ರತನ್‍ಜಿ ದಾದಾಭಾಯ್ ಟಾಟ

ವಿಕಿಪೀಡಿಯ ಇಂದ
Jump to navigation Jump to search
ಚಿತ್ರ:RDTata-1.jpg
'ರತನ್‍ಜಿ ದಾದಾಭಾಯ್ ಟಾಟ'

(೧೮೫೬-೧೯೨೬)

ಆರ್. ಡಿ. ಟಾಟಾ, [೧] 'ಟಾಟ ಸನ್ಸ್ ಕಂಪೆನಿ'ಯ ಸಮರ್ಥ, ವ್ಯವಹಾರಚತುರ, ಹಾಗೂ, ಓರ್ವ 'ಭಾರತೀಯ ಯಂತ್ರೋದ್ಯಮಿಗಳಲ್ಲಿ ಒಬ್ಬರಾಗಿದ್ದರು.

'ಆರ್.ಡಿ.ಟಾಟ, ಜೆ.ಎನ್.ಜೊತೆ ಸೇರಿದರು[ಬದಲಾಯಿಸಿ]

ನವಸಾರಿ ಯಲ್ಲಿ ಜನಿಸಿದ, ಆರ್. ಡಿ. ಟಾಟಾರವರ ವ್ಯವಹಾರ ಚಾತುರ್ಯ, ಹಾಗೂ ಅಪೂರ್ವ ಹೊಂದಾಣಿಕೆಗಳಿಂದ ಜಮ್ ಸೆಟ್ ಜಿ ಯವರ ಮನಗೆದ್ದರು.ರತನ್ ಜಿ ದಾದಾಭಾಯ್ ಟಾಟಾ ರವರು, ಜೆಮ್ ಸೆಟ್ ಜಿ ನುಝರ್ವಾನ್ ಜಿ ಟಾಟಾ) ರವರ ಸೋದರಮಾವನ ಮಗ.( ದಾದಾಭಾಯ್ ಜಮ್ ಸೆಟ್ ಜಿ ರವರ ತಾಯಿ, ಜೀವನ್ ಬಾಯಿ ಯವರ ಸೋದರ). ದಾದಾಭಾಯ್ ರವರು, ಶ್ರೀಮತಿ. ಭಿಖಿಬಾಯಿ ಯವರನ್ನು ಲಗ್ನವಾಗಿದ್ದರು. ಇವರ ಮಗನೇ, ರತನ್ ಜಿ. ನವಸಾರಿಯಲ್ಲಿ ೧೮೫೬ ರಲ್ಲಿ ಜನಿಸಿದರು. ಅವರ ಬಾಲ್ಯದ ದಿನಗಳು ಹಾಗೂ ವಿದ್ಯಾಭ್ಯಾಸವೆಲ್ಲಾ ನವಸಾರಿಯಲ್ಲೇ ಕಳೆಯಿತು. ಮುಂದಿನ ವಿದ್ಯಾಭ್ಯಾಸ ಬೊಂಬಾಯಿನ ಎಲ್ಫಿನ್ ಸ್ಟನ್ ಕಾಲೇಜ್ ನಲ್ಲಿ ನಡೆಯಿತು. ಜಮ್ ಸೆಟ್ ಜಿಯವರೂ ಎಲ್ಫಿನ್ಸ್ಟನ್ ಕಾಲೇಜಿನಲ್ಲೇ ವ್ಯಾಸಂಗಮಾಡಿದ್ದರು. ಶಿಕ್ಷಣವಾದಮೇಲೆ ಕೃಷಿಯಲ್ಲಿ ತರಬೇತಿ ಪಡೆಯಲು ಮದ್ರಾಸ್ ಗೆ ಹೋದರು. ಅಲ್ಲಿಂದ ಬಂದವರೇ ಮಧ್ಯಏಶ್ಯದ ಹಾಂಕಾಂಗ್ ಮುಂತಾದ ಸ್ಥಳಗಳಲ್ಲಿ ತಮ್ಮ ವ್ಯಾಪಾರದ ಶಾಖೆಗಳನ್ನು ಸ್ಥಾಪಿಸಿದರು. ಆರ್. ಡಿ ಯವರಿಗಿಂತ ೧೭ ವರ್ಷ ಹಿರಿಯರಾದ ಜೆಮ್ ಸೆಟ್ ಜಿ ಯವರು, ಆರ್ ಡಿಯವರ ವ್ಯವಹಾರ ಚತುರತೆ, ದಕ್ಷತೆಗಳನ್ನು ಚೆನ್ನಾಗಿ ಅರಿತಿದ್ದರು. ಹಾಗಾಗಿ ಅವರನ್ನು ತೀವ್ರವಾಗಿ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ೧೮೭೪ ರಲ್ಲಿ ತಮ್ಮ ನಾಗಪುರದ ಎಂಪ್ರೆಸ್ ಮಿಲ್, ಪ್ರಾರಂಭಿಸಿದಾಗಲೂ, ೨೮ ವರ್ಷವಯಸ್ಸಿನ, ಆರ್. ಡಿ ಯವರನ್ನು ಜೊತೆಗಾರ/ಪಾಲುಗಾರನಾಗಿ ನೇಮಿಸಿಕೊಂಡಿದ್ದರು. ಮುಂದೆ ೧೮೯೬ ರಲ್ಲಿ ಟಾಟ ಅಂಡ್ ಸನ್ಸ್ ಕಂಪೆನಿಯನ್ನು ಪ್ರಾರಂಭಿಸಿದಾಗಲೂ, ಆರ್. ಡಿಯವರ ಜೊತೆಗಾರಿಕೆ ಅವರಿಗೆ ಅನಿವಾರ್ಯವಾಗಿ ತೋರಿತು. ಆದ್ದರಿಂದ ಅವರನ್ನು ಪಾಲುಗಾರರನ್ನಾಗಿ ಮಾಡಿಕೊಂಡರು. ಆರ್.ಡಿ.ಟಾಟ,ರೇಷ್ಮೆಬಟ್ಟೆಗಳನ್ನು ಚೀನ ದಿಂದ ತಂದು, ಭಾರತದಲ್ಲಿ ಮಾರುತ್ತಿದ್ದರು. ಬರ್ಮಾ ದಿಂದ ಅಕ್ಕಿಯನ್ನು ತರಿಸಿಕೊಂಡು, ಅದನ್ನು ದೂರದ ಪೂರ್ವಾತ್ಯದೇಶಗಳಲ್ಲಿ ಮಾರಾಟಮಾಡುತ್ತಿದ್ದರು.

