ರಾಜ್ಗೀರ್‌ನ ಬೃಹತ್ ಗೋಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜ್ಗೀರ್‌ನ ಬೃಹತ್ ಗೋಡೆಯು ಭಾರತದ ಬಿಹಾರ ರಾಜ್ಯದಲ್ಲಿರುವ ೪೦ ಕಿ.ಮಿ. ಉದ್ದದ ಕಲ್ಲಿನ ಗೋಡೆಯಾಗಿದ್ದು ಪ್ರಾಚೀನ ನಗರವಾದ ರಾಜ್‍ಗೃಹವನ್ನು (ಇಂದಿನ ರಾಜ್ಗೀರ್) ಸಂಪೂರ್ಣವಾಗಿ ಆವರಿಸಿತ್ತು. ಹೊರಗಿನ ಶತ್ರುಗಳು ಮತ್ತು ಆಕ್ರಮಣಕಾರರಿಂದ ರಕ್ಷಿಸುವುದು ಇದರ ಉದ್ದೇಶವಾಗಿತ್ತು. ಇದು ವಿಶ್ವಾದ್ಯಂತದ ಬೃಹತ್ ಕಲ್ಲುಕೆಲಸದ ಅತ್ಯಂತ ಹಳೆಯ ಮಾದರಿಗಳಲ್ಲಿ ಒಂದು.

ಇದನ್ನು ಮೌರ್ಯ ಸಾಮ್ರಾಜ್ಯದ ಅರಸರು ಕ್ರಿ.ಪೂ. ೩ನೇ ಶತಮಾನಕ್ಕೆ ಮುನ್ನ ನಿಲ್ಲಿಸಿದರು ಮತ್ತು ಭಾರಿ ಗಾತ್ರದ ಸಂಸ್ಕರಿಸದ ಕಲ್ಲನ್ನು ಬಳಸಲಾಗಿತ್ತು. ಇದು ಮೌರ್ಯ ಸಾಮ್ರಾಜ್ಯದ ಭಾರಿ ಆಡಳಿತ ಸಾಮರ್ಥ್ಯಗಳನ್ನು ನೆನಪಿಗೆ ತರುತ್ತದೆ.

ಇದರ ಸ್ವಲ್ಪವೇ ಭಾಗ ಉಳಿದುಕೊಂಡಿದೆ. ಇದರ ಬಹುತೇಕ ಭಾಗ ಕಾಲ ಕಳೆದಂತೆ ಅದೃಶ್ಯವಾಯಿತು. ಇದು ಪ್ರಸಕ್ತವಾಗಿ ರಾಷ್ಟ್ರೀಯ ಸ್ಮಾರಕದ ರಕ್ಷಣೆಯಲ್ಲಿದೆ.

ಉಲ್ಲೇಖಗಳು[ಬದಲಾಯಿಸಿ]