಣಾಗತನಾದ. ವಾರ್ವಿಕ್‌ನ ೧೬ನೇ ಅರ್ಲ್ ರಿಚರ್ಡ್ ನೆವಿಲ್ಲೆ ನೆರವಿನೊಂದಿಗೆ(ಉಪನಾಮ "ದಿ ಕಿಂಗ್‌ಮೇಕರ್")ಹೆನ್ರಿ ೧೪೭೦ರಲ್ಲಿ ಅಲ್ಪಾವಧಿಗೆ ಸಿಂಹಾಸನವನ್ನು ಮರುವಶಪಡಿಸಿಕೊಂಡ. ಆದಾಗ್ಯೂ, ಎಡ್ವರ್ಡ್ IV ಶೀಘ್ರದಲ್ಲೇ ನಿಯಂತ್ರಣವನ್ನು ಸಾಧಿಸಿದ ಮತ್ತು ಹೆನ್ರಿ VI ನ್ನು ಲಂಡನ್ ಗೋಪುರದಲ್ಲಿ ಸೆರೆಹಿಡಿಯಲಾಯಿತು ಮತ್ತು ಅಲ್ಲಿ ಅವನನ್ನು ಬಹುಶಃ ಹತ್ಯೆಮಾಡಲಾಯಿತು.[೯೭] ಯುದ್ಧದ ಸಂದರ್ಭದಲ್ಲಿ, ಗೋಪುರವನ್ನು ಗುಂಡಿನ ದಾಳಿಯನ್ನು ಎದುರಿಸುವಷ್ಟು ರಕ್ಷಣೆ ಕಲ್ಪಿಸಲಾಯಿತು ಮತ್ತು ಬಂಡಿತೋಪು ಮತ್ತು ಕೈಬಂದೂಕುಗಳಿಗೆ ರಂಧ್ರಗಳನ್ನು ಒದಗಿಸಲಾಯಿತು. ಟವರ್ ಹಿಲ್ ದಕ್ಷಿಣಕ್ಕೆ ಈ ಉದ್ದೇಶಕ್ಕಾಗಿ ಪ್ರಾಕಾರವನ್ನು ಸೃಷ್ಟಿಸಲಾಯಿತಾದರೂ ಇದು ಈಗ ಉಳಿದಿಲ್ಲ.[೧೦೦]

ಇಬ್ಬರು ರಾಜಕುಮಾರರಾದ ಎಡ್ವರ್ಡ್ ಮತ್ತು ರಿಚರ್ಡ್ ಗೋಪುರದಲ್ಲಿ, ೧೪೮೩ರಲ್ಲಿ ಸರ್ ಜಾನ್ ಎವೆರೆಟ್ ಮಿಲ್ಲಿಯಾಸ್ ಅವರಿಂದ, ರಾಯಲ್ ಹೋಲೊವೆ ಚಿತ್ರ ಸಂಗ್ರಹದ ಭಾಗ.

೧೪೮೩ರಲ್ಲಿ ಎಡ್ವರ್ಡ್ IV ಸಾವಪ್ಪಿದ ಸ್ವಲ್ಪ ಕಾಲದಲ್ಲೇ ಪ್ರಿನ್ಸಸ್ ಇನ್ ದಿ ಟವರ್‌ನ ಕುಖ್ಯಾತ ಹತ್ಯೆ ಸಾಂಪ್ರದಾಯಿಕವಾಗಿ ನಡೆಯಿತೆಂದು ನಂಬಲಾಗಿದೆ. ಲಂಡನ್ ಗೋಪುರಕ್ಕೆ ಸಂಬಂಧಿಸಿದ ಅತ್ಯಂತ ಕುಖ್ಯಾತ ಘಟನೆ ಇದಾಗಿದೆ.[೧೦೧] ರಾಜಕುಮಾರನು ಆಳ್ವಿಕೆ ನಡೆಸಲು ತೀರಾ ಚಿಕ್ಕವನಾದ್ದರಿಂದ ಎಡ್ವರ್ಡ್ V ಚಿಕ್ಕಪ್ಪ ಗ್ಲೌಸೆಸ್ಟರ್‌ಶೈರ್‌ನ ರಿಚರ್ಡ್ ಡ್ಯೂಕ್‌ನನ್ನು ಲಾರ್ಡ್ ಪ್ರೊಟೆಕ್ಟರ್ ಎಂದು ಘೋಷಿಸಲಾಯಿತು.[೧೦೨] ೧೨ವರ್ಷ ವಯಸ್ಸಿನ ಎಡ್ವರ್ಡ್ ಲಂಡನ್ ಗೋಪುರ ಸರಹದ್ದಿನಲ್ಲೇ ತನ್ನ ಕಿರಿಯ ಸಹೋದರ ರಿಚರ್ಡ್ ಜತೆ ಉಳಿದ. ಗ್ಲೌಸೆಸ್ಟರ್‌ ಡ್ಯೂಕ್‌ನನ್ನು ಜುಲೈನಲ್ಲಿ ಕಿಂಗ್ ರಿಚರ್ಡ್ III ಎಂದು ಘೋಷಿಸಲಾಯಿತು. ರಾಜಕುಮಾರರು ೧೪೮೩ರ ಜೂನ್‌ನಲ್ಲಿ ಸಾರ್ವಜನಿಕರಿಗೆ ಕೊನೆಯದಾಗಿ ಕಾಣಿಸಿದರು. [೧೦೧] ೧೪೮೩ರ ಬೇಸಿಗೆಯ ಕೊನೆಯಲ್ಲಿ ಅವರನ್ನು ಹತ್ಯೆ ಮಾಡಿದ್ದೇ ಅವರ ಕಣ್ಮರೆಗೆ ಸಂಭವನೀಯ ಕಾರಣವೆಂದು ಹೇಳಲಾಗಿದೆ.[೧೦೨] ವೈಟ್ ಟವರ್‌ನ ಪ್ರವೇಶದ್ವಾಶರದ ೧೨ನೇ ಶತಮಾನದ ಪೂರ್ವಕಟ್ಟಡವನ್ನು ನೆಲಸಮಗೊಳಿಸಿದಾಗ ೧೬೭೪ರಲ್ಲಿ ಅವರಿಗೆ ಸಂಬಂಧಿಸಿದ್ದೆಂದು ಭಾವಿಸಲಾದ ಮೂಳೆಗಳು ಪತ್ತೆಯಾಗಿವೆ. ರಿಚರ್ಡ್ ೧೪೮೫ರಲ್ಲಿ‌ ಬೋಸ್‌ವರ್ತ್ ಕದನದಲ್ಲಿ ಲಂಕಾಶೈರ್ ನಿವಾಸಿ ಹೆನ್ರಿ ಟ್ಯೂಡರ್ ಅವರಿಂದ ಸೋಲಪ್ಪಿದಾಗ ರಿಚರ್ಡ್‌ಗೆ ವಿರೋಧ ಉಲ್ಬಣಿಸಿತು. ಹೆನ್ರಿ ಟ್ಯೂಡರ್ ಹೆನ್ರಿ VII ಹೆಸರಿನಲ್ಲಿ ಸಿಂಹಾಸನವನ್ನು ಏರಿದ.[೧೦೧]

ಬದಲಾದ ಬಳಕೆ[ಬದಲಾಯಿಸಿ]

ಟ್ಯೂಡರ್ ಅವಧಿಯ ಆರಂಭವು ಲಂಡನ್ ಗೋಪುರವನ್ನು ರಾಜಮನೆತನದ ನಿವಾಸವಾಗಿ ಬಳಸುವುದರ ಕುಗ್ಗುವಿಕೆ ಆರಂಭದ ಗುರುತಾಯಿತು. ೧೬ನೇ ಶತಮಾನದ ಚರಿತ್ರೆ ಲೇಖಕ ರಾಫಲ್ ಹೋಲಿನ್‌ಶೆಡ್ ಹೇಳುವ ಪ್ರಕಾರ, "ಗೋಪುರವನ್ನು ಶಸ್ತ್ರಾಗಾರ ಮತ್ತು ಯುದ್ಧಸಾಮಗ್ರಿಯ ಸಂಗ್ರಹಾಗಾರವಾಗಿ ಹೆಚ್ಚು ಬಳಸಲಾಯಿತು. ರಾಜ ಅಥವಾ ರಾಣಿಗೆ ತಾತ್ಕಾಲಿಕ ನಿವಾಸವಾಗುವ ಬದಲಿಗೆ ನಂತರ ಅಪರಾಧಿಗಳನ್ನು ಸುರಕ್ಷಿತವಾಗಿ ಇರಿಸುವ ತಾಣವಾಗಿ ಬದಲಾಯಿತು".[೯೬] ಇಯೋಮನ್ ವಾರ್ಡರ್‌ಗಳು ೧೫೦೯ರವರೆಗೆ ರಾಜಪ್ರಭುತ್ವದ ಅಂಗರಕ್ಷಕರಾಗಿದ್ದರು.[೧೦೩] ಹೆನ್ರಿ VIIIಆಳ್ವಿಕೆಯ ಅವಧಿಯಲ್ಲಿ, ಗೋಪುರವನ್ನು ಅದರ ರಕ್ಷಣೆಗಳ ಕುರಿತು ಗಣನೀಯ ಕೆಲಸದ ಅಗತ್ಯವಿದೆ ಎಂದು ಅಂದಾಜು ಮಾಡಲಾಯಿತು. ೧೫೩೨ರಲ್ಲಿ ಥಾಮನ್ ಕ್ರೋಮ್‌ವೆಲ್ ದುರಸ್ತಿಗಳಿಗೆ £೩,೫೯೩ (೨೦೦೮ರಲ್ಲಿದ್ದಂತೆ ಸುಮಾರು £೧.೪ದಶಲಕ್ಷ)[nb ೬] ಖರ್ಚುಮಾಡಿದ ಮತ್ತು ಈ ಕೆಲಸಕ್ಕಾಗಿ ೩೦೦೦ ಟನ್ ಕೇನ್ ಸ್ಟೋನ್(ಸುಣ್ಣದ ಕಲ್ಲು) ಆಮದು ಮಾಡಿಕೊಂಡ.[೩೫] ಆದರೂ, ಕೋಟೆಯನ್ನು ಸಮಕಾಲೀನ ಮಿಲಿಟರಿ ರಕ್ಷಣಾವ್ಯವಸ್ಥೆಗಳ ಮಟ್ಟಕ್ಕೆ ತರಲು ಇದು ಸಾಕಷ್ಟಾಗಿರಲಿಲ್ಲ. ಇವುಗಳನ್ನು ಶಕ್ತಿಶಾಲಿ ಫಿರಂಗಿದಳವನ್ನು ತಾಳಿಕೊಳ್ಳುವಷ್ಟು ರೀತಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು.[೧೦೪] ರಕ್ಷಣೆಗಳನ್ನು ದುರಸ್ತಿ ಮಾಡಿದರೂ ಕೂಡ, ಅರಮನೆಯ ಕಟ್ಟಡಗಳನ್ನು ಹೆನ್ರಿ ನಿಧನದ ನಂತರ ಉಪೇಕ್ಷೆಯ ಸ್ಥಿತಿಯಲ್ಲಿ ಇರಿಸಲಾಯಿತು. ಅವುಗಳ ಪರಿಸ್ಥಿತಿ ತೀರ ಕೆಟ್ಟದಾಗಿದ್ದು, ಅವು ವಸ್ತುತಃ ವಾಸಿಸಲು ಯೋಗ್ಯವಾಗಿರಲಿಲ್ಲ.[೯೬] ೧೫೪೭ರ ನಂತರ, ಲಂಡನ್ ಗೋಪುರವನ್ನು ಅದರ ರಾಜಕೀಯ ಮತ್ತು ಐತಿಹಾಸಿಕ ಸಾಂಕೇತಿಕತೆ ಉಪಯುಕ್ತ ಎಂದು ಪರಿಗಣಿಸಿದಾಗ ಕೇವಲ ರಾಜಮನೆತನದ ನಿವಾಸವಾಗಿ ಬಳಸಲಾಯಿತು. ಉದಾಹರಣೆಗೆ ಎಡ್ವರ್ಡ್ VI ,ಮೇರಿ I ಮತ್ತು ಎಲಿಜಬೆತ್ I ಅವರ ಕಿರೀಟಧಾರಣೆಗಳಿಗೆ ಮುಂಚೆ ಗೋಪುರದಲ್ಲಿ ಸಂಕ್ಷಿಪ್ತವಾಗಿ ಉಳಿದರು.[೧೦೫]

Two signatures
ಗೈ ಫಾಕ್ಸ್‌ನನ್ನು ೧೬೦೫ರ ನವೆಂಬರ್ ೬ರಂದು ಗೋಪುರಕ್ಕೆ ತರಲಾಯಿತು. ಚಿತ್ರಹಿಂಸೆಯ ಬಳಿಕ ಅವನು ಕೋವಿಮದ್ದು ಸಂಚಿನ ಬಗ್ಗೆ ಪೂರ್ಣ ತಪ್ಪೊಪ್ಪಿಗೆಗೆ ಸಹಿ ಹಾಕಿದ[೧೦೬] ಚಿತ್ರಹಿಂಸೆಗೆ ಸ್ವಲ್ಪ ನಂತರ(ಮೇಲೆ) ಫಾಕ್ಸ್ ಸಹಿಯು ನಂತರದ ನಿದರ್ಶನಕ್ಕೆ ಹೋಲಿಸಿದರೆ(ಕೆಳಗೆ) ತಕ್ಕಷ್ಟಿಲ್ಲದ ಸಾಕ್ಷ್ಯವಾಗಿತ್ತು.