ವ್ಯಾಪಾರದ ಶಾಖೆಗಳನ್ನುವಿಶ್ವದ ಪ್ರಮುಖ ಶಹರುಗಳಲ್ಲಿ ತೆರೆದರು[ಬದಲಾಯಿಸಿ]

ಜಮ್ ಸೆಟ್ ಜಿ ಟಾಟಾ ರವರ ಶಾಖೆ, ಶಾಂಘೈನಲ್ಲಿತ್ತು. ಆರ್.ಡಿ ಟಾಟರವರೂ ತಮ್ಮ ವ್ಯಾಪಾರದ ಶಾಖೆಗಳನ್ನು ಹಾಂಕಾಂಗ್,ಪ್ಯಾರಿಸ್, ನ್ಯೂಯಾರ್ಕ್, ಮತ್ತು ಕೋಬೆ, (ಜಪಾನ್) ಯಲ್ಲಿ ತೆರೆದರು.ಆರ್. ಡಿ ತಮ್ಮ ಪ್ರಾಯದಲ್ಲಿ ಬಾನಾಜಿಪರಿವಾರದಲ್ಲಿ ಒಬ್ಬ ಹುಡುಗಿಯೊಡನೆ ಲಗ್ನವಾಗಿದ್ದರು. ಆದರೆ, ಆಕೆ ಮದುವೆಯಾದ ಸ್ವಲ್ಪಸಮಯದಲ್ಲೇ ತೀರಿಕೊಂಡಾಗ, ಬೇಸರಗೊಂಡು ೪೦ ವರ್ಷಗಳವರೆಗೆ ಮದುವೆಯ ಬಗ್ಗೆ ಯೋಚನೆಯನ್ನು ಕೈಬಿಟ್ಟಿದ್ದರು. ಆರ್. ಡಿ ದುಂದು ವೆಚ್ಚಗಾರ. ಹಾಗೂ ಜನರಿಗೆ ಕೆಲವುವೇಳೆ ಮಿತಿಮೀರಿ ಸಹಾಯಮಾಡಿ ಕೈಬರಿದುಮಾಡಿಕೊಳ್ಳುವ ಸ್ವಭಾವ. ಆದರ ದೊರಾಬ್ ಹಾಗಲ್ಲ. ಹಣದ ಬಳಕೆಯಬಗ್ಗೆ ಅತೀವ ಎಚ್ಚರಿಕೆ ವಹಿಸುತ್ತಿದ್ದರು. ಸುಮ್ಮನೆ ಹಣ ಪೋಲುಮಾಡುವುದು ಅವರಿಗೆ ಸುತರಾಂ ಇಷ್ಟವಿರುತ್ತಿರಲಿಲ್ಲ. ಕೆಲವು ವೇಳೆ ಇದಕ್ಕಾಗಿ ಇಬ್ಬರಲ್ಲೂ ವೈಮನಸ್ಯ ಏರ್ಪಡುತ್ತಿತ್ತು. ಇದನ್ನು ತಪ್ಪಿಸಲು, ಆರ್. ಡಿ ಪ್ಯಾರಿಸ್ ಗೆ ಹೋಗಲು ಇಚ್ಛಿಸಿದ್ದು. ಆರ್. ಡಿ ಫ್ರಾನ್ಸ್ ನಲ್ಲಿ ವ್ಯಾಪಾರವನ್ನು ಹೆಚ್ಚಿಸಲು ಆಶಿಸಿದರು. ಜಮ್ ಸೆಟ್ ಜಿ ಯವರು ಇದನ್ನೆಲ್ಲಾ ಚೆನ್ನಾಗಿ ಗಮನಿಸಿದ್ದರು. ಪ್ಯಾರಿಸ್ ನಲ್ಲಿ ಆರ್. ಡಿಯವರಿಗೆ ಫ್ರೆಂಚ್ ಕಲಿಯುವ ಮನಸ್ಸಾಯಿತು. ಅದರಿಂದ ಅವರ ಬಿಝಿನೆಸ್ ವೃದ್ಧಿಗೊಳ್ಳುವ ಸಾಧ್ಯತೆಗಳನ್ನು ಅವರು ಮನಗಂಡು, ಜಮ್ ಸೆಟ್ ಜಿ ಯವರ ಕಿವಿಗೆ ಹಾಕಿದರು.

ಪ್ಯಾರಿಸ್ಸಿನಲ್ಲಿ, ಸೂನಿ ಯವರ ಜೊತೆ ವಿವಾಹ[ಬದಲಾಯಿಸಿ]

