ರಿಸ್ಯಾಟ್-1
ಮಿಷನ್ ಪ್ರಕಾರ | ರಾಡಾರ್ ಇಮೇಜಿಂಗ್ ತಂತ್ರಜ್ಞಾನ |
---|---|
ಆಪರೇಟರ್ | ISRO |
ಸಿಓಎಸ್ಪಿಏಆರ್ ಐಡಿ | 2012-017A |
ಎಸ್ಎಟಿಸಿಎಟಿ ಐಡಿ ಸಂಖ್ಯೆ | 38248 |
ಜಾಲತಾಣ | www |
ಮಿಷನ್ ಅವಧಿ | 5 years (planned) |
ಬಾಹ್ಯಾಕಾಶ ನೌಕೆಯ ಗುಣಲಕ್ಷಣಗಳು | |
ಉಡಾವಣಾ ಸಮೂಹ | 1,858 kilograms (4,096 lb)[೧] |
ಶಕ್ತಿ | 2200 W |
ಕಾರ್ಯಾಚರಣೆಯ ಪ್ರಾರಂಭ | |
ಬಿಡುಗಡೆ ದಿನಾಂಕ | Did not recognize date. Try slightly modifying the date in the first parameter. UTC |
ರಾಕೆಟ್ | PSLV-XL C19 |
ಲಾಂಚ್ ಸೈಟ್ | Satish Dhawan FLP |
End of mission | |
Deactivated | Between 28 March and 26 July 2017 |
Orbital parameters | |
Reference system | Geocentric |
Regime | Sun-synchronous 0600 ECT |
Apogee | 536.38 km |
Inclination | 97.554 degrees |
Period | 95.49 minutes |
Mean motion | 14 |
'ಪಿಎಸ್ಎಲ್‌ವಿ ಸಿ19' ರಾಕೆಟ್ ಮೂಲಕ ರಿಸ್ಯಾಟ್-1 ಕೃತಕ ಉಪಗ್ರಹವನ್ನು ಎಪ್ರಿಲ್ ೨೬,೨೦೧೨ ಬೆಳಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಮಂಜು ಮುಸುಕಿದ ವಾತಾವರಣದಲ್ಲೂ ಭೂಮಿಯ ಸ್ಪಷ್ಟ ಚಿತ್ರಣವನ್ನು ನೀಡುವ ಭಾರತದ ಮೊದಲ ದೂರಸಂವೇದಿ ರಾಡಾರ್ ಬಿಂಬಗ್ರಾಹಿ ಸಾಮರ್ಥ್ಯದ 'ರಿಸ್ಯಾಟ್-1' ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಉಪಗ್ರಹ
[ಬದಲಾಯಿಸಿ]. 1858 ಕೆ.ಜಿ. ತೂಕದ ಈ 'ರಿಸ್ಯಾಟ್-1' ರಾಡಾರ್ ಇಮೇಜಿಂಗ್ ತಂತ್ರಜ್ಞಾನ ಹೊಂದಿರುವ ಸಂಪೂರ್ಣ ಸ್ವದೇಶಿ ನಿರ್ಮಿತ ಕೃತಕ ಉಪಗ್ರಹವಾಗಿದ್ದು, ಭಾರತದಂತಹ ದೇಶಕ್ಕೆ ಅತ್ಯಗತ್ಯವಾಗಿತ್ತು.ಸಿ-ಬ್ಯಾಂಡ್ ಸಿಂಥೆಟಿಕ್ ಅಪಾರ್ಚರ್ ರಾಡಾರ್ (ಎಸ್‌ಎಆರ್) ಇದು ಹೊಂದಿದೆ. ಉಪಗ್ರಹದ ವಿಶೇಷತೆಗಳು..
- ಉಪಗ್ರಹದ ತೂಕ 1858 ಕೆ.ಜಿ.
- ರಿಸ್ಯಾಟ್-1ರ ಕಾರ್ಯಾವಧಿ 5 ವರ್ಷ.
- ಯೋಜನೆಯ ಒಟ್ಟು ಮೊತ್ತ 500 ಕೋಟಿ ರೂ.
- ಸಿ-ಬ್ಯಾಂಡ್ ಸಿಂಥೆಟಿಕ್ ಅಪಾರ್ಚರ್ ರಾಡಾರ್ ವ್ಯವಸ್ಥೆ.
- ಭೂಮಿಯಿಂದ 480 ಕಿ.ಮೀ. ದೂರದ ಕಕ್ಷೆಯಲ್ಲಿ ಕಾರ್ಯ ನಿರ್ವಹಣೆ
- ಉಪಗ್ರಹವನ್ನು ಹೊತ್ತೊಯ್ಯುವ ಪಿಎಸ್‌ಎಲ್‌ವಿ ರಾಕೆಟ್‌ನ ತೂಕ 321ಟನ್.
