ರೋನ್ಸ್ ಬಂಟ್ವಾಳ್
ರೋನ್ಸ್ ಬಂಟ್ವಾಳ್ | |
---|---|
ಚಿತ್ರ:Wikipedia (Kn) meet, at Mumbai university, kannada division.jpg | |
ಜನನ | ರೋನ್ಸ್ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ೧೯೭೦ ರಲ್ಲಿ ಜನಿಸಿದ ರೋನ್ಸ್ ರವರು, ಬಾಲ್ಯದ ಶಿಕ್ಷಣವನ್ನೆಲ್ಲಾ ತಮ್ಮ ಊರಿನಲ್ಲೇ ಮಾಡಿಮುಗಿಸಿದರು. ತಂದೆ ವೃತ್ತಿಯಲ್ಲಿ ಒಬ್ಬ ದರ್ಜಿಯಾಗಿದ್ದರು. |
ರಾಷ್ಟ್ರೀಯತೆ | ಭಾರತೀಯ, ಮುಂಬಯಿನಲ್ಲಿ ಅಖಿಲಭಾರತೀಯ ಕನ್ನಡ ಪತ್ರಕರ್ತರ ಸಮಾವೇಶವನ್ನು ಅತ್ಯಂತ ಪ್ರಭಾವಶಾಲಿಯಾಗಿ ಸಂಘಟಿಸಿದ್ದರು |
ಇತರೆ ಹೆಸರು | ತುಳು,ಕನ್ನಡ, ಕೊಂಕಣಿ,ಬ್ಯಾರಿ, ಹವ್ಯಕ, ಮೋಯ ಮೊದಲಾದ ಭಾಷೆಗಳಲ್ಲಿ ಪ್ರವೀಣರು. |
ವಿದ್ಯಾಭ್ಯಾಸ | ಅವರು ಮೂಲತಃ ಒಬ್ಬ ಸಿವಿಲ್ ಇಂಜಿನಿಯರಿಂಗ್ ಪದವೀಧರ. ಅವರ ಮನೆಮಾತು ಕೊಂಕಣಿ. ಹೈಸ್ಕೂಲ್ ವಿದ್ಯಾಭ್ಯಾಸದ ನಂತರ, 'ಸಿವಿಲ್ ಇಂಜಿನಿಯರಿಂಗ್' ನಲ್ಲಿ ಪದವಿಗಳಿಸಿದರು. ೧೯೯೬ ರಲ್ಲಿ 'ಜನವಾಹಿನಿ ದೈನಿಕಪತ್ರಿಕೆಯ ಮುಂಬಯಿ ಪ್ರತಿನಿಧಿಯಾಗಿ ಆರಂಭಿಸಿ ಪತ್ರಿಕೋದ್ಯಮದಲ್ಲಿ ಯಶಸ್ಸು ಸಾಧಿಸಿದರು. |
ವೃತ್ತಿ(ಗಳು) | ರೋನ್ಸ್ ಬಂಟ್ವಾಳ್, ದಾಜಿ ವರ್ಲ್ಡ್ ಡಾಟ್.ಕಾಂ, ದೆಹಲಿ ವಾರ್ತೆ, ಕೆಮ್ಮಣ್ಣು ಡಾಟ್.ಕಾಂ ಮೊದಲಾದ ಸುದ್ದಿ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುತ್ತಾ ಬಂದಿದ್ದಾರೆ.ಕನ್ನಡ ಪತ್ರಕರ್ತರ ಸಂಘ,ಮಹಾರಾಷ್ಟ್ರ, ಸ್ಥಾಪಕ, ಮತ್ತು ಗೌರವ ಪ್ರಧಾನ ಸೆಕ್ರೆಟರಿ, ಮತ್ತು, 'ಡೈಜಿ ವರ್ಲ್ಡ್ ಮುಂಬಯಿ ಬ್ಯೂರೊ ಚೀಫ್ |
ಗಮನಾರ್ಹ ಕೆಲಸಗಳು | ತರಂಗ,ರೂಪತಾರ,ಮಣಿಪಾಲ್ ಮೀಡಿಯಾದಲ್ಲಿ 'ಕರ್ನಾಟಕ ಮಲ್ಲ ಪತ್ರಿಕೆ' 'ವಿಜಯ ಕರ್ನಾಟಕ ದೈನಿಕ'ಕ್ಕೆ ಮುಂಬಯಿ ಪ್ರತಿನಿಧಿ.ಕರ್ನಾಟಕದ ಸುಮಾರು ೨೦ಕ್ಕೂ ಮಿಗಿಲಾದ ಪತ್ರಿಕೆಗಳಿಗೆ ಸುದ್ದಿ ಮತ್ತು ಚಿತ್ರಗಳನ್ನು ಉಚಿತವಾಗಿ ಪೂರೈಸುತ್ತಿದ್ದಾರೆ |
ಸಂಗಾತಿ | ತಾರಾ ಬಂಟ್ವಾಳ್, |