ಸೆಟ್ ಜಿ ಕೂಡಲೆ ಒಪ್ಪಿ, ಒಬ್ಬ ಖಾಸಗಿ ಶಿಕ್ಷಕರನ್ನು ಹೊಂದಿಸಿಕೊಟ್ಟರು. ಆ ಶಿಕ್ಷಕರಬಳಿ ಕಲಿಯಲು, ೨೦ ವರ್ಷದ ಎತ್ತರವಾದ, ಸುಂದರ ಮೈಕಟ್ಟು, ಹಾಗೂ ಬ್ಲಾಂಡ್ ಕೂದಲಿನ, ಆಕರ್ಶಕ ಫ್ರೆಂಚ್ ತರುಣಿ ಸುಝಾನ್ ಬ್ರೈರ್ ಎಂಬವಳನ್ನು ಕಂಡರು. ಆಗ ಆರ್. ಡಿಯವರಿಗೆ ೪೬ ವರ್ಷವಯಸ್ಸು. ಆಕೆಯನ್ನು ಮದುವೆಯಗುವ ಆಸೆಯನ್ನು ವ್ಯಕ್ತಪಡಿಸಿದಾಗ, ಜೆ. ಎನ್ ಟಾಟ ಒಪ್ಪಿಮದುವೆ ಮಾಡಿಸಿದರು. ಆರ್. ಡಿಯವರನ್ನು ತಮ್ಮ ಮಗನಂತೆ ಪ್ರೀತಿಸುತ್ತಿದ್ದರು. ಆರ್. ಡಿಯವರನ್ನು ಹೇಗಾದರೂ ಮಾಡಿ ತಮ್ಮ ಬಿಝಿನೆಸ್ ನಲ್ಲಿ ಅಭಿರುಚಿತೆಗೆದುಕೊಳ್ಳುವಂತೆ ಮಾಡುವಲ್ಲಿ ಅವರು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದರು. ಆಗಿನಕಾಲದಲ್ಲಿ ಪಾರ್ಸಿ ಹುಡುಗರು ಬೇರೆ ಜಾತಿಯ ಹಾಗೂ ರಾಷ್ಟ್ರದವರಜೊತೆ ಮದುವೆ, ನಿಶಿದ್ಧವಾಗಿತ್ತು.

ಲಂಡನ್ ನ " ಕಿಂಗ್ ಸ್ಟನ್ ರೆಸ್ಟೋರೆಂಟ್ " ನಲ್ಲಿ ಏರ್ಪಡಿಸಿದ ಪಾರ್ಟಿ[ಬದಲಾಯಿಸಿ]

