ವಿಷಯಕ್ಕೆ ಹೋಗು

ರವಿ ಕುಮಾರ್ ನರ್‍ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರವಿ ಕುಮಾರ್ ನರ್‍ರ
Bornಸೆಪ್ಟೆಂಬರ್ ೧ ೧೯೬೩ (ವಯಸ್ಸು ೫೯)
Occupationಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ
Spouseಎನ್.ವನಜಾಕ್ಷಿ
Children
Awardsಪದ್ಮಶ್ರೀ
WebsiteOfficial web site

  ರವಿ ಕುಮಾರ್ ನರ್‍ರ ಅವರು ಸಿಕಂದರಾಬಾದ್‌ನ ಭಾರತೀಯ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತರು. ನರ್‍ರ ಅವರು ದಲಿತ ಸಮುದಾಯದ ಉನ್ನತಿಯ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ೨೦೧೪ ರಲ್ಲಿ ಭಾರತ ಸರ್ಕಾರವು ಸಮಾಜಕ್ಕೆ ಅವರ ಸೇವೆಗಳಿಗಾಗಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು .

ಜೀವನಚರಿತ್ರೆ

[ಬದಲಾಯಿಸಿ]

  ರವಿ ಕುಮಾರ್ ನರ್‍ರ ಅವರು ಸೆಪ್ಟೆಂಬರ್ ೧ ೧೯೬೩ ರಂದು ಜನಿಸಿದರು. [1] ಅವರ ತಂದೆ ಶಂಕರಯ್ಯ ನರ್‍ರ ದೈನಂದಿನ ಕೂಲಿ ಕೆಲಸ ಮಾಡುತ್ತಿದ್ದರು. [] ಅಲ್ಪ ಆರ್ಥಿಕ ಸಂಪನ್ಮೂಲ ಹೊಂದಿರುವ ಕುಟುಂಬದಲ್ಲಿ, [] ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಸಾಮಾನ್ಯವಾಗಿ ಹೈದರಾಬಾದ್ ಅವಳಿ ನಗರ ಎಂದು ಕರೆಯಲ್ಪಡುವ ಸಿಕಂದರಾಬಾದ್‌ನ ಕೊಳೆಗೇರಿಯಲ್ಲಿ ನರ್‍ರ ಅವರು ಜನಿಸಿದರು. [] ಅವರು ವಿಜ್ಞಾನದಲ್ಲಿ ಪದವಿಯನ್ನು ಪಡೆದರು, (ಬಿಎಸ್‌ಸಿ). ಕಾನೂನಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿ ಎಲ್‌ಎಲ್‌ಬಿ ಪದವಿ ಪಡೆದು ನಂತರ, ಎಲ್‌ಎಲ್‌ಎಮ್‌ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ (ಡಿಜೆ) [] ಮತ್ತು ಸಾರ್ವಜನಿಕ ಸಂಪರ್ಕದಲ್ಲಿ ಡಿಪ್ಲೊಮಾವನ್ನು ಪಡೆದರು. []

ದಲಿತ ಉದ್ಯಮ

[ಬದಲಾಯಿಸಿ]

ನರ್‍ರ ಅವರು ಐದು ರಾಜ್ಯಗಳನ್ನು ಒಳಗೊಂಡಿರುವ ದಕ್ಷಿಣ ಭಾರತದಲ್ಲಿ ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (ಡಿಐಸಿಸಿಐ) ಸಂಯೋಜಕರಾಗಿದ್ದರೆ. ಅವರು ೨೦೧೧ ರಿಂದ ಡಿಐಸಿಸಿಐ, ಆಂಧ್ರಪ್ರದೇಶ ಚಾಪ್ಟರ್‌ನ ಅಧ್ಯಕ್ಷರೂ ಸಹ ಆಗಿದ್ದಾರೆ. ಡಿಐಸಿಸಿಐಯ ರಾಷ್ಟ್ರೀಯ ಆಡಳಿತ ಮಂಡಳಿಯ ಸದಸ್ಯರಾಗಿ, ಅವರು ೨೦೧೦-೨೦೧೫ ರ ಸರ್ಕಾರಿ ಕೈಗಾರಿಕಾ ನೀತಿಯನ್ನು ಮಾರ್ಪಡಿಸಲು ಸಹಾಯ ಮಾಡಿದರು. ಅದು ದಲಿತರಿಗೆ ಸಹಾಯ ಮಾಡಿತು. 