ಪ್ರಶಸ್ತಿಗಳು | ‘ಪತ್ರಕಾರ್ ರತ್ನ ಪ್ರಶಸ್ತಿ’ ರೋನ್ಸ್ ರಿಗೆ 'ನವ ಚಿಂತನ್', ಇಂಟರ್ ನ್ಯಾಷನಲ್ ಪರ್ಸನ್ ಆಫ್ ದ ಲ್ಯುಮಿನರಿ ಪ್ರಶಸ್ತಿಯನ್ನುಬ್ಯಾಂಕಾಕ್ ನಲ್ಲಿ ಆಯೊಜಿಸಲಾದ '೭ನೆಯ ಅಂತಾರಾಷ್ಟ್ರೀಯ ಕಲ್ಚರಲ್ ಕನ್ವೆನ್ಷನ್' ನಲ್ಲಿ ಪ್ರದಾನ ಮಾಡಲಾಯಿತು.ಸ್ವರ್ಣ ಪದಕ ಪ್ರಶಸ್ತಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಬೆಂಗಳೂರು, ಜಂಟಿಯಾಗಿ, ೨೦೧೧ ರಲ್ಲಿ, 'ಪರಿವರ್ತನ್ ಪ್ರತಿಷ್ಠಾನ್ ಪುರಸ್ಕಾರ್' ಮುಂಬಯಿನ 'ಪರಿವರ್ತನ್ ಪ್ರತಿಷ್ಟಾನ್' ಮತ್ತು 'ಸಾಧಕ ಜರ್ನಲಿಸ್ಟ್', ಕರ್ನಾಟಕ ಬ್ಯಾರಿ ಸಾಹಿತ್ಯ ಅಕ್ಯಾಡೆಮಿಯ ವತಿಯಿಂದ,ಕರ್ನಾಟಕ ಮಾಧ್ಯಮ ಅಕ್ಯಾಡೆಮಿ ಪ್ರಶಸ್ತಿ ವಿಜೇತರು, ಮುಂಬಯಿಯ ಬಿ.ಎಸ್.ಕೆ.ಬಿ (B.S.K.B.) ಅಸೋಸಿಯೇಷನ್ ಪುರಸ್ಕಾರ. ಮುಂತಾದವುಗಳು. |
ಜಾಲತಾಣ | [೧] |
ರೋನ್ಸ್ ಬಂಟ್ವಾಳ್, ದಾಜಿ ವರ್ಲ್ಡ್ ಡಾಟ್.ಕಾಂ, ದೆಹಲಿ ವಾರ್ತೆ, ಕೆಮ್ಮಣ್ಣು ಡಾಟ್.ಕಾಂ ಮೊದಲಾದ ಸುದ್ದಿ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುತ್ತಾ ಬಂದಿದ್ದಾರೆ. 'ರೋನ್ಸ್ ಬಂಟ್ವಾಳ್' ವೃತ್ತಿಜೀವನ ಪತ್ರಿಕೆ ವರದಿಗಾರರಾಗಿ ಶುರುವಾದರೂ, ಅವರು ಮೂಲತಃ ಒಬ್ಬ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ರೋನ್ಸ್ ರದು ಬಹುಮುಖ ವ್ಯಕ್ತಿತ್ವ. ತುಳು,ಕನ್ನಡ, ಕೊಂಕಣಿ,ಬ್ಯಾರಿ, ಹವ್ಯಕ, ಮೋಯ ಮೊದಲಾದ ಭಾಷೆಗಳಲ್ಲಿ ಪ್ರವೀಣರು. ಗುಣಗ್ರಾಹಿ ವ್ಯಕ್ತಿತ್ವವನ್ನು ಹೊಂದಿದ ರೋನ್ಸ್, ಮುಂಬಯಿನ ಮೊಗವೀರ, ಬಂಟ್ಸ್, ಬಿಲ್ಲವ, ಬ್ರಾಹ್ಮಣ, ಒಕ್ಕಲಿಗ, ದೇವಾಡಿಗ, ಕ್ರಿಶ್ಚಿಯನ್,ಹೀಗೆ ಎಲ್ಲಾ ಸಮುದಾಯದವರ ಆದ್ಯತೆಗಳಿಗೆ ಸ್ಪಂದಿಸಿ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಾಹಸೀ ಪತ್ರಕರ್ತರಲ್ಲೊಬ್ಬರು. ಪತ್ರಿಕೆಯ ವರದಿಗಾರರಾಗಿ ಪ್ರಾರಂಭಿಸಿದಾಗ ಮೊದಲು ಅವರು ವ್ಯಂಗ್ಯಚಿತ್ರಕಾರರಾಗಿ ಹೆಸರುಗಳಿಸಿದ್ದರು.