ಜೆ.ಎನ್,ಟಾಟ ತಾವೇ ನಿಂತು ಅವರಿಬ್ಬರ ಮದುವೆಮಾಡಿಮುಗಿಸಿದರು. ಅತ್ಯಂತ ಅದ್ಧೂರಿಯಾಗಿ ಥೇಮ್ಸ್ ನದಿಯಮೇಲಿದ್ದ 'ಕಿಂಗ್ ಸ್ಟನ್ ರೆಸ್ಟೋರೆಂಟ್' ನಲ್ಲಿ ಪಾರ್ಟಿಯನ್ನೂ ಇಟ್ಟುಕೊಂಡರು. ಬ್ರಿಟನ್ ನಲ್ಲಿದ್ದ ತಮ್ಮ ಪಾರ್ಸಿ ಹಾಗೂ ಇಂಗ್ಲೀಷ್ ಗೆಳೆಯರು, ಅದರಲ್ಲಿ ಪಾಲುಗೊಂಡರು. ಭಾರತದಿಂದ ಮಗ, ದೊರಾಬ್ ಮತ್ತು ಸೊಸೆಯನ್ನು ಬರಮಾಡಿಕೊಂಡರು. ಹೀಗೆ, ಆರ್.ಡಿ ಮತ್ತು ಸುಸಾನ್ (ಆರ್. ಡಿ ಆಕೆಯ ಬಂಗಾರದ ಕೂದಲನ್ನು ಕಂಡು ಮೋಹಿತರಾಗಿ, 'ಸೂನಿ' ಎಂದು ಕರೆಯುತ್ತಿದ್ದರು.) ಟಾಟಾ ಪರಿವಾರದ ಅತ್ಯಂತ ಆಪ್ತರಾಗಿ ಎಲ್ಲರಿಗೂ ಅಚ್ಚುಮೆಚ್ಚಾದರು. ಈ ಸಮಾರಂಭಗಳಾದ ನಂತರ, ಜೆ. ಎನ್ ಸ್ವಲ್ಪ ನಿಶ್ಯಕ್ತಿಹೊಂದಿ ಹಾಸಿಗೆ ಹಿಡಿದರು. ಅವರಜೊತೆಯಲ್ಲಿ ಸೂನಿ ಮತ್ತು ಅರ್.ಡಿ ಇದ್ದರು. ದೊರಾಬ್ ಮತ್ತು ಸೊಸೆ, ವಿಯೆನ್ನಾದಲ್ಲಿದ್ದರು. ಕಾಯಿಲೆ ಉಲ್ಬಣಗೊಂಡು ಜೆ.ಎನ್, ತಮ್ಮ ಮಗ-ಸೊಸೆಯರನ್ನು ಕಾಣುವ ಆಸೆಯನ್ನು ವ್ಯಕ್ತಪಡಿಸಿದರು. ತಮ್ಮ ಕೈಲಿದ್ದ ಅತಿಅಮೂಲ್ಯವಾದ, ಪಾಟೆಕ್ ಫಿಲಿಪ್ ಬಂಗಾರದ ಕೈಗಡಿಯಾರವನ್ನು, ಆರ್. ಡಿ ಕೈಯಲ್ಲಿಟ್ಟಿರು. ಇದು ಅವರ ಉಯಿಲಿ ನಲ್ಲಿ ಬರೆದಪ್ರಕಾರ, ನಡೆದಿತ್ತು. ಗಡಿಯಾರದ ಜೊತೆಯಲ್ಲಿದ್ದ ಲಾಕೆಟ್ ನಲ್ಲಿ, ಜಮ್ ಸೆಟ್ ಜಿಯವರ ತಾಯಿಯವರ ಭಾವಚಿತ್ರ ಹಾಗೂ, ಅವರ ಕೂದಲಿನ ಎಳೆಯಿತ್ತು. ಆರ್. ಡಿಯವರನ್ನು ಇನ್ನೊಬ್ಬ ಮಗನಂತೆ ಅವರು ಪ್ರೀತಿಸುತ್ತಿದ್ದರು. ಅಷ್ಟರಲ್ಲಿ ದೊರಾಬ್, ಹಾಗೂ ಸೊಸೆ, ಮೆಹರ್ ಬಾಯಿ, ಬಂದರು. ಮಗ-ಸೊಸೆಯನ್ನು ನೋಡಿ, ಆರ್. ಡಿ, ದೊರಾಬ್ ಜೊತೆ-ಜೊತೆಯಾಗಿ ಮುಂದೆ ದುಡಿದು, ಟಾಟಾ ಕಂಪೆನಿ ಯನ್ನು ಚೆನ್ನಾಗಿ ಅಭಿವೃದ್ಧಿಪಡಿಸಲು ಪಣತೊಡುವಂತೆ ಕೇಳಿಕೊಂಡರು. ಸೇಟ್ ಜಿ, ತಮ್ಮ ಎರಡನೆಯ ಮಗ, ರತನ್ ಟಾಟಾ ರ ಬಗ್ಗೆ ವಿಚಾರಿಸಲಿಲ್ಲ. ಕೊನೆಯವನಾದ ರತನ್ ನನ್ನು ಅಣ್ಣ, ದೊರಾಬ್ ಗಾಢವಾಗಿ ಪ್ರೀತಿಸುತ್ತಿದ್ದರು.

