ವಿಷಯಕ್ಕೆ ಹೋಗು

ಹುಳುಕಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಿಂಗ್‌ವರ್ಮ್ ಇಂದ ಪುನರ್ನಿರ್ದೇಶಿತ)
Dermatophytosis
Classification and external resources
Ringworm on a human arm.
ICD-10B35.0-B36
DiseasesDB17492
eMedicineemerg/೫೯೨
MeSHD೦೦೩೮೮೧

ಡರ್ಮಟೊಸೈಟೋಸಿಸ್ ಅಥವಾ ರಿಂಗ್‌ವರ್ಮ್ ಮಾನವರಿಗೆ, ಬೆಕ್ಕಿನಂತಹ ಸಾಕುಪ್ರಾಣಿಗಳಿಗೆ ಮತ್ತು ಮನೆಯಲ್ಲಿ ಸಾಕುವ ಪ್ರಾಣಿಗಳಾದ ಕುರಿ ಮತ್ತು ಆಕಳುಗಳಲ್ಲಿ ಚರ್ಮಕ್ಕೆ ತಗಲುವ ಶಿಲೀಂಧ್ರಗಳ ಸೋಂಕಿನ ರೋಗವಾಗಿದೆ. "ರಿಂಗ್‌ವರ್ಮ್" ತಪ್ಪು ಬಳಕೆಯ ಶಬ್ದವಾಗಿದೆ. ಹಲವಾರು ವಿವಿಧ ಬಗೆಯ ವರ್ಗದ ಶಿಲೀಂಧ್ರಗಳು ಇದಕ್ಕೆ ಕಾರಣವಾಗಿದೆ. ಆದರೆ ಪರಾವಲಂಬಿ ಜೀವಿಗಳು ಇದಕ್ಕೆ ಹೊರತಾಗಿದೆ. ಪರಾವಲಂಬಿಜೀವಿ ಸೋಂಕಿಗೆ (ಡರ್ಮಟೊಸೈಟೋಸಿಸ್) ಕಾರಣವಾಗುವ ಶಿಲೀಂಧ್ರಗಳು ಚರ್ಮ, ಕೂದಲು, ಮತ್ತು ಉಗುರಿನ ಹೊರ ಪದರದಲ್ಲಿರುವ ಕೆರಾಟಿನ್ ಅಂಶವನ್ನು ತಿನ್ನುತ್ತವೆ. ಈ ಶಿಲೀಂಧ್ರಗಳು ಚರ್ಮವು ಬೆಚ್ಚಗಿದ್ದಾಗ ಮತ್ತು ತೇವಗೊಂಡಿದ್ದಾಗಲೂ ಹೆಚ್ಚಾಗುತ್ತವೆ. ಕೂದಲಿನಲ್ಲಿ ಅಥವಾ ಅವುಗಳ ಒಳಭಾಗದಲ್ಲೂ ಬದುಕುತ್ತವೆ. ಶಿಲೀಂಧ್ರವು ಸಾಕುಪ್ರಾಣಿಗಳ, ಚರ್ಮದಲ್ಲಿ ಮತ್ತು ಕೂದಲಿನ ಹೊರಭಾಗದಲ್ಲಿ ರೋಗ ಅಸ್ತಿತ್ವದಲ್ಲಿರಲು ಕಾರಣವಾಗತ್ತವೆ.

ಪ್ರಸ್ತುತ ಶೇಕಡಾ ಇಪ್ಪತ್ತರಷ್ಟು ಜನರು ರಿಂಗ್‌ವರ್ಮ್‌ನಿಂದ ಅಥವಾ ಡರ್ಮಟೊಫೈಟೊಸಿಸ್‌ನ ಒಂದು ವಿಧದಿಂದ ಸೋಂಕಿತರಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಮುಖ್ಯವಾಗಿ ಆಟವಾಡುವವರು, ಕುಸ್ತಿ ಪಟುಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಕುಸ್ತಿಪಟುಗಳು ರಿಂಗ್‌ವರ್ಮ್ ಸೋಂಕಿತರಾಗಿದ್ದರೆ ಅವರು ಕುಸ್ತಿಯಾಡಲು ಅನರ್ಹರಾಗುತ್ತಾರೆ.[]

ರಿಂಗ್‌ವರ್ಮ್‌ನ ಕುರಿತು ತಪ್ಪು ರೋಗನಿರ್ಣಯ ಅಥವಾ ರಿಂಗ್‌ವರ್ಮ್‌ನಂತೆಯೇ ಕಾಣುವ pityriasis rosea ಎಂಬ ರೋಗಕ್ಕೆ ಬಳಸುವ ಒಂದು ಆಂಗಿಕ ಸ್ಟೆರಾಯ್ಡ್ ಬಳಸಿ ಮಾಡುವ ಚಿಕಿತ್ಸೆಯು ಟಿನಿಯಾ ಇನ್‌ಕಾಗ್ನಿಟೋ ಎಂಬ ಸ್ಥಿತಿಯನ್ನು ಉಂಟು ಮಾಡಿ ಆ ಮೂಲಕ ರಿಂಗ್‌ ವರ್ಮ್ ಶಿಲೀಂಧ್ರವು ಅದರ ವಿಶಿಷ್ಟತೆಯಾದ ನಿರ್ಧಿಷ್ಟ ಅಂಚನ್ನೂ ಮೀರಿ ಬೆಳೆಯಲಾರಂಭಿಸುತ್ತದೆ.

