ವಿಷಯಕ್ಕೆ ಹೋಗು

ರೇಣು ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೇಣು ದೇವಿ
ರೇಣು ದೇವಿ

ಅಧಿಕಾರದ ಅವಧಿ
೧೬ ನವೆಂಬರ್ ೨೦೨೦ – ೦೯ ಆಗಷ್ಟ ೨೦೨೨
ಪೂರ್ವಾಧಿಕಾರಿ ಸುಶೀಲ್ ಕುಮಾರ್ ಮೊದಿ
ಉತ್ತರಾಧಿಕಾರಿ ತೇಜಸಶ್ವಿ ಯಾದವ್

ಜನನ ೦೧/೧೧/೧೯೫೯
ಬೆಟಿಯಾ ಬಿಹಾರ್
ರಾಜಕೀಯ ಪಕ್ಷ ಭಾರತೀಯಾ ಜನತ ಪಕ್ಷದ
ಜೀವನಸಂಗಾತಿ ದುರ್ಗಾ ಪ್ರಸಾದ್

ರೇಣು ದೇವಿ (ಜನನ ೧ ನವೆಂಬರ್ ೧೯೫೮) ಒಬ್ಬ ಮಹಿಳಾ ಭಾರತೀಯ ರಾಜಕಾರಣಿಯಾಗಿದ್ದು, ಅವರು ೧೬ ನವೆಂಬರ್ ೨೦೨೦ ರಿಂದ ೯ ಆಗಸ್ಟ್ ೨೦೨೨ ರವರೆಗೆ ಬಿಹಾರದ ೭ ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅವರು ೨೦೨೦ ರಲ್ಲಿ ಬಿಹಾರದಿಂದ ಭಾರತದ ಐದನೇ ಮಹಿಳಾ ಉಪಮುಖ್ಯಮಂತ್ರಿಯಾದರು. []ಅವರು ಭಾರತೀಯ ಜನತಾ ಪಕ್ಷದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷೆ, ಅವರು ಪ್ರಸ್ತುತ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದಾರೆ. ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪಕ್ಷದ ಉಪ ಶಾಸಕಾಂಗ ನಾಯಕಿಯಾಗಿದ್ದಾರೆ. [] [] [] [] [] []

ವೈಯಕ್ತಿಕ ಜೀವನ

[ಬದಲಾಯಿಸಿ]

ರೇಣು ತಮ್ಮ ಹೆತ್ತವರ ಮೂವರು ಗಂಡು ಮತ್ತು ಐದು ಹೆಣ್ಣು ಮಕ್ಕಳಲ್ಲಿ ಹಿರಿಯರು. ಅತ್ಯಂತ ಹಿಂದುಳಿದ ವರ್ಗ (ಇ‌ಬಿ‌ಸಿ) ಸಮುದಾಯವಾದ ನೋನಿಯಾ ಜಾತಿಯಿಂದ ಬಂದವರು. [] ಅವರು ೧೯೭೭ ರಲ್ಲಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದಿಂದ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.[ಸಾಕ್ಷ್ಯಾಧಾರ ಬೇಕಾಗಿದೆ][ ಉಲ್ಲೇಖದ ಅಗತ್ಯವಿದೆ ]

ಅವರು ೧೯೭೩ ರಲ್ಲಿ ದುರ್ಗಾ ಪ್ರಸಾದ್ ಎಂಬ ಕೋಲ್ಕತ್ತಾ ಮೂಲದ ವಿಮಾ ಇನ್ಸ್‌ಪೆಕ್ಟರ್‌ರನ್ನು ವಿವಾಹವಾದರು. [] ಆದಾಗ್ಯೂ, ಮದುವೆಯಾದ ಏಳು ವರ್ಷಗಳೊಳಗೆ ಅವರ ಗಂಡನ ಹಠಾತ್ ಮರಣವು ತಮ್ಮ ತಾಯಿಯ ತವರು ಬೆಟ್ಟಯ್ಯಗೆ ಹಿಂದಿರುಗುವಂತೆ ಮಾಡಿತು ಮತ್ತು ಅದನ್ನು ತಮ್ಮ ಕರ್ಮಭೂಮಿಯಾಗಿ ಅವರು ಭಾವಿಸಿದರು. [೧೦] ಅವರು ತಮ್ಮ ಇಬ್ಬರು ಮಕ್ಕಳನ್ನು ಒಬ್ಬರೇ ಸಲಹುತ್ತಿದ್ದಾರೆ.

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

ರೇಣು ದೇವಿ ಅವರ ತಾಯಿ ಸಂಘ ಪರಿವಾರದೊಂದಿಗೆ ಸಂಬಂಧ ಹೊಂದಿದ್ದರು, ಅದು ಅವರ ಮೇಲೆ ಬಲವಾಗಿ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತದೆ. [೧೧] ರೇಣು ದೇವಿ ಅವರು ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ವಿಭಾಗವಾದ ದುರ್ಗಾ ವಾಹಿನಿಯ ಭಾಗವಾಗಿದ್ದರು. [೧೨]

೧೯೮೧ ರಲ್ಲಿ ಸಾಮಾಜಿಕ ಚಟುವಟಿಕೆಯ ಮೂಲಕ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ೧೯೮೮ ರಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಥವಾ ಬಿಜೆಪಿ ಮಹಿಳಾ ವಿಭಾಗಕ್ಕೆ ಸೇರಿದರು. ಮುಂದಿನ ವರ್ಷ ಆವರಿಗೆ ಚಂಪಾರಣ್ ಪ್ರಾಂತ್ಯದಲ್ಲಿ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ನೀಡಲಾಯಿತು. ಅವರು ೧೯೯೩ ಮತ್ತು ೧೯೯೬ ರಲ್ಲಿ ಎರಡು ಅವಧಿಗೆ ವಿಭಾಗದ ರಾಜ್ಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು [೧೩]

