ರೋಹ್‍ತಾಂಗ್ ಕಣಿವೆಮಾರ್ಗ
Jump to navigation
Jump to search
ರೋಹ್ತಾಂಗ್ ಕಣಿವೆಮಾರ್ಗವು (ಕಣಿವೆಮಾರ್ಗವನ್ನು ಕೆಟ್ಟ ಹವಾಮಾನದಲ್ಲಿ ಕೆಲಸಮಾಡುತ್ತ ದಾಟಲು ಪ್ರಯತ್ನಿಸುವ ಜನರಿಂದ ಹೆಸರಿಸಲಾಗಿದೆ[೧][೨][೩][೪]) ಒಂದು ಎತ್ತರದ ಪರ್ವತ ಕಣಿವೆಮಾರ್ಗವಾಗಿದ್ದು ಹಿಮಾಲಯದ ಪೀರ್ ಪಂಜಾಲ್ ಶ್ರೇಣಿಯ ಪೂರ್ವ ತುದಿಯಲ್ಲಿದೆ. ಮನಾಲಿಯಿಂದ ಸುಮಾರು ೫೧ ಕಿ.ಮಿ. ದೂರದಲ್ಲಿದೆ. ಇದು ಕುಲ್ಲು ಕಣಿವೆಯನ್ನು ಭಾರತದ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿಟಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ.
ಭೌಗೋಳಿಕತೆ[ಬದಲಾಯಿಸಿ]
ಈ ಕಣಿವೆಮಾರ್ಗವು ಕುಲ್ಲು ಕಣಿವೆ ಮತ್ತು ಶುಷ್ಕವಾದ ಎತ್ತರದ ಲಾಹೌಲ್ ಹಾಗೂ ಸ್ಪಿಟಿ ಕಣಿವೆಗಳ ನಡುವೆ ನೈಸರ್ಗಿಕ ವಿಭಜನೆಯನ್ನು ಒದಗಿಸುತ್ತದೆ. ಈ ಕಣಿವೆಮಾರ್ಗವು ಚೆನಾಬ್ ಮತ್ತು ಬಿಯಾಸ್ ಜಲಾನಯನ ಪ್ರದೇಶಗಳ ನಡುವಿನ ಜಲಾನಯನ ಪ್ರದೇಶದಲ್ಲಿದೆ.
ಹಿಮಾಲಯದ ಮಾನದಂಡಗಳಿಂದ ಇದು ವಿಶೇಷವಾಗಿ ಎತ್ತರ ಅಥವಾ ಕಾಲ್ನಡಿಗೆಯಿಂದ ದಾಟಲು ಕಷ್ಟಕರವಿಲ್ಲ, ಆದರೆ ಅನಿರೀಕ್ಷಿತ ಹಿಮಬಿರುಗಾಳಿಗಳು ಮತ್ತು ಬಿರುಗಾಳಿಗಳ ಕಾರಣ ಇದು ಅಪಾಯಕಾರಿ ಎಂಬ ಯಥಾಯೋಗ್ಯ ಖ್ಯಾತಿಯನ್ನು ಪಡೆದಿದೆ.[೫]
ಛಾಯಾಂಕಣ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ "Panoramio - Photo of Rohtang Pass (3978 m)". panoramio.com. Retrieved 3 September 2015.
- ↑ "Rohtang Pass - Himalayan Fantasy". himalayan-fantasy.com. Retrieved 3 September 2015.
- ↑ "Image: Rohtang-pass Himalayas.jpg, (450 × 338 px)". mountainhighs.com. Retrieved 3 September 2015.
- ↑ "Image: news_a3f1d190-1ebf-208f-9c4f-4dfee1789304.jpg, (350 × 525 px)". taxivala.com. Retrieved 3 September 2015.
- ↑ Janet Rizvi (1 June 1998). Ladakh: Crossroads of High Asia. Oxford University Press. pp. 9–10. ISBN 978-0-19-564546-0.