ಇತಿಹಾಸ

[ಬದಲಾಯಿಸಿ]

ಡರ್ಮಟೊಫೈಟೊಸಿಸ್ ೧೯೦೬ಕ್ಕಿಂತ ಮೊದಲಿನಿಂದಲೂ ಚಾಲ್ತಿಯಲ್ಲಿದೆ, ಆ ಸಮಯದಲ್ಲಿ ರಿಂಗ್‌ವರ್ಮ್‌ಗೆ ಪಾದರಸ ಅಥವಾ ಕೆಲವೊಮ್ಮೆ ಸಲ್ಫರ್ ಅಥವಾ ಅಯೋಡಿನ್ ಮಿಶ್ರಣದಿಂದ ಚಿಕಿತ್ಸೆ ನಡೆಸಲಾಗುತ್ತಿತ್ತು. ತುಂಬಾ ಕೂದಲುಳ್ಳ ಭಾಗವು ಚಿಕಿತ್ಸೆಗೆ ತೊಡಕಾಗುತ್ತದೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ನೆತ್ತಿಯ ಭಾಗದ ಚರ್ಮಕ್ಕೆ ಕ್ಷ-ಕಿರಣಗಳಿಂದ ಚಿಕಿತ್ಸೆ ನಡೆಸಲಾಗುತ್ತದೆ ಮತ್ತು ಆ‍ಯ್‌೦ಟಿಪ್ಯಾರಾಸೈಟಿಕ್ ಔಷಧ ಬಳಸಲಾಗುತ್ತದೆ.[]

ವರ್ಗೀಕರಣ

[ಬದಲಾಯಿಸಿ]

ವಿವಿಧ ರೀತಿಯ ಹಲವಾರು ಶಿಲೀಂಧ್ರಗಳು ಇದಕ್ಕೆ ಕಾರಣವಾಗಿದೆ. ಟ್ರಿಕೊಪೈಟಾನ್ ಮತ್ತು ಮೈಕ್ರೊಸ್ಪೋರಮ್‌ ಗಳ ವರ್ಗವು ಡರ್ಮಟೊಫೈಸ್ ಉಂಟಾಗಲು ಒಂದು ಸಾಮಾನ್ಯ ಕಾರಕ ಪ್ರತಿನಿಧಿಗಳಾಗಿವೆ. ಈ ಶಿಲೀಂಧ್ರಗಳು ದೇಹದ ವಿವಿಧ ಭಾಗಗಳ ಮೇಲೆ ದಾಳಿ ನಡೆಸಿ ಈ ಕೆಳಗಿನ ಪರಿಸ್ಥಿತಿ ಉಂಟುಮಾಡುತ್ತದೆ:

  • ಡರ್ಮಟೊಫೈಟೊಸಿಸ್
    • ಟಿನಿಯಾ ಪೆಡಿಸ್ (ಕ್ರೀಡಾಪಟು'ಗಳ ಕಾಲು) ಪಾದಗಳಿಗೆ ಹಾನಿಯುಂಟು ಮಾಡುತ್ತದೆ.
    • ಟಿನಿಯಾ ಅನ್‌ಜ್ವಿಯಂ ಹೆಬ್ಬೆರಳು ಮತ್ತು ಕಾಲ್ಬೆರಳ ಉಗುರುಗಳಿಗೆ ಹಾನಿಯುಂಟು ಮಾಡುತ್ತದೆ.
    • ಟಿನಿಯಾ ಕೊರ್ಪೊರಿಸ್ ತೋಳುಗಳು, ಕಾಲುಗಳು ಮತ್ತು ಸೊಂಟದಲ್ಲಿ ರಿಂಗ್‌ವರ್ಮ್ ಹಾನಿಯುಂಟು ಮಾಡುತ್ತದೆ.
    • ಟಿನಿಯಾ ಕ್ರುರೀಸ್ (ಜಾಕ್ ತುರಿಕೆ) ತೊಡೆ ಸಂದಿಯ ಭಾಗಗಳಿಗೆ ಹಾನಿಯುಂಟು ಮಾಡುತ್ತದೆ.
    • ಟಿನಿಯಾ ಮ್ಯಾನ್ಯುಮ್ ಕೈಗಳು ಮತ್ತು ಅಂಗೈ ಭಾಗಗಳಿಗೆ ಹಾನಿಯುಂಟು ಮಾಡುತ್ತದೆ.
    • ಟಿನಿಯಾ ಕ್ಯಾಪಿಟೀಸ್ ನೆತ್ತಿಯ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ.
    • ಟಿನಿಯಾ ಬಾರ್ಬೆಯ್ ಮುಖದಲ್ಲಿನ ಕೂದಲಿಗೆ ಹಾನಿಯುಂಟು ಮಾಡುತ್ತದೆ.
    • ಟಿನಿಯಾ ಫೇಸಿಯ್ (ಮುಖ ಶಿಲೀಂಧ್ರ ) ಮುಖಕ್ಕೆ ಹಾನಿಯುಂಟು ಮಾಡುತ್ತದೆ.
  • ಇತರೆ ಬಾಹ್ಯ ಚರ್ಮ ಸೋಂಕುಗಳು
    • ಟಿನಿಯಾ ವರ್ಸಿಕಲರ್‌ಗೆ ಮಲಸಿಜಿಯಾ

ಫರ್ಫರ್ ಕಾರಣವಾಗಿದೆ

    • ಟಿನಿಯಾ ನಿಗ್ರಾಗೆ ಹೊರ್ಟಾಯೆಯಾ ವೆರ್ನೆಕಿ ಕಾರಣವಾಗಿದೆ.