ಬಾಲ್ಯ,ವಿದ್ಯಾಭ್ಯಾಸ
[ಬದಲಾಯಿಸಿ]ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ೧೯೭೦ ರಲ್ಲಿ ಜನಿಸಿದ ರೋನ್ಸ್ ರವರು, ಬಾಲ್ಯದ ಶಿಕ್ಷಣವನ್ನೆಲ್ಲಾ ಆ ಊರಿನಲ್ಲೇ ಮಾಡಿಮುಗಿಸಿದರು. ತಂದೆ ವೃತ್ತಿಯಲ್ಲಿ ಒಬ್ಬ ದರ್ಜಿಯಾಗಿದ್ದರು. ರೋನ್ಸ್ ರವರ ಮನೆಮಾತು ಕೊಂಕಣಿ. ವಿದ್ಯಾರ್ಥಿದೆಸೆಯಲ್ಲೇ ಅವರು ನಾಯಕತ್ವದಗುಣವನ್ನು ಹೊಂದಿದ್ದರು. ಹೈಸ್ಕೂಲ್ ವಿದ್ಯಾಭ್ಯಾಸದ ನಂತರ, 'ಸಿವಿಲ್ ಇಂಜಿನಿಯರಿಂಗ್' ನಲ್ಲಿ ಪದವಿಗಳಿಸಿದರು. ಮುಂದೆ ಇಂಜಿನಿಯರ್ ಉದ್ಯೋಗಕ್ಕೆ ಹೋಗದೆ, ರಾಜಕೀಯ ವಲಯಕ್ಕೆ ಪಾದಾರ್ಪಣೆಮಾಡಿದರು. ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆದರೆ ವಿದ್ಯಾವಂತರಾದ ಬಂಟ್ವಾಳರಿಗೆ 'ಚುನಾವಣಾ ಟಿಕೆಟ್' ದೊರೆಯದೆ ಭ್ರಮನಿರಸನವಾಯಿತು. ನಂತರ ನೌಕರಿಯನ್ನು ಹುಡುಕುತ್ತಾ 'ಬರೋಡ' ನಗರಕ್ಕೆ ಹೋದರು. 'ರೋನ್ಸ್ ಬಂಟ್ವಾಳ'ರಿಗೆ ಅಲ್ಲಿನ ವಾತಾವರಣ ಸರಿಹೋಗದೆ ವಾಪಸ್ಸಾದರು. ಅವರಿಗೆ ಮುಂಬಯಿನಗರ ಬಹಳ ಆಪ್ತವಾಯಿತು. ಪಶ್ಚಿಮ ರೈಲ್ವೆಯ 'ವಿರಾರ್' ಉಪನಗರದಲ್ಲಿ 'ಸೈಟ್ ಸೂಪರ್ವೈಸರ್' ಆಗಿ ಕೆಲ ಕಾಲ ಕೆಲಸಮಾಡಿದರು. ಆಗ, ಕೆಲಸದ ನಿಮಿತ್ತ ಅವರನ್ನು 'ರತ್ನಾಗಿರಿ'ಗೆ ಕಳಿಸಿಕೊಡಲಾಯಿತು.
