ರಾಜ್ಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನ್ನದೊಂದಿಗೆ ರಾಜ್ಮಾ

ರಾಜ್ಮಾ[೧] ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಜನಪ್ರಿಯ ಸಸ್ಯಾಹಾರಿ ಖಾದ್ಯವಾಗಿದೆ. ಇದು ಕೆಂಪು ಬಳ್ಳಿ ಹುರುಳಿಯನ್ನು ದಟ್ಟ ಗ್ರೇವಿಯಲ್ಲಿ ಅನೇಕ ಸಂಬಾರ ಪದಾರ್ಥಗಳೊಂದಿಗೆ ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಅನ್ನದೊಂದಿಗೆ ಬಡಿಸಲಾಗುತ್ತದೆ. ಬಳ್ಳಿ ಹುರುಳಿಯು ಭಾರತೀಯ ಉಪಖಂಡದಲ್ಲಿ ಮೂಲ ಹೊಂದಿಲ್ಲದಿದ್ದರೂ ಇದು ಉತ್ತರ ಭಾರತ ಮತ್ತು ನೇಪಾಳದಲ್ಲಿ ನಿತ್ಯದ ಆಹಾರದ ಭಾಗವಾಗಿದೆ.[೨] ಬಳ್ಳಿ ಹುರುಳಿಯನ್ನು ಮೆಕ್ಸಿಕೊದಿಂದ ಭಾರತೀಯ ಉಪಖಂಡಕ್ಕೆ ತರಲಾದಾಗ ಈ ಖಾದ್ಯವು ಅಭಿವೃದ್ಧಿಗೊಂಡಿತು.[೩]

ರಾಜ್ಮಾ ಮಸಾಲಾ ಭಾರತದ ಉತ್ತರದ ರಾಜ್ಯಗಳಲ್ಲಿ ಬಹಳ ಜನಪ್ರಿಯ ಖಾದ್ಯವಾಗಿದೆ. ಪಂಜಾಬಿ ಅಡುಗೆ ಶೈಲಿಯಲ್ಲಿ ರಾಜ್ಮಾವನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಲಾಗುತ್ತದೆ. ನಂತರ ಅದನ್ನು ಕುಕ್ಕರ್‌ನಲ್ಲಿ ಬೇಯಿಸಿ ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೇಟೊ ತಿಳ್ಳು, ಶುಂಠಿ, ಬೆಳ್ಳುಳ್ಳಿ ಮತ್ತು ಜೀರಿಗೆ, ಧನಿಯಾ ಹಾಗೂ ಖಾರದ ಪುಡಿಯಂತಹ ಅನೇಕ ತಾಜಾ ಸಂಬಾರ ಪದಾರ್ಥಗಳಿಂದ ತಯಾರಿಸಲಾದ ಹುರಿದ ಮಸಾಲೆಯನ್ನು ಬೆರೆಸಲಾಗುತ್ತದೆ.[೪]

ಉಲ್ಲೇಖಗಳು[ಬದಲಾಯಿಸಿ]

  1. "Gogji Razma (Kidney Beans with Turnips)". Jagalbandi. Archived from the original on 2013-01-11. Retrieved 2009-07-07.
  2. "Food-nepal.com - Rajma Curry in Nepalese Cuisine (Kidney Bean Rajma)".
  3. "Rajma, rice and calories". Chennai, India: The Hindu. 22 September 2003. Archived from the original on 2003-10-11. Retrieved 2009-07-07.
  4. "Restaurant Style Punjabi Rajma Masala; foodcow". Archived from the original on 2018-09-13.
"https://kn.wikipedia.org/w/index.php?title=ರಾಜ್ಮಾ&oldid=1059520" ಇಂದ ಪಡೆಯಲ್ಪಟ್ಟಿದೆ