ಚಿಹ್ನೆಗಳು ಹಾಗು ರೋಗ-ಲಕ್ಷಣಗಳು

[ಬದಲಾಯಿಸಿ]

ದೇಹದ ಮೇಲಿನ ಸೋಂಕಿತ ಭಾಗವು ರಿಂಗ್‌ವರ್ಮ್‌ನ ಕೆಂಪು ವೃತ್ತಾಕಾರವನ್ನು ಹೆಚ್ಚಿಸಬಹುದು. ಪಾದದ ಚರ್ಮದ ಮೇಲಿನ ಸೋಂಕು ಕ್ರೀಡಾಪಟುಗಳ ಪಾದಗಳ ಮತ್ತು ತೊಡೆ ಸಂದಿಯ ಜಾಕ್ ತುರಿಕೆಗೆ ಕಾರಣವಾಗಬಹುದು. ಉಗುರುಗಳು ಸೋಂಕಿತವಾಗಿದ್ದಾಗ ಅವುಗಳು ದಪ್ಪಗಾಗುತ್ತವೆ ,ಬಣ್ಣಗೆಡುತ್ತದೆ, ಕೊನೆಗೆ ಚೂರು ಚೂರಾಗಿ ಉದುರಿಹೋಗುತ್ತವೆ ಅದನ್ನು ಒನಿಕೊಮೈಕೊಸಿಸ್ ಎಂದು ಕರೆಯಲಾಗುತ್ತದೆ.

ಇದು ವಯಸ್ಕರಲ್ಲಿ ಸಾಮಾನ್ಯ, ಸುಮಾರು ಶೇಕಡಾ ಇಪ್ಪತ್ತರಷ್ಟು ಜನರು ಯಾವುದಾದರೂ ಒಂದು ಸಮಯದಲ್ಲಿ ಇದಕ್ಕೆ ತುತ್ತಾಗುತ್ತಾರೆ.[ಸಾಕ್ಷ್ಯಾಧಾರ ಬೇಕಾಗಿದೆ]

ಡರ್ಮಟೊಫೈಟೊಸಿಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಕಡಿಮೆ ಕಾಣಿಸಿಕೊಂಡು ಬೇಸಿಗೆ ಕಾಲದಲ್ಲಿ ಅಧಿಕವಾಗುತ್ತವೆ.[ಸಾಕ್ಷ್ಯಾಧಾರ ಬೇಕಾಗಿದೆ]

ನಾಯಿಗಳು ಮತ್ತು ಬೆಕ್ಕುಗಳಂತಹ ಪ್ರಾಣಿಗಳು ಕೂಡ ರಿಂಗ್‌ವರ್ಮ್‌ಗೆ ತುತ್ತಾಗುತ್ತವೆ ಮತ್ತು ಅವುಗಳನ್ನು ಮುಟ್ಟಿದಾಗ ರೋಗವು ಮನುಷ್ಯ ಮತ್ತು ಪ್ರಾಣಿಗಳ ನಡುವೆ ವರ್ಗಾವಣೆಗೊಳ್ಳಬಹುದು (ಜೂನೊಟಿಕ್ ರೋಗ).

ಕಾರಣಗಳು ಮತ್ತು ಮುನ್ನಚ್ಚರಿಕೆ

[ಬದಲಾಯಿಸಿ]

ಶಿಲೀಂಧ್ರಗಳು ತೇವ ಪ್ರದೇಶದಲ್ಲಿ, ಬೆಚ್ಚಗಿನ ಪ್ರದೇಶಗಳಲ್ಲಿ ಅಧಿಕಕೊಳ್ಳುತ್ತವೆ, ಉದಾಹರಣೆಗೆ ಮುಚ್ಚಿದ ಕೋಣೆಗಳು, ಟ್ಯಾನಿಂಗ್ ಬೆಡ್‌ಗಳು ಈಜುಕೊಳ ಮತ್ತು ಮಡಚಿದ ಚರ್ಮಗಳು. ಶಿಲೀಂಧ್ರಗಳು ಯಾವುದೇ ರೋಗಲಕ್ಷಣ ತೋರದೆಯು ಇರಬಹುದು.

