ವಿಷಯಕ್ಕೆ ಹೋಗು

ರಸೂಲ್ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಸೂಲ್ ಖಾನ್ ಎಂಬುವವನು ಇಸ್ಮಾಯಿಲ್ ಅದಿಲ್ ಷಾನ ಅತ್ಯುತ್ತಮ ಸೇನಾಪತಿಗಳಲ್ಲಿ ಒಬ್ಬನಾಗಿದ್ದ.

ಗೋವಾದ ಮೇಲಿನ ಆಕ್ರಮಣ

[ಬದಲಾಯಿಸಿ]

1512 ರಲ್ಲಿ, ಪೋರ್ಚುಗೀಸರಿಂದ ಗೋವಾವನ್ನು ಪುನಃ ವಶಪಡಿಸಿಕೊಳ್ಳಲು ಸೈನ್ಯವನ್ನು ಮುನ್ನಡೆಸಲು ರಸೂಲ್ ಖಾನನನ್ನು ಕೇಳಲಾಯಿತು. ಫುಲಾದ್ ಖಾನ್ ನೇತೃತ್ವದಲ್ಲಿ ಹಿಂದಿನ ಸೈನ್ಯವು ಬನಾಸ್ಟಾರಿಮ್‌ನ ಕೋಟೆಯ ಸುತ್ತಲೂ ಸುತ್ತುವರಿದು ಹಲವಾರು ಪೋರ್ಚುಗೀಸ್ ದಾಳಿಗಳನ್ನು ಹಿಮ್ಮೆಟ್ಟಿಸಿತು.ಇದು ಅಫೊನ್ಸೊ ಡಿ ಅಲ್ಬುಕರ್ಕ್‌ನಿಂದ ಗೋವಾದ ವಶಪಡಿಸಿಕೊಳ್ಳುವಲ್ಲಿ ಸಿಕ್ಕ ಸಣ್ನ ಯಶಸ್ಸಾಗಿತ್ತು.

ರಸೂಲ್ ಖಾನ್ ಗೋವಾಕ್ಕೆ ಬಲವಾದ ಸೈನ್ಯದೊಂದಿಗೆ ದಾಳಿ ಮಾಡಿದನು. ಆದರೆ ಫುಲಾದ್ ಖಾನ್ ಅವನ ಪ್ರಾಬಲ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದನು. ಆಗ ಜಾಗೃತನಾದ ರಸೂಲ್ ಖಾನ್ ತನ್ನ ಅಧೀನ ಅಧಿಕಾರಿಯ ವಿರುದ್ಧ ಸಹಾಯಕ್ಕಾಗಿ ಪೋರ್ಚುಗೀಸರಿಗೆ ಮನವಿ ಮಾಡಿದನು. ಆಗಿನ ಪೋರ್ಚುಗೀಸರ ಸೇನಾಧಿಕಾರಿಯಾಗಿದ್ದ ಡಿಯಗೋ ಮೆಂಡಿಸ್ ವಿವೇಚನೆಯಿಲ್ಲದೆ ಅವನಿಗೆ ಸಹಾಯ ಮಾಡಿದನು. ಪೋರ್ಚುಗೀಸರ ಸಹಾಯದಿಂದ, ರಸೂಲ್ ಖಾನ್ ಫುಲಾದ್ ಖಾನನನ್ನು ಬನಾಸ್ತರೀಮ್ ನಿಂದ ಹೊರಹಾಕಿದನು. ಒಮ್ಮೆ ಅವನು ಕೋಟೆಯನ್ನು ಸ್ವಾಧೀನಪಡಿಸಿಕೊಂಡ ನಂತರ, ತಿರುಗಿ ಬಿದ್ದ ರಸೂಲ್ ಖಾನ್ ಗೋವಾದ ಶರಣಾಗತಿಗೆ ಒತ್ತಾಯಿಸಿದನು. ಜೊತೆಗೆ ಅವನು ಗೋವಾವನ್ನು ಮುತ್ತಿಗೆ ಹಾಕುವುದಷ್ಟೇ ಅಲ್ಲದೆ, ಎಲ್ಲಾ ಆಹಾರ ಸರಬರಾಜುಗಳನ್ನು ಸ್ಥಗಿತಗೊಳಿಸಿದನು.