೧೬ನೇ ಶತಮಾನದಲ್ಲಿ, ಗೋಪುರವು ನಿರ್ದಯ ಮತ್ತು ಅನಾಕರ್ಷಕ ಬಂಧೀಖಾನೆಯೆಂಬ ಕುಖ್ಯಾತಿಯನ್ನು ಗಳಿಸಿತು. ಇದು ಸದಾಕಾಲ ಹಾಗೇ ಇರಲಿಲ್ಲ. ರಾಜಮನೆತನದ ಕೋಟೆಯಾಗಿ, ರಾಜಪ್ರಭುತ್ವವು ವಿವಿಧ ಕಾರಣಗಳಿಗಾಗಿ ಜನರನ್ನು ಬಂಧಿಸಿಡಲು ಬಳಸಿತು. ಆದಾಗ್ಯೂ, ಜನಸಾಮಾನ್ಯರಿಗೆ ವಿಪುಲ ಬಂಧೀಖಾನೆಗಳು ಇದ್ದಿದ್ದರಿಂದ ಇವನ್ನು ಸಾಮಾನ್ಯವಾಗಿ ಉನ್ನತ ಸ್ಥಾನಮಾನದ ವ್ಯಕ್ತಿಗಳನ್ನು ಅಲ್ಪಾವಧಿಗಳಿಗೆ ಸೆರೆಯಲ್ಲಿಡಲು ಬಳಸಲಾಯಿತು. ಗೋಪುರದ ಜನಪ್ರಿಯ ಕಲ್ಪನೆಗೆ ವಿರುದ್ಧವಾಗಿ, ಗೋಪುರದ ಲೆಫ್ಟಿನೆಂಟ್ ಮೂಲಕ ಉತ್ತಮ ಆಹಾರ ಅಥವಾ ಕಸೂತಿವಸ್ತ್ರ ಮುಂತಾದ ಸೌಲಭ್ಯಗಳನ್ನು ಖರೀದಿಸಿ, ಕೈದಿಗಳು ಅವರ ಜೀವನವನ್ನು ಸುಲಭವಾಗಿಸಿದ್ದರು.[೧೦೭] ಯಾವುದೇ ಕೋಟೆಯ ರೀತಿಯಲ್ಲಿ ಕೈದಿಗಳನ್ನು ಸೆರೆಯಲ್ಲಿಡುವುದು ಮೂಲತಃ ಗೋಪುರದ ಪ್ರಾಸಂಗಿಕ ಪಾತ್ರವಾದರೂ, ೧೬೮೭ರವರೆಗೆ ಕೈದಿಗಳಿಗೆ ಯಾವುದೇ ಉದ್ದೇಶಕ್ಕಾಗಿ ನಿರ್ಮಿಸಿದ ವಾಸ್ತವ್ಯ ಇರಲಿಲ್ಲ. ೧೬೮೭ರಲ್ಲಿ ವೈಟ್ ಟವರ್ ವಾಯವ್ಯದಲ್ಲಿ ಇಟ್ಟಿಗೆಯ ಶೆಡ್‌ನ ಸೈನಿಕರ ಬಂಧೀಖಾನೆಯನ್ನು ನಿರ್ಮಿಸಲಾಯಿತು. ಚಿತ್ರಹಿಂಸೆ ಮತ್ತು ಸೆರೆಯಲ್ಲಿಡುವ ಗೋಪುರದ ಕುಖ್ಯಾತಿಯು ೧೬ನೇ ಶತಮಾನದ ಧಾರ್ಮಿಕ ಪ್ರಚಾರಕರು ಮತ್ತು ೧೯ನೇ ಶತಮಾನದ ರಮ್ಯತಾವಾದಿಗಳಿಂದ ಹೆಚ್ಚಾಗಿ ಹುಟ್ಟಿಕೊಂಡಿದೆ.[೧೦೬] ಗೋಪುರದ ಹೆಚ್ಚು ಕುಖ್ಯಾತಿಯು ಉತ್ಪ್ರೇಕ್ಷೆಯಿಂದ ಕೂಡಿದ್ದರೂ, ೧೬ ಮತ್ತು ೧೭ನೇ ಶತಮಾನಗಳು ಬಂಧೀಖಾನೆಯಾಗಿ ಗೋಪುರವವನ್ನು ಉಚ್ಛ್ರಾಯ ಸ್ಥಿತಿಯಲ್ಲಿ ಗುರುತಿಸಿದವು. ಅನೇಕ ಧಾರ್ಮಿಕ ಮತ್ತು ರಾಜಕೀಯ ಅನಪೇಕ್ಷಿತ ವ್ಯಕ್ತಿಗಳನ್ನು ಬಂಧಿಸಲಾಯಿತು.[೧೦೬] ಪ್ರಿವಿ ಕೌನ್ಸಿಲ್ ಚಿತ್ರಹಿಂಸೆಯ ಬಳಕೆಗೆ ಅನುಮತಿ ನೀಡಬೇಕಿತ್ತು. ಆದ್ದರಿಂದ ಇದನ್ನು ಆಗಾಗ್ಗೆ ಬಳಸಲಿಲ್ಲ. ೧೫೪೦ ಮತ್ತು ೧೬೪೦ರ ನಡುವೆ, ಗೋಪುರದಲ್ಲಿ ಬಂಧನದ ಉಚ್ಛ್ರಾಯ ಸ್ಥಿತಿಯಲ್ಲಿ ಚಿತ್ರಹಿಂಸೆಯನ್ನು ಬಳಸಿದ ೪೮ ದಾಖಲಿತ ಪ್ರಕರಣಗಳಿವೆ. ಅತ್ಯಂತ ಸಾಮಾನ್ಯವಾಗಿ ಬಳಸುತ್ತಿದ್ದ ರೂಪಗಳು ಕುಖ್ಯಾತ ರಾಕ್, ಸ್ಕಾವಂಜರ್ಸ್ ಡಾಟರ್ ಮತ್ತು ಕೈಕೋಳಗಳು.[೧೦೮] ಗೋಪುರದ ಕಾನ್ಸ್‌ಟೇಬಲ್ ಎಕ್ಸೆಟರ್ ಡ್ಯೂಕ್ ೧೪೪೭ರಲ್ಲಿ ರಾಕ್‌ನ್ನು ಇಂಗ್ಲೆಂಡ್‌ಗೆ ಪರಿಚಯಿಸಿದರು. ತರುವಾಯ ಇದು ಡ್ಯೂಕ್ ಆಫ್ ಎಕ್ಸೆಟರ್`ಸ್ ಡಾಟರ್ ಎಂದು ಕೂಡ ಹೆಸರಾಗಿದೆ.[೧೦೯]

ಗೋಪುರದಲ್ಲಿ ಬಂಧಿಸಿ ಮರಣದಂಡನೆ ಶಿಕ್ಷೆಗೆ ಗುರಿಯಾದವರಲ್ಲಿ ಆನ್ನೆ ಬೋಲಿನ್ ಕೂಡ ಸೇರಿದ್ದಾರೆ.[೧೦೬] ಯಿಯೋಮಾನ್ ವಾರ್ಡರ್ಸ್ ಒಂದೊಮ್ಮೆ ರಾಜಪ್ರಭುತ್ವದ ಅಂಗರಕ್ಷಕರಾಗಿದ್ದರೂ, ೧೬ ಮತ್ತು ೧೭ನೇ ಶತಮಾನಗಳಲ್ಲಿ ಅವರ ಮುಖ್ಯ ಕರ್ತವ್ಯವು ಕೈದಿಗಳ ಮೇಲ್ವಿಚಾರಣೆ ವಹಿಸುವುದಾಗಿತ್ತು.[೧೧೦] ಗೋಪುರವು ರೋಗಗಳು ವ್ಯಾಪಕವಾಗಿದ್ದ ಫ್ಲೀಟ್ ಮುಂತಾದ ಲಂಡನ್‌ನಲ್ಲಿರುವ ಇತರ ಬಂಧೀಖಾನೆಗಳಿಗಿಂತ ಸುರಕ್ಷಿತವಾಗಿತ್ತು. ಉನ್ನತ ಸ್ಥಾನಮಾನದ ಕೈದಿಗಳು ಹೊರಗೆ ನಿರೀಕ್ಷೆಗೆ ಹೋಲಿಕೆಯಾಗಬಹುದಾದ ಸ್ಥಿತಿಗತಿಗಳಲ್ಲಿ ಜೀವಿಸಬಹುದಾಗಿತ್ತು. ಒಂದು ಉದಾಹರಣೆಯು ವಾಲ್ಟರ್ ರಾಲೀಗ್ ಗೋಪುರದಲ್ಲಿ ಸೆರೆಯಲ್ಲಿದ್ದರೂ ಅವನ ಕುಟುಂಬದ ಜತೆಗೆ ೧೬೦೫ರಲ್ಲಿ ಜನಿಸಿದ ಪುತ್ರನಿಗೆ ವಾಸ್ತವ್ಯ ಕಲ್ಪಿಸಲು ಅವನ ಕೋಣೆಗಳನ್ನು ಮಾರ್ಪಾಟು ಮಾಡಲಾಗಿತ್ತು.[೧೦೮] ಮರದಂಡನೆಗಳನ್ನು ಲಂಡನ್ ಗೋಪುರದ ಬದಲಿಗೆ ಟವರ್ ಹಿಲ್‌ನಲ್ಲಿ ಸಾಮಾನ್ಯವಾಗಿ ನಿರ್ವಹಿಸಲಾಯಿತು. ಸುಮಾರು ೪೦೦ ವರ್ಷಗಳಲ್ಲಿ ಬೆಟ್ಟದ ಮೇಲೆ ೧೧೨ಜನರಿಗೆ ಮರಣದಂಡನೆ ವಿಧಿಸಲಾಯಿತು.[೧೧೧] ೨೦ನೇ ಶತಮಾನಕ್ಕೆ ಮುಂಚೆ, ಕೋಟೆಯ ಟವರ್ ಗ್ರೀನ್‌ನೊಳಗೆ ೭ ಮರಣದಂಡನೆಗಳನ್ನು ನಿರ್ವಹಿಸಲಾಯಿತು. ಲೇಡಿ ಜೇನ್ ಗ್ರೇ ಪ್ರಕರಣವು ಇದೇ ರೀತಿಯದಾಗಿತ್ತು. ಸಾರ್ವಜನಿಕ ಮರಣದಂಡನೆ ಅಪಾಯಕಾರಿ ಎಂದು ಪರಿಗಣಿಸಲಾದ ಕೈದಿಗಳಿಗೆ ಇದು ಮೀಸಲಾಗಿತ್ತು.[೧೧೧] ೧೫೫೪ರ ಫೆಬ್ರವರಿ ೧೨ರಂದು ಲೇಡಿ ಜೇನ್ ಗ್ರೇ ಮರಣದಂಡನೆ ನಂತರ,[೧೧೨] ರಾಣಿ ಮೇರಿ I ಅವಳ ಸಹೋದರಿ ಎಲಿಜಬೆತ್(ನಂತರ ರಾಣಿ ಎಲಿಜಬೆತ್ I ಎಂದು ಹೆಸರಾದರು)ಳನ್ನು ಗೋಪುರದಲ್ಲಿ ಸೆರೆಯಲ್ಲಿಟ್ಟಳು. ಸರ್ ಥಾಮಸ್ ವ್ಯಾಟ್ ಮೇರಿ ವಿರುದ್ಧ ಎಲಿಜಬೆತ್ ಹೆಸರಿನಲ್ಲಿ ಬಂಡಾಯವೆದ್ದಿದ್ದರಿಂದ ಆಕೆ ಬಂಡಾಯವನ್ನು ಹುಟ್ಟುಹಾಕಿದ್ದಾಳೆಂಬ ಸಂಶಯದ ಮೇಲೆ ಸೆರೆಯಲ್ಲಿಡಲಾಗಿತ್ತು.[೧೧೩]

ಲಂಡನ್ ಗೋಪುರದ ಉತ್ತರಕ್ಕೆ ಟವರ್ ಹಿಲ್‌ನ ಸಮೆಗಲ್ಲು ಮೇಲ್ಮೈ.೪೦೦ವರ್ಷಗಳ ಕಾಲಾವಧಿಯಲ್ಲಿ ಬೆಟ್ಟದಲ್ಲಿ ೧೧೨ಜನರನ್ನು ಮರಣದಂಡನೆಗೆ ಗುರಿಪಡಿಸಲಾಯಿತು[೧೧೧].