ಪತ್ರಿಕಾ ವರದಿಗಾರನಾಗಿ
[ಬದಲಾಯಿಸಿ]ಮಂಗಳೂರಿನ ಪ್ರಸಿದ್ಧ ಕೊಂಕಣಿ ಪತ್ರಿಕೆ 'ರಾಕ್ಣೋ'ಗೆ ಚಂದಾ ಕೂಡಿಸುವ ಕೆಲಸವನ್ನು ಸಮರ್ಥವಾಗಿ ಮಾಡಿದರು. ೧೯೯೬ ರಲ್ಲಿ 'ಜನವಾಹಿನಿ ದೈನಿಕಪತ್ರಿಕೆ'ಗೆ ಮುಂಬಯಿ ವಿಭಾಗದ ಮುಖ್ಯಸ್ಠರಾಗಿ ನೇಮಕಗೊಂಡರು. ಆಸಮಯದಲ್ಲಿ ವರದಿಗಾರನಾಗಿ ಕೆಲಸಮಾಡುವ ಸನ್ನಿವೇಶಒದಗಿ ಬಂತು. ಆಗ ಛಾಯಾಚಿತ್ರಗಾರನಾಗಿ ಮತ್ತು ವರದಿಗಾರನಾಗಿ ದುಡಿದರು. ಉದಯವಾಣಿ ಪತ್ರಿಕೆಯ ಮುಖ್ಯವರದಿಗಾಗ 'ಕೆ.ಟಿ.ವೇಣುಗೋಪಾಲ್', ಬಂಟ್ವಾಳ್ ರ ಕಾರ್ಯಕ್ಷಮತೆಯನ್ನು ಮೆಚ್ಚಿ, ತಮ್ಮ ಪತ್ರಿಕೆಗೆ ಆಹ್ವಾನಿಸಿದರು. ಹೀಗೆ ಉದಯವಾಣಿ ಪತ್ರಿಕೆಗೆ ಪೂರ್ಣಾವಧಿ ಪತ್ರಕರ್ತನಾಗಿ ರೂಪುಗೊಂಡ ಬಂಟ್ವಾಳರು, ತರಂಗ,ರೂಪತಾರ,ಮಣಿಪಾಲ್ ಮೀಡಿಯಾದಲ್ಲಿ ಬಹಳ ಶ್ರಮವಹಿಸಿ ದುಡಿದರು. ಮುಂದೆ 'ಕರ್ನಾಟಕ ಮಲ್ಲ ಪತ್ರಿಕೆ'ಯ ಹಿರಿಯ ಸಂಪಾದಕರಾದ 'ಚಂದ್ರಶೇಖರ ಪಾಲೆತ್ತಾಡಿ'ಯವರ ಸಂಪರ್ಕಕ್ಕೆ ಬಂದು, ಅವರ ಸಮರ್ಥ ಮಾರ್ಗದರ್ಶನದಿಂದ ಕನ್ನಡಿಗ ಪತ್ರಕರ್ತರನ್ನು ಸಂಘಟಿಸುವ ಕೆಲಸಮಾಡಿ, ಅದರಲ್ಲಿ ಯಶಸ್ಸುಕಂಡರು. ಈಗ ಅವರು, 'ವಿಜಯ ಕರ್ನಾಟಕ ದೈನಿಕ'ಕ್ಕೆ ಮುಂಬಯಿ ಪ್ರತಿನಿಧಿಯಾಗಿ ಕೆಲಸಮಾಡುತ್ತಿದ್ದಾರೆ. ಅಬುದಾಬಿ, ಕುವೈಟ್, ಶಾರ್ಜ ಮಲೇಶಿಯ,ಬ್ಯಾಂಕಾಕ್, ಮೊದಲಾದಮೊದಲಾದ ಹಲವು ರಾಷ್ಟ್ರಗಳಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮಗಳನ್ನು ಕ್ರಮವಾಗಿ ವರದಿಮಾಡಿ, ಜನರ ಮೆಚ್ಚುಗೆಗಳಿಸಿದ್ದಾರೆ. ಕರ್ನಾಟಕದ ಸುಮಾರು ೨೦ಕ್ಕೂ ಮಿಗಿಲಾದ ಪತ್ರಿಕೆಗಳಿಗೆ ಸುದ್ದಿ ಮತ್ತು ಚಿತ್ರಗಳನ್ನು ಉಚಿತವಾಗಿ ಪೂರೈಸುತ್ತಿದ್ದಾರೆ.
ವ್ಯಕ್ತಿತ್ವ
[ಬದಲಾಯಿಸಿ]'ರೋನ್ಸ್' ರವರದು, ತುಸು ಎತ್ತರದ ನಿಲುವು,ಸುಂದರ ಧೃಡಕಾಯದ ನಗೆಮೊಗದ ವ್ಯಕ್ತಿತ್ವ ಅವರದು. ಮೃದುಮಾತಿನ, ಜನರಿಗೆ ಸಹಾಯಮಾದುವ ಮನೋಭಾವ, ಸ್ನೇಹಪ್ರಿಯರು, ಮುಂಬಯಿನಲ್ಲಿ ಅಖಿಲಭಾರತೀಯ ಕನ್ನಡ ಪತ್ರಕರ್ತರ ಸಮಾವೇಶವನ್ನು ಅತ್ಯಂತ ಪ್ರಭಾವಶಾಲಿಯಾಗಿ ಸಂಘಟಿಸಿದ್ದರು.