ರಿಂಗ್‌ವರ್ಮ್ ತಡೆಯಲು ಸಲಹೆಗಳು ಈ ಕೆಳಗಿನಂತಿವೆ:

  • ಬಟ್ಟೆಗಳು, ಕ್ರೀಡಾ ಸಾಮಗ್ರಿಗಳು, ಟವೆಲ್‌ಗಳು, ಅಥವಾ ಹಾಸಿಗೆ ಬಟ್ಟೆಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುವುದು.
  • ರಿಂಗ್‌ವರ್ಮ್ ಆಗಿರಬಹುದು ಎಂಬ ಸಂಶಯ ಉಂಟಾದಾಗ ಬಿಸಿ ನೀರಿನಿಂದ ಶಿಲೀಂಧ್ರನಾಶಕ ಸಾಬುನು ಬಳಸಿ ಬಟ್ಟೆಗಳನ್ನು ತೊಳೆಯಬೇಕು.
  • ಬರಿಗಾಲಿನಿಂದ ನಡೆಯುವುದನ್ನು ತಪ್ಪಿಸಬೇಕು. ಬದಲಾಗಿ ಸಮುದ್ರತೀರದಲ್ಲಿ ನಡೆಯುವಾಗ ಸರಿಯಾದ ಅಳತೆಯ ಸುರಕ್ಷತಾ ಬೂಟು ಧರಿಸಬೇಕು ಮತ್ತು ಮುಚ್ಚಿದ ಕೋಣೆಯಲ್ಲಿ ಚಪ್ಪಲಿಗಳನ್ನು ಬಳಸಬೇಕು.[][][][]
  • ತುಂಬಾ ಸೋಂಕುಂಟಾಗಿರುವ ಭಾಗವನ್ನು [], ಬ್ಯಾಕ್ಟೀರಿಯಲ್ ನಿರೋಧಕ ಮತ್ತು ಆ‍ಯ್‌೦ಟಿ-ಶಿಲೀಂಧ್ರ ಸಾಬೂನು ಅಥವಾ ಟೆರ್ಪೈನೆನ್-೪-ಒಎಲ್ ಹೊಂದಿರುವ ಟೀ ಟ್ರಿ ಎಣ್ಣೆಯಿಂದ ಒಮ್ಮೆ ತೊಳೆಯಬೇಕು.[][]
  • ಸಾಕುಪ್ರಾಣಿಗಳ ಕೂದಲುದುರಿದ ಭಾಗವನ್ನು ಮುಟ್ಟುವುದನ್ನು ತಪ್ಪಿಸಬೇಕು ಇವುಗಳು ಶಿಲೀಂಧ್ರಗಳನ್ನು ಹರಡಬಲ್ಲವು.

ಚಿಕಿತ್ಸಾಕ್ರಮ

[ಬದಲಾಯಿಸಿ]

ಆ‍ಯ್‌೦ಟಿಶಿಲೀಂಧ್ರ ಚಿಕಿತ್ಸೆಗಳು , ಮಿಕಾನೆಜೋಲ್ , ಟೆರ್ಬಿನಾಫೈನ್, ಕ್ಲೊಟ್ರಿಮಜೋಲ್, ಕಿಟೊಕೊನಿಜೋಲ್, ಅಥವಾ ಟೊನಾಫ್ಟೆಟ್‌ನಂತಹ ಔಷಧಗಳನ್ನು ಒಳಗೊಂಡಿದ್ದು ರೋಗ ಲಕ್ಷಣ ಕಡಿಮೆಯಾಗುವವರೆಗೆ -ಒಂದು ಅಥವಾ ಎರಡು ವಾರ ದಿನಕ್ಕೆರಡು ಬಾರಿ ಹಚ್ಚಬೇಕು.[] , ರೋಗ ಮತ್ತೆ ಬರದಂತೆ ತಡೆಯಲು ಔಷಧ ಚಿಕಿತ್ಸೆಯನ್ನು ಇನ್ನೂ ಹೆಚ್ಚಿನ ಏಳು ದಿನಗಳವರೆಗೆ ಮುಂದುವರೆಸಬೇಕು.[][೧೦] ಚಿಕಿತ್ಸೆಯ ಅವಧಿ ಸುಮಾರು ಎರಡು ವಾರಗಳು,[೧೧][೧೨] ಆದರೆ ಕೆಲವೊಮ್ಮೆ ಮೂರು ವಾರಗಳು ಆಗಬಹುದು.[೧೩]

ತುಂಬಾ ಉಲ್ಬಣಗೊಂಡ ಪ್ರಕರಣಗಳಲ್ಲಿ ಅಥವಾ ನೆತ್ತಿಯ ಚರ್ಮದ ರಿಂಗ್‌ವರ್ಮ್ ಚಿಕಿತ್ಸೆಗೆ ಪೂರ್ತಿ ಶರೀರದ ಚಿಕಿತ್ಸೆ ನಡೆಸಿ ಬಾಯಿಯ ಮುಖಾಂತರವು ಔಷಧ ನೀಡಲಾಗುತ್ತದೆ.[೧೪]

ಸೋಂಕು ಹರಡದಂತೆ ತಡೆಯಲು, ಗಾಯವನ್ನು ಮುಟ್ಟಬಾರದು ಮತ್ತು ಕೈಗಳನ್ನು ಮತ್ತು ಪೂರ್ಣ ಶರೀರವನ್ನು ತೊಳೆದುಕೊಂಡು ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.[೧೫]

ಇತರ ಪ್ರಾಣಿಗಳಲ್ಲಿನ ವ್ಯವಸ್ಥೆ

[ಬದಲಾಯಿಸಿ]

ರೋಗನಿರ್ಣಯ

[ಬದಲಾಯಿಸಿ]