೧೫ನೇ ಶತಮಾನದಲ್ಲಿ ಆಫೀಸ್ ಆಫ್ ಆರ್ಡ‌ನೆನ್ಸ್ ಮತ್ತು ಆರ್ಮರಿ ಆಫೀಸ್ ಸ್ಥಾಪಿಸಲಾಯಿತು. ಪ್ರಿವಿ ವಾರ್ಡ್‌ರೋಬ್ ಕರ್ತವ್ಯವಾದ ರಾಜಪ್ರಭುತ್ವದ ಶಸ್ತ್ರಾಗಾರ ಮತ್ತು ಆಭರಣಗಳ ಮೇಲ್ವಿಚಾರಣೆಯನ್ನು ಅದು ಸ್ವಾಧೀನಕ್ಕೆ ತೆಗೆದುಕೊಂಡಿತು.[೧೧೪] ೧೬೬೧ಕ್ಕೆ ಮುಂಚೆ ಯಾವುದೇ ಸ್ಥಾನಮಾನದ ಸೇನೆ ಇಲ್ಲದಿದ್ದರೂ ಲಂಡನ್ ಗೋಪುರದಲ್ಲಿ ರಾಜಪ್ರಭುತ್ವದ ಶಸ್ತ್ರಾಗಾರದ ಪ್ರಾಮುಖ್ಯತೆಯು ಯುದ್ಧದ ಸಮಯಗಳಲ್ಲಿ ಪೂರೈಕೆಗಳನ್ನು ಮತ್ತು ಉಪಕರಣವನ್ನು ಸಕಾಲದಲ್ಲಿ ಖರೀದಿಸಲು ವೃತ್ತಿಪರ ಆಧಾರವನ್ನು ಒದಗಿಸುತ್ತದೆ ಎನ್ನುವುದಾಗಿತ್ತು. ಎರಡು ಅಂಗಗಳು ೧೪೫೪ರಿಂದ ಗೋಪುರದಲ್ಲಿ ನೆಲೆಗೊಂಡಿತ್ತು ಮತ್ತು ೧೬ನೇ ಶತಮಾನದಲ್ಲಿ ಒಳವಾರ್ಡ್‌ನ ಸ್ಥಾನಕ್ಕೆ ಅವು ಸ್ಥಳಾಂತರಗೊಂಡವು.[೧೧೫] ಚಾರ್ಲ್ಸ್ I ಮತ್ತು ಪಾರ್ಲಿಮೆಂಟ್ ನಡುವೆ ೧೭ನೇ ಶತಮಾನದ ದ್ವಿತೀಯ ಪಾದದಲ್ಲಿ ರಾಜಕೀಯ ಉದ್ವೇಗಗಳಿಂದ ರಾಜನಿಗೆ ನಿಷ್ಠವಾದ ಪಡೆಗಳಿಂದ ಗೋಪುರ ಮತ್ತು ಅದರಲ್ಲಿದ್ದ ಹಣ ಮತ್ತು ಯುದ್ಧಸಾಮಗ್ರಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ದಾರಿ ಕಲ್ಪಿಸಿತು. ಲಂಡನ್‌ನ ಪ್ರಜಾಸೈನ್ಯವಾದ ಟ್ರೇನಡ್ ಬ್ಯಾಂಡ್ಸ್ ೧೬೪೦ರಲ್ಲಿ ಕೋಟೆಗೆ ಸ್ಥಳಾಂತರವಾಯಿತು. ರಕ್ಷಣೆ ಯೋಜನೆಗಳನ್ನು ರೂಪಿಸಲಾಯಿತು ಮತ್ತು ಬಂದೂಕಿನ ವೇದಿಕೆಗಳನ್ನು ನಿರ್ಮಿಸಿ ಗೋಪುರವನ್ನು ಯುದ್ಧಕ್ಕೆ ಅಣಿಗೊಳಿಸಲಾಯಿತು. ಈ ಸಿದ್ಧತೆಗಳನ್ನು ಪರೀಕ್ಷೆಗೆ ಯಾವತ್ತೂ ಒಡ್ಡಲಾಗಿಲ್ಲ. ೧೬೪೨ರಲ್ಲಿ ಚಾರ್ಲ್ಸ್I ಸಂಸತ್ತಿನ ಐವರು ಸದಸ್ಯರನ್ನು ಬಂಧಿಸುವ ಪ್ರಯತ್ನ ಮಾಡಿದ. ಇದು ವಿಫಲವಾದಾಗ, ಅವನು ನಗರದಿಂದ ಪಲಾಯನ ಮಾಡಿದ. ಪಾರ್ಲಿಮೆಂಟ್ ಸರ್ ಜಾನ್ ಬೈರಾನ್ ಅವರನ್ನು ಗೋಪುರದ ಲೆಫ್ಟಿನೆಂಟ್ ಸ್ಥಾನದಿಂದ ತೆಗೆಯುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಟ್ರೇನಡ್ ಬ್ಯಾಂಡ್‌ಗಳು ಬದಿಗಳನ್ನು ಬದಲಿಸಿಕೊಂಡವು ಮತ್ತು ಈಗ ಪಾರ್ಲಿಮೆಂಟ್‌ಗೆ ಬೆಂಬಲಿಸಿದವು. ಲಂಡನ್ ಪೌರರ ಜತೆ ಅವರು ಗೋಪುರಕ್ಕೆ ತಡೆವೊಡ್ಡಿದರು. ರಾಜನ ಅನುಮತಿಯೊಂದಿಗೆ, ಬೈರಾನ್ ಗೋಪುರದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಟ್ಟ. ಪಾರ್ಲಿಮೆಂಟ್ ಅವರೇ ಆಯ್ಕೆಮಾಡಿದ ಸರ್ ಜಾನ್ ಕಾನ್‌ಯರ್ಸ್ ನನ್ನು ಬೈರಾನ್‌ಗೆ ಬದಲಿಯಾಗಿ ನೇಮಿಸಿತು. ೧೬೪೨ರಲ್ಲಿ ಇಂಗ್ಲೀಷ್ ಅಂತರ್ಯುದ್ಧ ಭುಗಿಲೇಳುವ ಸಂದರ್ಭದಲ್ಲಿ ಲಂಡನ್ ಗೋಪುರವು ಅದಾಗಲೇ ಪಾರ್ಲಿಮೆಂಟ್ ನಿಯಂತ್ರಣದಲ್ಲಿತ್ತು.[೧೧೬]

ಗೋಪುರದಿಂದ ವೆಸ್ಟ್‌ಮಿನಿಸ್ಟರ್‌ವರೆಗೆ ಕಿರೀಟಧಾರಣೆ ಸಲುವಾಗಿ ಮೆರವಣಿಗೆಯನ್ನು ಒಯ್ಯುವ ಸಂಪ್ರದಾಯವನ್ನು ಎತ್ತಿಹಿಡಿದ ಕೊನೆಯ ಅರಸ ೧೬೬೦ರಲ್ಲಿ ಚಾರ್ಲ್ಸ್ II . ಆ ಸಮಯದಲ್ಲಿ ಕೋಟೆಯ ವಾಸ್ತವ್ಯವು ಕಳಪೆ ಸ್ಥಿತಿಯಲ್ಲಿದ್ದರಿಂದ ಅವನ ಕಿರೀಟಧಾರಣೆಗೆ ಮುಂಚಿನ ರಾತ್ರಿ ಅವನು ಅಲ್ಲಿ ವಾಸ್ತವ್ಯ ಹೂಡಲಿಲ್ಲ.[೧೧೭] ಸ್ಟಾರ್ಟ್ ಕಿಂಗ್ಸ್ ನೇತೃತ್ವದಲ್ಲಿ ಗೋಪುರದ ಕಟ್ಟಡಗಳನ್ನು ಬಹುತೇಕ ಆಫೀಸ್ ಆಫ್ ಆರ್ಡ್‌ನೇನ್ಸ್ ಆಶ್ರಯದಲ್ಲಿ ಮರುನವೀಕರಿಸಲಾಯಿತು. ಸುಮಾರು £೪೦೦೦(೨೦೦೮ರಲ್ಲಿ ಸುಮಾರು £೪೬೦,೦೦೦)ಕ್ಕಿಂತ ಹೆಚ್ಚು ಹಣವನ್ನು ಹೊಸ ಉಗ್ರಾಣವನ್ನು ನಿರ್ಮಿಸಲು ೧೬೬೩ರಲ್ಲಿ ಖರ್ಚುಮಾಡಲಾಯಿತು.[nb ೭] ಇದು ಒಳ ವಾರ್ಡ್‌ನಲ್ಲಿ ನ್ಯೂ ಆರ್ಮರೀಸ್ ಎಂದು ಹೆಸರಾಗಿದೆ.[೪೦] ೧೭ನೇ ಶತಮಾನದಲ್ಲಿ ಟ್ರೇಸ್ ಇಟಾಲಿಯೆನ್ನೆ ಶೈಲಿಯಲ್ಲಿ ಗೋಪುರದ ರಕ್ಷಣೆಗಳನ್ನು ವೃದ್ಧಿಸುವ ಯೋಜನೆಗಳಿತ್ತು. ಆದಾಗ್ಯೂ ಅವನ್ನು ಕಾರ್ಯರೂಪಕ್ಕೆ ತರಲಿಲ್ಲ. ರಕ್ಷಕ ಸೈನ್ಯಕ್ಕೆ ಸೌಲಭ್ಯಗಳನ್ನು ೧೬೭೦ರಲ್ಲಿ ಸೈನಿಕರಿಗೆ ಪ್ರಥಮ ಉದ್ದೇಶಕ್ಕಾಗಿ ನಿರ್ಮಿಸಿದ ಬಿಡಾರಗಳನ್ನು ಸೇರಿಸುವುದರೊಂದಿಗೆ ಸುಧಾರಿಸಲಾಯಿತು("ಐರಿಷ್ ಬ್ಯಾರಕ್ಸ್"). ಸಾಮಾನ್ಯ ವಸತಿಗಳು ಕಳಪೆ ಸ್ಥಿತಿಯಲ್ಲಿದ್ದವು.[೧೧೮]

ಹ್ಯಾನೊವಿರಿಯನ್ ರಾಜಮನೆತನ ಸಿಂಹಾಸನವನ್ನು ಏರಿದಾಗ, ಅವರ ಪರಿಸ್ಥಿತಿ ಅನಿಶ್ಚಿತತೆಯಿಂದ ಕೂಡಿತ್ತು ಮತ್ತು ಸಂಭವನೀಯ ಸ್ಕಾಟಿಷ್ ಬಂಡಾಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಲಂಡನ್ ಗೋಪುರವನ್ನು ದುರಸ್ತಿಮಾಡಲಾಯಿತು. ಸ್ಟಾರ್ಟ್ಸ್ ನೇತೃತ್ವದಲ್ಲಿ ಸೇರಿಸಿದ ಬಂದೂಕಿನ ವೇದಿಕೆಗಳು ಕುಂಠಿತಗೊಂಡವು. ಗೋಪುರದಲ್ಲಿದ್ದ ಬಂದೂಕುಗಳ ಸಂಖ್ಯೆಯನ್ನು ೧೧೮ರಿಂದ ೪೫ಕ್ಕೆ ಇಳಿಸಲಾಯಿತು ಮತ್ತು ಮುತ್ತಿಗೆಗೆ ಸಿದ್ಧವಾದ ಸೇನೆಯ ವಿರುದ್ಧ ಕೋಟೆಯು ಇಪ್ಪತ್ತನಾಲ್ಕು ಗಂಟೆಗಳನ್ನು ತಾಳಿಕೊಳ್ಳಲು ಸಿದ್ಧವಿಲ್ಲ ಎಂದು ಒಬ್ಬರು ಸಮಕಾಲೀನ ವಿಮರ್ಶಕ ಅಭಿಪ್ರಾಯ ಪಟ್ಟಿದ್ದಾರೆ.[೧೧೯] ಬಹುತೇಕ ಭಾಗವಾಗಿ, ರಕ್ಷಣೆಗಳನ್ನು ಕುರಿತ ೧೮ನೇ ಶತಮಾನದ ಕೆಲಸವು ಬಿಟ್ಟು ಬಿಟ್ಟು ನಡೆಯುವ, ಚೂರುಚೂರು ಕೆಲಸವಾಗಿತ್ತು. ಆದರೂ ದಕ್ಷಿಣ ಕೂಡುಗೋಡೆಯಲ್ಲಿ ಬಂದರುಕಟ್ಟೆಯಿಂದ ಹೊಸ ವಾರ್ಡ್‌ವರೆಗೆ ಪ್ರವೇಶಕ್ಕೆ ಅನುಮತಿಸುವ ಹೊಸ ಗೇಟ್‌ವೇ(ನಿರ್ಗಮನ ದ್ವಾರ)ಯನ್ನು ೧೭೭೪ರಲ್ಲಿ ಸೇರಿಸಲಾಯಿತು. ಕೋಟೆಯನ್ನು ಸುತ್ತುವರಿದ ಕಂದಕವು ಅದು ಸೃಷ್ಟಿಯಾದಾಗಿನಿಂದ ಶತಮಾನಗಳ ಕಾಲ ಹೂಳನ್ನು ತೆರವು ಮಾಡುವ ಪ್ರಯತ್ನದ ನಡುವೆಯೂ ಅದು ತುಂಬಿಕೊಂಡಿತ್ತು. ಇದು ಕೋಟೆಯ ರಕ್ಷಣೆಗಳಲ್ಲಿ ಇನ್ನೂ ಅವಿಭಾಜ್ಯ ಅಂಗವಾಗಿತ್ತು. ಆದ್ದರಿಂದ ೧೮೩೦ರಲ್ಲಿ ಗೋಪುರದ ಕಾನ್ಸ್‌ಟೇಬಲ್ ಡ್ಯೂಕ್ ಆಫ್ ವೆಲ್ಲಿಂಗ್‌ಟನ್ ಅನೇಕ ಅಡಿಗಳವರೆಗೆ ಹೂಳನ್ನು ದೊಡ್ಡ ಪ್ರಮಾಣದವರೆಗೆ ತೆರವು ಮಾಡಲು ಆದೇಶಿಸಿದ. ಆದಾಗ್ಯೂ, ೧೮೪೧ರಲ್ಲಿ ರಕ್ಷಕ ಪಡೆಯಲ್ಲಿ ಕಳಪೆ ನೀರಿನ ಪೂರೈಕೆಯಿಂದ ರೋಗ ಹರಡುವುದನ್ನು ನಿಲ್ಲಿಸಲಾಗಲಿಲ್ಲ.ಇದರ ಫಲವಾಗಿ ಅನೇಕ ಸಾವುಗಳು ಸಂಭವಿಸಿದವು. ಕೊಳೆತು ನಾರುತ್ತಿದ್ದ ಕಂದಕದಿಂದ ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು, ಕಂದಕವನ್ನು ಬರಿದು ಮಾಡಿ ಮಣ್ಣಿನಿಂದ ತುಂಬಬೇಕು ಎಂದು ಆದೇಶಿಸಲಾಯಿತು. ಈ ಕೆಲಸವು ೧೮೪೩ರಲ್ಲಿ ಆರಂಭವಾಯಿತು ಮತ್ತು ಎರಡು ವರ್ಷಗಳ ಬಳಿಕ ಬಹುತೇಕ ಪೂರ್ಣಗೊಂಡಿತು. ಒಳ ವಾರ್ಡ್‌ನಲ್ಲಿ ವಾಟರ್‌ಲೂ ಬ್ಯಾರಕ್‌ಗಳ ನಿರ್ಮಾಣವನ್ನು ವೆಲ್ಲಿಂಗ್‌ಟನ್‌ ಡ್ಯೂಕ್ ಶಿಲಾನ್ಯಾಸವನ್ನು ಮಾಡಿದಾಗ ೧೮೪೫ರಲ್ಲಿ ಆರಂಭಿಸಲಾಯಿತು. ಕಟ್ಟಡದಲ್ಲಿ ೧೦೦೦ ಜನರಿಗೆ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಿತ್ತು. ಇದೇ ಸಮಯದಲ್ಲಿ, ವೈಟ್ ಟವರ್‌ನ ಈಶಾನ್ಯಕ್ಕೆ ಅಧಿಕಾರಿಗಳಿಗೆ ಪ್ರತ್ಯೇಕ ವಸತಿಗಳನ್ನು ನಿರ್ಮಿಸಲಾಯಿತು. ಕಟ್ಟಡವು ಈಗ ರಾಯಲ್ ರೆಜಿಮೆಂಟ್ ಆಫ್ ಫುಸಿಲಿಯರ್ಸ್‌ನ ಮುಖ್ಯ ಕಚೇರಿಯಾಗಿದೆ.[೧೨೦] ೧೮೨೮ಮತ್ತು ೧೮೫೮ರ ನಡುವೆ ಚಾರ್ಟಿಸ್ಟ್ ಚಳವಳಿಯ ಜನಪ್ರಿಯತೆಯಿಂದ ನಾಗರಿಕ ಅಶಾಂತಿ ಸಂದರ್ಭದಲ್ಲಿ ಲಂಡನ್ ಗೋಪುರಕ್ಕೆ ಮರುರಕ್ಷಣೆ ನೀಡುವ ಇಚ್ಛೆಗೆ ದಾರಿಕಲ್ಪಿಸಿತು. ಇದು ಕೋಟೆಯಲ್ಲಿ ರಕ್ಷಣೆ ವ್ಯವಸ್ಥೆಯ ಕೊನೆಯ ಪ್ರಮುಖ ಕಾರ್ಯಕ್ರಮವಾಗಿತ್ತು. ಫಿರಂಗಿದಳ ಮತ್ತು ಬಂದೂಕುಗಳ ಬಳಕೆಗೆ ಉಳಿದಿರುವ ಬಹುತೇಕ ಅಳವಡಿಕೆಗಳು ಈ ಅವಧಿಯ ದಿನಾಂಕಕ್ಕೆ ಸೇರಿದ್ದವು.[೧೨೧]