ಅವರು ೧೯೯೫ ರಲ್ಲಿ ನೌತನ್ ಅಸೆಂಬ್ಲಿ ಸ್ಥಾನದಿಂದ ತಮ್ಮ ಮೊದಲ ಚುನಾವಣೆಯಲ್ಲಿ ವಿಫಲರಾಗಿದ್ದರೂ, ಅವರು ನಾಲ್ಕು ಬಾರಿ ಪಶ್ಚಿಮ ಚಂಪಾರಣ್ ಜಿಲ್ಲೆಯ ಮತ್ತೊಂದು ವಿಭಾಗವಾದ ಬೆಟ್ಟಿಯಾ (೨೦೦೦-೨೦೧೫; ೨೦೨೦-ಇಂದಿನವರೆಗೆ) ಬಿಹಾರ ವಿಧಾನಸಭೆಗೆ ಚುನಾಯಿತರಾದರು. ಅವರು ೨೦೧೫ ರ ಚುನಾವಣೆಯಲ್ಲಿ ಮಹಾಘಟಬಂಧನ್ ಅಭ್ಯರ್ಥಿಯ ವಿರುದ್ಧ ಸೋತರು. ನಂತರ ಅದರಲ್ಲಿ ಅವರು ೨೦೨೦ ರಲ್ಲಿ ಮತ್ತೆ ಸ್ಥಾನವನ್ನು ಪಡೆದರು.

ಅವರು ೨೦೦೫ ಮತ್ತು ೨೦೦೯ ರ ನಡುವೆ ಬಿಹಾರ ರಾಜ್ಯ ಸರ್ಕಾರದಲ್ಲಿ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೨೦೧೪ ಮತ್ತು ೨೦೨೦ ರ ನಡುವೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು ಮತ್ತು ಅಮಿತ್ ಶಾ ಅವರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡರು. [೧೨] ಬಿಹಾರದ ಉಪಮುಖ್ಯಮಂತ್ರಿಯಾಗಿ ೨೦೨೦ ರಲ್ಲಿ ಅವರ ನೇಮಕಾತಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದೆ. [೧೪] [೧೫] [೧೬] [೧೭]

ಉಲ್ಲೇಖಗಳು

[ಬದಲಾಯಿಸಿ]
  1. "Nitish Kumar takes oath as Bihar CM for fourth consecutive term; Renu Devi first woman deputy CM". The Indian Express.
  2. "Thakur, Chaurasia dropped from Shah's team". The Times of India. 14 August 2014. Archived from the original on 4 September 2014. Retrieved 21 October 2014.
  3. "BJP chief Amit Shah announces new team, Varun Gandhi dropped as general secretary". Hindustan Times. 16 August 2014. Archived from the original on 21 October 2014. Retrieved 21 October 2014.
  4. "Bhartiya Janata Party National Office Bearers". Bhartiya Janata Party. Archived from the original on 22 October 2014. Retrieved 21 October 2014.
  5. "New Team BJP: BSY is VP, Ram Madhav G. Sec, Varun Dropped". Outlook. 16 August 2014. Archived from the original on 23 August 2014. Retrieved 21 October 2014.
  6. "Sitting and previous MLAs from Bettiah Assembly Constituency". www.elections.in. Archived from the original on 7 November 2014. Retrieved 21 October 2014.
  7. "Nitish Kumar allocates Bihar portfolios: Here's the full list of cabinet ministers | freepressjournal". m.freepressjournal.in. Archived from the original on 13 September 2021. Retrieved 2020-11-18.
  8. "Nitish Kumar oath taking: Who are Tarkishore Prasad and Renu Devi, two deputy CM probables?". The Indian Express.
  9. "1st woman dy CM, RSS veteran to be the second-in-command in Bihar". Hindustan Times.
  10. "Renu Devi From Extremely Backward Caste Becomes First Woman Deputy CM Of Bihar". Jansatta.
  11. "बिहार की नई उप-मुख्यमंत्री होंगी रेणु देवी, जानिए उनके बारे में". LiveHindustan.
  12. ೧೨.೦ ೧೨.೧ "From Durga Vahini to Deputy Chief Minister of Bihar: The Journey of Renu Devi". News18 (in ಇಂಗ್ಲಿಷ್). 2020-11-16. Retrieved 2020-11-18.
  13. "Mahila Morcha to Bihar Deputy CM: Renu Devi's 32 Years with BJP". The Quint.
  14. "Renu Devi From Extremely Backward Caste Becomes First Woman Deputy CM Of Bihar". She The People. Archived from the original on 2021-09-13. Retrieved 2023-10-05.
  15. "Renu Devi, Bihar's first woman Deputy CM is RSS women's wing leader; BJP's counterweight to Nitish's clout". Times Now (in ಇಂಗ್ಲಿಷ್). Retrieved 2020-11-18.
  16. "Who is Renu Devi: BJP's surprise pick as Bihar's deputy Chief Minister". India Tv (in ಇಂಗ್ಲಿಷ್). 16 November 2020. Retrieved 2020-11-16.
  17. "Meet Renu Devi, First Woman To Be Deputy CM Of Bihar". Femina (in ಹಿಂದಿ). Retrieved 2020-11-17.