ಅಲ್ಬುಕರ್ಕ್ ಮಲಕ್ಕಾವನ್ನು ವಶಪಡಿಸಿಕೊಂಡ ನಂತರ ಕೊಚ್ಚಿನ್‌ಗೆ ಹಿಂದಿರುಗಿದನು, ಆದರೆ ಮಾನ್ಸೂನ್ ಮಾರುತ ಮತ್ತು ಸೇನೆಯ ಕೊರತೆಯ ಕಾರಣದಿಂದಾಗಿ ಅವನಿಗೆ ಗೋವಾಕ್ಕೆ ನೌಕಾಯಾನ ಮಾಡಲು ಸಾಧ್ಯವಾಗಲಿಲ್ಲ, ಕೊಚ್ಚಿನ್ ಮತ್ತು ಕ್ಯಾನನೋರ್‌ನ ಪೋರ್ಚುಗೀಸ್ ಕಮಾಂಡರ್‌ಗಳು ಅವನಿಗೆ ಸಹಾಯ ಮಾಡಲು ನಿರಾಕರಿಸಿದರು. ಡೊಮ್ ಗಾರ್ಸಿಯಾ ಡಿ ನೊರೊನ್ಹಾ ಆರು ಮತ್ತು ಜಾರ್ಜ್ ಡಿ ಮೆಲ್ಲೊ ಪೆರೇರಾ ಅವರ ಅಡಿಯಲ್ಲಿ ಎಂಟು ಹಡಗುಗಳ ಜೊತೆಗೆ ಮತ್ತಷ್ಡು ನೌಕಪಡೆಗಳ ಆಗಮನ, ಅವರ ಮನೋಬಲವನ್ನು ಹೆಚ್ಚಿಸಿತ್ತು.ಜೊತೆಗೆ ಈ ಎರಡೂ ಸೇನಾಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಬುಕರ್ಕ್ ನ ಸೈನಿಕರನ್ನು ಸೆಳೆದಿದ್ದವು.

10 ಸೆಪ್ಟೆಂಬರ್ 1512 ರಂದು, ಅಲ್ಬುಕರ್ಕ್ 1,700 ಪೋರ್ಚುಗೀಸ್ ಸೈನಿಕರನ್ನು ಹೊತ್ತ ಹದಿನಾಲ್ಕು ಹಡಗುಗಳೊಂದಿಗೆ ಕೊಚ್ಚಿನ್‌ನಿಂದ ಪ್ರಯಾಣ ಬೆಳೆಸಿದ. ಅವರ ಸೈನ್ಯ ಗೋವಾದ ಬಂದರನ್ನು ಪ್ರವೇಶಿಸಿದ ತಕ್ಷಣ ಅಲ್ಬುಕರ್ಕ ಬನಾಸ್ತರೀಮ್ ಕೋಟೆಯ ಮೇಲೆ ಬಾಂಬ್ ದಾಳಿ ಮಾಡಲು ಆರು ಹಡಗುಗಳನ್ನು ಕಳುಹಿಸಿದ ಮತ್ತು ಒಳನಾಡಿನೊಂದಿಗೆ ರಸುಲ್ ಖಾನ್ ನ ಸಂಪರ್ಕವನ್ನು ಕಡಿತಗೊಳಿಸಿದ.

ರಸೂಲ್ ಖಾನ್ 3,000 ಜನರ ಮುಖ್ಯಸ್ಥನಾಗಿ ಕೋಟೆಯಿಂದ ನಗರದ ಕಡೆಗೆ ಹೊರಟಿದ್ದಾನೆ ಎಂಬುದನ್ನು ಅರಿತ ಅಲ್ಬುಕರ್ಕ್ ತನ್ನ ಪದಾತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ. ಅವನ ಅಶ್ವಸೈನ್ಯವು ಕೇವಲ 30 ಸೈನಿಕರನ್ನು ಹೊಂದಿತ್ತು, ಆದರೆ ಅವನ ಕೌಶಲ್ಯಪೂರ್ಣ ತಂತ್ರಗಳ ಕಾರಣದಿಂದಾಗಿ, ರಸೂಲ್ ಖಾನ್ ಪಡೆಗಳು ಮುಂಭಾಗದಲ್ಲಿ ಮತ್ತು ಎರಡೂ ಪಾರ್ಶ್ವಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಲ್ಪಟ್ಟವು. ಒಂದು ಸಣ್ಣ ಆದರೆ ಘೋರ ಯುದ್ಧದ ನಂತರ, ರಸೂಲ್ ಖಾನ್ ಪಡೆಗಳು ಬನಾಸ್ತರೀಮ್ ಕೋಟೆಗೆ ಹಿಮ್ಮೆಟ್ಟಿದವು. ಪೋರ್ಚುಗೀಸರು ಅವರನ್ನು ಅನುಸರಿಸಲು ಪ್ರಯತ್ನಿಸಿದರು, ಕೋಟೆಯನ್ನು ವಶಪಡಿಸಿಕೊಳ್ಳಲು ಸಾದ್ಯವಾಗಲಿಲ್ಲ. ಅಲ್ಬುಕರ್ಕ್ ಗೋವಾಕ್ಕೆ ಹಿಂತಿರುಗಿದ.

ಕೋಟೆಯನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ ಅಲ್ಬುಕರ್ಕ್, ಕಂದಕಗಳನ್ನು ಅಗೆಯಲು ಮತ್ತು ಗೋಡೆಯನ್ನು ಮುರಿಯಲು ಆದೇಶಿಸಿದನು. ಆದರೆ ಯೋಜಿತ ಅಂತಿಮ ದಾಳಿಯ ಬೆಳಿಗ್ಗೆ, ರಸುಲ್ ಖಾನ್ ಬಿಳಿ ಧ್ವಜವನ್ನು ನೇತಾಡಿಸಿ,ತನ್ನ ಶರಣಾಗತಿಯನ್ನು ಸಾರಿದನು.ಇದಕ್ಕೆ ಒಪ್ಪಿದ ಅಲ್ಬುಕರ್ಕ್ ತನ್ನ ಎಲ್ಲಾ ಫಿರಂಗಿದಳಗಳು, ಯುದ್ಧಸಾಮಗ್ರಿ ಮತ್ತು ಕುದುರೆಗಳೊಂದಿಗೆ ಶರಣಾಗುವಂತೆ ರಸುಲ್ ಖಾನ್ ಗೆ ಒತ್ತಾಯಿಸಿದನು.

ತನ್ನ ಶಿಬಿರವನ್ನು ಬಿಟ್ಟುಹೋದವರ ಜೀವಗಳನ್ನು ಉಳಿಸಬೇಕು ಎಂಬ ಷರತ್ತಿನ ಮೇಲೆ ರಸೂಲ್ ಖಾನ್ ಸಮ್ಮತಿಸಿದನು.ಅಲ್ಬುಕರ್ಕ್ ಇದಕ್ಕೆ ಒಪ್ಪಿಕೊಂಡನು.ನಂತರ ರಸೂಲ್ ಖಾನ್ ಬನಾಸ್ತರೀಮ್ ಕೋಟೆಯನ್ನು ತೆರವು ಮಾಡಿ ಗೋವಾವನ್ನು ಸಂಪೂರ್ಣವಾಗಿ ಪೋರ್ಚುಗೀಸರ ಕೈಗೆ ಒಪ್ಪಿಸಿದನು.

ಅಲ್ಬುಕರ್ಕನ ಕೈಯಲ್ಲಿ ಸಿಲುಕಿದ ಪೋರ್ಚುಗೀಸರಿಗೆ ಅವನ ಕೌರ್ಯದ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಮೇ 1510 ರಲ್ಲಿ ಆದಿಲ್ ಶಾಹಿ ಪಡೆಗಳು ಪೋರ್ಚುಗೀಸರನ್ನು ಗೋವಾದಿಂದ ಜಾಗ ಖಾಲಿ ಮಾಡಲು ಒತ್ತಾಯಿಸಿದಾಗ ಅವರಲ್ಲಿ ಕೆಲವರು ರಸೂಲ್ ಖಾನ್ ಜೊತೆ ಸೇರಿಕೊಂಡರು. ಇತರರು ಇತ್ತೀಚೆಗೆ ನಡೆದ ಮುತ್ತಿಗೆ ಸಂದರ್ಭದಲ್ಲಿ ಗೋವಾ ತೊರೆದಿದ್ದರು.

ಶಿಬಿರವನ್ನು ಬಿಟ್ಟುಹೋದವರ ಜೀವವನ್ನು ಉಳಿಸುವುದಾಗಿ ರಸೂಲ್ ಖಾನ್ ಗೆ ಭರವಸೆ ನೀಡಿದ ಅಲ್ಬುಕರ್ಕ್ ತನ್ನ ಮಾತನ್ನು ಉಳಿಸಿಕೊಂಡನು. ಆದರೆ ಅವರ ಕಿವಿ,ಮೂಗು,ಹೆಬ್ಬೆರಳು ಮತ್ತು ಕೂದಲನ್ನು ಕತ್ತರಿಸಿ ಅವರನ್ನು ವಿರೂಪಗೊಳಿಸಿದನು. ಈ ದಂಗೆಕೋರರಲ್ಲಿ ಅತ್ಯಂತ ಚಿರಪರಿಚಿತರೆಂದರೆ ಮ್ಯೆನರ್ ಫಿಡಾಲ್ಗೊ ಎಂಬ ಹೆಸರಿನಿಂದ ಕರೆಯಲ್ಪಡುವ ಫರ್ನಾವೊ ಲೋಪೆಜ್ . ಅವನನ್ನು ಅದೇ ರೀತಿ ವಿರೂಪಗೊಳಿಸಲಾಯಿತು ಮತ್ತು ಪೋರ್ಚುಗಲ್‌ಗೆ ಹೋಗುವ ಹಡಗಿನಲ್ಲಿ ಬಂಧನದಲ್ಲಿ ಇರಿಸಲಾಯಿತು. ಸೇಂಟ್ ಹೆಲೆನಾ ದ್ವೀಪದಲ್ಲಿ ಹಡಗು ತಂಗಿದ್ದಾಗ ಅವರು ತಪ್ಪಿಸಿಕೊಂಡನು ಮತ್ತು ಅಲ್ಲಿ ಅನೇಕ ವರ್ಷಗಳ ಕಾಲ ಆಜ್ಙಾತ ಜೀವನವನ್ನು ನಡೆಸಿದನು.

ಗ್ರಂಥಸೂಚಿ

[ಬದಲಾಯಿಸಿ]
  • Robert Sewell, A Forgotten Empire (Vijayanagar). A Contribution to the History of India, Adamant Media Corporation, p. 351, ISBN 0-543-92588-9