ಪ್ರಥಮ ವಿಶ್ವ ಯುದ್ಧದ ಸಂದರ್ಭದಲ್ಲಿ, ಖಾಸಗಿಯಾಗಿ ೧೧ ಜನರನ್ನು ವಿಚಾರಣೆಗೆ ಒಳಪಡಿಸಿ, ಬೇಹುಗಾರಿಕೆಯ ಆರೋಪದ ಮೇಲೆ ಬಂದೂಕು ದಳದಿಂದ ಗುಂಡುಹಾರಿಸಿ ಕೊಲ್ಲಲಾಯಿತು.[೧೨೨] ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ, ಗೋಪುರವನ್ನು ಪುನಃ ಯುದ್ಧ ಕೈದಿಗಳನ್ನು ಸೆರೆಯಲ್ಲಿಡಲು ಬಳಸಲಾಯಿತು. ಅವರಲ್ಲಿ ಒಬ್ಬ ವ್ಯಕ್ತಿ ರಡೋಲ್ಫ್ ಹೆಸ್. ಇವನು ಅಡಾಲ್ಫ್ ಹಿಟ್ಲರ್ ಡೆಪ್ಯೂಟಿಯಾಗಿದ್ದ. ಆದರೂ ೧೯೪೧ರಲ್ಲಿ ಕೇವಲ ನಾಲ್ಕು ದಿನಗಳ ಕಾಲ ಸೆರೆಯಲ್ಲಿಡಲಾಗಿತ್ತು. ಅವನು ಕೋಟೆಯಲ್ಲಿ ಸೆರೆಯಲ್ಲಿದ್ದ ಕೊನೆಯ ಕೈದಿಯಾಗಿದ್ದ.[೧೨೩] ಗೋಪುರದಲ್ಲಿ ಮರಣದಂಡನೆಗೆ ಗುರಿಯಾದ ಕೊನೆಯ ವ್ಯಕ್ತಿ ಜರ್ಮನ್ ಬೇಹುಗಾರ ಜೋಸೆಫ್ ಜ್ಯಾಕೋಬ್ಸ್. ಅವನಿಗೆ ೧೯೪೧ರ ಆಗಸ್ಟ್ ೧೪ರಂದು ಗುಂಡಿಕ್ಕಲಾಯಿತು.[೧೨೩] ಯುದ್ಧಗಳ ಸಂದರ್ಭದಲ್ಲಿ ಬೇಹುಗಾರಿಕೆಗೆ ಮರಣದಂಡನೆಗಳನ್ನು ಪೂರ್ವನಿರ್ಮಿತ ಬಂದೂಕು ವಲಯದಲ್ಲಿ ನಡೆಸಲಾಯಿತು. ಇದು ಹೊಸ ವಾರ್ಡ್‌ನಲ್ಲಿತ್ತು ಮತ್ತು ೧೯೬೯ರಲ್ಲಿ ನೆಲಸಮಗೊಳಿಸಲಾಯಿತು.[೧೨೪]

ಪುನಃಸ್ಥಾಪನೆ ಮತ್ತು ಪ್ರವಾಸೋದ್ಯಮ[ಬದಲಾಯಿಸಿ]

ಸೇಂಟ್ ಥಾಮಸ್ ಗೋಪುರದಲ್ಲಿ ಎಡ್ವರ್ಡ್ I ಶಯನಗೃಹದ ಪುನರ್ನಿರ್ಮಾಣ. [೧೨೫]

೧೮ ಮತ್ತು ೧೯ನೇ ಶತಮಾನಗಳಲ್ಲಿ, ಅರಮನೆ ಕಟ್ಟಡಗಳನ್ನು ನಿಧಾನವಾಗಿ ಇತರ ಬಳಕೆಗಳಿಗೆ ಮಾರ್ಪಡಿಸಿ, ನೆಲಸಮಗೊಳಿಸಲಾಯಿತು. ಕೇವಲ ವೇಕ್‌ಫೀಲ್ಡ್ ಮತ್ತು ಸೇಂಟ್ ಥಾಮಸ್ ಗೋಪುರಗಳು ಉಳಿದುಕೊಂಡಿವೆ.[೧೧೭] ಇಂಗ್ಲೆಂಡ್ ಮಧ್ಯಯುಗೀನ ಇತಿಹಾಸದಲ್ಲಿ ೧೮ನೇ ಶತಮಾನವು ವೃದ್ಧಿಸಿದ ಆಸಕ್ತಿಯ ಸಂಕೇತವಾಗಿದೆ. ಅವುಗಳಲ್ಲಿ ಒಂದರ ಪರಿಣಾಮವು ಗೋಥಿಕ್ ಪುನಶ್ಚೇತನ ವಾಸ್ತುಶಿಲ್ಪದ ಹೊಮ್ಮುವಿಕೆಯಾಗಿದೆ. ನ್ಯೂ ಹಾರ್ಸ್ ಶಸ್ತ್ರಾಗಾರವನ್ನು ೧೮೨೫ರಲ್ಲಿ ವೈಟ್ ಟವರ್‌ನ ದಕ್ಷಿಣ ಮುಖದಲ್ಲಿ ನಿರ್ಮಿಸಿದ ಸಂದರ್ಭದಲ್ಲಿ ಗೋಪುರದ ವಾಸ್ತುಶಿಲ್ಪದಲ್ಲಿ ಇದು ಬಿಂಬಿತವಾಗಿದೆ. ಇದು ಕೋಟೆ(ತೆನೆ)ಮಾಳಿಗೆ ಮುಂತಾದ ಗೋಥಿಕ್ ಪುನಶ್ಚೇತನದ ವಾಸ್ತುಶಿಲ್ಪದ ಅಂಶಗಳಿಂದ ಕೂಡಿದೆ. ಶೈಲಿಗೆ ಹೊಂದಿಕೆಯಾಗಲು ಇತರ ಕಟ್ಟಡಗಳನ್ನು ಮರುರೂಪಿಸಲಾಯಿತು ಮತ್ತು ವಾಟರ್‌ಲೂ ಬ್ಯಾರಕ್‌ಗಳನ್ನು ೧೫ನೇ ಶತಮಾನದ ಕೋಟೆ ಶೈಲಿಯ ಗಾಥಿಕ್ ಎಂದು ಬಣ್ಣಿಸಲಾಗಿದೆ.[೧೨೬][೧೨೭] ೧೮೪೫ ಮತ್ತು ೧೮೮೫ರ ನಡುವೆ, ಕೋಟೆಗೆ ನೆಲೆಯಾಗಿದ್ದ ಮಿಂಟ್ ಮುಂತಾದ ಸಂಸ್ಥೆಗಳು ಇತರ ಸ್ಥಳಗಳಿಗೆ ಸ್ಥಳಾಂತರಗೊಂಡವು; ಖಾಲಿಯಾಗಿ ಉಳಿದ ಅನೇಕ ಮಧ್ಯಯುಗೀನ ನಂತರದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ೧೮೫೫ರಲ್ಲಿ ವಾರ್ ಆಫೀಸ್ ಆರ್ಡ್‌ನೇನ್ಸ್ ಆಫೀಸ್ ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಸಂಗ್ರಹದ ಜವಾಬ್ದಾರಿಯನ್ನು ವಹಿಸಿಕೊಂಡಿತು. ಆರ್ಡನೇನ್ಸ್ ಆಫೀಸನ್ನು ಕ್ರಮೇಣ ಕೋಟೆಯಿಂದ ಹಂತಹಂತವಾಗಿ ತೆಗೆಯಲಾಯಿತು. ಇದೇ ಸಮಯದಲ್ಲಿ, ಲಂಡನ್ ಗೋಪುರದ ಇತಿಹಾಸದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಲಾಗಿತ್ತು.[೧೨೬]

