ವಿಷಯಕ್ಕೆ ಹೋಗು

ರೇನ್‍ಬೋ ಟ್ರೌಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೇನ್‍ಬೋ ಟ್ರೌಟ್ (ಆನ್ಕೊರಿಂಕಸ್ ಮೈಕಿಸ್) ಏಷ್ಯಾ ಮತ್ತು ಉತ್ತರ ಅಮೆರಿಕಾದಲ್ಲಿನ ಪೆಸಿಫಿಕ್ ಮಹಾಸಾಗರದ ತಣ್ಣೀರಿನ ಉಪನದಿಗಳಿಗೆ ಸ್ಥಳೀಯವಾದ ಸ್ಯಾಲ್ಮನಿಡ್‍ನ ಪ್ರಜಾತಿ. ಸ್ಟೀಲ್‍ಹೆಡ್ (ಕೆಲವೊಮ್ಮೆ "ಸ್ಟೀಲ್‍ಹೆಡ್ ಟ್ರೌಟ್" ಎಂದು ಕರೆಯಲ್ಪಡುತ್ತದೆ) ಸಾಮಾನ್ಯವಾಗಿ ಮೊಟ್ಟೆಯಿಡಲು ಸಾಗರದಲ್ಲಿ ಎರಡು ಮೂರು ವರ್ಷಗಳು ವಾಸಿಸಿದ ನಂತರ ಸಿಹಿನೀರಿಗೆ ಮರಳುವ ಕರಾವಳಿ ರೇನ್‍ಬೋ ಟ್ರೌಟ್ (ಒ ಮೀ. ಇರಿಡಿಯಸ್) ಅಥವಾ ಕೊಲಂಬಿಯಾ ನದಿ ರೆಡ್‍ಬ್ಯಾಂಡ್ ಟ್ರೌಟ್ (ಒ ಮೀ. ಗೇರ್ಡ್‌ನೆರಿ) ರೂಪವಾಗಿದೆ. ಮಹಾ ಸರೋವರಗಳಿಗೆ ಪರಿಚಯಿಸಲ್ಪಟ್ಟ ಮತ್ತು ಮೊಟ್ಟೆಯಿಡಲು ಉಪನದಿಗಳೊಳಗೆ ವಲಸೆ ಬರುವ ಸಿಹಿನೀರಿನ ರೂಪಗಳನ್ನು ಸ್ಟೀಲ್‍ಹೆಡ್ ಎಂದೂ ಕರೆಯಲಾಗುತ್ತದೆ.

ಸರೋವರದಲ್ಲಿ ವಾಸಿಸುವ ಮತ್ತು ಮೊಟ್ಟೆಯಿಡಲು ಕಡಲಿನಿಂದ ನದಿಗೆ ಬರುವ ರೂಪಗಳು 20 ಪೌಂಡು (9.1 ಕೆಜಿ) ಮುಟ್ಟಬಹುದು. ವಯಸ್ಕ ಸಿಹಿನೀರಿನ ಹೊಳೆ ರೇನ್‍ಬೋ ಟ್ರೌಟ್ 1 ಮತ್ತು 5 ಪೌಂಡು (0.5 ಮತ್ತು 2.3 ಕೆಜಿ) ನಡುವೆ ಸರಾಸರಿ ತೂಕವನ್ನು ಹೊಂದಿರುತ್ತವೆ. ಉಪಜಾತಿಗಳು, ರೂಪಗಳು ಮತ್ತು ಆವಾಸಸ್ಥಾನವನ್ನು ಆಧರಿಸಿ ವರ್ಣವಿನ್ಯಾಸವು ವ್ಯಾಪಕವಾಗಿ ಬದಲಾಗುತ್ತದೆ. ವಯಸ್ಕ ಮೀನುಗಳು ಕಿವಿರುಗಳಿಂದ ಬಾಲಗಳವರೆಗೆ, ಪಾರ್ಶ್ವ ರೇಖೆಯ ಉದ್ದಕ್ಕೆ ವಿಶಾಲ ಕೆಂಪು ಪಟ್ಟಿಯನ್ನು ಹೊಂದಿ ವಿಶಿಷ್ಟವಾಗಿರುತ್ತವೆ. ಇದು ಪ್ರಸವಿಸುವ ಗಂಡುಗಳಲ್ಲಿ ಅತ್ಯಂತ ಎದ್ದುಕಾಣುತ್ತದೆ.