ಸಾಕು ಪ್ರಾಣಿಗಳಲ್ಲಿ ಯಾವುದೇ ರೋಗಲಕ್ಷಣವನ್ನುಂಟುಮಾಡದಿದ್ದರೂ ರಿಂಗ್‌ವರ್ಮ್ ದೇಹದಲ್ಲಿ ವಾಸಿಸುತ್ತಿದ್ದು ಬೇರೆ ಪ್ರಾಣಿಗಳಿಗೆ ಸೋಂಕನ್ನುಂಟುಮಾಡುತ್ತದೆ ಅಥವಾ ಜೊತೆಗಾರ ಪ್ರಾಣಿಯು ಇಮ್ಯುನೊ ಪ್ರತಿಕ್ರಿಯೆಯಲ್ಲಿ ಕೊರತೆಯುಂಟಾದಾಗ ಮಾತ್ರ ರೋಗವನ್ನು ತೋರ್ಪಡಿಸುತ್ತದೆ. ವೃತ್ತಾಕಾರದ ಬರಿಯ ಗುರುತುಗಳು ರೋಗ ನಿರ್ಣಯ ಮಾಡಲು ಸಹಕರಿಸಿದರೂ ಇದು ಶಿಲೀಂದ್ರದಿಂದಲೇ ಆಗಿದೆಯೆಂದು ನಿರ್ಧರಿಸಲಾಗುವುದಿಲ್ಲ. ಮೂರು ಜಾತಿಯ ಶಿಲೀಂಧ್ರಗಳು ೯೫% ಸಾಕು ಪ್ರಾಣಿಗಳಲ್ಲಿ ರಿಂಗ್‌ವರ್ಮ್‌ನ್ನುಂಟು ಮಾಡುತ್ತದೆ. ಅವೆಂದರೆ ಮೈಕ್ರೊಸ್ಪೋರಮ್‌ ಕಾನಿಸ್, ಮೈಕ್ರೊಸ್ಪೋರಮ್‌ ಜಿಪ್ಸಿಯಮ್, ಮತ್ತು ಟ್ರೈಕೊಫೈಟನ್ ಮೆನ್ಟಾಗ್ರೊಫೈಟ್ಸ್‌.

ಪಶುವೈದ್ಯ ರಿಂಗ್‌ವರ್ಮ್‌ನ ಸೋಂಕನ್ನು ಕಂಡು ಹಿಡಿಯಲು ಮತ್ತು ಜಾತಿಯನ್ನು ಗುರುತಿಸಲು ಅನೇಕ ಪರೀಕ್ಷೆಗಳನ್ನು ಮಾಡುತ್ತಾರೆ:

ವೂಡ್ಸ್ ಪರೀಕ್ಷೆ ಇದೊಂದು ವರ್ಧಿಸಿದ ಮಸೂರದಿಂದ ಮಾಡುವ ಕಪ್ಪು ಬೆಳಕಿನ (ಅತಿನೇರಳೆ ಕಿರಣ) ಪರೀಕ್ಷೆಯಾಗಿದೆ. ಕಪ್ಪು ಬೆಳಕಿನಲ್ಲಿ ಕೇವಲ ೫೦%ನಷ್ಟು ಮೈಕ್ರೊಸ್ಪೋರಮ್‌ ಕಾನಿಸ್ ಮರಸೇಬು ಬಣ್ಣದಲ್ಲಿ ಕೂದಲು ಕಾಣುತ್ತದೆ. ಇತರ ಶಿಲೀಂಧ್ರಗಳು ಕಾಣುವುದಿಲ್ಲ. ಫ್ಲೊರಸೆಂಟ್ ವಸ್ತುವೇ ಶಿಲೀಂಧ್ರವಲ್ಲ (ಅದು ಫ್ಲೊರೆನ್ಸ್ ಅಲ್ಲ) ಆದರೆ ಶಿಲೀಂಧ್ರದ ವಿಸರ್ಜನೆಯು ಕೂದಲಿಗಂಟಿದಾಗ ಹಾಗೆ ಕಾಣುತ್ತದೆ. ಸೋಂಕಿಗೊಳಗಾದ ಚರ್ಮವು ಫ್ಲೊರೆನ್ಸ್ ಆಗಿರುವುದಿಲ್ಲ.

ಸೂಕ್ಷ್ಮದರ್ಶಕದ ಮೂಲಕ ಪರೀಕ್ಷೆ ಪ್ರಾಣಿ ವೈದ್ಯನು ಸೋಂಕಿಗೊಳಗಾದ ಪ್ರದೇಶದಿಂದ ಕೂದಲನ್ನು ತೆಗೆದುಕೊಂಡು ಸ್ಟೈನಿಂಗ್ ದ್ರಾವಣದಲ್ಲಿಟ್ಟು ಸೂಕ್ಷ್ಮದರ್ಶಕದ ಮೂಲಕ ನೋಡುವುದಾಗಿದೆ. ನೇರವಾಗಿ ನೋಡಿದಾಗ ಶಿಲೀಂಧ್ರಗಳ ಬೀಜಕಣಗಳನ್ನು ಕೂದಲಿನಲ್ಲಿ ಕಾಣ ಬಹುದಾಗಿದೆ. ಈ ತಂತ್ರಜ್ಞಾನದಿಂದಾಗಿ ಶಿಲೀಂಧ್ರಗಳ ಸೋಂಕನ್ನು ಸುಮಾರು ೪೦%-೭೦%ರಷ್ಟು ಗುರುತಿಸುತ್ತದೆ ಆದರೆ ಡರ್ಮಟೊಫೈಟ್‌ನ ಜಾತಿಯನ್ನು ಗುರುತಿಸಲಾಗುವುದಿಲ್ಲ.