ಸಮಾಜಸೇವೆಯಲ್ಲಿ ಆಸಕ್ತರು
[ಬದಲಾಯಿಸಿ]- ಹೊರನಾಡಿನಲ್ಲಿ ಪತ್ರಕರ್ತರ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ ಹಲವಾರು ಶಿಬಿರಗಳನ್ನು ಆಯೊಜಿಸಿದ್ದರು.
- ಖಾಸಗಿ ಬಸ್ ಗಳಲ್ಲಿ ದರ ತಮ್ಮ ಮನಬಂದಂತೆಮಾಡಿದ ಏರಿಕೆಯನ್ನು ವಿರೋಧಿಸಿದರು.
- ಕೊಂಕಣಿ ರೈಲ್ವೆ ಪ್ರಯಾಣಿಕರ ಬವಣೆಯನ್ನು ಉತ್ತಮಗೊಳಿಸಲು ಹೊರಾಡಿದರು.
- ವೇಶ್ಯಾವಾಟಿಕೆಗೆ ತಳ್ಳಲು ಕರೆತರುತ್ತಿದ್ದ ಮಹಿಳೆಯ ರಕ್ಷಣೆಗಾಗಿ ಹೋರಾಡಿದರು.
- ರೋಗಿಗಳಿಗೆ ಆಸ್ಪತ್ರೆಯ ಸೇರ್ಪಡೆಯ ಬಗ್ಗೆ ಶ್ರಮಿಸಿದರು.
- ಅಂತ್ಯ ಸಂಸ್ಕಾರಗಳಿಗೆ ಬೇಕಾದ ಸಹಾಕಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
- ಹೀಗೆ ಹತ್ತು ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.
ರೋನಿಡಾ ಮೀಡಿಯ ಪ್ರೈವೇಟ್ ಲಿಮಿಟೆಡ್ ಸ್ಥಾಪನೆ
[ಬದಲಾಯಿಸಿ]ಹೀಗೆ ಪತ್ರಕರ್ತರಾಗಿ ಗಳಿಸಿದ ಅನುಭವ, ಹಾಗೂ ಯಶಸ್ಸಿನಿಂದ ಪ್ರೇರಿತರಾಗಿ ರೋನ್ಸ್ ಬಂಟ್ವಾಳ್, ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿದರು. ರೋನ್ಸ್ ರ ಪತ್ನಿ, ತಾರಾ ಅವರಿಗೆ ನೆರವಾಗುತ್ತಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]- ಕನ್ನಡ ಪತ್ರಕರ್ತರ ಸಂಘ,ಮಹಾರಾಷ್ಟ್ರ, ಸ್ಥಾಪಕ, ಮತ್ತು ಗೌರವ ಪ್ರಧಾನ ಸೆಕ್ರೆಟರಿ, ಮತ್ತು, 'ಡೈಜಿ ವರ್ಲ್ಡ್ ಮುಂಬಯಿ ಬ್ಯೂರೊ ಚೀಫ್, ರೋನ್ಸ್ ಬಂಟ್ವಾಳ್' ರಿಗೆ ‘ಪತ್ರಕಾರ್ ರತ್ನ ಪ್ರಶಸ್ತಿ’ ಪ್ರದಾನಮಾಡಲಾಯಿತು.
