ವಿಷಯಕ್ಕೆ ಹೋಗು

ರಾಜ್ಯಶ್ರೀ ಕುಮಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜ್ಯಶ್ರೀ ಕುಮಾರಿ
ಜನನ (1953-06-04) ೪ ಜೂನ್ ೧೯೫೩ (ವಯಸ್ಸು ೭೧)
ಬಿಕಾನೇರ್, ರಾಜಸ್ಥಾನ, ಭಾರತ
ಪೋಷಕ(ರು)ಕರ್ಣಿ ಸಿಂಗ್
ಸುಶೀಲಾ ಕುಮಾರಿ

ರಾಜ್ಯಶ್ರೀ ಕುಮಾರಿ (ಜನನ ೪ ಜೂನ್ ೧೯೫೩) ಭಾರತದ ಮಾಜಿ ಸ್ಪರ್ಧಾ ಶೂಟರ್.[][] ೧೯೬೮ ರಲ್ಲಿ, ೧೬ ನೇ ವಯಸ್ಸಿನ ರಾಜ್ಯಶ್ರೀಯವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.[] ಅವರು ಬಿಕಾನೇರ್‌ನ ಮಹಾರಾಜ ಡಾ. ಕರ್ಣಿ ಸಿಂಗ್ ಮತ್ತು ಮಹಾರಾಣಿ ಸುಶೀಲಾ ಅವರ ಪುತ್ರಿ.

ಅವರು ಮಹಾರಾಜ ಗಂಗಾ ಸಿಂಗ್‌ಜಿ ಟ್ರಸ್ಟ್‌ನ ಅಧ್ಯಕ್ಷೆ ಮತ್ತು ಲಾಲ್‌ಗಢ ಅರಮನೆಯ ಮಾಲೀಕರಾಗಿದ್ದಾರೆ.[] ರಾಜ್ಯಶ್ರೀ ಅವರು ಅನೇಕ ಚಾರಿಟಬಲ್ ಟ್ರಸ್ಟ್‌ಗಳನ್ನು ನಡೆಸುತ್ತಿದ್ದಾರೆ ಮತ್ತು ಬಿಕಾನೇರ್‌ನಲ್ಲಿ ನೆಲೆಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ಮದುವೆಯಾದರು, ಭಿನ್ನಾಭಿಪ್ರಾಯಗಳಿಂದ ವಿಚ್ಛೇದನ ಪಡೆದರು. ಅವರ ಮಗಳು ಅನುಪಮಾ ಕುಮಾರಿ ಮತ್ತು ಮಗ ಸಜ್ಜನ್ ಸಿನ್.[]

ವೃತಿ ಜೀವನ

[ಬದಲಾಯಿಸಿ]
  • ೧೯೬೦ - ಹನ್ನೆರಡು ವರ್ಷ ವಯಸ್ಸಿನ ಜೂನಿಯರ್ ವಿಭಾಗದಲ್ಲಿ, ಏಳು ವಯಸ್ಸಿನಲ್ಲಿ ಇವರು ರಾಷ್ಟ್ರೀಯ ಏರ್ ರೈಫಲ್ ಚಾಂಪಿಯನ್‍ಶಿಪ್ ಅನ್ನು ಗೆದ್ದರು.
  • ೧೯೬೩ - ಹತ್ತು ವರ್ಷದವರಿದ್ದಾಗ ಓಪನ್ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಗೆದ್ದರು.
  • ೧೯೬೫ - ಹನ್ನೆರಡನೇ ವಯಸ್ಸಿನಲ್ಲಿ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಮತ್ತೆ ಗೆದ್ದರು.
  • ೧೯೬೭ - ಅಹಮದಾಬಾದ್‍ನಲ್ಲಿ ನಡೆದ ಅಖಿಲ ಭಾರತ ಆಯ್ಕೆ ಟ್ರಯಲ್ಸ್‌ನಲ್ಲಿ ೧೪ ನೇ ವಯಸ್ಸಿನಲ್ಲಿ ಅವರು ೩೫೮/೪೦೦ ರ ಹೊಸ ರೈಫಲ್ ಶೂಟಿಂಗ್‍ನಲ್ಲಿ ೩೩೩ ಪಾಯಿಂಟ್‍ಗಳ ದೊಡ್ಡ ಅಂತರದಿಂದ ಗೆದ್ದರು. ಬೊಲೊಗ್ನಾದಲ್ಲಿ ನಡೆದ ವರ್ಲ್ಡ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮೂರನೇ ಸ್ಥಾನ ಪಡೆದರು.
  • ೧೯೬೮ - ಮದ್ರಾಸ್‍ನಲ್ಲಿ ನಡೆದ ೧೩ ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ರಾಜ್ಯಾಶ್ರೀ ಕುಮಾರಿಯವರು ಶೂಟಿಂಗ್‍ನಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದರು.
  • ೧೯೬೯ - ಭೋಪಾಲ್‍ನಲ್ಲಿ ನಡೆದ ೧೪ ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಿನ್ಸೆಸ್ ರಾಜ್ಯಾಶ್ರೀ ಕುಮಾರಿಯವರು ಲೇಡೀಸ್ ಒಲಂಪಿಕ್ ಕ್ಲೇ ಪಾರಿವಾಳ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು ಎರಡನೆಯ ಸ್ಥಾನ ಪಡೆದರು. ಈ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.
  • ೧೯೭೦ - ನ್ಯಾಷನಲ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ, ಅವರು ಟ್ರ್ಯಾಪ್ಶೂಟಿಂಗ್ (ಐ.ಆರ್) ನಲ್ಲಿ ೧೦೦ ರಲ್ಲಿ ೯೨ ಅಂಕ ಗಳಿಸಿ ರಾಷ್ಟ್ರೀಯ ದಾಖಲೆಯನ್ನು ಮಾಡಿದರು.

ಪ್ರಶಸ್ತಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://www.vervemagazine.in/tag/princess-rajyashree-kumari-of-bikaner
  2. https://timesofindia.indiatimes.com/life-style/spotlight/The-princess-diaries/articleshow/12579563.cms
  3. "LIST OF ARJUNA AWARD WINNERS". Archived from the original on 25 December 2007. Retrieved 2009-09-05.
  4. Rathore, Abhinay. "Bikaner (Princely State)". Rajput Provinces of India (in ಇಂಗ್ಲಿಷ್). Retrieved 2022-03-20.
  5. "Genealogical Tree of the House of Bikaner". rajyashreebikaner.com (in ಇಂಗ್ಲಿಷ್). Archived from the original on Sep 29, 2022. Retrieved 14 August 2023.