ರತ್ನಗಿರಿ ಬೋರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರತ್ನಗಿರಿ ಬೋರೆ ಇದು ಚಿಕ್ಕಮಗಳೂರಿನಲ್ಲಿರುವ ಒಂದು ಸಣ್ಣ ಗುಡ್ಡ ಹಾಗು ಪ್ರವಾಸಿ ಸ್ಥಳ. ಇದು ಚಿಕ್ಕಮಗಳೂರಿನಿಂದ ಸುಮಾರು ೩ ಕಿ.ಮೀ ದೂರದಲ್ಲಿದೆ. ಗುಡ್ಡದ ಮೇಲೆ ಒಂದು ಸಣ್ಣ ದೇವಾಲಯವಿದೆ ಹಾಗು ಚಿಕ್ಕಮಗಳೂರು ನಗರ ಸಭೆಯವರು ಇಲ್ಲಿ ಒಂದು ಸುಂದರವಾದ ಉದ್ಯಾನವನವನ್ನು ನಿರ್ಮಿಸಿದ್ದಾರೆ. ಇದರ ಮೇಲಿನಿಂದ ಸಂಪೂರ್ಣ ಚಿಕ್ಕಮಗಳೂರು ನಗರವನ್ನು ನೋಡಬಹುದು ಮತ್ತು ಇಲ್ಲಿಂದ ಮುಳ್ಳಯ್ಯನಗಿರಿ, ದೇವೀರಮ್ಮನ ಬೆಟ್ಟ, ದತ್ತ ಪೀಟದ ಬೆಟ್ಟಗಳನ್ನು ನೋಡಬಹುದು. ಬೆಟ್ಟದ ತಳದವರೆಗು ಉತ್ತಮ ರಸ್ತೆಯಿದ್ದು, ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳ ವ್ಯವಸ್ಥೆಯಿದೆ.