- ‘ಸಾವಧಾನ್’ ಎಂಬ ಸಮಾಜಿಕ ಸಹಾಯಕ ಸೇವಾ ಸಂಘದ ಜೊತೆ ಜಂಟಿಯಾಗಿ, ರೋನ್ಸ್ ರಿಗೆ 'ನವ ಚಿಂತನ್', ಇಂಟರ್ ನ್ಯಾಷನಲ್ ಪರ್ಸನ್ ಆಫ್ ದ ಲ್ಯುಮಿನರಿ ಪ್ರಶಸ್ತಿಯನ್ನು ಜುಲೈ ನಲ್ಲಿ ಬ್ಯಾಂಕಾಕ್ ನಲ್ಲಿ ಆಯೊಜಿಸಲಾದ '೭ನೆಯ ಅಂತಾರಾಷ್ಟ್ರೀಯ ಕಲ್ಚರಲ್ ಕನ್ವೆನ್ಷನ್' ನಲ್ಲಿ ಪ್ರದಾನ ಮಾಡಲಾಯಿತು.[೧]
- ರೊನಿಡ ಪ್ರೆಸ್ ಮೀಡಿಯ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್. ಕನ್ನಡ ಪತ್ರಿಕೋದ್ಯಮದಾಲ್ಲಿ ಎಲ್ಕ್ಟ್ರಾನಿಕ್ ಮಾಧ್ಯಮ ಮತ್ತು ಸ್ಪಾಟ್ ರಿಪೋರ್ಟಿಂಗ್ ಮೊದಲ ವ್ಯಕ್ತಿ.
- ಸ್ವರ್ಣ ಪದಕ ಪ್ರಶಸ್ತಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಬೆಂಗಳೂರು, ಜಂಟಿಯಾಗಿ, ಪ್ರದಾನ ಮಾಡಲಾಯಿತು.
- ೨೦೧೧ ರಲ್ಲಿ, 'ಪರಿವರ್ತನ್ ಪ್ರತಿಷ್ಠಾನ್ ಪುರಸ್ಕಾರ್' ಮುಂಬಯಿನ 'ಪರಿವರ್ತನ್ ಪ್ರತಿಷ್ಟಾನ್' ಮತ್ತು 'ಸಾಧಕ ಜರ್ನಲಿಸ್ಟ್', ಕರ್ನಾಟಕ ಬ್ಯಾರಿ ಸಾಹಿತ್ಯ ಅಕ್ಯಾಡೆಮಿಯ ವತಿಯಿಂದ ,
- ೨೦೦೭ ರಲ್ಲಿ 'ಸ್ವಾಸ್ತಿಕ್ ಸಂಭ್ರಮ ರಾಷ್ಟ್ರ ಪ್ರಶಸ್ತಿ.'
- ೨೦೦೭ ರಲ್ಲಿ 'ಡಿವೊ ಸಾಹಿತ್ಯ ಪುರಸ್ಕಾರ್ ಪ್ರಶಸ್ತಿ'.[೨]
- ಮುಂಬಯಿಯ ಬಿ.ಎಸ್.ಕೆ.ಬಿ (B.S.K.B.) ಅಸೋಸಿಯೇಷನ್ ಪುರಸ್ಕಾರ,
- ರಾಷ್ಟ್ರೀಯ ಬಿಲ್ಲವರ ಮಾಹ ಮಂಡಲ, ಭಾರತ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್, ಶಫಿ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ, ಸಾಫಲ್ಯ ಸೇವಾ ಸಂಘ ಮುಂಬಯಿ, ಮತ್ತಿತರ ಸಂಘ ಸಂಸ್ಥೆಗಳ ಗೌರವ ಪುರಸ್ಕಾರಗಳು.
- ಕರ್ನಾಟಕ ಮಾಧ್ಯಮ ಅಕ್ಯಾಡೆಮಿ ಪ್ರಶಸ್ತಿ ವಿಜೇತರು. [೩]
- ಟೊರಾಂಟೋ ನಗರದ ಪತ್ರಿಕಾಗೋಷ್ಠಿಗೆ ರೋನ್ಸ್ ಆಯ್ಕೆ [೪]
ಉಲ್ಲೇಖಗಳು
[ಬದಲಾಯಿಸಿ]- ↑ Kemmannu.com, 04-08-2012, seventh International Cultural Festival held at Howard Square Programme auditorium in Bangkok, Thailand on Saturday August 4
- ↑ Canara news, 08 Apr 2015,‘Karnataka State Media’ Award to Rons Bantwal, A Young Journalist who has been Providing Excellent Services in the field of Journalism
- ↑ udayavani, april, 11,2015, ರೋನ್ಸ್ ಬಂಟ್ವಾಳ್‌ಗೆ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ
- ↑ "ಉದಯವಾಣಿ,ಜೂನ್, ೨೬,೨೦೧೫,ಕೆನಡಾ ಸಮ್ಮೇಳನದ ಪತ್ರಿಕಾಗೋಷ್ಠಿ:ಪತ್ರಕರ್ತ ರೋನ್ಸ್‌ಬಂಟ್ವಾಳ್ ಆಯ್ಕೆ". Archived from the original on 2016-03-04. Retrieved 2015-06-27.