ನರ್‍ರ ಭಾರತ ಸರ್ಕಾರದ ರಾಷ್ಟ್ರೀಯ ಕಾರ್ಯಪಡೆಯ (ಎನ್‌ಟಿಎಫ್) ದೃಢೀಕರಣ ಮತ್ತು ಪೂರೈಕೆದಾರ ವೈವಿಧ್ಯತೆಗಾಗಿ ಸದಸ್ಯರಾಗಿದ್ದಾರೆ. 

ನರ್‍ರ ಆಂಧ್ರಪ್ರದೇಶದಾದ್ಯಂತ ೪೦ ಮಹಿಳೆಯರು ಸೇರಿದಂತೆ ೨೨೦ ದಲಿತ ಉದ್ಯಮಿಗಳಿಗೆ ೨೧ ದಿನಗಳ ವಸತಿ ಕಾರ್ಯಕ್ರಮವಾದ ಐಜಿಎನ್‌ಐಟಿ‌ಇ ಅನ್ನು ಹೈದರಾಬಾದ್‌ನ ಎನ್‌ಐಎಮ್‌ಎಸ್‌ಎಮ್‌ಇ ನಲ್ಲಿ ಆಯೋಜಿಸಿದರು. ಇದು ಸರ್ಕಾರ, ಸಿಐಐ, ಬ್ಯಾಂಕುಗಳು, ತರಬೇತಿ ಸಂಸ್ಥೆಗಳು ಮತ್ತು ಅಂತಹುದೇ ಒಳಗೊಂಡಿರುವ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವಾಗಿದೆ. 

ಶಾಂತಿ ಚಕ್ರ ಫೌಂಡೇಶನ್

[ಬದಲಾಯಿಸಿ]

ದಲಿತರ ನಡುವೆ ನೆಟ್‌ವರ್ಕಿಂಗ್ ಅನ್ನು ಅಭಿವೃದ್ಧಿಪಡಿಸಲು ನರ್‍ರ ಸೇವಾ ಸಂಸ್ಥೆಯಾದ ಶಾಂತಿ ಚಕ್ರ ಫೌಂಡೇಶನ್ ಅನ್ನು ಸ್ಥಾಪಿಸಿದರು. ಇದು ಬಿಆರ್ ಅಂಬೇಡ್ಕರ್ ಅವರ ತತ್ವಶಾಸ್ತ್ರವನ್ನು ಉತ್ತೇಜಿಸುತ್ತದೆ ಮತ್ತು ಮೂಢನಂಬಿಕೆಗಳ ವಿರುದ್ಧ ಶಿಕ್ಷಣ ನೀಡುತ್ತದೆ. ಪ್ರತಿಷ್ಠಾನವು ದಲಿತರಿಗೆ - ವಿಶೇಷವಾಗಿ ಯುವಕರಿಗೆ - ಹಲವಾರು ವಿಷಯಗಳ ಮೇಲೆ ಸಾಪ್ತಾಹಿಕ ತರಗತಿಗಳನ್ನು ಕೈಗೊಳ್ಳುತ್ತದೆ. 

ಪ್ರಶಸ್ತಿಗಳು ಮತ್ತು ಮನ್ನಣೆಗಳು

[ಬದಲಾಯಿಸಿ]

ರವಿ ಕುಮಾರ್ ನರ್‍ರ ಅವರಿಗೆ ಭಾರತ ಸರ್ಕಾರವು ೨೦೧೪ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಸಮಾಜಕ್ಕೆ ಅವರ ಸೇವೆಯನ್ನು ಗುರುತಿಸಿ ಗೌರವಿಸಿತು. []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Election Commission of India". Election Commission of India. 2004. Archived from the original on 3 ಮಾರ್ಚ್ 2016. Retrieved 28 ಸೆಪ್ಟೆಂಬರ್ 2014.
  2. ೨.೦ ೨.೧ "Shanti Chakra International Foundation". Shanti Chakra International Foundation. 2014. Archived from the original on 28 ಮೇ 2016. Retrieved 28 ಸೆಪ್ಟೆಂಬರ್ 2014.
  3. "About". Personal web site. 2014. Retrieved 28 ಸೆಪ್ಟೆಂಬರ್ 2014.
  4. "Padma Awards Announced". Circular. Press Information Bureau, Government of India. 25 ಜನವರಿ 2014. Archived from the original on 22 ಫೆಬ್ರವರಿ 2014. Retrieved 23 ಆಗಸ್ಟ್ 2014.


ಬಾಹ್ಯ ಕೊಂಡಿಗಳು

[ಬದಲಾಯಿಸಿ]