ಕಲ್ಚರ್ ಪರೀಕ್ಷೆ  : ಸಾಕುಪ್ರಾಣಿಯಲ್ಲಿ ರಿಂಗ್‌ವರ್ಮ್‌ನ್ನು ಗುರುತಿಸುವಲ್ಲಿ ಇದು ಅತ್ಯಂತ ಸಮರ್ಪಕವಾದ ಆದರೆ ಸಮಯವನ್ನು ತೆಗೆದುಕೊಳ್ಳುವ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ವೈದ್ಯನು ಪ್ರಾಣಿಯಿಂದ ಕೂದಲನ್ನು ಅಥವಾ ಕೂದಲಿನಲ್ಲಿನ ಶಿಲೀಂಧ್ರಗಳ ಬೆಜಕಣವನ್ನು ಹಲ್ಲುಜ್ಜುವ ಬ್ರಷ್ ಅಥವಾ ಉಪಕರಣದಿಂದ ಸಂಗ್ರಹಿಸುತ್ತಾನೆ ಮತ್ತು ಶಿಲೀಂಧ್ರಗಳ ಪ್ರಾಯೋಗಿಕ ಕೃಷಿ ಮಾಧ್ಯಮಕ್ಕೆ ಚುಚ್ಚಲಾಗುತ್ತದೆ. ಈ ಕೃಷಿಯನ್ನು ಪಾರದರ್ಶಕ ಟೇಪಿನಿಂದ ಒರಸಿ ಮತ್ತು ನಂತರ ಸೂಕ್ಷ್ಮದರ್ಶಕದ ಮೂಲಕ ವೈದ್ಯನು ವೀಕ್ಷಿಸುತ್ತಾನೆ ಅಥವಾ ರೋಗ ಪತ್ತೆ ಮಾಡುವ ಪ್ರಯೋಗಾಲಯಕ್ಕೆ ಕಳಿಹಿಸಿಕೊಡಬಹುದು. ಸಾಕು ಪ್ರಾಣಿಗಳಲ್ಲಿ ರಿಂಗ್‌ವರ್ಮ್‌ನ್ನುಂಟುಮಾಡಬಹುದಾದ ಮೂರು ಸಾಮಾನ್ಯವಾದ ಶಿಲೀಂಧ್ರಗಳನ್ನು ಅವುಗಳ ಬೀಜಕಣಗಳ ಗುಣಲಕ್ಷಣಗಳ ಮೂಲಕ ಗುರುತಿಸಬಹುದು. ಇವುಗಳು ಎರಡು ಸಾಮಾನ್ಯ ಜಾತಿಯ ಮೈಕ್ರೊಸ್ಪೊರ ಮತ್ತು ಟ್ರೈಕೊಫೈಟಾನ್ ‌ನಲ್ಲಿ ಮೈಕ್ರೊಕೊನಿಡಿಯಗಳು ಬೇರೆ ರೀತಿಯಾಗಿ ಕಾಣುತ್ತದೆ.[೧೬]

ಶಿಲೀಂಧ್ರಗಳ ಜಾತಿಯನ್ನು ಗುರುತಿಸುವಲ್ಲಿ ಸೋಂಕಿಗೊಳಗಾದ ಸಾಕುಪ್ರಾಣಿಗಳ ಸೋಂಕಿನ ಮೂಲವನ್ನು ನಿಯಂತ್ರಿಸಬಹುದು. ಮೈಕ್ರೊಸ್ಪೋರಮ್‌ ಕಾನಿಸ್, ಹೆಸರಿನಂತೆಯೇ ಹೆಚ್ಚಾಗಿ ಸಾಕಿದ ಬೆಕ್ಕುಗಳಲ್ಲಿದ್ದು ೯೮%ರಷ್ಟು ಬೆಕ್ಕಿನ ಸೋಂಕು ಈ ಜೀವಿಯಿಂದಾಗುತ್ತದೆ. ಆದಾಗ್ಯೂ ಇದು ಮಾನವ ಮತ್ತು ನಾಯಿಗಳಲ್ಲೂ ಸೋಂಕನ್ನುಂಟು ಮಾಡುತ್ತದೆ. ಟ್ರೈಕೊಫೈಟನ್ ಮೆನ್ಟಾಗ್ರೊಫೈಟ್ಸ್‌ ಪ್ರಮುಖವಾಗಿ ಜಲಾಶಯದಲ್ಲಿನ ದಂಶಕಗಳಲ್ಲಿ ಕಂಡು ಬರುತ್ತದೆ. ಆದರೆ ಮೊಲ, ನಾಯಿ ಮತ್ತು ಕುದುರೆಗಳಲ್ಲೂ ಕಂಡು ಬರುತ್ತದೆ. ಮೈಕ್ರೊಸ್ಪೋರಮ್‌ ಜಿಪ್ಸಿಯಮ್ ಮಣ್ಣಿನ ಜೀವಿಯಾಗಿದ್ದು ಕೆಲವೊಮ್ಮೆ ಉದ್ಯಾನವನ ಮತ್ತಿತರ ಪ್ರದೇಶಗಳಲ್ಲಿರುತ್ತದೆ. ಮನುಷ್ಯನ ಹೊರತಾಗಿ ದಂಶಕಗಳು, ನಾಯಿಗಳು, ಬೆಕ್ಕುಗಳು, ಕುದುರೆಗಳು, ಆಕಳುಗಳು, ಮತ್ತು ಬಾತುಕೋಳಿಗಳಿಗೂ ತಗಲುತ್ತವೆ.[೧೭]