ಸಮಕಾಲೀನ ಬರಹಗಾರರು ಸಾರ್ವಜನಿಕ ಆಸಕ್ತಿಗೆ ಆಂಶಿಕವಾಗಿ ಉತ್ತೇಜನ ನೀಡಿದರು. ಅವರಲ್ಲಿ ವಿಲಿಯಂ ಹ್ಯಾರಿಸನ್ ಐನ್ಸ್‌ವರ್ತ್ ಕೆಲಸವು ವಿಶೇಷವಾಗಿ ಪ್ರಭಾವಶಾಲಿಯಾಗಿತ್ತು. ದಿ ಟವರ್ ಆಫ್ ಲಂಡನ್:ಎ ಹಿಸ್ಟಾರಿಕಲ್ ರೊಮ್ಯಾನ್ಸ್‌ ನಲ್ಲಿ ತಪ್ಪೊಪ್ಪಿಗೆಗಳನ್ನು ಸಂಗ್ರಹಿಸಲು ಭೂಗತ ಚಿತ್ರಹಿಂಸೆ ಕೋಣೆಗಳು ಮತ್ತು ಉಪಕರಣಗಳ ಕಣ್ಣಿಗೆ ಕಟ್ಟುವಂತ ಚಿತ್ರವನ್ನು ಅವರು ಸೃಷ್ಟಿಸಿದರು. ಇವು ಸಾರ್ವಜನಿಕರ ಭಾವನೆಯಲ್ಲಿ ಅಚ್ಚೊತ್ತಿದವು.[೧೦೬] ಹ್ಯಾರಿಸನ್ ಗೋಪುರದ ಇತಿಹಾಸದಲ್ಲಿ ಇನ್ನೊಂದು ಪಾತ್ರವನ್ನು ಕೂಡ ವಹಿಸಿದ. ಬ್ಯೂಚಾಂಪ್ ಗೋಪುರವನ್ನು ಸಾರ್ವಜನಿಕರಿಗೆ ತೆರೆದಿಡುವ ಮೂಲಕ ೧೬ ಮತ್ತು ೧೭ನೇ ಶತಮಾನದ ಕೈದಿಗಳ ಕೆತ್ತನೆಗಳನ್ನು ಕಾಣಲು ಸಾಧ್ಯವಾಗುತ್ತದೆಂದು ಅವನು ಸಲಹೆ ಮಾಡಿದ. ಈ ಸಲಹೆಯ ಮೇಲೆ ಕೆಲಸ ಮಾಡಿದ ಆಂಥೋನಿ ಸಾಲ್ವಿನ್ ಗೋಪುರವನ್ನು ನವೀಕರಿಸಿದ ಮತ್ತು ಪ್ರಿನ್ಸ್ ಆಲ್ಬರ್ಟ್ ಪ್ರೇರಣೆ ಮೇಲೆ ಸಮಗ್ರ ಪುನಶ್ಚೇತನದ ಕಾರ್ಯಕ್ರಮವನ್ನು ಹಮ್ಮಿಕೊಂಡ. ಜಾನ್ ಟೇಲರ್ ನಂತರ ಕೆಲಸದಲ್ಲಿ ಸಾಲ್ವಿನ್ ಉತ್ತರಾಧಿಕಾರಿಯಾದ. ವೈಲಕ್ಷಣ್ಯಗಳು ಮಧ್ಯಯುಗೀನ ವಾಸ್ತುಶಿಲ್ಪದ ನಿರೀಕ್ಷೆಗಳನ್ನು ತುಂಬದಿದ್ದರೆ, ಟೈಲರ್ ಅವುಗಳನ್ನು ನಿರ್ದಯವಾಗಿ ತೆಗೆಯುತ್ತಿದ್ದ. ಇದರ ಫಲವಾಗಿ, ಕೋಟೆಯೊಳಗಿನ ಅನೇಕ ಮುಖ್ಯ ಕಟ್ಟಡಗಳನ್ನು ತೆಗೆದುಹಾಕಲಾಯಿತು ಮತ್ತು ಕೆಲವು ಪ್ರಕರಣಗಳಲ್ಲಿ ಮಧ್ಯಯುಗೀನ ನಂತರದ ಒಳಾಂಗಣ ಅಲಂಕಾರಗಳನ್ನು ತೆಗೆಯಲಾಯಿತು.[೧೨೮]

ಲಂಡನ್ ಗೋಪುರಕ್ಕೆ ಮುಖ್ಯ ಪ್ರವೇಶ ದ್ವಾರಇಂದು ಕೋಟೆಯು ಜನಪ್ರಿಯ ಪ್ರವಾಸೋದ್ಯಮದ ಆಕರ್ಷಣೆಯಾಗಿದೆ.

ಪ್ರಥಮ ವಿಶ್ವಯುದ್ಧದಲ್ಲಿ ಲಂಡನ್ ಗೋಪುರದ ಮೇಲೆ ಕೇವಲ ಒಂದು ಬಾಂಬ್ ಬಿದ್ದಿದ್ದರೂ(ಇದು ಯಾವುದೇ ಹಾನಿಯಿಲ್ಲದೇ ಕಂದಕದಲ್ಲಿ ಬಿದ್ದಿತ್ತು)ಎರಡನೇ ವಿಶ್ವ ಸಮರವು ಹೆಚ್ಚಿನ ಗುರುತನ್ನು ಬಿಟ್ಟುಹೋಯಿತು. ೧೯೪೦ರ ಸೆಪ್ಟೆಂಬರ್ ೨೩ರಂದು, ದಿ ಬ್ಲಿಟ್ಜ್(ನಾಜಿ ಜರ್ಮನಿಯಿಂದ ಬಾಂಬ್ ದಾಳಿ)ಸಂದರ್ಭದಲ್ಲಿ ಬಾಂಬುಗಳು ಕೋಟೆಗೆ ಹಾನಿಮಾಡಿದವು ಮತ್ತು ಅನೇಕ ಕಟ್ಟಡಗಳನ್ನು ನಾಶಮಾಡಿದವು ಮತ್ತು ವೈಟ್ ಟವರ್‌ ಸ್ವಲ್ಪದರಲ್ಲಿ ದಾಳಿಯಿಂದ ಪಾರಾಯಿತು. ಯುದ್ಧದ ನಂತರ, ಹಾನಿಯನ್ನು ಸರಿಪಡಿಸಲಾಯಿತು ಮತ್ತು ಲಂಡನ್ ಗೋಪುರವನ್ನು ಸಾರ್ವಜನಿಕರ ದರ್ಶನಕ್ಕೆ ತೆರೆದಿಡಲಾಯಿತು.[೧೨೯]

ಲಂಡನ್ ಗೋಪುರವು ದೇಶದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದೆಂದು ದೃಢಪಟ್ಟಿದೆ. ಕನಿಷ್ಠ ಎಲಿಜಬೆತ್ ಯುಗದಿಂದ ಇದು ಪ್ರವಾಸಿ ಆಕರ್ಷಣೆಯಾಗಿದ್ದು, ವಿದೇಶಿ ಪ್ರವಾಸಿಗಳು ಬರೆಯುತ್ತಿದ್ದ ಲಂಡನ್ ದೃಶ್ಯಗಳಲ್ಲಿ ಲಂಡನ್ ಗೋಪುರ ಸಹ ಒಳಗೊಂಡಿತ್ತು. ಇದರ ಅತ್ಯಂತ ಜನಪ್ರಿಯ ಆಕರ್ಷಣೆಗಳ ಪೈಕಿ ರಾಜಮನೆತನದ ಪ್ರಾಣಿ ಸಂಗ್ರಹಾಲಯ ಮತ್ತು ಶಸ್ತ್ರಾಸ್ತ್ರಗಳ ಪ್ರದರ್ಶನವಾಗಿತ್ತು. ಕ್ರೌನ್ ಜಿವೆಲ್ಸ್ ಕೂಡ ಹೆಚ್ಚು ಆಸಕ್ತಿಯನ್ನು ಸಂಚಯಿಸಿತು ಮತ್ತು ೧೬೬೯ರಿಂದ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ. ಗೋಪುರವು ೧೯ನೇ ಶತಮಾನದಲ್ಲಿ, ವೆಲ್ಲಿಂಗ್‌ಟನ್‌ನ ಡ್ಯೂಕ್ ಪ್ರವಾಸಿಗಳ ಭೇಟಿಗೆ ವಿರೋಧ ಸೂಚಿಸಿದ ನಡುವೆಯೂ ಪ್ರವಾಸಿಗಳಲ್ಲಿ ಸ್ಥಿರವಾದ ಜನಪ್ರಿಯತೆಯನ್ನು ಗಳಿಸಿತು. ಪ್ರವಾಸಿಗಳ ಸಂಖ್ಯೆ ಅತ್ಯಂತ ಹೆಚ್ಚಿದ್ದರಿಂದ ೧೮೫೧ರಲ್ಲಿ ಉದ್ದೇಶಕ್ಕಾಗಿ ನಿರ್ಮಿಸಿದ ಟಿಕೆಟ್ ಕಚೇರಿಯನ್ನು ಸ್ಥಾಪಿಸಲಾಯಿತು. ಶತಮಾನದ ಕೊನೆಯಲ್ಲಿ, ೫೦೦,೦೦೦ ಕ್ಕೂ ಹೆಚ್ಚು ಪ್ರವಾಸಿಗಳು ಪ್ರತೀ ವರ್ಷ ಕೋಟೆಗೆ ಭೇಟಿ ನೀಡುತ್ತಿದ್ದರು.[೧೩೦]

೨೦ನೇ ಶತಮಾನದಲ್ಲಿ ಪ್ರವಾಸೋದ್ಯಮವು ಗೋಪುರದ ಮುಖ್ಯ ಪಾತ್ರವಾಗಿತ್ತು. ಉಳಿದ ಸಾಮಾನ್ಯ ಮಿಲಿಟರಿ ಚಟುವಟಿಕೆಗಳು ರಾಯಲ್ ಲಾಜಿಸ್ಟಿಕ್ ಕಾರ್ಪ್ಸ್ ನೇತೃತ್ವದಲ್ಲಿ ಶತಮಾನದ ದ್ವಿತೀಯಾರ್ಧದಲ್ಲಿ ಸ್ಥಗಿತಗೊಂಡು ಕೋಟೆಯಿಂದ ನಿರ್ಗಮನವಾಯಿತು.[೧೨೯] ಆದಾಗ್ಯೂ, ರಾಯಲ್ ರೆಜಿಮೆಂಟ್ ಆಫ್ ಫ್ಯೂಸಿಲಿಯರ್ಸ್‌ನ ವಿಧ್ಯುಕ್ತ ತುಕಡಿಯ ಮುಖ್ಯಕೇಂದ್ರಕ್ಕೆ ಗೋಪುರವು ಈಗಲೂ ನೆಲೆಯಾಗಿತ್ತು ಮತ್ತು ಮ್ಯೂಸಿಯಂ ಅದಕ್ಕೆ ಮತ್ತು ಅದರ ಪೂರ್ವವರ್ತಿಯಾದ ರಾಯಲ್ ಫ್ಯುಸಿಲಿಯರ್ಸ್‌ಗೆ ಮುಡಿಪಾಗಿತ್ತು.[೧೩೧][೧೩೨] ಬಕಿಂಗ್‌ಹ್ಯಾಂ ಅರಮನೆಯಲ್ಲಿ ಕ್ವೀನ್ಸ್ ಗಾರ್ಡ್ ಒದಗಿಸುವ ಘಟಕದ ತುಕಡಿ ಗೋಪುರದಲ್ಲಿ ಈಗಲೂ ರಕ್ಷಣೆ ನೀಡುತ್ತಿದೆ ಮತ್ತು ಪ್ರತೀ ದಿನ ಇಯೋಮನ್ ವಾರ್ಡರ್‌ಗಳು ಸರ್ಮನಿ ಆಫ್ ದಿ ಕೀಸ್‌ನಲ್ಲಿ ಪಾಲ್ಗೊಳ್ಳುತ್ತಾರೆ.[೧೩೩][೧೩೪][೧೩೫] ಅನೇಕ ಸಂದರ್ಭಗಳಲ್ಲಿ ಗೌರವಾನ್ವಿತ ಫಿರಂಗಿದಳದ ತುಕಡಿಯ ಮೂಲಕ ಗೋಪುರದಿಂದ ಕುಶಾಲುತೋಪುಗಳ ಗೌರವವಂದನೆಗಳ ಸಂಕೇತವಾಗಿ ಗುಂಡುಗಳನ್ನು ಸಿಡಿಸಲಾಯಿತು. ಇದು ರಾಜಮನೆತನದ ಸಂದರ್ಭಗಳಲ್ಲಿ ೬೨ ಸುತ್ತುಗಳಿಂದ ಮತ್ತು ಇತರ ಸಂದರ್ಭಗಳಲ್ಲಿ ೪೧ ಸುತ್ತುಗಳಿಂದ ಕೂಡಿತ್ತು.[೧೩೬] ೧೯೭೪ರಲ್ಲಿ ವೈಟ್ ಟವರ್‌ನ ಮೋರ್ಟಾರ್ ಕೋಣೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತು. ಇದರಿಂದ ಒಬ್ಬ ವ್ಯಕ್ತಿ ಮೃತಪಟ್ಟ ಮತ್ತು ೩೫ಜನರಿಗೆ ಗಾಯಗಳಾಯಿತು. ಈ ಸ್ಫೋಟಕ್ಕೆ ಯಾರನ್ನು ಹೊಣೆಯನ್ನಾಗಿ ಮಾಡಲಿಲ್ಲ. ಆದರೆ ಪೊಲೀಸ್ ತನಿಖೆಗಳಲ್ಲಿ IRAಇದರ ಹಿಂದಿದೆ ಎಂಬ ಅನುಮಾನಗಳನ್ನು ಮೂಡಿಸಿದವು.[೧೩೭]

