ರೇನೂ ಸುಖೇಜಾ

ವಿಕಿಪೀಡಿಯ ಇಂದ
Jump to navigation Jump to search

ರೇನೂ ಸುಖೇಜಾರವರು ಭಾರತೀಯ ಔದ್ಯೋಗಿಕ ಮಹಿಳೆ. ಇವರು ರೂಪದರ್ಶಿಮಾತ್ರವಲ್ಲದೆ ಫ್ಯಾಶನ್ ಉದ್ಯಮದಲ್ಲಿ ಪ್ರಚಲಿತವಾಗಿದ್ದಾರೆ. ಐ ಆಂಮ್ ಶಿ - ಮಿಸ್ ಯುನಿವರ್ಸ್ ಇಂಡಿಯಾದ ಮೂಲಕ ಮಹಿಳಾ ಮತ್ತು ಪುರುಷರ ಸೌಂದರ್ಯ ಕಾರ್ಯಗಾರಗಳನ್ನು ನೆಡೆಸಿದ್ದಾರೆ.

ರೇನೂ ಸುಖೇಜಾ

ವೈಯಕ್ತಿಕಜೀವನ[ಬದಲಾಯಿಸಿ]

ಇವರು ಡಿಸೆಂಬರ್ ೨೫, ೧೯೫೯ರಂದು ಪಶ್ಚಿಮ ಬಂಗಾಲದ ಕೋಲ್ಕತದಲ್ಲಿ ಜನಿಸಿದರು. ಇವರು ತಮ್ಮ ವಿದ್ಯಾಭ್ಯಾಸವನ್ನು ಕೋಲ್ಕತದಲ್ಲಿ ಮುಗಿಸಿದರು. ನಂತರ ಸುಖೇಜಾ ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿ ಹೈದರಾಬಾದಿನಲ್ಲಿ ನೆಲೆಸಿದರು. ಇವರಿಗೆ ರೋಹಿತ್ ಸುಖೇಜಾ ಮತ್ತು ರೇಖಾ ಸುಖೇಜಾ ಎಂಬ ಇಬ್ಬರು ಮಕ್ಕಳಿದ್ದಾರೆ.

ವೃತ್ತಿಜೀವನ[ಬದಲಾಯಿಸಿ]

ಇವರು ಪ್ರಿಯಾಂಕ ಶಾ ಅವರ ಜೊತೆ ಸೇರಿ ಇನ್ಡೊರ್ ಫ್ಯಾಶನ್ ವೀಕನ್ನು ನಿರ್ದೇಶನ ಮಾಡಿರುತ್ತಾರೆ.ಪ್ರಸ್ತುತ ಫ್ಯಾಶನ್ ಆಂಡ್ ಮೀಡಿಯಾ ಕನ್ಸಲ್ಟಿಂಗ್ ಆಂತಮ್ ಲಿಮಿಟೆಡ್ [೧]ನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯಾಗಿದ್ದಾರೆ. ಇವರು ಹಲವಾರು ರಾ‌‍ಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೌಂದರ್ಯ ಕಾರ್ಯಗಾರಗಳನ್ನು, ಪ್ರದರ್ಶನಗಳನ್ನು ನೀಡಿರುತ್ತಾರೆ. ಜೊತೆಗೆ ಆ ಕಾರ್ಯಕ್ರಮಗಳಿಗೆ ತರಬೇತಿದಾರರನ್ನು ಹೈದರಾಬಾದಿನಲ್ಲಿ ಆಯ್ಕೆಮಾಡಿರುತ್ತಾರೆ.

ಸಾಧನೆ[ಬದಲಾಯಿಸಿ]

ಹಿಲಿಯೊನ್ ಫಿಟ್ನೆಸ್ ಸೆಂಟರೆ ಎಂಬಲ್ಲಿ ೧೫ಗಂಟೆಗಳಕಾಲ ನಿರಂತರವಾಗಿ ನಿರ್ದೇಶನವನ್ನು ಮಾಡಿದ್ದು, ಅದು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ[೨] ಬರೆಯಲ್ಪಟ್ಟಿದೆ. ೨೦೧೦ರಲ್ಲಿ ಇಪ್ಲಿಟಿಕಲ್ ಮ್ಯಾರಥಾನ್ ವಿಶ್ವದಾಖಲೆಯನ್ನು ಮಾಡಿರುತ್ತಾರೆ. ಐ ಆಂಮ್ ಶಿ ೨೦೧೦ರ ಜಯಶಾಲಿಯಾಗಿದ್ದಾರೆ.ಇವರು ಹೈದರಾಬಾದಿನ ಮೊದಲ ರೂಪದರ್ಶಿಯಾಗಿ, ಹೈದರಾಬಾದನಲ್ಲಿ ಲಾಕ್ಮಿ ಫ್ಯಾಶನ್ ವೀಕನ್ನು ಆಂಭಿಸಿದರು.


ಉಲ್ಲೇಖಗಳು[ಬದಲಾಯಿಸಿ]

  1. https://in.linkedin.com/in/renusukheja
  2. https://www.limcabookofrecords.in/