ಕಾಡಿನಲ್ಲಿ ಹಿಡಿದ ಮತ್ತು ಮೊಟ್ಟೆಕೇಂದ್ರದಲ್ಲಿ ಬೆಳೆಸಿದ ಈ ಜಾತಿಯ ರೂಪಗಳನ್ನು ಆಹಾರ ಅಥವಾ ಕ್ರೀಡೆಗಾಗಿ ಕನಿಷ್ಠ 45 ದೇಶಗಳಲ್ಲಿ ಮತ್ತು ಅಂಟಾರ್ಕ್ಟಿಕಾ ಹೊರತುಪಡಿಸಿ ಪ್ರತಿ ಖಂಡದಲ್ಲಿ ಸ್ಥಳಾಂತರಿಸಿ ಪರಿಚಯಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ (ಅಮೇರಿಕಾ), ದಕ್ಷಿಣ ಯುರೋಪ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕಾದ ಸ್ಥಳೀಯ ವ್ಯಾಪ್ತಿಯ ಹೊರಗಿನ ಸ್ಥಳಗಳಲ್ಲಿ ಪರಿಚಯಿಸಲ್ಪಟ್ಟಿರುವುದರಿಂದ ಸ್ಥಳೀಯ ಮೀನಿನ ಪ್ರಜಾತಿಗಳಿಗೆ ಹಾನಿಯಾಗಿದೆ. ಪರಿಚಯಿಸಲ್ಪಟ್ಟ ಮೀನುಗಳು ಬೇಟೆಯಾಡುವ, ಅವುಗಳನ್ನು ಸ್ಪರ್ಧೆಯಲ್ಲಿ ಮೀರಿಸುವ, (ಗಿರಕಿ ರೋಗದಂತಹ) ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ, ಅಥವಾ ನಿಕಟವಾಗಿ ಸಂಬಂಧಿಸಿದ ಜಾತಿಗಳು ಮತ್ತು ಉಪಜಾತಿಗಳ ಜೊತೆ ಸಂಕರೀಕರಿಸುವ ಮೂಲಕ ಸ್ಥಳೀಯ ಜಾತಿಗಳ ಮೇಲೆ ಪರಿಣಾಮ ಬೀರಬಲ್ಲವು. ಹೀಗೆ ಆನುವಂಶಿಕ ಶುದ್ಧತೆಯನ್ನು ಕಡಿಮೆ ಮಾಡುತ್ತವೆ. ಮಹಾ ಸರೋವರಗಳು ಮತ್ತು ವ್ಯೋಮಿಂಗ್‍ನ ಫ಼ಾಯರ್‌ಹೋಲ್ ನದಿಯಂತಹ ಹಿಂದೆ ಯಾವುದೇ ಮೀನಿನ ಜಾತಿಗಳಿರದ ಅಥವಾ ತೀವ್ರವಾಗಿ ಬರಿದಾದ ಸ್ಥಳೀಯ ಮೀನುಗಳ ಸಂತತಿಯಿರುವ ನೀರಿಗೆ ಪರಿಚಯಿಸಲ್ಪಟ್ಟ ಇತರ ಪ್ರಜಾತಿಗಳು ಕ್ರೀಡಾ ಮೀನುಗಾರಿಕೆಯನ್ನು ಸೃಷ್ಟಿಸಿವೆ.

ಕೆಲವು ನಿರ್ದಿಷ್ಟ ಉಪಜಾತಿಗಳ ಸ್ಥಳೀಯ ಮೀನುಗಳು, ಅಥವಾ ಸ್ಟೀಲ್‍ಹೆಡ್‍‍ನ ಸಂಬಂಧವಾಗಿ, ವಿಶಿಷ್ಟ ಜೀವಸಮೂಹ ವಿಭಾಗಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಾಯಿದೆಯಡಿ ಬೆದರಿಕೆ ಅಥವಾ ಅಪಾಯಕ್ಕೀಡಾಗಿರುವವೆಂದು ಪಟ್ಟಿಮಾಡಲಾಗಿದೆ. ಸ್ಟೀಲ್‍ಹೆಡ್ ವಾಷಿಂಗ್ಟನ್ ರಾಜ್ಯದ ಅಧಿಕೃತ ರಾಜ್ಯಮೀನಾಗಿದೆ.

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Combs, Trey (1976). Steelhead Fly Fishing and Flies. Portland, Oregon: Frank Amato. ISBN 978-0-936608-03-7.
  • Combs, Trey (1991). Steelhead Fly Fishing. New York: Lyons and Burford Publishers. ISBN 978-1-55821-119-3.
  • Gerlach, Rex (1988). Fly Fishing for Rainbows-Strategies and tactics for North America's Favorite Trout. Mechanicsburg, Pennsylvania: Stackpole Books. ISBN 978-0-8117-0624-7.
  • Halverson, Anders (2010). An Entirely Synthetic Fish: How Rainbow Trout Beguiled America and Overran the World. New Haven, Connecticut: Yale University Press. ISBN 978-0-300-14088-0. OCLC 440281085. Review, Interviews
  • Marshall, Mel (1973). Steelhead. New York: Winchester Press. ISBN 978-0-87691-093-1.
  • McClane, A. J.; Gardner, Keith (1984). "Rainbow Trout and Steelhead". McClane's Game Fish of North America. New York: Times Books. pp. 54–93. ISBN 978-0-8129-1134-3.
  • McDermand, Charles (1946). Waters of the Golden Trout Country. New York: G.P. Putnam's Sons.
  • Montaigne, Fen (1998). "Kamchatka". Reeling in Russia. New York: St. Martins Press. pp. 251–270. ISBN 978-0-312-18595-4.
  • Scott and Crossman (1985) Freshwater Fishes of Canada. Bulletin 184. Fisheries Research Board of Canada. Page 189. ISBN 0-660-10239-0
  • Walden, Howard T. 2nd (1964). "Rainbow, Cutthroat, and Golden Trout". Familiar Freshwater Fishes of America. New York: Harper & Row, Publishers. pp. 14–33.{{cite book}}: CS1 maint: numeric names: authors list (link)

ಹೊರಗಿನ ಕೊಂಡಿಗಳು

[ಬದಲಾಯಿಸಿ]