ಲಂಡನ್ ಗೋಪುರವನ್ನು ಐತಿಹಾಸಿಕ ರಾಜಮನೆತನ ಅರಮನೆಗಳ ಸ್ವತಂತ್ರ ಧರ್ಮದತ್ತಿ ಸಂಸ್ಥೆ ನಿರ್ವಹಿಸುತ್ತಿದ್ದು, ಸರ್ಕಾರ ಅಥವಾ ರಾಜಪ್ರಭುತ್ವದಿಂದ ಯಾವುದೇ ಆರ್ಥಿಕ ನೆರವು ಸಿಗುತ್ತಿಲ್ಲ.[೧೩೮] ೧೯೮೮ರಲ್ಲಿ ಲಂಡನ್ ಗೋಪುರವನ್ನು ವಿಶ್ವ ಪರಂಪರೆ ಸ್ಥಳಗಳಾದ UNESCO ಪಟ್ಟಿಯಲ್ಲಿ ಸೇರಿಸಲಾಯಿತು. ಅದರ ಜಾಗತಿಕ ಪ್ರಾಮುಖ್ಯತೆಯನ್ನು ಗುರುತಿಸಿ, ಆ ಸ್ಥಳದ ಸಂರಕ್ಷಣೆಗೆ ನೆರವಾಗಲು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಯಿತು.[೧೩೯][೧೪೦] ಆದಾಗ್ಯೂ, ಇತ್ತೀಚಿನ ಬೆಳವಣಿಗೆಗಳು, ಉದಾಹರಣೆಗೆ ಸಮೀಪದಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣದಿಂದ ಗೋಪುರವನ್ನು ವಿಶ್ವಸಂಸ್ಥೆ ಪರಂಪರೆಯ ಅಪಾಯಕಾರಿ ಕಟ್ಟಡದ ಪಟ್ಟಿಯಲ್ಲಿ ಸೇರಿಸಲಾಯಿತು.[೧೪೧] ಮಧ್ಯಯುಗೀನ ಅರಮನೆಯ ಅವಶೇಷಗಳನ್ನು ೨೦೦೬ರಿಂದ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿರಿಸಲಾಗಿದೆ. ಪ್ರವಾಸಿಗಳು ಅವುಗಳ ಮುಂಚಿನ ವೈಭವಕ್ಕೆ ಮರುಸ್ಥಾಪನೆಯಾದ ಕೋಣೆಗಳಿಗೆ ಭೇಟಿ ಮಾಡಬಹುದು. ಇವುಗಳನ್ನು ಹಿಂದೊಮ್ಮೆ ಮುಂಚಿನ ರಾಜರು ಮತ್ತು ರಾಣಿಯರು ಬಳಸುತ್ತಿದ್ದರು.[೧೪೨] ಕಾನ್ಸ್‌ಟೇಬಲ್ ಆಫ್ ದಿ ಟವರ್ ಸ್ಥಿತಿಯು ಗೋಪುರದಲ್ಲಿ ಉನ್ನತ ಸ್ಥಾನದಲ್ಲಿದ್ದರೂ,[೧೪೩] ದಿನನಿತ್ಯದ ಆಡಳಿತದ ಜವಾಬ್ದಾರಿಯು ರೆಸಿಡೆಂಟ್ ಗವರ್ನರ್ ಜವಾಬ್ದಾರಿಯಾಗಿತ್ತು.[೧೪೪] ಕನಿಷ್ಠ ೬ ರೇವನ್‌ಗಳನ್ನು ಗೋಪುರದಲ್ಲಿ ಸಾರ್ವಕಾಲಿಕವಾಗಿ ಇರಿಸಲಾಗಿತ್ತು. ಅವುಗಳ ಅನುಪಸ್ಥಿತಿಯಲ್ಲಿ ರಾಜಪ್ರಭುತ್ವವು ಪತನಗೊಳ್ಳುತ್ತದೆ ಎಂಬ ನಂಬಿಕೆಗೆ ಅನುಗುಣವಾಗಿ ಅವುಗಳನ್ನು ಅಲ್ಲಿ ಇರಿಸಲಾಗಿತ್ತು[೧೪೫] ಇಯೊಮನ್ ವಾರ್ಡರ್‌ಗಳು ಅವುಗಳ ಮೇಲ್ವಿಚಾರಣೆ ವಹಿಸಿದ್ದರು. ಗೋಪುರದ ರೇವನ್‌ಗೆ ಮುಂಚಿನ ೧೮೮೩ರಲ್ಲಿ ಸುದ್ದಿಪತ್ರಿಕೆಯ ಚಿತ್ರ ದಿ ಪಿಕ್ಟೋರಲ್ ವರ್ಲ್ಡ್ ‌ನಲ್ಲಿ ಗೊತ್ತಾದ ಉಲ್ಲೇಖವಿದೆ.[೧೪೬] ಶಿಷ್ಠಾಚಾರದ ಕರ್ತವ್ಯಗಳಲ್ಲದೇ, ಇಯೋಮನ್ ವಾರ್ಡರ್‌ಗಳು ಗೋಪುರದ ಸುತ್ತ ಮಾರ್ಗದರ್ಶಿ ಪ್ರವಾಸಗಳನ್ನು ಒದಗಿಸುತ್ತಿದ್ದರು.[೧೦೩][೧೧೦] ಅಸೋಸಿಯೇಷನ್ ಆಫ್ ಲೀಡಿಂಗ್ ವಿಸಿಟರ್ ಅಟ್ರಾಕ್ಷನ್ಸ್ ಬಿಡುಗಡೆಮಾಡಿದ ಅಂಕಿಅಂಶಗಳ ಪ್ರಕಾರ, ೨೦೦೯ರಲ್ಲಿ ಲಂಡನ್ ಗೋಪುರವನ್ನು ಸುಮಾರು ೨.೪ ದಶಲಕ್ಷ ಜನರು ಭೇಟಿ ನೀಡಿದ್ದರು.[೧೪೭]

ರಾಜಪ್ರಭುತ್ವದ ಆಭರಣಗಳು[ಬದಲಾಯಿಸಿ]

ಇಂಪೀರಿಯಲ್ ಸ್ಟೇಟ್ ಕಿರೀಟ

ರಾಜಪ್ರಭುತ್ವದ ಆಭರಣಗಳನ್ನು ಲಂಡನ್ ಗೋಪುರದಲ್ಲಿ ಇರಿಸುವ ಸಂಪ್ರದಾಯವು ಬಹುಶಃ ಹೆನ್ರಿ III ಆಳ್ವಿಕೆಯಿಂದ ಚಾಲ್ತಿಯಲ್ಲಿದೆ. ಆಭರಣಗಳು, ತಟ್ಟೆ, ರಾಜಪ್ರಭುತ್ವದ ಸಂಕೇತಗಳಾದ ಕಿರೀಟ, ರಾಜದಂಡ ಮತ್ತು ಕತ್ತಿಗಳು ಸೇರಿದಂತೆ ರಾಜಮನೆತನದ ಲಾಂಛನ ಇರಿಸಲು ಜಿವೆಲ್ ಹೌಸ್ ನಿರ್ಮಿಸಲಾಯಿತು. ಹಣವನ್ನು ಸಂಗ್ರಹಿಸಬೇಕಾದ ಅಗತ್ಯ ಬಿದ್ದಾಗ, ರಾಜಪ್ರಭುತ್ವವು ಸಂಪತ್ತನ್ನು ಅಡವು ಇರಿಸಬಹುದಿತ್ತು. ಸಂಪತ್ತು ರಾಜಪ್ರಭುತ್ವಕ್ಕೆ ಕುಲೀನವರ್ಗದಿಂದ ಸ್ವತಂತ್ರವಾಗಿರಲು ಅವಕಾಶ ನೀಡಿತು ಮತ್ತು ಇದರ ಪರಿಣಾಮವಾಗಿ ಸಂಪತ್ತನ್ನು ಸೂಕ್ಷ್ಮವಾಗಿ ರಕ್ಷಣೆ ಮಾಡಲಾಯಿತು. ಆಭರಣಗಳು, ಶಸ್ತ್ರಾಸ್ತ್ರಗಳು ಮತ್ತಿತರ ವಸ್ತುಗಳ ಮೇಲ್ವಿಚಾರಕನೆಂಬ ಹೊಸ ಹುದ್ದೆಯನ್ನು ಸೃಷ್ಟಿಲಾಯಿತು ಮತ್ತು ಆ ಹುದ್ದೆಗೆ ಸೂಕ್ತ ಸಂಭಾವನೆಯನ್ನು ನೀಡಲಾಯಿತು. ಎಡ್ವರ್ಡ್ III (೧೩೧೨-೧೩೭೭)ಆಳ್ವಿಕೆಯಲ್ಲಿ ಮೇಲ್ವಿಚಾರಕನಿಗೆ ದಿನಕ್ಕೆ ೧೨d ಪಾವತಿ ಮಾಡಲಾಗುತ್ತಿತ್ತು.[೧೪೮] ಈ ಹುದ್ದೆಯು ರಾಜಮನೆತನದ ಆಭರಣಗಳು, ಚಿನ್ನ ಮತ್ತು ಬೆಳ್ಳಿ ಖರೀದಿ ಮುಂತಾದ ಇತರ ಕರ್ತವ್ಯಗಳನ್ನು ಮತ್ತು ರಾಜಪ್ರಭುತ್ವದ ಅಕ್ಕಸಾಲಿಗರು ಮತ್ತು ಆಭರಣತಯಾರಕರನ್ನು ನೇಮಕ ಮಾಡುವುದು ಒಳಗೊಂಡಿತ್ತು.[೧೪೮] ೧೬೪೯ರಲ್ಲಿ ಇಂಗ್ಲೀಷ್ ಅಂತರ್ಯುದ್ಧದ ಸಂದರ್ಭದಲ್ಲಿ, ಜಿವೆಲ್ ಹೌಸ್ ವಸ್ತುಗಳನ್ನು ಇತರ ರಾಜಮನೆತನದ ಆಸ್ತಿಗಳೊಂದಿಗೆ ವಿಲೇವಾರಿ ಮಾಡಲಾಯಿತು. ಲೋಹದ ವಸ್ತುಗಳನ್ನು ಟಂಕಸಾಲೆಗೆ ಕಳಿಸುವ ಮೂಲಕ ಅದನ್ನು ಕರಗಿಸಿ ಮರುಬಳಕೆ ಮಾಡಲಾಗುತ್ತಿದ್ದು, ಕಿರೀಟಗಳು ಒಟ್ಟಾರೆಯಾಗಿ ಮುರಿದಿತ್ತು ಮತ್ತು ವಿರೂಪಗೊಂಡಿತ್ತು.[೧೪೯] ೧೬೬೦ರಲ್ಲಿ ರಾಜಪ್ರಭುತ್ವವು ಮರುಸ್ಥಾಪನೆಯಾದಾಗ, ಕಿರೀಟಧಾರಣೆಯ ಲಾಂಛನಗಳಲ್ಲಿ ಉಳಿದ ವಸ್ತುಗಳು ೧೨ನೇ ಶತಮಾನದ ಚಮಚ ಮತ್ತು ಶಿಷ್ಠಾಚಾರದ ಕತ್ತಿಗಳಾಗಿತ್ತು. ಉಳಿದ ರಾಜಪ್ರಭುತ್ವದ ಆಭರಣಗಳನ್ನು ಮರುಸೃಷ್ಟಿಸಲಾಯಿತು. ೧೬೬೯ರಲ್ಲಿ, ಜಿವೆಲ್ ಹೌಸ್ ನೆಲಸಮವಾಯಿತು[೨೫] ಮತ್ತು ರಾಜಪ್ರಭುತ್ವದ ಆಭರಣಗಳನ್ನು ಮಾರ್ಟಿನ್ ಗೋಪುರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಸಾರ್ವಜನಿಕರು ಶುಲ್ಕ ಪಾವತಿಸುವ ಮೂಲಕ ಅವನ್ನು ವೀಕ್ಷಿಸುತ್ತಿದ್ದರು. ಇವನ್ನು ಎರಡು ವರ್ಷಗಳ ನಂತರ ಕರ್ನಲ್ ಥಾಮಸ್ ಬ್ಲಡ್ ಕದಿಯಲು ಪ್ರಯತ್ನಿಸುವ ಮೂಲಕ ಸಾರ್ವಜನಿಕ ವೀಕ್ಷಣೆಯನ್ನು ದುರುಪಯೋಗಪಡಿಸಿಕೊಳ್ಳಲಾಯಿತು.[೧೩೦] ಬ್ಲಡ್ ಮತ್ತು ಅವನ ಸಹಚರರು ಜಿವೆಲ್ ಹೌಸ್ ರಕ್ಷಕನನ್ನು ಬಂಧಿಸಿ ಬಾಯಿಯನ್ನು ಕಟ್ಟಿಹಾಕಿದರು. ಇಂಪೀರಿಯಲ್ ಸ್ಟೇಟ್ ಕ್ರೌನ್‌(ಕಿರೀಟ), ಲಾಂಛನ ಮತ್ತು ಶಿಲುಬೆ ಗೋಳವನ್ನು ಕದಿಯಲು ಅವರು ಯತ್ನಿಸಿದರಾದರೂ, ಅದು ವಿಫಲವಾಯಿತು. ರಕ್ಷಕನ ಪುತ್ರ ಅನಿರೀಕ್ಷಿತವಾಗಿ ಕಾಣಿಸಿಕೊಂಡು ಅಪಾಯದ ಬಗ್ಗೆ ಸೂಚನೆ ನೀಡಿದ.[೧೫೦][೧೪೯] ರಾಜಪ್ರಭುತ್ವದ ಆಭರಣಗಳನ್ನು ಪ್ರಸಕ್ತ ಗೋಪುರದ ವಾಟರೂ ಬ್ಯಾರಕ್‌ಗಳಲ್ಲಿ ಇರಿಸಲಾಗಿದೆ.[೪೩]

ಪ್ರಾಣಿ ಸಂಗ್ರಹಾಲಯ[ಬದಲಾಯಿಸಿ]

