ರವಿರಾಜ ಬಳ್ಳಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರವಿರಾಜ ಬಳ್ಳಾಲ

ಪೂಜ್ಯ ಶ್ರೀ ರವಿರಾಜ ಬಲ್ಲಾಳ್ರವರ  ದೊಡ್ಡಪ್ಪಾಜಿಯವರಾದ ಶ್ರೀ ಮದ್ವೀರನರಸಿಂಹ ಲಕ್ಷ್ಮಪ್ಪರಸರಾದ ಬಂಗರಾಜ ಒಡೆಯರು ಈಗಿನ ಬಂಗಾಡಿ ಅರಮನೆಯನ್ನು ೧೯೦೧ರಲ್ಲಿ ಕಟ್ಟಿಸಿದರೆಂದು ಚಾವಡಿಡಿಯ ಮಧ್ಯದಲ್ಲಿ ಚಕ್ರಾಕಾರದಲ್ಲಿರುವ ಕೆತ್ತನೆ ಕೆಲಸದ ಒಂದು ಶಾಸನದಲ್ಲಿ ತಿಳಿದು ಬರುತ್ತದೆ. ಇವರಿಗೆ ಮಕ್ಕಳಿರಲಿಲ್ಲ. ಹಾಗಾಗಿ ರವಿರಾಜರ ಮೇಲೆ ಅಪಾರ ಪ್ರೀತಿ ಇರಿಸಿ ಅವರ ದೈನಂದಿನ ಸ್ನಾನ,ಪೂಜೆ,ಊಟ,ಮಲಗುವಾಗ ಹೀಗೆ ಪ್ರತಿಯೋಮದು ವ್ಯವಹಾರದಲ್ಲೂ ರವಿರಾಜರನ್ನು ಅವರೊಂದಿಗೆ ಇರಿಸಿಕೊಳ್ಳುತ್ತಿದ್ದರು.ಶ್ರೀ ನರಸಿಂಹ ಲಕ್ಷ್ಮಪ್ಪ ಅರಸರು ಇವರಿಗೆ ಇಟ್ಟ ಹೆಸರು ರವಿರಾಜ ಎಂದಾದರೂ ಪ್ರೀತಿಯಿಂದ ಕರೆಯುವ ಹೆಸರು ಅಣ್ಣಯ್ಯ ಎಂದಾಯಿತು. ಹಿರಿಯರೆಲ್ಲಾ ಇದೇ ಹೆಸರಿನಿಂದಲೇರೆಯುತ್ತಿದ್ದರು.
ಜೈನಾಗಮ, ಪುರಾಣ ಮುಂತಾದ ಗ್ರಂಥ ಭಂಡಾರವನ್ನು ಸ್ವತ‍ಃ ಲೀಲಾಜಾಲವಾಗಿ ಪಠಣ ಮಾಡುವ ಹಾಗೂ ಅರ್ಥೈಸಿ ಸುಲಭ ಶೈಲಿಯಲ್ಲಿ ಮತ್ತೊಬ್ಬರಿಗೆ ವ್ಯಾಖ್ಯಾನದಿಂದ ಫಲವನ್ನು ಉಣ್ಣಿಸುವ ಮಹಾವಿದ್ವಾಂಸರೂ ಆಗಿದ್ದರು. ಆದರೆ ಅಂಥಾ ಗೌರವಾನ್ವಿತ ಮಹಾವಿದ್ವಾಂಸರಾಗಿದ್ದ ಒಡೆಯರು ರವಿರಾಜರ ನಾಲ್ಕನೇ ವಷ‍ ವಯಸ್ಸಿನಲ್ಲಿರುವಾಗ ಪಂಚ ನಮಸ್ಕಾರ ಮಂತ್ರವನ್ನು ನೆನಯುತ್ತಾ ಸ್ವರ್ಗಸ್ಥರಾದರು. ಅಂತಿಮ ಕ್ಷಣದ ಒಂದೇ ಒಂದು ತಾಸಿನ ಮುಂಚಿನವರೆಗೂ ಅವರ ಆತ್ಮೀಯತೆಯ ಆ ಪ್ರೀತಿಯು ರವಿರಾಜರನ್ನು ಅಗಲದೇ ಮಹಾನುಭಾವರ ಜಠರದ ಮೇಲೇಯೇಮಲಗುವಂತೆ ಪ್ರೇರೇಪಿಸಿತು. ಆಗಿನ ಹೃದಯ ಸ್ಪರ್ಶಿಸುವಂಥ ಆ ಪ್ರೀತಿಯ ನೆನಪು ಈಗಲೂ ಶ್ರೀಯುತರಲ್ಲಿ ನೆಲೆಯೂರಿ ನಿಂತಿದೆ.. ಸನ್ಮಾನ್ಯರ ಅಂತ್ಯಗಾಲದಲ್ಲಿ ಶ್ರೀಯುತರು ಅಪ್ಪಾಜಿಯವರಿಂದ ಶಾಸ್ತ್ರೋಪದೇಶ ಕೇಳುತ್ತಾ ಕೊನೆಯುಸಿರಿನಿಂದ ಈ ನಶ್ವರದೇಹವನ್ನು ತ್ಯಜಿಸಿ ಸ್ವರ್ಗಸ್ಥರಾದರು. ಆಮೇಲೆ ಶ್ರೀಯುತರ ತಂದೆಯವರು ಇವರ ೫ನೇ ವರ್ಷ ಪ್ರಾಯದಲ್ಲಿ ಶಾಸ್ತ್ರೋಕ್ತವಾದ ಚೌಲಕರ್ಮವಿಧಿಯನ್ನು ಬಂಗಾಡಿ ಅರಮನೆ ಯಲ್ಲೆ ಅದ್ಧೂರಿಯಾಗಿ ನೆರವೇರಿಸಿದರು. ಆರನೇ ವರ್ಷದಲ್ಲಿ ನವರಾತ್ರಿಯ ವಿಜಯದಶಮಿ ಯಂದು ತಮ್ಮ ಕುಲದೇವರಾದ ಅರಮನೆ ಬಸದಿಯ ಶ್ರೀ 

ಅದಿನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಅಕ್ಷತೆಯ ಮೇಲೆ ಅಕ್ಷರಮಾಲೆಯನ್ನು ಶ್ರೀಯುತರ ಕೈಯಿಂದ ಬರೆಸಿ ಅಕ್ಷರಾಭ್ಯಾಸ ಪ್ರಾರಂಭಿಸಿ ಶಾಲೆಗೆ ದಾಖಲಾತಿ ಮಾಡಿದರು.