ಚಿಕಿತ್ಸಾಕ್ರಮ

[ಬದಲಾಯಿಸಿ]

ಚಿಕಿತ್ಸೆಯು ಹೆಚ್ಚಿನ ಮಾನವರಿಗೆ ಬಳಸುವ ಔಷಧದೊಂದಿಗೆ ವ್ಯವಸ್ಥಿತ ಬಾಯಿಯ ಚಿಕಿತ್ಸೆಯಲ್ಲಿ ಟರ್ಬಿನಫೈನ್, ಫ್ಲುಕನಜೋಲ್, ಅಥವಾ ಐಟ್ರಕನಜೋಲ್, ಮತ್ತು "ಡಿಪ್" ಥೆರಪಿಗಳೆರಡನ್ನೂ ಬಯಸುತ್ತದೆ.

ಸಾಕು ಪ್ರಾಣಿಗಳಲ್ಲಿ ಉದ್ದನೆಯ ಕೂದಲಿರುವುದರಿಂದ ಸೋಂಕಿಗೊಳಗಾದ ಪ್ರದೇಶ ಮತ್ತು ಉದ್ದನೆಯ ಕೂದಲುಗಳನ್ನು ಕ್ಲಿಪ್ ಮಾಡುವ ಮೂಲಕ ಅವುಗಳಲ್ಲಿ ಶಿಲೀಂಧ್ರಗಳು ಸೇರಿಕೊಳ್ಳುವುದನ್ನು ತಡೆಬಹುದಾಗಿದೆ. ಕೂದಲನ್ನು ಪೂರ್ಣವಾಗಿ ಕತ್ತರಿಸುವುದಿಲ್ಲ. ಇದರಿಂದ ಚರ್ಮವು ಇನ್ನಷ್ಟು ಸೋಂಕಿಗೊಳಗಾಗುತ್ತದೆ.

ಶಿಲೀಂಧ್ರಗಳ ಬೀಜಕಣವನ್ನು ನಿವಾರಿಸಲು ವಾರಕ್ಕೆರಡು ಬಾರಿ ಸಾರಗುಂದಿಸಿದ ಲೈಮ್‌ ಸಲ್ಫರ್‌ನಲ್ಲಿ ಅದ್ದಿ ಸ್ನಾನ ಮಾಡಿಸಬೇಕು. ಇದನ್ನು ೩ ರಿಂದ ೮ ವಾರಗಳ ತನಕ ಮುಂದುವರೆಸಬೇಕು.[೧೮]

ಮನೆಯ ಒರಟು ನೆಲವನ್ನು ತೊಳೆಯಲು ೧:೧೦ ಗೃಹ ಬಳಕೆಯ ಹೈಪೊಕ್ಲೋರೈಟ್ ಬ್ಲೀಚ್ ದ್ರಾವಣವನ್ನು ಬಳಸುವುದು ಪರಿಣಾಮಕಾರಿಯಾಗಿದೆ.

ಮನೆಯ ಮೇಲ್ಮೈಯಲ್ಲಿರುವ ಸಾಕು ಪ್ರಾಣಿಯ ಕೂದಲನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು, ಮತ್ತು ವ್ಯಾಕ್ಯೂಮ್ ಕ್ಲೀನರ್ ಚೀಲವನ್ನು (ವ್ಯಾಕ್ಯೂಮ್ ಕ್ಲೀನರ್) ನಿರಂತರವಾಗಿ ಬಳಸಿದ ನಂತರ ಎಸೆದು ಬಿಡಬೇಕು. ಮೇಲ್ಮೈಯಲ್ಲಿರುವ ಕೂದಲುಗಳಲ್ಲಿ ಬೀಜಕಣಗಳು ಹನ್ನೆರಡು ತಿಂಗಳುಗಳಿಂದ ಎರೆಡು ವರ್ಷಗಳವರೆಗೂ ಜೀವಂತವಾಗಿರುವ ಸಾಧ್ಯತೆಯಿರುವುದರಿಂದ ಸರಿಯಾಗಿ ಸ್ವಚ್ಛಗೊಳಿಸುವುದು ಪ್ರಮುಖವಾಗುತ್ತದೆ.[೧೯]