- ಯೋಜನೆಯ ಒಟ್ಟು ಮೊತ್ತ 500 ಕೋಟಿ ರೂ. ( 120 ಕೋಟಿ - ರಾಕೆಟ್ ನಿರ್ಮಾಣಕ್ಕೆ, 380 ಕೋಟಿ - ಉಪಗ್ರಹ ಅಭಿವೃದ್ಧಿಗೆ).
ಉಪಗ್ರಹ ಉಪಯೋಗ
[ಬದಲಾಯಿಸಿ]ರಿಸ್ಯಾಟ್-1 ಕೃತಕ ಉಪಗ್ರಹದಿಂದಾಗುವ ಪ್ರಮುಖ ಲಾಭ, ಪ್ರಕೃತಿ ವಿಕೋಪವನ್ನು ಮೊದಲೇ ಅಂದಾಜಿಸುವುದು. ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಭೂಮಿಯ ಸ್ಪಷ್ಟ ಚಿತ್ರ ಪಡೆಯುವುದು ಕೂಡ ಇದರಿಂದ ಸಾಧ್ಯ. ಅದು ಎಲ್ಲಿಯವರೆಗೆ ಎಂದರೆ, ಮಂಜು ಅಥವಾ ಮೋಡ ಮುಸುಕಿದ ರಾತ್ರಿ ಹೊತ್ತಿನಲ್ಲೂ ಭೂಮಿಯಲ್ಲಿನ ಯಾವುದೇ ವಸ್ತುವಿನ ಸ್ಪಷ್ಟ ಚಿತ್ರ ಪಡೆಯಬಹುದು.ಗರಿಷ್ಠ ಗುಣಮಟ್ಟ ಮತ್ತು ಮೈಕ್ರೋವೇವ್ ಇಮೇಜಿಂಗ್‌ನಿಂದ ರಕ್ಷಣಾ ಪಡೆಗಳಿಗೂ ಸಹಾಯವಾಗಲಿದೆ. ಉಗ್ರಗಾಮಿಗಳು, ನುಸುಳುಕೋರರು ಅಥವಾ ಯುದ್ಧದಂತಹ ಸಂದರ್ಭಗಳಲ್ಲಿ ಈ ಚಿತ್ರಗಳು ಸೇನೆಗೆ ಹೆಚ್ಚು ಉಪಯೋಗಕ್ಕೆ ಬರಬಹುದು.ಇದು ತೆಗೆಯುವ ಚಿತ್ರಗಳು ಹಾಗೂ ಮೈಕ್ರೊವೇವ್ ಇಮೇಜಿಂಗ್‌ಅನ್ನು ರಕ್ಷಣಾ ಉದ್ದೇಶಗಳಿಗೂ ಉಪಯೋಗಿ ಸಬಹುದು. ಈ ಉಪಗ್ರಹ ರವಾನಿಸುವ ಮಾಹಿತಿಯನ್ನು ಪ್ರಕೃತಿ ವಿಕೋಪದ ಮುನ್ಸೂಚನೆ ಹಾಗೂ ಬೆಳೆಗಳ ಮೇಲ್ವಿಚಾರಣೆಗೆ ಬಳಸಬಹುದು.ಭೂಮಿಯ ಮೇಲಿನ 1 ಮೀಟರ್ ಚೌಕಾರದ ಅಳತೆಯಲ್ಲಿರುವ ವಸ್ತುಗಳನ್ನೂ ಸಹ ಅತ್ಯಂತ ನಿಖರವಾಗಿ ಹಾಗೂ ಸ್ಪಷ್ಟವಾಗಿ ಸೆರೆ ಹಿಡಿಯಬಲ್ಲದು.ಹಗಲು ಮತ್ತು ರಾತ್ರಿ ವೇಳೆ ಚಿತ್ರಗಳನ್ನು ಸ್ಪಷ್ಟವಾಗಿ ಸೆರೆಹಿಡಿಯಬಲ್ಲುದು. ಮೋಡ ಮುಸುಕಿದ ವಾತಾವರಣವು ಸೆರೆ ಹಿಡಿದ ಚಿತ್ರದ ಗುಣಮಟ್ಟಕ್ಕೆ ಧಕ್ಕೆ ತರುವುದಿಲ್ಲ.
ನೋಡಿ
[ಬದಲಾಯಿಸಿ]- ೧.ಜೀಯಸ್ಎಲ್ವಿ-ಡಿ ೬,
- ೨.ಕಾರ್ಟೊಸ್ಯಾಟ್-೧,
- ೩.ಜೀಸಾಟ್ -1
- ೪.ಜೀಸಾಟ್-12
ಉಲ್ಲೇಕ
[ಬದಲಾಯಿಸಿ]- ↑ Varma, M. Dinesh (26 April 2012). "RISAT-1 satellite launch a "grand success": ISRO". Chennai, India: ದಿ ಹಿಂದೂ.