ರಾಜಮನೆತನದ ಪ್ರಾಣಿ ಸಂಗ್ರಹಾಲಯವು ಹೆನ್ರಿ III ಆಳ್ವಿಕೆಯಲ್ಲಿ ಮೊದಲಿಗೆ ಉಲ್ಲೇಖಿಸಲಾಗಿದೆ. ೧೨೫೧ರಲ್ಲಿ ರಾಜನ ಹಿಮಕರಡಿಯ ಪಾಲನೆಗೆ ದಿನಕ್ಕೆ ನಾಲ್ಕು ಪೆನ್ನಿಗಳನ್ನು ನೀಡುವಂತೆ ಶೆರೀಫ್‌ಗಳಿಗೆ ಆದೇಶಿಸಲಾಯಿತು; ಕರಡಿಯು ಥೇಮ್ಸ್ ನದಿಯಲ್ಲಿ ಮೀನನ್ನು ಹಿಡಿಯುವಾಗ ಲಂಡನ್ ಪ್ರಜೆಗಳಿಂದ ಬಹಳಷ್ಟು ಗಮನ ಸೆಳೆಯಿತು. ೧೨೫೪ರಲ್ಲಿ ಗೋಪುರದಲ್ಲಿ ಆನೆಯ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕೆಂದು ಶೆರೀಫ್‌ಗಳಿಗೆ ಆದೇಶಿಸಲಾಯಿತು.[೬೬][nb ೮] ಮಧ್ಯಯುಗೀನ ಪ್ರಾಣಿ ಸಂಗ್ರಹಾಲಯದ ನಿಖರ ಸ್ಥಳ ಅಜ್ಞಾತವಾಗಿದ್ದು, ಸಿಂಹ ಗೋಪುರ ಎಂದು ಹೆಸರಾದ ಕಾಪುಗೋಪುರದಲ್ಲಿ ಸಿಂಹಗಳನ್ನು ಇರಿಸಲಾಗಿತ್ತು.[೧೫೨] ರಾಜಮನೆತನದ ಸಂಗ್ರಹವನ್ನು ರಾಜತಾಂತ್ರಿಕ ಉಡುಗೋರೆಗಳಿಂದ ಹೆಚ್ಚಿಸಲಾಯಿತು. ಇವುಗಳಲ್ಲಿ ಪವಿತ್ರ ರೋಮನ್ ಚಕ್ರವರ್ತಿಗೆ ಸೇರಿದ ಚಿರತೆಗಳು ಒಳಗೊಂಡಿದ್ದವು.[೧೫೧] ೧೮ನೇ ಶತಮಾನದಲ್ಲಿ ಪ್ರಾಣಿ ಸಂಗ್ರಹಾಲಯವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಇದಕ್ಕೆ ಪ್ರವೇಶ ವೆಚ್ಚವು ಅರ್ಧ ಪೆನ್ನಿ ಅಥವಾ ಸಿಂಹಗಳಿಗೆ ಆಹಾರವಾಗಿ ಬೆಕ್ಕು ಅಥವಾ ನಾಯಿಯನ್ನು ಪೂರೈಸುವುದಾಗಿತ್ತು.[೧೫೩] ೧೮೩೫ರಲ್ಲಿ ಸೈನಿಕನೊಬ್ಬನಿಗೆ ಸಿಂಹವೊಂದು ಕಚ್ಚಿತೆಂಬ ಆರೋಪ ಕೇಳಿಬಂದ ನಂತರ ಉಳಿದ ಕೊನೆಯ ಪ್ರಾಣಿಗಳನ್ನು ರೀಜೆಂಟ್ಸ್ ಪಾರ್ಕ್‌ಗೆ ಮರುಸ್ಥಳಾಂತರ ಮಾಡಲಾಯಿತು.[೧೫೪] ರಾಜಮನೆತನದ ಪ್ರಾಣಿ ಸಂಗ್ರಹಾಲಯದ ಪಾಲಕನಿಗೆ ಸಿಂಹ ಗೋಪುರವನ್ನು ತನ್ನ ವಾಸಕ್ಕೆ ಮನೆಯಾಗಿ ಬಳಸುವ ಹಕ್ಕು ನೀಡಲಾಗಿತ್ತು. ಇದರ ಪರಿಣಾಮವಾಗಿ, ಪ್ರಾಣಿಗಳು ಕಟ್ಟಡದಿಂದ ತೆರವಾಗಿದ್ದರೂ, ಕೊನೆಯ ಪಾಲಕ ೧೮೫೩ರಲ್ಲಿ ಮರಣ ಹೊಂದುವ ತನಕ ಸಿಂಹ ಗೋಪುರವನ್ನು ನೆಲಸಮಗೊಳಿಸಿರಲಿಲ್ಲ.[೧೫೪]

ಭೂತಗಳು[ಬದಲಾಯಿಸಿ]

೧೫೬೩ರಲ್ಲಿ ರಾಜ ಹೆನ್ರಿ VIIIವಿರುದ್ಧ ರಾಜದ್ರೋಹದ ಆರೋಪದ ಮೇಲೆ ಶಿರಚ್ಛೇದನಕ್ಕೆ ಒಳಗಾದ ರಾಣಿ ಅನ್ನೆ ಬೊಲೈನ್ ಭೂತವು ಆಕೆಯನ್ನು ಹೂಳಲಾದ ಸೇಂಟ್ ಪೀಟರ್ ಅಡ್ ವಿಂಕುಲಾ ಪ್ರಾರ್ಥನಾ ಮಂದಿರದಲ್ಲಿ ಸುಳಿದಾಡುತ್ತಿದೆಯೆಂದು ಸಂಶಯಿಸಲಾಯಿತು. ವೈಟ್ ಟವರ್‌ನ ಸುತ್ತಮುತ್ತ ಅದು ತನ್ನ ತಲೆಯನ್ನು ಕೈಯಲ್ಲಿ ಹಿಡಿದು ಅಡ್ಡಾಡುತ್ತಿದೆಯೆಂದು ಹೇಳಲಾಯಿತು.[೧೫೫] ಇತರ ಭೂತಗಳು ಹೆನ್ರಿ VI, ಲೇಡಿ ಜೇನ್ ಗ್ರೇ, ಮಾರ್ಗರೇಟ್ ಪೋಲ್,ಮತ್ತು ಪ್ರಿನ್ಸಸ್ ಇನ್ ದಿ ಟವರ್(ಗೋಪುರದ ರಾಜಕುಮಾರಿಯರು) ಒಳಗೊಂಡಿವೆ.[೧೫೬] ೧೮೧೬ರ ಜನವರಿಯಲ್ಲಿ ಕಾವಲು ಕಾಯುತ್ತಿದ್ದ ಸೆಂಟ್ರಿ ಜಿವೆಲ್ ಹೌಸ್ ಹೊರಗೆ ತನ್ನ ಕಡೆ ಬರುತ್ತಿದ್ದ ಕರಡಿಯ ಪ್ರೇತವನ್ನು ವೀಕ್ಷಿಸಿ, ಅದೇ ಭಯದಿಂದ ಕೆಲವು ದಿನಗಳ ನಂತರ ಮೃತಪಟ್ಟನೆಂದು ವರದಿಯಾಗಿದೆ.[೧೫೬] ೧೮೧೭ರ ಅಕ್ಟೋಬರ್‌ನಲ್ಲಿ ಕೊಳವೆಯಾಕಾರದ, ಪ್ರಜ್ವಲಿಸುವ ಪ್ರೇತವೊಂದನ್ನು ಜಿವೆಲ್ ಹೌಸ್‌ನಲ್ಲಿ ಕ್ರೌನ್ ಜಿವೆಲ್ಸ್‌ನ ಪಾಲಕ ಲೆಂಥಾಲ್ ಸ್ವಿಫ್ಟೆ ವೀಕ್ಷಿಸಿದನೆಂದು ಹೇಳಲಾಗಿದೆ. ಪ್ರೇತವು ಅವನ ಪತ್ನಿಯ ಭುಜದ ಹಿಂದೆ ಸುಳಿದಾಡುತ್ತಿದ್ದು, ಆಕೆ "ಓ, ಕ್ರೈಸ್ಟ್! ಅದು ನನ್ನನ್ನು ಹಿಡಿದಿದೆ!"ಎಂದು ಉದ್ಗರಿಸಿದಳೆಂದು ಅವನು ಹೇಳಿದ್ದಾನೆ. ಗೋಪುರದ ರಾತ್ರಿಪಾಳಿಯ ಸಿಬ್ಬಂದಿ ಇತ್ತೀಚೆಗೆ ಇತರ ಹೆಸರುರಹಿತ ಮತ್ತು ರೂಪರಹಿತ ಭಯಾನಕತೆಗಳನ್ನು ವರದಿಮಾಡಿದ್ದಾರೆ.[೧೫೭]

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal

  • ಲಂಡನ್ ಗೋಪುರದ ಕೈದಿಗಳ ಪಟ್ಟಿ
  • ಜನಪ್ರಿಯ ಸಂಸ್ಕೃತಿಯಲ್ಲಿ ಲಂಡನ್ ಗೋಪುರ

ಉಲ್ಲೇಖಗಳು[ಬದಲಾಯಿಸಿ]