ಉಲ್ಲೇಖಗಳು

[ಬದಲಾಯಿಸಿ]
  1. Decorby, MaryAnn, Director of the British Columbia Wrestling Association. "www.amateurwrestler.com: The Truth About Ring Worm". Archived from the original on 2009-08-11. Retrieved 11 August 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)CS1 maint: multiple names: authors list (link)
  2. ಸೀಕ್ವೆರಾ, ಜೆ. ಹೆಚ್. (೧೯೦೬) "ದ ವೆರೈಟೀಸ್ ಆಫ್ ರಿಂಗ್‌ವರ್ಮ್ ಆ‍ಯ್‌೦ಡ್ ದೇರ್ ಟ್ರೀಟ್‌ಮೆಂಟ್", ಬ್ರಿಟೀಷ್ ಮೆಡಿಕಲ್ ಜರ್ನಲ್ , http://www.bmj.com/cgi/reprint/೨/೨೩೭೮/೧೯೩.pdf[permanent dead link]
  3. ವಿಲ್ ಕೌಂಟೀ ಮೆಡಿಕಲ್ ಅಸೋಸಿಯೇಟ್ಸ್‌ನ ಪೆಡಿಯಾಟ್ರಿಸ್ಟ್ ಲೂರಿ ಕ್ಲೆಮ್‌ರು ಏಪ್ರಿಲ್ ೨, ೨೦೦೮ರ ದ ಹೆರಾಲ್ಡ್ ನ್ಯೂಸ್‌ಗಾಗಿ ಸಿದ್ಧಪಡಿಸಿದ ಕೀಪಿಂಗ್ ಫೂಟ್‌ಲೂಸ್ ಆನ್ ಟ್ರಿಪ್ಸ್
  4. ಫೋರ್ಟ್ ಡಾಡ್ಜ್ ಅನಿಮಲ್ ಹೆಲ್ತ್: Archived 2008-06-04 ವೇಬ್ಯಾಕ್ ಮೆಷಿನ್ ನಲ್ಲಿ. ಮೈಲ್‌‍ಸ್ಟೋನ್ಸ್‌ನಿಂದ Wyeth.com. ಏಪ್ರಿಲ್ ೨, ೨೦೦೮ ರಂದು ನೋಡಲಾಗಿದೆ
  5. ೫.೦ ೫.೧ ರಿಂಗ್‌ವರ್ಮ್ ಇನ್ ಯುವರ್ ಡಾಗ್ ಕ್ಯಾಟ್ ಆರ್ ಅದರ್ ಪೆಟ್: ಪ್ರಿವೆನ್ಶನ್ ಬೈ ರಾನ್ ಹೈನ್ಸ್ ಡಿವಿಎಮ್ ಪಿಹೆಚ್‌ಡಿ ೫/೪/೦೬. ಏಪ್ರಿಲ್ ೨, ೨೦೦೮ ರಂದು ನೋಡಾಲಾಗಿದೆ
  6. "ಇಂಟೆಲಿಹೆಲ್ತ್:". Archived from the original on 2011-03-03. Retrieved 2010-10-14.
  7. http://www೩.interscience.wiley.com/journal/೧೧೮೮೯೬೫೧೫/abstract?CRETRY=೧&SRETRY=೦[permanent dead link]
  8. http://jac.oxfordjournals.org/cgi/content/abstract/೫೯/೫/೯೩೪
  9. ೯.೦ ೯.೧ Kyle AA, Dahl MV (2004). "Topical therapy for fungal infections". Am J Clin Dermatol. 5 (6): 443–51. PMID 15663341.
  10. McClellan KJ, Wiseman LR, Markham A (1999). "Terbinafine. An update of its use in superficial mycoses". Drugs. 58 (1): 179–202. PMID 10439936. {{cite journal}}: Unknown parameter |month= ignored (help)CS1 maint: multiple names: authors list (link)
  11. Tinea~treatment at eMedicine
  12. Tinea Corporis~treatment at eMedicine
  13. "Antifungal agents for common paediatric infections". Can J Infect Dis Med Microbiol. 19 (1): 15–8. 2008. PMC 2610275. PMID 19145261. {{cite journal}}: Unknown parameter |month= ignored (help)
  14. Gupta AK, Cooper EA (2008). "Update in antifungal therapy of dermatophytosis". Mycopathologia. 166 (5–6): 353–67. doi:10.1007/s11046-008-9109-0. PMID 18478357.
  15. Ringworm on Body Treatment at eMedicineHealth
  16. "ನಾಯಿಗಳ ರೋಗನಿರ್ಣಯದಲ್ಲಿ ರಿಂಗ್‌ವರ್ಮ್". Archived from the original on 2011-05-15. Retrieved 2010-10-14.
  17. "ಸಾಮಾನ್ಯ ರಿಂಗ್‌ವರ್ಮ್ ಮಾಹಿತಿ". Archived from the original on 2010-12-21. Retrieved 2010-10-14.
  18. "ಪಶುವೈದ್ಯಕೀಯ ಚಿಕಿತ್ಸಾ ಅಂತರಜಾಲ ಪುಟ". Archived from the original on 2013-01-04. Retrieved 2010-10-14. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  19. "ಬೀಜಕಣದ ಉಳಿದುಕೊಳ್ಳುವಿಕೆ". Archived from the original on 2010-12-21. Retrieved 2010-10-14.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಚರ್ಮದ ಸ್ಥಿತಿಯ ಪಟ್ಟಿ

ಬಾಹ್ಯ ಕೊಂಡಿಗಳು

[ಬದಲಾಯಿಸಿ]