ಅರ್. ಡಿ ಟಾಟಾ,ಪ್ಯಾರಿಸ್ ನ ಸ್ವಗೃಹದಲ್ಲಿ[ಬದಲಾಯಿಸಿ]

ಆರ್.ಡಿ.ಟಾಟಾರವರು ಪ್ಯಾರಿಸ್ ನಲ್ಲಿ ಪ್ರಖ್ಯಾತ, ಹಾರ್ಡ್ ಲಾಟ್ ಬೀಚ್ ನ ಬಳಿಯ ಲ ಒಪೇರಾ, ದ ಹತ್ತಿರ ಒಂದು ಹೊಸಮನೆಯನ್ನು ೧೯೦೪ ರಲ್ಲಿ ಕೊಂಡಿದ್ದರು. ಗೃಹಪ್ರವೇಶವನ್ನೂ ಮಾಡಿದರು. ಅದರ ಹತ್ತಿರವೇ ವಾಸವಾಗಿದ್ದ, ಪ್ರಖ್ಯಾತ ವೈಮಾನಿಕ, ಬ್ಲೆರಿಯಟ್ ಪ್ರತಿದಿನ ಅಲ್ಲಿನ ನಿವಾಸಿಗಳನ್ನು ತನ್ನ ಪುಟ್ಟ ವಿಮಾನದಲ್ಲಿ ಕುಳ್ಳಿರಿಸಿಕೊಂಡು, ನಗರ ಪ್ರದಕ್ಷಿಣೆ ಮಾಡಿಸುತ್ತಿದ್ದರು. ಆರ್.ಡಿ.ಯವರ ಮಗ,ಜೆಹಾಂಗೀರ್,ಜೆ(ಮುಂದೆ ಜೆಹಾಂಗೀರ್ ರನ್ನು ಅವರ ಗೆಳಯರು ಸಂಬೋಧಿಸುತ್ತಿದ್ದದ್ದು ಹಾಗೆ) ವಿಮಾನದಲ್ಲಿ ಕುಳಿತು, ಹಾರಾಡಲು ಇಷ್ಟಪಡುತ್ತಿದ್ದರು.

ಜಮ್ ಸೆಟ್ ಜಿ ಟಾಟಾ ರವರ ನಿಧನ[ಬದಲಾಯಿಸಿ]

" ಹೆಚ್ಚು ಹೆಚ್ಚು ಉದ್ಯಮಗಳನ್ನು ಸ್ಥಾಪಿಸಲು ಪ್ರಯತ್ನಿಸಿ. ಕೊನೆಗೆ ಸಾಧ್ಯವಾಗದಿದ್ದರೆ, ಕನಿಷ್ಟಪಕ್ಷ ಈಗಿರುವುದನ್ನು ಮಾತ್ರ ಕಳೆದುಕೊಳ್ಳಬೇಡಿ," ಎಂದು ಹಿತವಚನವನ್ನು ನುಡಿದು, ಮೇ, ೧೯, ೧೯೦೪ ರಲ್ಲಿ ತಮ್ಮ ಕೊನೆಯುಸಿರನ್ನೆಳೆದರು. ಬೆಂಗಳೂರಿನಲ್ಲಿ " ಯೂನಿವರ್ಸಿಟಿ ಆಫ್ ಸೈನ್ಸ್ ", ಟಾಟಾ ಸ್ಟೀಲ್ ಕಂಪೆನಿ, ಮತ್ತು ಟಾಟ ಪವರ್ ಸಂಸ್ಥೆ ಗಳನ್ನು ಕಟ್ಟಿಬೆಳೆಸಲು, ಯಾವಾಗಲೂ ಅವರು ಹೇಳುತ್ತಲೇ ಇದ್ದರು. ಜೆ.ಎನ್ ರವರ ಪಾರ್ಥಿವ ಶರೀರವನ್ನು ಜೂನ್ ಕೊನೆಯವೇಳೆಗೆ ಇಂಗ್ಲೆಂಡ್ ನ,ಬ್ರೂಕ್ ವುಡ್ ಸಿಮೆಟ್ರಿಯಲ್ಲಿ ಮಣ್ಣುಮಾಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. RATANJI DADABHOY TATA