ಟಿಪ್ಪಣಿಗಳು
  1. Wakefield Tower was originally called Blundeville Tower.[೨೦]
  2. Comparing relative purchasing power of £೩೦೦ in ೧೨೯೦ with ೨೦೦೮[೩೩]
  3. Comparing relative purchasing power of £೪,೦೦೦ in ೧೬೬೩ with ೨೦೦೮[೩೩]
  4. Flambard, Bishop of Durham, was imprisoned by Henry I "for the many injustices which Henry himself and the king's other sons had suffered".[೬೩]
  5. Comparing relative purchasing power of £21,000 in 1285 with 2008[೩೩]
  6. Comparing relative purchasing power of £3,593 in 1532 with 2008[೩೩]
  7. Comparing relative purchasing power of £4,000 in 1663 with 2008[೩೩]
  8. The elephant, a gift from the king of France, died after just two years in England.[೧೫೧]
ಅಡಿ ಟಿಪ್ಪಣಿಗಳು
  1. Vince 1990 in Creighton 2002, p. 138
  2. Creighton 2002, p. 138
  3. Parnell 1993, p. 11
  4. ೪.೦ ೪.೧ Parnell 1993, pp. 32–33
  5. Wilson 1998, p. 39
  6. Parnell 1993, p. 49
  7. Friar 2003, p. 163
  8. Friar 2003, p. 163
  9. Allen Brown 1976, p. 15
  10. ೧೦.೦ ೧೦.೧ ೧೦.೨ Allen Brown 1976, p. 44
  11. ೧೧.೦ ೧೧.೧ ೧೧.೨ Impey & Parnell 2000, p. 16
  12. ೧೨.೦ ೧೨.೧ Parnell 1993, pp. 20–23
  13. ೧೩.೦ ೧೩.೧ Parnell 1993, p. 22
  14. ೧೪.೦ ೧೪.೧ ೧೪.೨ ೧೪.೩ Parnell 1993, p. 20
  15. Friar 2003, p. 164
  16. Impey & Parnell 2000, p. 17
  17. ೧೭.೦ ೧೭.೧ Allen Brown & Curnow 1984, p. 12
  18. Parnell 1993, p. 32
  19. ೧೯.೦ ೧೯.೧ Parnell 1993, p. 27
  20. ೨೦.೦ ೨೦.೧ ೨೦.೨ Allen Brown & Curnow 1984, p. 17
  21. Parnell 1993, p. 28
  22. Impey & Parnell 2000, p. 31
  23. Allen Brown & Curnow 1984, pp. 17–18
  24. Parnell 1993, p. 65
  25. ೨೫.೦ ೨೫.೧ Parnell 1993, p. 67
  26. ೨೬.೦ ೨೬.೧ Allen Brown & Curnow 1984, pp. 15–17
  27. Parnell 1993, p. 24
  28. ೨೮.೦ ೨೮.೧ Parnell 1993, p. 33
  29. ೨೯.೦ ೨೯.೧ Parnell 1993, p. 10
  30. Parnell 1993, pp. 34–35
  31. Parnell 1993, p. 42
  32. Wilson 1998, p. 34
  33. ೩೩.೦ ೩೩.೧ ೩೩.೨ ೩೩.೩ ೩೩.೪ Officer, Lawrence H. (2009), Purchasing Power of British Pounds from 1264 to Present, MeasuringWorth, archived from the original on 24 ನವೆಂಬರ್ 2009, retrieved 29 May 2010 {{citation}}: Check date values in: |accessdate= (help)
  34. Parnell 1993, p. 46
  35. ೩೫.೦ ೩೫.೧ Parnell 1993, p. 55
  36. Parnell 1993, p. 29
  37. Bloody Tower, Historic Royal Palaces, archived from the original on 28 ಏಪ್ರಿಲ್ 2010, retrieved ೨೦೧೦-೦೭-೨೨ {{citation}}: Check date values in: |accessdate= (help)
  38. ೩೮.೦ ೩೮.೧ ೩೮.೨ Parnell 1993, p. 47
  39. Parnell 1993, p. 58
  40. ೪೦.೦ ೪೦.೧ Parnell 1993, p. 64
  41. Parnell 1993, p. 70
  42. Parnell 1993, p. 90
  43. ೪೩.೦ ೪೩.೧ Jewel House, Historic Royal Palaces, archived from the original on 1 ಜನವರಿ 2011, retrieved ೨೦೧೦-೦೬-೨೨ {{citation}}: Check date values in: |accessdate= (help)
  44. ೪೪.೦ ೪೪.೧ Parnell 1993, pp. 35–37
  45. Parnell 1993, pp. 43–44
  46. Impey & Parnell 2000, p. 34
  47. ೪೭.೦ ೪೭.೧ Parnell 1993, pp. 40–41
  48. Impey & Parnell 2000, p. 36
  49. Parnell 1993, pp. 38–39
  50. Parnell 1993, p. 43
  51. Parnell 1993, p. 61
  52. ೫೨.೦ ೫೨.೧ ೫೨.೨ Allen Brown & Curnow 1984, p. 5
  53. ೫೩.೦ ೫೩.೧ Liddiard 2005, p. 18
  54. Bennett 2001, p. 45
  55. ೫೫.೦ ೫೫.೧ Wilson 1998, p. 1
  56. Bennett 2001, pp. 45–47
  57. Allen Brown 1976, p. 30
  58. Allen Brown 1976, p. 31
  59. Friar 2003, p. 47
  60. ೬೦.೦ ೬೦.೧ Wilson 1998, p. 2
  61. Allen Brown & Curnow 1984, pp. 5–9
  62. Allen Brown & Curnow 1984, pp. 9–10
  63. Wilson 1998, p. 5
  64. Wilson 1998, pp. 5–6
  65. Allen Brown & Curnow 1984, pp. 12–13
  66. ೬೬.೦ ೬೬.೧ ೬೬.೨ ೬೬.೩ Parnell 1993, p. 54
  67. Creighton 2002, p. 147
  68. ೬೮.೦ ೬೮.೧ Wilson 1998, pp. 6–9
  69. Wilson 1998, pp. 14–15
  70. Allen Brown & Curnow 1984, p. 13
  71. Allen Brown & Curnow 1984, p. 15
  72. Gillingham 2002, p. 304
  73. Wilson 1998, pp. 13–14
  74. ೭೪.೦ ೭೪.೧ Wilson 1998, pp. 17–18
  75. Wilson 1998, pp. 19–20
  76. ೭೬.೦ ೭೬.೧ Allen Brown & Curnow 1984, p. 20
  77. Wilson 1998, p. 21
  78. Allen Brown & Curnow 1984, pp. 20–21
  79. Wilson 1998, pp. 24–27
  80. Wilson 1998, p. 27
  81. ೮೧.೦ ೮೧.೧ Parnell 1993, p. 35
  82. Cathcart King 1988, p. 84
  83. Parnell 1993, pp. 35–44
  84. Wilson 1998, pp. 31
  85. Wilson 1998, pp. 34, 36
  86. Impey & Parnell 2000, p. 41
  87. Lapper & Parnell 2000, p. 28
  88. Wilson 1998, p. 40
  89. Costain 1958, pp. 193–195
  90. ಕ್ಯಾಲೆಂಡರ್ ಆಫ್ ಪೇಟೆಂಟ್ ರಾಲ್ಸ್ ೧೩೨೧–೧೩೨೭. p. ೨೯
  91. Strickland 1840, p. 201
  92. Friar 2003, p. 235
  93. Wilson 1998, pp. 34, 42–43
  94. ೯೪.೦ ೯೪.೧ Impey & Parnell 2000, p. 42
  95. Wilson 1998, p. 45
  96. ೯೬.೦ ೯೬.೧ ೯೬.೨ Impey & Parnell 2000, p. 51
  97. ೯೭.೦ ೯೭.೧ ೯೭.೨ Parnell 1993, p. 53
  98. Impey & Parnell 2000, p. 44
  99. Impey & Parnell 2000, p. 45
  100. ೧೦೦.೦ ೧೦೦.೧ Impey & Parnell 2000, p. 46
  101. ೧೦೧.೦ ೧೦೧.೧ ೧೦೧.೨ Impey & Parnell 2000, pp. 46–47
  102. ೧೦೨.೦ ೧೦೨.೧ Horrox 2004
  103. ೧೦೩.೦ ೧೦೩.೧ Yeoman Warders, Historic Royal Palaces, archived from the original on 29 ಜುಲೈ 2010, retrieved ೨೦೧೦-೦೭-೨೧ {{citation}}: Check date values in: |accessdate= (help)
  104. Impey & Parnell 2000, p. 73
  105. Impey & Parnell 2000, p. 52
  106. ೧೦೬.೦ ೧೦೬.೧ ೧೦೬.೨ ೧೦೬.೩ ೧೦೬.೪ Impey & Parnell 2000, p. 91
  107. Wilson 1998, pp. 10–11
  108. ೧೦೮.೦ ೧೦೮.೧ Impey & Parnell 2000, p. 92
  109. Black 1927, p. 345
  110. ೧೧೦.೦ ೧೧೦.೧ Parnell 1993, p. 117
  111. ೧೧೧.೦ ೧೧೧.೧ ೧೧೧.೨ Impey & Parnell 2000, p. 94
  112. Plowden 2004
  113. Collinson 2004
  114. Impey & Parnell 2000, p. 47
  115. Impey & Parnell 2000, p. 57
  116. Impey & Parnell 2000, p. 74
  117. ೧೧೭.೦ ೧೧೭.೧ Impey & Parnell 2000, pp. 54–55
  118. Parnell 1993, pp. 76–77
  119. Impey & Parnell 2000, p. 78
  120. Impey & Parnell 2000, pp. 79–80
  121. Impey & Parnell 2000, p. 81
  122. Executions at The Tower Of London (PDF), Historic Royal Palaces, archived from the original (PDF) on 24 ಜುಲೈ 2014, retrieved ೨೦೧೦-೦೭-೩೧ {{citation}}: Check date values in: |accessdate= (help)
  123. ೧೨೩.೦ ೧೨೩.೧ Impey & Parnell 2000, p. 123
  124. Parnell 1993, pp. 117–118
  125. [311]
  126. ೧೨೬.೦ ೧೨೬.೧ Impey & Parnell 2000, p. 117
  127. Parnell 1993, p. 96
  128. Impey & Parnell 2000, pp. 118–121
  129. ೧೨೯.೦ ೧೨೯.೧ Impey & Parnell 2000, p. 124
  130. ೧೩೦.೦ ೧೩೦.೧ Parnell 1993, p. 111
  131. "Regimental History", British Army website, Royal Regiment of Fusiliers, 2010, retrieved 16 ಜೂನ್ 2010
  132. Royal Regiment of Fusiliers (London) Museum, Army Museums Ogilby Trust, archived from the original on 26 ಜುಲೈ 2011, retrieved 16 ಜೂನ್ 2010
  133. Lua error in ಮಾಡ್ಯೂಲ್:Citation/CS1/Date_validation at line 624: attempt to compare two nil values.
  134. The Queen's Guard, British Army, 2010, retrieved 16 ಜೂನ್ 2010
  135. Yeomen Warders, Royal Household of the United Kingdom, 2008/09, retrieved 2010-06-16 {{citation}}: Check date values in: |year= (help)
  136. Gun salutes, Royal Household of the United Kingdom, 2008/09, retrieved 2010-06-16 {{citation}}: Check date values in: |year= (help)
  137. On This Day 1974: Bomb blast at the Tower of London, BBC News Online, ೧೭ July ೧೯೭೪, retrieved ೨೦೧೦-೦೬-೧೬ {{citation}}: Check date values in: |accessdate= and |date= (help)
  138. Cause and principles, Historic Royal Palaces, archived from the original on 22 ಡಿಸೆಂಬರ್ 2009, retrieved ೨೦೧-೦೪-೩೦ {{citation}}: Check date values in: |accessdate= (help)
  139. UNESCO Constitution, UNESCO, retrieved ೨೦೦೯-೦೮-೧೭ {{citation}}: Check date values in: |accessdate= (help)
  140. Tower of London, UNESCO, retrieved ೨೦೦೯-೦೭-೨೮ {{citation}}: Check date values in: |accessdate= (help)
  141. UNESCO warning on Tower of London, BBC News Online, ೨೧ October ೨೦೦೬, retrieved ೨೦೧೦-೦೬-೧೬ {{citation}}: Check date values in: |accessdate= and |date= (help)
  142. Medieval Palace: Press Release, Historic Royal Palaces, archived from the original on 21 ಡಿಸೆಂಬರ್ 2007, retrieved ೨೦೧೦-೦೭-೧೯ {{citation}}: Check date values in: |accessdate= (help)
  143. The Constable of the Tower, Historic Royal Palaces, archived from the original on 30 ನವೆಂಬರ್ 2009, retrieved ೨೦೧೦-೦೯-೨೭ {{citation}}: Check date values in: |accessdate= (help)
  144. Maj Gen Keith Cima: Resident Governor HM Tower of London, Historic Royal Palaces, archived from the original on 6 ಡಿಸೆಂಬರ್ 2008, retrieved ೨೦೧೦-೦೯-೨೭ {{citation}}: Check date values in: |accessdate= (help)
  145. Jerome 2006, pp. 148–149
  146. Sax 2007, pp. 272–274
  147. Visits Made in 2009 to Visitor Attractions in Membership with ALVA, ALVA – Association of Leading Visitor Attractions, retrieved 7 ಜುಲೈ 2010
  148. ೧೪೮.೦ ೧೪೮.೧ Wilson 1998, p. 29
  149. ೧೪೯.೦ ೧೪೯.೧ Impey & Parnell 2000, p. 106
  150. Colonel Blood's raid, Historic Royal Palaces, archived from the original on 6 ಜುಲೈ 2010, retrieved ೨೦೧೦-೦೬-೨೨ {{citation}}: Check date values in: |accessdate= (help)
  151. ೧೫೧.೦ ೧೫೧.೧ Wilson 1998, p. 23 ಉಲ್ಲೇಖ ದೋಷ: Invalid <ref> tag; name "Wilson 23" defined multiple times with different content
  152. Parnell 1993, pp. 40, 54
  153. Blunt 1976, p. 17
  154. ೧೫೪.೦ ೧೫೪.೧ Parnell 1993, p. 94
  155. Farson 1978, pp. 14–16
  156. ೧೫೬.೦ ೧೫೬.೧ Hole 1951, pp. 61–62, 155
  157. Roud 2009, pp. 60–61
ಗ್ರಂಥಸೂಚಿ
  • Allen Brown, Reginald (1976) [1954], Allen Brown's English Castles, The Boydell Press, ISBN 1-84383-069-8
  • Allen Brown, Reginald; Curnow, P (1984), Tower of London, Greater London: Department of the Environment Official Handbook, Her Majesty's Stationary Office, ISBN 0-11-671148-5
  • Bennett, Matthew (2001), Campaigns of the Norman Conquest, Essential Histories, Osprey Publishing, ISBN 1-84176-228-8
  • Black, Ernest (1927), "Torture under English Law", University of Pennsylvania Law Review and American Law Register, University of Pennsylvania, 75 (4): 344–348, doi:10.2307/3307506, JSTOR 3307506
  • Blunt, Wilfred (1976), The Ark in the Park: The Zoo in the Nineteenth Century, Hamish Hamilton, ISBN 0241893313
  • Cathcart King, David James (1988), The Castle in England and Wales: an Interpretative History, Croom Helm, ISBN 0-918400-08-2
  • Collinson, Patrick (2004), "Elizabeth I (1533–1603), Queen of England and Ireland", Oxford Dictionary of National Biography, Oxford University Press(subscription required)
  • Costain, Thomas (1958), The Three Edwards, Garden City
  • Creighton, Oliver (2002), Castles and Landscapes, Continuum, ISBN 0-8264-5896-3
  • Farson, Daniel (1978), Ghosts in Fact and Fiction, Hamlyn Young Books, ISBN 978-0600340539
  • Friar, Stephen (2003), The Sutton Companion to Castles, Sutton Publishing, ISBN 978-0-7509-3994-2
  • Gillingham, John (2002) [1999], Richard I, Yale University Press, ISBN 0-300-09404-3
  • Hole, Christina (1951), Haunted England: A Survey of English Ghost-Lore (3 ed.), Batsford
  • Horrox, Rosemary (2004), "Edward V (1470–1483), king of England and lord of Ireland", Oxford Dictionary of National Biography, Oxford University Press(subscription required)
  • Impey, Edward; Parnell, Geoffrey (೨೦೦೦), The Tower of London: The Official Illustrated History, Merrell Publishers in association with Historic Royal Palaces, ISBN ೧-೮೫೮೯೪-೧೦೬-೭ {{citation}}: Check |isbn= value: invalid character (help)
  • Jerome, Fiona (2006), Tales from the Tower: Secrets and Stories from a Gory and Glorious Past, Think Publishing, ISBN 978-1845250263
  • Lapper, Ivan; Parnell, Geoffrey (2000), The Tower of London: A 2000-year History, Osprey Publishing, ISBN 9781841761701
  • Liddiard, Robert (2005), Castles in Context: Power, Symbolism and Landscape, 1066 to 1500, Windgather Press Ltd, ISBN 0-9545575-2-2
  • Parnell, Geoffrey (1993), The Tower of London, Batsford, ISBN 978-0713468649
  • Plowden, Alison (2004), "Grey (married name Dudley), Lady Jane (1537–1554)", Oxford Dictionary of National Biography, Oxford University Press(subscription required)
  • Roud, Steve (2009) [2008], London Lore: The Legends and Traditions of the World's Most Vibrant City, Arrow Books, ISBN 978-0099519867
  • Sax, Boria (2007), "How Ravens Came to the Tower of London" (PDF), Society and Animals, 15 (3): 269–283, doi:10.1163/156853007X217203, archived from the original (PDF) on 27 ಜುಲೈ 2011, retrieved 12 ಏಪ್ರಿಲ್ 2011
  • Strickland, Agnes (1840), Lives of the Queens of England from the Norman Conquest. Volume II, vol. II, Henry Colburn
  • Vince, Alan (1990), Saxon London: An Archaeological Investigation, Seaby, ISBN 1852640197
  • Wilson, Derek (1998) [1978], The Tower of London: A Thousand Years (2nd ed.), Allison & Busby, ISBN 0-74900-332-4

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Bennett, Edward Turner (1829), The Tower Menagerie: Comprising the Natural History of the Animals Contained in that Establishment; with Anecdotes of their Characters and History, Robert Jennings
  • Harman, A. (1864), Sketches of the Tower of London as a Fortress, a Prison, and a Palace, J. Wheeler
  • Parnell, Geoffrey (2009), The Tower of London: Past & Present, History Press, ISBN 978-0752450360

ಬಾಹ್ಯ ಕೊಂಡಿಗಳು‌[ಬದಲಾಯಿಸಿ]