ಲಂಗ

ವಿಕಿಪೀಡಿಯ ಇಂದ
Jump to navigation Jump to search
ಲಂಗ ಧರಿಸಿರುವ ಒಬ್ಬ ಭಾರತೀಯ ನಟಿ.

ಲಂಗವು ಮಹಿಳೆಯರು ಧರಿಸುವ ಪೂರ್ಣ ಪಾದದವರೆಗೆ ಬರುವ ಸ್ಕರ್ಟ್‌ನ ಒಂದು ರೂಪ. ಇದು ಭಾರತೀಯ ಉಪಖಂಡದಲ್ಲಿ ಮೂಲಹೊಂದಿದ್ದು, ಉದ್ದವಾಗಿದ್ದು, ಕಸೂತಿ ಮಾಡಿದ್ದಾಗಿರುತ್ತದೆ ಮತ್ತು ನೆರಿಗೆಗಳನ್ನು ಹೊಂದಿರುತ್ತದೆ. ಇದನ್ನು ಲಂಗ ದಾವಣಿಯ ಕೆಳಗಿನ ಭಾಗವಾಗಿ ಧರಿಸಲಾಗುತ್ತದೆ. ಇದನ್ನು ಸೊಂಟಕ್ಕೆ ಕಟ್ಟಲಾಗುತ್ತದೆ ಮತ್ತು ಕೆಳಬೆನ್ನು ಹಾಗೂ ವಪೆಯನ್ನು ಕಾಣುವಂತೆ ಬಿಡುತ್ತದೆ.[೧] ಭಾರತೀಯ ಉಪಖಂಡಲ್ಲಿ, ಲಂಗಕ್ಕೆ ವಿವಿಧ ಪ್ರಕಾರಗಳ ಸಾಂಪ್ರದಾಯಿಕ ಕಸೂತಿ ಕೆಲಸವನ್ನು ಮಾಡಲಾಗುತ್ತದೆ. ಇವುಗಳಲ್ಲಿ ಗೋಟಾ ಪಟ್ಟಿ ಕಸೂತಿಯು ಹಬ್ಬಗಳು ಹಾಗೂ ಮದುವೆಗಳಿಗೆ ಜನಪ್ರಿಯವಾಗಿರುವ ಪ್ರಕಾರಗಳಲ್ಲಿ ಒಂದಾಗಿದೆ.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಲಂಗ&oldid=914901" ಇಂದ ಪಡೆಯಲ್ಪಟ್ಟಿದೆ