ಆಗಿನ ಕಾಲದಲ್ಲಿ ಊರಲ್ಲಿ ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ. ಈಗ ಸರಕಾರಿ ಬ್ಯಾಂಕು ಇರುವ ಈಗಿನ ಕಟ್ಟಡದಲ್ಲಿ ೩ ಜನ ಅಧ್ಯಾಪಕರಿರುವ  ೫ನೇ ತರಗತಿವರೆಗೆ ವಿದ್ಯಾರ್ಜನೆಹೊಂದುವ ಶಾಲೆ ಇತ್ತು. ಈ ಶಾಲೆಯಲ್ಲೇ ಶ್ರೀಯುತರ ವಿದ್ಯಾಭ್ಯಾಸದ ಪ್ರಾರಂಭ.ಐದಾರು ಗ್ರಾಮಗಳಿಗೆ ಇದೊಂದೆ ಶಾಲೆ. ನಾಲ್ಕೈದು ಮೈಲು ದೂರದಿಂದ ಮಕ್ಕಳು ಕಾಲ್ನಡಿಗೆಯಿಂದಲೇಶಾಲೆಗೆ ಬರುತ್ತಿದ್ದರು. ಆ ಸಮಯದಲ್ಲಿ ಶಿಸ್ತುಬದ್ಧವಾದ ಕಲಿಸುವಿಕೆ.ಅಧ್ಯಾಪಕರು ಶಾಲೆಗೆ ಪ್ರವೇಶಿಸುವಾಗ ನಿಶ್ಯಬ್ದದಿಂದ ಎದ್ದು ನಿಂತು ವಿನಯಪೂರ್ವಕ ಶಿಷ್ಯವರ್ಗದಿಂದ ಸ್ವಾಗತ,ಭಯ,ಭಕ್ತಿಯಿಂದ ಲವಲವಿಕೆಯ ಕಲಿಕೆಯ ಹಂಬಲ ಇದೆಲ್ಲಾ ಆಗಿನ ವೈಶಿಷ್ಟ್ಯ ಎಂದು ರವಿರಾಜರು ಹೇಳುತ್ತಾರೆ. ಶಾಲೆಯ ಪ್ರಯಾಣದ ಜೊತೆಗೆ ಶ್ರೀಯುತರ ಪ್ರಯಾಣವೂ ಮುಂದುವರಿದು ಕೊನೆಯ ಹಂತದ ೫ನೇ ತರಗತಿಯ ತೇರ್ಗಡೆಯಾಯಿತು.
ಶ್ರೀಯುತರ ತಂದೆಯವರು ಇವರ ಮೇಲಿನ ಪ್ರೀತಿಯಿಂದ ಯಾವ ಸಂದರ್ಭದಲ್ಲೂ ಯಾವ ರೀತಿಯ ಬೆದರಿಕೆಯ ಮಾತುಗಳನ್ನಾಗಲಿ, ಹೊಡೆದು ಶಿಕ್ಷಿಸುವ ಪದ್ಧತಿಯಾಗಲಿ ಇವರಿಗೆ ಗೊತ್ತೇ ಇರಲಿಲ್ಲವಂತೆ .ಶ್ರೀಯುತರಿಗೆ ಬಾಲ್ಯದ ೮ನೇ ವಯಸ್ಸಿನಲ್ಲಿ ಜ್ಞಾನೋದಯವಾಗಿ ಹಳೆಯ ನೆನಪಿನ ಅದೊಂದು ಸುದಿನವನ್ನು ತಿಳಿಸಲು ಬಯಸುತ್ತಾರೆ.
ಶ್ರೀಯುತರು ಮತ್ತು ಅವರ ಅಣ್ಣ ಎಂದಿನಂತೆ ಮಾಮೂಲಾಗಿ ಆ ದಿನವೂ ಆಟವಾಡಿಕೊಂಡು ಈಗಲೂ ಇರುವ ತಮ್ಮ ದನಗಳ ಹಟ್ಟಿಯ ಹಿಂಭಾಗದಲ್ಲಿ ಜಗಳ ಪ್ರಾರಂಭಿಸಿದ್ದರು. ಅದೇಕೋ ಶ್ರೀಯುತರ ಅಪ್ಪಾಜಿಯವರಿಗೆ ಆದಿನ ಕೋಪ ನೆತ್ತಿಗೇರಿ ತಮ್ಮ ಅಂಗಳದಲ್ಲಿ ಕಟಾವು ಮಾಡಿ ಶೇಖರಿಸಿದ ಎಳ್ಳಿನ ಗಿಡಗಳ ರಾಶಿಯಿಂದ ನಾಲ್ಕೈದು ಬಳಿತ ಗಿಡಗಳು ಅವರ ಕೈ ಸೇರಿದವು. ಆ ಗಿಡಗಳಿಂದ ಒಂದೇಸಮನೆ ರಪ ರಪನೆ ಬಾರಿಸಿದರು. ಆಗಲೇ